Udayavni Special

ಕಾಡಾನೆ ದಾಳಿ: ರೈತನಿಗೆ ಗಾಯ, ಅಡಕೆ, ಬಾಳೆ ಬೆಳೆ ನಷ್ಟ


Team Udayavani, Jul 20, 2018, 12:01 PM IST

has-1.jpg

ಸಕಲೇಶಪುರ: ಕಾಡಾನೆ ದಾಳಿಯಿಂದ ವ್ಯಕ್ತಿಯೊಬ್ಬ ಗಾಯಗೊಂಡು, ಅಪಾರ ಪ್ರಮಾಣದಲ್ಲಿ ಬೆಳೆ ನಾಶವಾಗಿರುವ ಘಟನೆ ತಾಲೂಕಿನ ಅಗನಿ ಗ್ರಾಮದಲ್ಲಿ ನಡೆದಿದೆ.

ತಾಲೂಕಿನ ಹಾನುಬಾಳ್‌ ಹೋಬಳಿಯ ಗ್ರಾಮದಲ್ಲಿ ಬುಧವಾರ ಸಂಜೆ ಕಾಣಿಸಿಕೊಂಡ ಕಾಡಾನೆ, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಶಿವರಾಜ್‌ ಅವರನ್ನು ಸೊಂಡಿಲಿನಿಂದ ಎಸೆದು ಗಾಯಗೊಳಿಸಿದೆ. ಈ ವೇಳೆ ಅಕ್ಕಪಕ್ಕದವರು ಜೋರಾಗಿ ಕೂಗಿಕೊಂಡಿದ್ದರಿಂದ ಕಾಡಾನೆ ಅಲ್ಲಿಂದ ಓಡಿ ಹೋಗಿದೆ. ಗಾಯಗೊಂಡ ಶಿವರಾಜ್‌ಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಆಸ್ಪತ್ರೆಗೆ ಕಳುಹಿಸಲಾಗಿದೆ. 

ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶ: ಶಿವರಾಜ್‌ ಅವರ ತೋಟ ಸೇರಿದಂತೆ ಗ್ರಾಮದ ಅಗನಿ ದೇವರಾಜ್‌ ಅವರ ಮನೆ ಕಾಡಾನೆ ದಾಳಿಯಿಂದ ಹಾನಿ ಗೀಡಾಗಿದೆ. ಕಾಫಿ, ಅಡಕೆ, ಬಾಳೆ ಸೇರಿದಂತೆ ಲಕ್ಷಾಂತರ ರೂ. ಮೌಲ್ಯದ ಬೆಳೆ ನಾಶವಾಗಿದೆ. ಹಾನುಬಾಳ್‌ ವ್ಯಾಪ್ತಿಯ ಅಚ್ಚನಹಳ್ಳಿ, ಅಗನಿ, ಬಿಳಿಸಾರೆ ಪ್ರದೇಶದಲ್ಲಿ ಕಾಡಾನೆಗಳ ಹಿಂಡೊಂದು ನೆಲೆಸಿದೆ. ಆಹಾರಕ್ಕಾಗಿ ಆಗಾಗ ದಾಂಧಲೆ ಮಾಡುತ್ತಲೇ ಇದೆ. ಜೊತೆಗೆ ಹೆತ್ತೂರು ಹೋಬಳಿ ವ್ಯಾಪ್ತಿಯಲ್ಲೂ ಆನೆಗಳ ದಾಳಿಯಿಂದ ಹಲವರ ಭತ್ತದ ಗದ್ದೆಗಳಲ್ಲಿ ಸಸಿ ಮಡಿಗಳನ್ನು ನಾಶ ಮಾಡಿದೆ. ಜೊತೆಗೆ ಕಾಫಿ ಮತ್ತು ಏಲಕ್ಕಿ ತೋಟಗಳಲ್ಲಿಯೂ ದಾಂಧಲೆ ನಡೆಸಿದೆ.

ಮಿತಿಮೀರಿದ ಮಳೆಯಿಂದಾಗಿ ರೈತರು ಒಂದು ಕಡೆ ಬೆಳೆ ನಷ್ಟ ಅನುಭವಿಸುತ್ತಿದ್ದರೆ, ಇದರ ಜೊತೆಗೆ ಕಾಡಾನೆಗಳ ಹಾವಳಿಯಿಂದ ಬೆಳೆನಾಶ ರೈತರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ. ಕೂಡಲೇ ಸರ್ಕಾರ ಕಾಡಾನೆ ಹಾವಾಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜೊತೆಗೆ ಪರಿಹಾರ ವನ್ನೂ ಒದಗಿಸಬೇಕು ಎಂದು ರೈತರು ಮನವಿ ಮಾಡಿದ್ದಾರೆ.

