Udayavni Special

ವಿಜಯ ದಶಮಿಯೊಂದಿಗೆ ಗೊಂಬೆಗಳ ದರ್ಬಾರ್‌ಗೆ ತೆv

ಜನಾಕರ್ಷಿಸಿದ ಶಾಲಾ ತರಗತಿ, ಕ್ರಿಕೆಟ್‌ ಪಂದ್ಯಾವಳಿ ಆಡುವ ಗೊಂಬೆಗಳು

Team Udayavani, Oct 27, 2020, 2:26 PM IST

hasan-tdy-1

ಚನ್ನರಾಯಪಟ್ಟಣ: ಮೈಸೂರು ಪ್ರಾಂತ್ಯದ ಪ್ರಭಾವ ಹೊಂದಿರುವ ತಾಲೂಕಿನಲ್ಲಿ ಕೋವಿಡ್  ಭೀತಿಯ ನಡುವೆಯೂ ಈ ಬಾರಿ ದಸರಾ ಬೊಂಬೆ ಗಳ ಉತ್ಸವ ಕಳೆಕಟ್ಟಿತ್ತು. ಮಹಾಲಕ್ಷ್ಮೀ, ದುರ್ಗಿ ದೇವಾಲಯ ಮತ್ತು ಮನೆಗಳಲ್ಲಿ ಹಿಂದೂ ಸಾಂಪ್ರದಾಯದಂತೆ ದಸರಾ ಬೊಂಬೆಗಳನ್ನು ಕೂರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಾಡ ಹಬ್ಬದ ಕೊನೆಯ ಘಟ್ಟವಾದ ವಿಜಯ  ದಶಮಿ ಸೋಮವಾರದಂದು ಬೊಂಬೆಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಗೊಂಬೆ ದರ್ಬಾರ್‌ ಅನ್ನು ಕೊನೆಗೊಳಿಸಲಾಯಿತು.

ನವರಾತ್ರಿ ಉತ್ಸವಕ್ಕೆ ಚಾಲನೆ ದೊರೆತ ದಿನ  ದಂದೇ ತಾಲೂಕಿನ ಹಲವು ಮನೆಗಳಲ್ಲಿ ಬೊಂಬೆಗಳ ದರ್ಬಾರ್‌ ಆರಂಭಗೊಳ್ಳುತ್ತದೆ. ದಸರಾ ಬೊಂಬೆ ಪ್ರದರ್ಶನ ಜಾನಪದ ಪರಂಪರೆ, ಸಾಂಸ್ಕೃ ತಿಕ ಉತ್ಸವದಂತೆ ಕಂಡು ಬಂದರೂ ಅದಕ್ಕೆ ಅದ ರದ್ದೇ ಆದ ಧಾರ್ಮಿಕ ಚೌಕಟ್ಟು ಇದೆ. ಅದರಂತೆ ಮಹಾಗ್ರಂಥಗಳಾದ ರಾಮಾಯಣ, ಮಹಾ ಭಾರತ, ಶ್ರೀಕೃಷ್ಣನ ಲೀಲೆ, ವಿಷ್ಣು ಪುರಾಣ, ಸಮುದ್ರ ಮಥನ, ಶಿವ ಪಾರ್ವತಿಯ ಕಥೆಗಳು, ನವರಾತ್ರಿ ವೈಭವ, ಮೈಸೂರಿನ ಜಂಬೂಸವಾರಿ, ದುರ್ಗೆಯರ ಅವತಾರ ಹೀಗೆ ಪುರಾಣ ಕಥೆಗಳನ್ನು ಆಯ್ಕೆ ಮಾಡಿಕೊಂಡು ಗೊಂಬೆಗಳನ್ನು ಜೋಡಿಸಲಾಗಿತ್ತು.

