ಆರೋಗ್ಯಕ್ಕೆ ಪೂರಕವಾದ ಆಹಾರ ಸೇವಿಸಿ


Team Udayavani, Mar 4, 2020, 3:00 AM IST

arogyakke

ಹೊಳೆನರಸೀಪುರ: ನಾಲಿಗೆಯ ರುಚಿಗೆ ತಕ್ಕಂತೆ ಅಡುಗೆ ತಯಾರು ಮಾಡುವ ಬದಲು ದೇಹದ ಆರೋಗ್ಯ ವೃದ್ಧಿಗೆ ಅನುಕೂಲವಾಗುವಂತಹ ಆಹಾರ ಸಿದ್ಧಪಡಿಸಿ ಸೇವಿಸಬೇಕು ಎಂದು ದೊಡ್ಡಕಾಡನೂರು ಜೆಎಸ್‌ಎಸ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯ ಕಟ್ನವಾಡಿ ಅಭಿಪ್ರಾಯಪಟ್ಟರು.

ಪಟ್ಟಣದ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ನಡೆದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ನಾವು ಮತ್ತು ನಮ್ಮ ಆಹಾರ ಪದ್ಧತಿ ಎಂಬ ವಿಷಯ ಕುರಿತು ಉಪನ್ಯಾಸ ನೀಡಿದ ಅವರು, ಅಡುಗೆ ಮನೆಗಳು ಔಷಧಾಲಯ ಗಳಿದ್ದಂತೆ ರುಚಿಗಿಂತ ಆರೋಗ್ಯಪೂರ್ಣ ಆಹಾರ ಸಿದ್ಧಪಡಿಸುವುದೇ ಪಾಕಶಾಲೆಯ ಮುಖ್ಯ ಉದ್ದೇಶ ಎಂದರು. ಜನರು ತಮ್ಮ ನಾಲಿಗೆಯ ರುಚಿಗೆ ದಾಸರಾಗಿದ್ದಾರೆ. ಅದು ಬಯಸಿದಂತೆ ಆಹಾರ ಸೇವಿಸುವುದರಿಂದಲೇ ಇಂದು ಅನೇಕ ರೋಗಗಳು ಬರುತ್ತವೆ ಎಂದು ತಿಳಿಸಿದರು.

ಹಿತಭುಕ್‌, ಮಿತಭುಕ್‌, ಋತುಭುಕ್‌: ಮನುಷ್ಯ ಯಾವುದನ್ನು ಎಷ್ಟು ತಿನ್ನಬೇಕು ಎನ್ನುವುದನ್ನೆ ಮರೆತಿದ್ದಾನೆ. ತುಂಬಾಜನ ಊಟ ಮಾಡುವ ಶೈಲಿಯನ್ನು ಮರೆತಿದ್ದಾರೆ. ಟೀವಿ ನೋಡುತ್ತಾ, ಬೇರೆಯವರ ಜೊತೆಗೆ ಮಾತಾಡುತ್ತಾ, ಅಥವಾ ಯಾವುದೋ ಕೆಲಸದ ಒತ್ತಡದಲ್ಲಿ ಊಟಮಾಡುತ್ತಾರೆ. ಎಷ್ಟು ತಿನ್ನಬೇಕು ಅನ್ನುವ ಅರಿವಿಲ್ಲದೇ ಬೇಕಾಬಿಟ್ಟಿ ತಿಂದು ಆರೋಗ್ಯ ಕೆಡಿಸಿಕೊಳ್ಳುತ್ತಾರೆ. ಆದ್ದರಿಂದ ಮನಸ್ಸಿಗೆ ಹಿತವಾಗುವಂತೆ, ಪ್ರತಿಯೊಂದು ಆಹಾರನ್ನು ಹಿತಮಿತವಾಗಿ ಸೇವಿಸಬೇಕು. ಅತಿಯಾಗಿ ಸೇವಿಸಬಾರದು. ಹೆಚ್ಚು ರುಚಿಯಾಗಿದೆ ಎಂದು ಹೆಚ್ಚು ತಿನ್ನುವುದು. ‌

