ಶಾಂತಿಗೆ ಭಂಗ ತಂದರೆ ಗಡಿಪಾರು: ಸಿಪಿಐ


Team Udayavani, Mar 14, 2019, 8:00 AM IST

has-1.jpg

ಅರಸೀಕೆರೆ: ಲೋಕಸಭಾ ಚುನಾವಣೆ ನಡೆಯುವ ಸಂದರ್ಭದಲ್ಲಿ ಸಮಾಜದಲ್ಲಿ ಯಾವುದೇ ರೀತಿಯಲ್ಲಿ ಶಾಂತಿ ಸುವ್ಯವಸ್ಥೆಗೆ ಭಂಗ ಉಂಟಾಗುವಂತಹ ಅಹಿತಕರ ಘಟನೆಗಳಲ್ಲಿ ತಾವು ಭಾಗಿಯಾದರೆ ತಾಲೂಕಿನಿಂದಲೇ ಗಡಿಪಾರು ಮಾಡುವುದಾಗಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ಧರಾಮೇಶ್‌ ಎಚ್ಚರಿಸಿದರು.

ನಗರದ ಗ್ರಾಮಾಂತರ ಪೊಲೀಸ್‌ ಠಾಣೆಯ ಎದುರು ತಾಲೂಕಿನಲ್ಲಿ ರೌಡಿ ಲಿಸ್ಟ್‌ನಲ್ಲಿರು ವವರ ಪರೇಡ್‌ ನಡೆಸಿದ ಅವರು ಗೂಂಡಾಗಿರಿ, ಗದ್ದಲ ಗಲಾಟೆ ಹಾಗೂ ಜೂಜಾಟ ದಂಧೆ ಮಾಡಿಕೊಂಡು ಸಮಾಜದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ಉಂಟು ಮಾಡುತ್ತಿದ್ದವರಿಗೆ ಕಾನೂನು ರೀತಿಯಲ್ಲಿ ಉಗ್ರ ಶಿಕ್ಷೆ ಖಂಡಿತವಾಗುತ್ತದೆ ಆದ್ದರಿಂದ ತಾವುಗಳು 5 ವರ್ಷಗಳ ಕಾಲ ಉತ್ತಮ ನಡವಳಿಕೆಯನ್ನು ತೋರಿಸಿದರೆ ಅಂತಹ ವರನ್ನು ರೌಡಿ ಲಿಸ್ಟ್‌ನಿಂದ ಕೈಬಿಡಲಾಗುವುದೆಂದು ಭರವಸೆ ನೀಡಿದರು.

 ಸೂಕ್ತ ಮಾಹಿತಿ ನೀಡಿ: ರೌಡಿ ಶೀಟರ್‌ ಎಂದರೆ ಅವರು ಅಪರಾಧಿಗಳಲ್ಲ. ನಿಮ್ಮ ಮೇಲೆ ಕಣ್ಗಾವಲು ಇಡುವ ಅವಶ್ಯಕತೆ ಇದೆ ಎಂದು ಪೋಲೀಸರು ನಿಮ್ಮ ಗ್ರಾಮಗಳಿಗೆ ಬಂದಾಗ ಸೂಕ್ತ ಮಾಹಿತಿ ನೀಡಬೇಕು ಪೊಲೀಸರಿಗೆ ನಿಮ್ಮ ಗ್ರಾಮದಲ್ಲಿ ನೀವೇ ಆತ್ಮೀಯರು ಯಾವುದೇ ಮಾಹಿತಿ ಬೇಕಾದರೂ ನಿಮಗೆ ದೂರವಾಣಿಯ ಮೂಲಕ ಕರೆ ಮಾಡುತ್ತೇವೆ ಆದರೆ ನೀವು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಯಾವುದೇ ಗದ್ದಲ ಗಲಾಟೆಯಲ್ಲಿ ಭಾಗಿಗಳಾಗ ಬಾರದು ಎಂದು ತಿಳಿಹೇಳಿದರು.
 