ಶಾಲಾ ತರಗತಿ ನೆನಪು: ಈ ಬಾರಿ ತಾಲೂಕು ದಂಡಿಗನಹಳ್ಳಿ ಹೋಬಳಿ ಹಿರಣ್ಯಗರ್ಭದಲ್ಲಿನ ಮಹಾಲಕ್ಷ್ಮೀ ದೇವಾಲಯದಲ್ಲಿ ಜೋಡಿಸಲಾಗಿದ್ದ ಗೊಂಬೆಗಳು ಜನಾಕರ್ಷಣೆಯ ಕೇಂದ್ರ ಬಿಂದು ಆಗಿದ್ದವು. ಕೋವಿಡ್ ಸೋಂಕಿನ ಹಿನ್ನೆಲೆ  ಯಲ್ಲಿ ಶಾಲೆಗಳಿಗೆ ಸರ್ಕಾರ ರಜೆ ಘೋಷಿಸಿದೆ. ಇದನ್ನೇ ಆಧಾರವಾಗಿಟ್ಟುಕೊಂಡು ಮಕ್ಕಳು ತರಗತಿ ಯಲ್ಲಿ ಕೂತು ಪಾಠ ಕೇಳುತ್ತಿರುವಂತೆ ಗೊಂಬೆಗಳನ್ನು ಜೋಡಿಸಿದ್ದು, ಮಕ್ಕಳಿಗೆ ಶಾಲೆಯ ದಿನಗಳನ್ನು ನೆನೆಪಿಸುವಂತಿತ್ತು.

ಕ್ರಿಕೆಟ್‌ ಪಂದ್ಯಾವಳಿ: ಇನ್ನು ಕ್ರೀಡೆಗಳಲ್ಲಿ ಭಾರತೀಯರಿಗೆ ಹೆಚ್ಚು ಹುಚ್ಚು ಹಿಡಿಸಿರುವುದು ಕ್ರಿಕೆಟ್‌. ಹೌದು, ಕೋವಿಡ್ ದಿಂದ ಸ್ತಬ್ಧಗೊಂಡಿದ್ದ ಕ್ರಿಕೆಟ್‌ ಪಂದ್ಯಾವಳಿ ಐಪಿಎಲ್‌ನೊಂದಿಗೆ ಆರಂಭ ಗೊಂಡಿದ್ದು, ಇದನ್ನೇ ಆಧಾರವಾಗಿಟ್ಟುಕೊಂಡು ಕ್ರಿಕೆಟ್‌ ಆಡುತ್ತಿರುವಂತಹ ಸನ್ನಿವೇಶವನ್ನು ಗೊಂಬೆಗಳ ಮೂಲಕ ತೋರಿಸಿದ್ದು, ವಿಶೇಷವಾಗಿತ್ತು.

ಕೆಲವು ತಮ್ಮ ಸಾಮರ್ಥಯಕ್ಕೆ ಅನುಗುಣವಾಗಿ ಮೂರು, ಐದು, ಒಂಬತ್ತು ಮೆಟ್ಟಿಲುಗಳನ್ನು ನಿರ್ಮಿಸಿ ಬೊಂಬೆಗಳನ್ನು ಕೂರಿಸಿದ್ದರು. ಮೇಲಿನ ಮೆಟ್ಟಿಲಿನಲ್ಲಿ ರಾಜ, ರಾಣಿ, ಕೆಳ ಭಾಗದಲ್ಲಿ ಕಳಸ ಇಟ್ಟಿದ್ದರು. ಕೆಲವರು ಹಳೇಗೊಂಬೆಗಳ ಜೊತೆ ತಾವು ಪ್ರವಾಸ ಹೋಗಿದ್ದಾಗ, ಇತರೆ ಸಂದರ್ಭದಲ್ಲಿ ತಂದಿದ್ದ ಗೊಂಬೆಗಳನ್ನು ಜೋಡಿಸಿದ್ದರು. ನವರಾತ್ರಿಯ ಕೊನೇ ದಿನ ಅಂದರೆ ಸೋಮ ವಾರ ವಿಜಯದಶಮಿ ದಿನ ಮೈಸೂರಿನ ಅಂಬಾ ವಿಲಾಸ ಅರಮನೆಯಲ್ಲಿ ಉತ್ಸವ ಮೇಳೈಸಿದ್ದರೆ, ಇತ್ತ ಮನೆ ಮನೆಗಳಲ್ಲಿನ ಗೊಂಬೆ ಸಾಮ್ರಾಜ್ಯ ತನ್ನ ದರ್ಬಾರ್‌ ಮುಗಿಸಲಾಯಿತು. ಮೈಸೂರಿನಲ್ಲಿ ಜಂಬೂಸವಾರಿ ನಡೆಯುತ್ತಿರುವಂತೆ, ಇತ್ತ ಮನೆ, ದೇಗುಲಗಳಲ್ಲಿ ಜೋಡಿಸಿಟ್ಟಿದ್ದ ಪಟ್ಟದ ಗೊಂಬೆ ಗಳ ವಿಸರ್ಜನೆ ಮಾಡಿ, ಈ ವರ್ಷದ ದಸರ ದರ್ಬಾರ್‌ಗೆ ತೆರೆ ಎಳೆಯಲಾಯಿತು.

