ಗ್ಯಾಸ್ ರೀಪೀಲ್ಲಿಂಗ್ ವೇಳೆ ಬೆಂಕಿ: ಆಟೋ ಭಸ್ಮ
Team Udayavani, Apr 18, 2021, 2:48 PM IST
ಸಕಲೇಶಪುರ: ಆಟೋಗೆ ಗ್ಯಾಸ್ ತುಂಬುವಾಗಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಆಟೋಹಾಗೂ ಮನೆಯೊಂದಕ್ಕೆ ಹಾನಿಯಾಗಿರುವಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಅಗ್ರಹಾರ ಬಡಾವಣೆಯಚನ್ನಕೇಶವ (29) ಎಂಬ ಆಟೋ ಚಾಲಕ ತಮ್ಮಆಟೋಗೆ ಅನಿಲ ತುಂಬಿಸಿಕೊಳ್ಳಲುಕುಶಾಲನಗರ ಬಡಾವಣೆ 10ನೇ ವಾರ್ಡ್‌ನಲ್ಲಿಅಕ್ರಮವಾಗಿ ವ್ಯಕ್ತಿಯೋರ್ವರಿಂದ ಅನಿಲತುಂಬಿಸುತ್ತಿದ್ದರು. ಈ ವೇಳೆ ಆಕಸ್ಮಿಕವಾಗಿ ಬೆಂಕಿಹೊತ್ತಿಕೊಂಡ ಪರಿಣಾಮ ಆಟೋ ಬಹುತೇಕಸುಟ್ಟು ಹೋಗಿದೆ. ಮನೆಯೊಂದರ ಮುಂಭಾಗಭಾಗಶಃ ಹಾನಿಯಾದರೆ ಕೋಳಿಸಾವಿಗೀಡಾಗಿದೆ. ಅದೃಷ್ಟವಶಾತ್ ಆಟೋಚಾಲಕ ಸಣ್ಣಪುಟ್ಟ ಗಾಯದಿಂದ ಪಾರಾಗಿದ್ದಾನೆ.
ಸ್ಥಳೀಯರು ತಕ್ಷಣ ಬೆಂಕಿ ನಂದಿಸಿದ್ದರಿಂದಹೆಚ್ಚಿನ ಅಪಾಯ ಸಂಭವಿಸಿಲ್ಲ. ಸ್ಥಳಕ್ಕೆಆಗಮಿಸಿದ ನಗರ ಠಾಣೆ ಪಿಎಸ್‌ಐ ಬಸವರಾಜ್ ಚಿಂಚೋಳಿ ಈ ಕುರಿತು ಪರಿಶೀಲನೆ ಮಾಡಿನಗರ ಠಾಣೆಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಪಟ್ಟಣದಲ್ಲಿ ಆಟೋ ಅನಿಲತುಂಬಿಸುವ ಬಂಕ್‌ಗಳು ಇಲ್ಲದಿರುವುದರಿಂದಅಕ್ರಮವಾಗಿ ತಾಲೂಕಿನ ಕೆಲವರು ಅಡುಗೆಅನಿಲ ಸಿಲಿಂಡರ್ ಗಳ ಮುಖಾಂತರವಾಹನಗಳಿಗೆ ಹೆಚ್ಚಿನ ಬೆಲೆಗೆ ಗ್ಯಾಸ್ ತುಂಬಿಸುವ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಪಟ್ಟಣದಲ್ಲಿ ಬೆಂಕಿ ಆಕಸ್ಮಿಕವಾಗಿ ಸಾವುನೋವುಗಳು ಸಂಭವಿಸುವ ಮೊದಲು ಅಕ್ರಮವಾಗಿ ಅನಿಲ ತುಂಬಿಸುವವರ ವಿರುದ್ಧಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರುಒತ್ತಾಯಿಸಿದ್ದಾರೆ.