ಸಮಾಜ ಘಾತುಕ ಕೆಲಸ ಮಾಡದಿರಿ: ಚುನಾವಣೆಯ ನಂತರವು ಯಾವುದೇ ಸಮಾಜ ಘಾತುಕ ಕೆಲಸ ಕಾರ್ಯಗಳನ್ನು ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ನೀವು ರೌಡಿ ಶೀಟರ್‌ ಎಂದು ನಿಮಗೆ ಯಾವುದೇ ತೊಂದರೆಯನ್ನು ನೀಡಿಲ್ಲ ನಿಮ್ಮ ಮನೆಗಳನ್ನು ಪರಿಶೀಲನೆ ಮಾಡಿಲ್ಲ ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನಿಮ್ಮನ್ನು ಕರೆಸಿದ್ದು ಈಗ ಮತ್ತೆ ಲೋಕಸಭಾ ಚುನಾವಣೆಯ ಕಾರ್ಯನಿಮಿತ್ತ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಲು ನಿಮ್ಮನ್ನು ಕರೆಸಿ ತಿಳಿವಳಿಕೆ ನೀಡಲಾಗುತ್ತಿದೆ. ಆಕಸ್ಮಾತ್‌ ತಾವುಗಳು ಯಾವುದೇ ಕ್ರಿಮಿನಲ್‌ ಪ್ರಕರಣಗಳಲ್ಲಿ ಭಾಗವಹಿಸಿದ್ದು ಕಂಡು ಬಂದರೇ ತಾಲೂಕಿನಿಂದಲೇ ತಮ್ಮನ್ನೂ ಗಡಿಪಾರು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಗ್ರಾಂ. ಠಾಣೆಯ ಸಬ್‌ ಇನ್ಸ್‌ಪೆಕ್ಟರ್‌ ಅಜೇಯ್‌ ಕುಮಾರ್‌, ಸಿಬ್ಬಂದಿಗಳು ಹಾಜರಿದ್ದರು. 

ಚುನಾವಣಾ ವಿಚಕ್ಷಣ ದಳದಿಂದ 3.1 ಲಕ್ಷ ರೂ.ವಶ
ಅರಸೀಕೆರೆ: ತಾಲೂಕಿನ ಮೈಲನಹಳ್ಳಿ ಗೇಟ್‌ ಸಮೀಪದ ರಾಷ್ಟ್ರೀಯ ಹೆದ್ದಾರಿ ಬಿ.ಎಚ್‌. ರಸ್ತೆಯಲ್ಲಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಿರುವ ಚೆಕ್‌ ಪೋಸ್ಟ್‌ನಲ್ಲಿ ಮಂಗಳವಾರ ರಾತ್ರಿ 8.30 ಸಮಯದಲ್ಲಿ ತಿಪಟೂರು ಕಡೆಯಿಂದ ಭದ್ರಾವತಿ ಕಡೆಗೆ ಹೋಗುತ್ತಿದ್ದ ಕಾರನ್ನು ವಿಚಕ್ಷಣ ದಳದ ಅಧಿಕಾರಿ ನಾರಾಯಣಪ್ಪ ಮತ್ತು ಸಿಬ್ಬಂದಿ ತಡೆದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಕಾರಿನ ಚಾಲಕನ ಜೊತೆಗಿದ್ದ ಭದ್ರಾವತಿ ತಾಲೂಕಿನ ಬಬಳ್ಳಿ ಗ್ರಾಮದ ಗುತ್ತಿಗೆದಾರರಾದ ರಂಗನಾಥ್‌ ಗಿರಿ ಎಂಬುವರ ಪ್ಯಾಂಟ್‌
ಜೇಬಿನಲ್ಲಿದ್ದ 3.1 ಲಕ್ಷ ರೂ. ಕಂಡು ಬಂದಿದೆ. 