ವಿಜಯದಶಮಿ ನಮ್ಮ ಪವಿತ್ರವಾದ ಹಬ್ಬ. ಹಿರಿಯರು ಆಚರಿಸಿಕೊಂಡು ಬಂದಿರುವ ನವರಾತ್ರಿ ಬೊಂಬೆ ಉತ್ಸವ ಹಲವು ವರ್ಷದಿಂದ ಮನೆಯಲ್ಲಿ ಕೂರಿಸಲಾಗುತ್ತಿದೆ. ನಮ್ಮ ಸಂಪ್ರದಾಯ ಮುಂದುವರಿಯಬೇಕು, ಮಕ್ಕಳಿಗೂ ಇದರ ಮಹತ್ವ ತಿಳಿಯಲಿ ಎಂಬ ಕಾರಣಕ್ಕೆ ದಸರಾ ಬೊಂಬೆ ಕೂರಿಸಿ ಪೂಜೆ ಸಲ್ಲಿಸಲಾಗುತ್ತಿದೆ. ರಾಜೇಶ್ವರಿ ವಿಜಯಕುಮಾರ್‌, ಚನ್ನರಾಯಪಟ್ಟಣ.

 

  ಶಾಮಸುಂದರ್‌ ಕೆ.ಅಣ್ಣೇನಹಳ್ಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಐಪಿಎಲ್ ನಲ್ಲಿ ಫ್ಲಾಪ್, ದೇಶದ ಪರ ಟಾಪ್: ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್

ಐಪಿಎಲ್ ನಲ್ಲಿ ಫ್ಲಾಪ್, ದೇಶದ ಪರ ಟಾಪ್: ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಬಗ್ಗೆ ಮಾಹಿತಿ ಕೊಟ್ಟರೆ 50 ಲಕ್ಷ ಬಹುಮಾನ: ಅಮೆರಿಕ

26/11 ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಬಗ್ಗೆ ಮಾಹಿತಿ ಕೊಟ್ಟರೆ 50 ಲಕ್ಷ ಬಹುಮಾನ: ಅಮೆರಿಕ

ಸಂತೋಷ್ ವಿಚಾರದಲ್ಲಿ ಸುಳ್ಳು ಹೇಳಿಕೆ ನೀಡುವ ಡಿಕೆ ಶಿವಕುಮಾರ್ ಗೆ ನಾಚಿಕೆಯಾಗಬೇಕು: ಈಶ್ವರಪ್ಪ

ಸಂತೋಷ್ ವಿಚಾರದಲ್ಲಿ ಸುಳ್ಳು ಹೇಳಿಕೆ ನೀಡುವ ಡಿಕೆ ಶಿವಕುಮಾರ್ ಗೆ ನಾಚಿಕೆಯಾಗಬೇಕು: ಈಶ್ವರಪ್ಪ

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ 1000 ಕೋಟಿ ರೂ. ಅನುದಾನ ಮೀಸಲಿಡಿ:ನಂಜಾವಧೂತ ಸ್ವಾಮೀಜಿ

ಒಕ್ಕಲಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ 1000 ಕೋಟಿ ರೂ. ಅನುದಾನ ಮೀಸಲಿಡಿ:ನಂಜಾವಧೂತ ಸ್ವಾಮೀಜಿ