ರುಚಿಯಿಲ್ಲ ಎಂದು ಕಡಿಮೆ ತಿನ್ನುವುದಲ್ಲ. ನನ್ನ ಹೊಟ್ಟೆಯು ಸಾಮರ್ಥ್ಯಕ್ಕೆ ತಕ್ಕಷ್ಟು ಆಹಾರ ಸೇವನೆ ಮಾಡುವುದು ಅತಿ ಮುಖ್ಯ. ಜೊತೆಗೆ ಬಹು ಮುಖ್ಯವಾಗಿ ಋತುಕಾಲಿಕವಾಗಿ ದೊರೆಯುವ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಅದು ದೇಹ‌ದ ಆರೋಗ್ಯವನ್ನು ಕಾಪಾಡುತ್ತದೆ. ಪ್ರತಿ ದಿನ ಒಂದೇ ರೀತಿಯ ಬೇಯಿಸಿದ ಆಹಾರ ಸೇವಿಸುವುದಕ್ಕಿಂತ ಹಣ್ಣು ಹಸಿ ತರಕಾರಿ ಸೊಪ್ಪುಗಳನ್ನು ಸೇವಿಸಬೇಕೆಂದು ತಿಳಿಸಿದರು.

ಮಾರು ರೀತಿಯ ರೋಗಗಳಿಗೆ ಮೂರು ಸಾವಿರ ಔಷಧಿ: ವಾತ, ಪಿತ್ತ ಮತ್ತು ಕಫ ಮನುಷ್ಯನಿಗೆ ಬರುವ ಮೂರು ರೀತಿಯ ರೋಗಗಳು. ಅವುಗಳನ್ನು ವಾಸಿಮಾಡಲು ಮೂರು ಸಾವಿರಕ್ಕೂ ಅ ಧಿಕ ಔಷ ಧಿಗಳು ಮಾರುಕಟ್ಟೆಯಲ್ಲಿವೆ. ಪ್ರತಿಯೊಬ್ಬರೂ ತಮ್ಮ ದೇಹದಲ್ಲಿ ವಾತ ಅಧಿ ಕವಾಗಿದೆಯೇ, ಪಿತ್ತ ಅ ಧಿಕವಾಗಿದೆಯೇ, ಕಫ ಅ ಧಿಕವಾಗಿದೆಯೇ ಎಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಅದಕ್ಕೆ ತಕ್ಕ ಹಾಗೆ ಆಹಾರ ಕ್ರಮವನ್ನು ಬದಲಾಯಿಸಿಕೊಂಡರೆ ಎಷ್ಟೋ ರೋಗಗಳನ್ನು ಕಡಿಮೆಮಾಡಿಕೊಳ್ಳಬಹುದು. ನಾವು ಅರಿವಿಲ್ಲದೇ ತಿನ್ನುವ ಆಹಾರದಿಂದಲೇ ನಮಗೆ ರೋಗಗಳು ಬರುತ್ತವೆ. ಆಹಾರವೇ ಔಷ ಧಿಯಾಗಬೇಕು ಎಂದು ಹೇಳಿದರು.

ಶವದಂತೆ ನಿದ್ರಿಸಬೇಕು: ಬೆಳಿಗ್ಗೆಯಿಂದ ಎಷ್ಟೇ ಗೊಂದಲಗಳು ಇದ್ದರೂ ಸಹ ಅವುಗಳನ್ನು ದೂರಮಾಡಿ ನೆಮ್ಮದಿಯಿಂದ ನಿದ್ರಿಸಬೇಕು, ನಿದ್ರೆ ಮಾಡುವಾಗ ನಿಮ್ಮ ಮೊಬೆ„ಲ್‌ ಫೋನ್‌ಗಳನ್ನು ದೂರವಿಡಿ, ಹತ್ತಿರವಿಟ್ಟುಕೊಳ್ಳಬಾರದು, ಗಾಢವಾದ ನಿದ್ರೆಮಾಡುವುದರಿಂದ ಆರೋಗ್ಯ ವೃದ್ಧಯಾಗುತ್ತದೆ. ನೆಮ್ಮದಿಯಿಂದ ದಿನಚರಿಯನ್ನು ಪ್ರಾರಂಭಮಾಡಬಹುದು ನಿದ್ರೆ ಕಡಿಮೆಯಾದರೆ ಅನೇಕ ರೋಗಗಳು ಬರುತ್ತವೆ ಎಂದು ಕಿವಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಆರ್ಯ ವೈಶ್ಯ ಮಂಡಳಿ ಅಧ್ಯಕ್ಷ ಕೆ.ಎನ್‌.ಅರುಣ್‌, ವಾಸವಿ ಕ್ಲಬ್‌ ಉಪಾಧ್ಯಾಕ್ಷ ರಾಜೇಂದ್ರಗುಪ್ತ, ಕಾರ್ಯದರ್ಶಿ ಅವಿನಾಶ್‌, ಮುಖಂಡರಾದ ಗೋಕುಲ್‌, ಕೃಷ್ಣಮೂರ್ತಿ, ದಿನೇಶ್‌ ಆರ್ಯ ವೈಶ್ಯ ಮಂಡಳಿ ಹಾಗೂ ವಾಸವಿ ಕ್ಲಬ್‌ ಸದಸ್ಯರು ಭಾಗವಹಿಸಿದ್ದರು.

