ಹಾಸನ:ತಂದೆಯ 1 ಲಕ್ಷ ರೂ ಸಾಲಕ್ಕೆ ಮಗಳು, ಮೊಮ್ಮಕ್ಕಳಿಬ್ಬರು ಬಲಿ
Team Udayavani, Nov 7, 2018, 4:31 PM IST
ಹಾಸನ: ತಂದೇ ಮಾಡಿದ್ದ 1 ಲಕ್ಷ ರೂಪಾಯಿ ಸಾಲಕ್ಕೆ ಮಗಳು ಮತ್ತು ಮೊಮ್ಮಕ್ಕಳು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬುಧವಾರ ಚನ್ನರಾಯಪಟ್ಟಣದ ದಿಂಡಗೂರು ಗ್ರಾಮದಲ್ಲಿ ನಡೆದಿದೆ.
31 ವರ್ಷದ ರಾಧಾ , ಮಕ್ಕಳಾದ 6 ರ ಹರೆಯದ ಕಾಂತರಾಜು, 4 ವರ್ಷದ ಭರತ್ ಹೇಮಾವತಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರಾಧಾ ತಂದೆ ದಾಸೇಗೌಡ ಗ್ರಾಮದ ಪುಟ್ಟಸ್ವಾಮಿ ಅವರಿಂದ 1 ಲಕ್ಷ ರೂಪಾಯಿ ಸಾಲ ಪಡೆದು ಜಮೀನು ಮಾರುವುದಾಗಿ ಹೇಳಿದ್ದರು ಎಂದು ತಿಳಿದು ಬಂದಿದೆ. ದುರಂತವೆಂದರೆ ದಾಸೇಗೌಡ 3 ತಿಂಗಳ ಹಿಂದೆ ಸಾವನ್ನಪ್ಪಿದ್ದರು.
ಸಾಲಕ್ಕೆ ಜಾಮೀನು ಕೊಡಬೇಕು ಎಂದು ರಾಧಾ ಮತ್ತು ಸಹೋದರರಿಗೆ ಕೋರ್ಟ್ ನೊಟೀಸ್ ನೀಡಲಾಗಿದ್ದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರ ತನಿಖೆ ಮುಂದುವರಿದಿದೆ.