ಟಾಪ್ ನ್ಯೂಸ್

hgdtyry6t

ಚಾರ್ಮಾಡಿ ಘಾಟ್ ಕಂದಕಕ್ಕೆ ಉರುಳಿದ ಕಾರು

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಕುರಿತು ಚರ್ಚಿಸಲು ಶೀಘ್ರ ಸಭೆ

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಕುರಿತು ಚರ್ಚಿಸಲು ಶೀಘ್ರ ಸಭೆ

gdtrt5y

ಅಧಿವೇಶನದ ಬಳಿಕ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ

ghyut6

ಮೆಕ್ಕಂಜೆ ಸೇತುವೆ ಸಂಪೂರ್ಣ ಶಿಥಿಲ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

ಲಕ್ನೋ: ನಾಳೆ 45ನೇ ಜಿಎಸ್‌ಟಿ ಮಂಡಳಿ ಸಭೆ

fgsrt5r

ಬೆಂಗಳೂರಿನಲ್ಲಿ ಅರ್ಚಕರ ಭವನ ನಿರ್ಮಾಣಕ್ಕೆ ಕ್ರಮ: ಶಶಿಕಲಾ ಜೊಲ್ಲೆ

fggrtrt

ವಿದ್ಯಾರ್ಥಿಗಳ ಬೇಡಿಕೆಗೆ ಸಿಎಂ ಸ್ಪಂದನೆ : ಮಕ್ಕಳ ಜೊತೆ ಬೊಮ್ಮಾಯಿ ಫೋಟೋ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಿಕ್ಕಮಗಳೂರು-ಬೇಲೂರು ಹೆದ್ದಾರಿಯಲ್ಲಿ ಹೆಚ್ಚಿದ ಗುಂಡಿ

ಚಿಕ್ಕಮಗಳೂರು-ಬೇಲೂರು ಹೆದ್ದಾರಿಯಲ್ಲಿ ಹೆಚ್ಚಿದ ಗುಂಡಿ

ಹುಡಾ ನೂತನ ಬಡಾವಣೆ ನಿರ್ಮಾಣ ವಿಳಂಬ

ಹುಡಾ ನೂತನ ಬಡಾವಣೆ ನಿರ್ಮಾಣ ವಿಳಂಬ

ಹವಾಮಾನ ವೈಪರೀತ್ಯದಿಂದ ಕಾಫಿ ಮಣ್ಣು ಪಾಲು

ಹವಾಮಾನ ವೈಪರೀತ್ಯದಿಂದ ಕಾಫಿ ಮಣ್ಣು ಪಾಲು

ಅನಾಥ ಮೂಕಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೆರವು

ಅನಾಥ ಮೂಕಿಗೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನೆರವು

ರಾಜಕಾರಣದ ಬಗ್ಗೆ ಪ್ರಸ್ತಾಪ ಮಾಡಿಲ್ಲ : ಕೋಡಿಮಠ ಶ್ರೀ

ರಾಜಕಾರಣದ ಬಗ್ಗೆ ಪ್ರಸ್ತಾಪ ಮಾಡಿಲ್ಲ : ಕೋಡಿಮಠ ಶ್ರೀ

MUST WATCH

udayavani youtube

LIVE : 16/09/21 ವಿಧಾನಮಂಡಲ ಅಧಿವೇಶನ 2021 |

udayavani youtube

ಹಿಂದೂ ಪರ ಸಂಘಟನೆಗಳ ಪ್ರತಿಭಟನೆ ಸಹಜವಾದದ್ದು : ಎಸ್.ಟಿ. ಸೋಮಶೇಖರ್

udayavani youtube

ಅರಮನೆ ಪ್ರವೇಶಿಸಿದ ಅಭಿಮನ್ಯು ನೇತೃತ್ವದ ಗಜಪಡೆ

udayavani youtube

ಮೋದಿಗೆ ನಿದ್ದೆ ಇಲ್ಲದ ರಾತ್ರಿ ಕಳೆಯುವಂತೆ ಮಾಡ್ತೇವೆ: ಖಲಿಸ್ತಾನ್|

udayavani youtube

ಮೂಡಿಗೆರೆ: ಬಿಜೆಪಿ ಸಂಸದರಿಗೆ ಹಿಂದೂಪರ ಕಾರ್ಯಕರ್ತರಿಂದ ಮುತ್ತಿಗೆ ಯತ್ನ|

ಹೊಸ ಸೇರ್ಪಡೆ

hgdtyry6t

ಚಾರ್ಮಾಡಿ ಘಾಟ್ ಕಂದಕಕ್ಕೆ ಉರುಳಿದ ಕಾರು

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಕುರಿತು ಚರ್ಚಿಸಲು ಶೀಘ್ರ ಸಭೆ

ಕಾಡು ಪ್ರಾಣಿಗಳ ಹಾವಳಿ ತಪ್ಪಿಸುವ ಕುರಿತು ಚರ್ಚಿಸಲು ಶೀಘ್ರ ಸಭೆ

gdtrt5y

ಅಧಿವೇಶನದ ಬಳಿಕ ಪ್ರವಾಹ ಸಂತ್ರಸ್ತರ ಪರಿಹಾರಕ್ಕೆ ಕ್ರಮ : ಸಿಎಂ ಬಸವರಾಜ ಬೊಮ್ಮಾಯಿ

ghyut6

ಮೆಕ್ಕಂಜೆ ಸೇತುವೆ ಸಂಪೂರ್ಣ ಶಿಥಿಲ

ಬಿಜೆಪಿ ಮುಖಂಡ ಸುರೇಂದ್ರನ್‌ ವಿಚಾರಣೆ

ಬಿಜೆಪಿ ಮುಖಂಡ ಸುರೇಂದ್ರನ್‌ ವಿಚಾರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.