Siddaramaiah

ರಾಜ್ಯದಲ್ಲಿ ಬಿಜೆಪಿ ಸರ್ಕಾರ ತೊಲಗಿದರೆ ಉತ್ತಮ ವಾತಾವರಣ ನಿರ್ಮಾಣವಾಗಲಿದೆ: ಸಿದ್ದರಾಮಯ್ಯ

ಕಾನೂನುಬಾಹಿರ ಧಾರ್ಮಿಕ ಮತಾಂತರ ತಡೆ ಸುಗ್ರೀವಾಜ್ಞೆಗೆ ಉತ್ತರಪ್ರದೇಶ ಗವರ್ನರ್ ಅಂಕಿತ

ಕಾನೂನುಬಾಹಿರ ಧಾರ್ಮಿಕ ಮತಾಂತರ ತಡೆ ಸುಗ್ರೀವಾಜ್ಞೆಗೆ ಉತ್ತರಪ್ರದೇಶ ಗವರ್ನರ್ ಅಂಕಿತ

ಯಾರು ಪೇಮೆಂಟ್‌ ಕೊಡುತ್ತಾರೋ ಹಳ್ಳಿಹಕ್ಕಿಅಲ್ಲಿರುತ್ತದೆ:ವಿಶ್ವನಾಥ್ ಗೆ ಸಾ.ರಾ.ಮಹೇಶ್ ಕುಟುಕು

ಯಾರು ಪೇಮೆಂಟ್‌ ಕೊಡುತ್ತಾರೋ ಹಳ್ಳಿಹಕ್ಕಿಅಲ್ಲಿರುತ್ತದೆ:ವಿಶ್ವನಾಥ್ ಗೆ ಸಾ.ರಾ.ಮಹೇಶ್ ಕುಟುಕು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬುಡಕಟ್ಟುಗಳ ಅಭಿವೃದ್ಧಿ ಅನುದಾನ ‌ಮಾರ್ಚ್‌ನೊಳಗೆ ಬಳಸಿ

ಬುಡಕಟ್ಟುಗಳ ಅಭಿವೃದ್ಧಿ ಅನುದಾನ ‌ಮಾರ್ಚ್‌ನೊಳಗೆ ಬಳಸಿ

Untitled-6

ಕೇಂದ್ರದ ವಿರುದ್ಧ ರೈತ, ಕಾರ್ಮಿಕರ ಆಕ್ರೋಶ

ಮದುವೆಗೆ ಜನರ ಮಿತಿ ಮೀರಿದರೆ ದಂಡ

ಮದುವೆಗೆ ಜನರ ಮಿತಿ ಮೀರಿದರೆ ದಂಡ

ಗ್ರಾಪಂ ಚುನಾವಣೆಗೆ ಪಕ್ಷ ಸಂಘಟನೆ

ಗ್ರಾಪಂ ಚುನಾವಣೆಗೆ ಪಕ್ಷ ಸಂಘಟನೆ

H.-D.-Revanna

60ದೇವಾಲಯ ಜೀರ್ಣೋದ್ಧಾರ

MUST WATCH

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM & ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

ಹೊಸ ಸೇರ್ಪಡೆ

ಗುಣಮಟ್ಟದ ಕಾಮಗಾರಿಗೆ ಆದ್ಯತೆ

ಗುಣಮಟ್ಟದ ಕಾಮಗಾರಿಗೆ ಆದ್ಯತೆ

ದುಬಾೖ ಎಂಬ ವಿಸ್ಮಯ ಲೋಕ

ದುಬಾೖ ಎಂಬ ವಿಸ್ಮಯ ಲೋಕ

ಬುಡಕಟ್ಟುಗಳ ಅಭಿವೃದ್ಧಿ ಅನುದಾನ ‌ಮಾರ್ಚ್‌ನೊಳಗೆ ಬಳಸಿ

ಬುಡಕಟ್ಟುಗಳ ಅಭಿವೃದ್ಧಿ ಅನುದಾನ ‌ಮಾರ್ಚ್‌ನೊಳಗೆ ಬಳಸಿ

ಎಕರೆಗೆ 5 ಲಕ್ಷ ಪರಿಹಾರಕ್ಕೆ ರೈತ ಸಂಘ ಒತ್ತಾಯ

ಎಕರೆಗೆ 5 ಲಕ್ಷ ಪರಿಹಾರಕ್ಕೆ ರೈತ ಸಂಘ ಒತ್ತಾಯ

ಐಪಿಎಲ್ ನಲ್ಲಿ ಫ್ಲಾಪ್, ದೇಶದ ಪರ ಟಾಪ್: ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್

ಐಪಿಎಲ್ ನಲ್ಲಿ ಫ್ಲಾಪ್, ದೇಶದ ಪರ ಟಾಪ್: ಕೆ.ಎಲ್.ರಾಹುಲ್ ಬಳಿ ಕ್ಷಮೆ ಕೇಳಿದ ಮ್ಯಾಕ್ಸ್ ವೆಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.