ಈ ಹಣವನ್ನು ಸಾಗಿಸುತ್ತಿರುವ ಬಗ್ಗೆ ಅವರು ಸಮಂಜಸವಾದ ಉತ್ತರವನ್ನು ನೀಡದ ಕಾರಣ ಸ್ಥಳದಲ್ಲಿದ್ದ ಪಂಚಾಯಿತಿ ದಾರರ ಸಮಕ್ಷಮದಲ್ಲಿ 3.01 ಲಕ್ಷ ರೂ.ಗಳನ್ನು ಅಧಿಕಾರಿಗಳು ವಶಪಡಿಸಿಕೊಂಡು ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲೆಗಳನ್ನು ನೀಡುವಂತೆ ಸೂಚನೆ ನೀಡಿದ್ದರು. ವಶಪಡಿಸಿಕೊಂಡಿರುವ ಹಣವನ್ನು ಜಿಪಂ ಸಿಇಒ ನೇತೃತ್ವದ ಹಣ ಬಿಡುಗಡೆ ಸಮಿತಿಗೆ ವಹಿಸಿದ್ದಾರೆ ಎನ್ನಲಾಗಿದೆ. ನಂತರ ಗುತ್ತಿಗೆದಾರರಾದ ರಂಗನಾಥ್‌ ಗಿರಿ ಅವರು ವಿಚಕ್ಷಣದಳ ವಶಪಡಿಸಿಕೊಂಡಿದ್ದ 3.1 ಲಕ್ಷ ರೂ.ಗಳಿಗೆ ಸೂಕ್ತ ದಾಖಲೆ ನೀಡಿದ್ದರಿಂದ ಹಣವನ್ನು ವಾಪಸ್‌ ನೀಡಲಾಗಿದೆ ಎಂದು ಹೇಳಲಾಗಿದೆ.   

ಬೇಲೂರಲ್ಲಿರೌಡಿ ಶೀಟರ್‌ ಪರೇಡ್‌ 
ಬೇಲೂರು: ಮುಂಬರುವ ಲೋಕಾ ಸಭಾ ಚುನಾವಣೆ ಶಾಂತಿಯುತವಾಗಿ ನಡೆಯಲು ಮುಂಜಾಗ್ರತಾ ಕ್ರಮವಾಗಿ ತಾಲೂಕಿನ ರೌಡಿ ಪಟ್ಟಿಯಲ್ಲಿ ರುವವರನ್ನು ಅರಸೀಕೆರೆ ಡಿವೈಎಸ್‌ಪಿ ಸದಾನಂದ ತಿಪ್ಪಣ್ಣನವರ್‌ ಪರೇಡ್‌ ನಡೆಸಿ ಚುನಾವಣೆಯಲ್ಲಿ ಶಾಂತಿಭಂಗ ತರದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
 
ಪೊಲೀಸ್‌ ಠಾಣೆ ಮುಂಭಾಗದಲ್ಲಿ ಬೇಲೂರು, ಅರೇಹಳ್ಳಿ, ಹಳೇಬೀಡು ಠಾಣ ವ್ಯಾಪ್ತಿಯ ಸುಮಾರು 71 ರೌಡಿ ಪಟ್ಟಿಯಲ್ಲಿರುವವರಿಗೆ ಕಾನೂನು ಬಾಹಿರ ಕೃತ್ಯದಲ್ಲಿ ತೊಡಗದಂತೆ ಸೂಚನೆ ನೀಡಿದರು.

ಲೋಕಾಸಭೆ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ಜನತೆ ನಿಭೀತಿ ಯಿಂದ ಮತದಾನ ಮಾಡುವಂತಾಗ ಬೇಕು ಪ್ರಕರಣದಲ್ಲಿ ಭಾಗಿಯಾಗಿ ರೌಡಿ ಪಟ್ಟಿಯಲ್ಲಿರುವವರು ಮತ ದಾರರಿಗೆ ಭೀತಿ ಮೂಡಿಸಬಾರದು.

ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಅವಕಾಶ ಕಲ್ಪಿಸಬೇಕು. ಯಾರಾದರೂ ಸಾರ್ವಜನಿಕರಿಗೆ ತೊಂದರೆ ನೀಡಿದರೆ ನಿರ್ದಾಕ್ಷಿಣವಾಗಿ ಕ್ರಮಕೈಗೊಳ್ಳುವುದಲ್ಲದೆ ಗಡಿ ಪಾರು ಮಾಡಲು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ಜಾರಿಗೆ ತಂದಿದ್ದು, ಚುನಾವಣೆಯಲ್ಲಿ ಪ್ರತಿಯೊಬ್ಬರು ಮತದಾನ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಬೀಟ್‌ನಲ್ಲಿ ಹೆಡ್‌ಕಾನ್ಸೆಟೆಬಲ್ ಮತ್ತು ಪೊಲೀಸರು, ನಗರ ಪ್ರದೇಶದಲ್ಲಿ ಪಿಎಸ್‌ಐಗಳು ಠಾಣಾ ವ್ಯಾಪ್ತಿಯಲ್ಲಿ ಭದ್ರತೆ ಕೈಗೊಳ್ಳಲಿದ್ದಾರೆ. ವೃತ್ತ ನಿರೀಕ್ಷಕರ ಸಮ್ಮಖ ದಲ್ಲಿ ಮತದಾನದ ಬಗ್ಗೆ ಜನ ಸಂಪರ್ಕ ಸಭೆ ನಡೆಸುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಈ ಬಾರಿ ಸಮಾಜಿಕ ಜಾಲ ತಾಣಗಳಾದ ವಾಟ್ಸಾಪ್‌ ಪೇಸ್‌ಬುಕ್‌ ಗಳ ಬಗ್ಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದೆ. ಸುಳ್ಳುಸುದ್ದಿಗಳನ್ನು ಹರಡು ವವರ ವಿರುದ್ದ ಸೈಬರ್‌ ಕಾಯ್ದೆ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಈ ಬಗ್ಗೆ ಪ್ರತಿಯೊಬ್ಬರೂ ಎಚ್ಚರವಹಿಸುವುದು ಸೂಕ್ತ ಎಂದು ಹೇಳಿದರು. 

ತಾಲೂಕಿನಲ್ಲಿ ಚುನಾವಣೆ ಸಂಬಂದ 3 ಚೆ‌ಕ್‌ ಪೋಸ್ಟ್‌ಗಳನ್ನು ತೆರೆದಿದ್ದು, ಇಲಾಖೆ ಸೂಕ್ಷ್ಮವಾಗಿ ಪರಿಶೀಲನೆ ನೆಡೆಸಿ ಯಾವುದೇ ಅಕ್ರಮ ನಡೆಯದಂತೆ ನಿಗಾವಹಿಸಲಾಗಿದೆ ಎಂದು ವಿವರಿಸಿದರು. ಈ ಸಂದರ್ಭದಲ್ಲಿ ವೃತ್ತ ನೀರಿಕ್ಷ ಲೋಕೇಶ್‌, ಪಿಎಸ್‌ಐಗಳಾದ ಜಗದೀಶ್‌, ರವಿಕಿರಣ್‌ ಭರತ್‌ಗೌಡ, ಆಶ್ವಿ‌ನಿ ನಾಯ್ಕ ಇದ್ದರು.

ಟಾಪ್ ನ್ಯೂಸ್

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್‌ಡಿಡಿ

BJP-JDS; 28 ಲೋಕಸಭಾ ಕ್ಷೇತ್ರಗಳಲ್ಲೂ ಚುನಾವಣಾ ಪ್ರಚಾರ ನಡೆಸುವೆ: ಎಚ್‌ಡಿಡಿ

Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ

Lok Sabha Election;ಹಾಸನದಲ್ಲಿ ನಾಮಪತ್ರ ಅರ್ಜಿಗೆ ಪೂಜೆ: ಪ್ರೀತಂ ಗೌಡ ಬೆಂಬಲಿಗನ ಹೊಸ ವರಸೆ

13

Lok Sabha elections: ಬೇಲೂರು; ಕೈ ಒಳಜಗಳ, ಜೆಡಿಎಸ್‌ಗೆ ಲಾಭ? 

Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್‌ ರೇವಣ್ಣ ಪ್ರಚಾರಕ್ಕೆ ಚಾಲನೆ

Hassan; ಚೆನ್ನಿಗರಾಯಸ್ವಾಮಿಗೆ ಪೂಜೆ ಸಲ್ಲಿಸಿ ಪ್ರಜ್ವಲ್‌ ರೇವಣ್ಣ ಪ್ರಚಾರಕ್ಕೆ ಚಾಲನೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

29

Hassan Lok sabha Constituency: ಪ್ರಜ್ವಲ್‌ ರೇವಣ್ಣ ನಾಮಪತ್ರ ಸಲ್ಲಿಕೆ

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-aaa

Ex-IPS officer ಸಂಜೀವ್ ಭಟ್‌ಗೆ 1996 ರ ಡ್ರಗ್ಸ್ ಕೇಸ್ ನಲ್ಲಿ 20 ವರ್ಷ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.