ಹೊಟ್ಟೆ ಕಸದ ಬುಟ್ಟಿಯಲ್ಲ: ಮನೆಯಲ್ಲಿ ಸಾಮಾನ್ಯವಾಗಿ ಯಾವುದೇ ಆಹಾರ ಪದಾರ್ಥಗಳು ಉಳಿದರೆ ಬಲವಂತದಿಂದ ಬಡಿಸುತ್ತಾರೆ. ಉಳಿದಿರುವ ಅಹಾರ ಪದಾರ್ಥಗಳನ್ನು ತಾಯಂದಿರುವ ಬಿಸಾಡಬೇಕಾಗುತ್ತದೆ ಎಂದು ತಾವು ತಿಂದು ಮುಗಿಸುತ್ತಾರೆ. ಇದು ಸರಿಯಾದ ಕ್ರಮವಲ್ಲ. ಹೊಟ್ಟೆಯನ್ನು ನಾವು ಡೆಸ್ಟ್‌ ಬಿನ್‌ ತರಹ ತಿಳಿದುಕೊಂಡಿದ್ದೇವೆ. ಅದರಿಂದಲೇ ಅನೇಕ ರೋಗಗಳು ಬರುತ್ತವೆ. ಯಾವಾಗಲೂ ನಾವು ಹೊಟ್ಟೆ ತುಂಬಾ ತಿನ್ನಬಾರದು. ಹೊಟ್ಟೆಯಲ್ಲಿ ಒಂದು ಭಾಗ ಆಹಾರ, ಒಂದು ಭಾಗ ನೀರು ಮತ್ತೂಂದು ಭಾಗ ಗಾಳಿಯ ಉಸಿರಾಟಕ್ಕೆ ಖಾಲಿ ಇರುವಂತೆ ಊಟ ತಿಂಡಿಯನ್ನು ಮಾಡುವ ಪರಿಪಾಠ ರೂಢಿಸಿಕೊಳ್ಳಬೇಕೆಂದು ಜೆಎಸ್‌ಎಸ್‌ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ಚೌಡಯ್ಯಕಟ್ನವಾಡಿ ಹೇಳಿದರು.

ನಾರು, ನೀರು ದೇಶಕ್ಕೆ ಅತ್ಯಗತ್ಯ: ದೇಶದ ಕರುಳನ್ನು ಶುದ್ಧೀಕರಿಸಲು ನಾರು ಮತ್ತು ನೀರು ಅತೀ ಅವಶ್ಯಕ. ನಾವು ಬೆಳಗ್ಗೆ ಎದ್ದು ನಮ್ಮ ಮನೆಯ ಬಾಗಿಲಿಗೆ ನೀರು ಹಾಕುವಂತೆಯೇ ನಮ್ಮ ದೇಹಕ್ಕೂ ನೀರು ಕುಡಿಸಬೇಕು. ಬೆಳಗಿನ ಹೊತ್ತು ಕಡಿಯುವ ನೀರು ಅಮೃತಕ್ಕೆ ಸಮಾನ, ಅದರ ಜೊತೆಗೆ ನಾರಿನ ಅಂಶ ಅದಿಕವಾಗಿರುವ ಹಸಿತರಕಾರಿ ಹಣ್ಣು ಸೊಪ್ಪುಗಳನ್ನು ಹೆಚ್ಚು ಹೆಚ್ಚು ಸೇವಿಸಬೇಕು ಅದು ಜೀರ್ಣಾಂಗವನ್ನು ಶುದ್ಧಿಗೊಳಿಸುವುದರ ಜೊತೆಗೆ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ ಎಂದು ತಿಳಿಸಿದರು.

ಟಾಪ್ ನ್ಯೂಸ್

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

3

Road mishap: ಬೆಳ್ಳಂಬೆಳಗ್ಗೆ ಪಿಕಪ್ ಢಿಕ್ಕಿ; ಮೂವರ ದುರ್ಮರಣ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ

Viral Video: ಕುಟುಂಬಸ್ಥರಿಂದಲೇ ವಧುವಿನ ಅಪಹರಣಕ್ಕೆ ಯತ್ನ; ರಾದ್ಧಾಂತವಾದ ಮದುವೆ ಮಂಟಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.