ಪ್ರತಿಯೊಬ್ಬರಲ್ಲೂ ಸಾಮಾಜಿಕ ಮೌಲ್ಯ ನಿರೀಕ್ಷಿಸಿದ್ದ ಗಾಂಧೀಜಿ

Team Udayavani, Oct 3, 2019, 3:00 AM IST

ಅರಸೀಕೆರೆ: ಸತ್ಯ, ಅಹಿಂಸೆ ಮತ್ತು ನ್ಯಾಯ, ನಿಷ್ಠೆಯ ಸಾಮಾಜಿಕ ಮೌಲ್ಯಗಳು ದೇಶದ ಪ್ರತಿಯೊಬ್ಬ ಪ್ರಜೆಯಲ್ಲಿ ಬೆಳೆಯಬೇಕು ಎಂಬುದು ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಆಶಯವಾಗಿತ್ತು ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ಹೇಳಿದರು.

ನಗರದ ಹೊರವಲಯದಲ್ಲಿನ ಮೈಸೂರು ರಸ್ತೆಯಲ್ಲಿನ ಕಸ್ತೂರ ಬಾ ಗಾಂಧಿ ರಾಷ್ಟ್ರೀಯ ಸ್ಮಾರಕ ಕೇಂದ್ರದ ಸಭಾಂಗಣದಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಮಾಜಿ ಪ್ರಧಾನಿ ಲಾಲ್‌ಬಹದ್ದೂರ್‌ ಶಾಸ್ತ್ರಿ ಜನ್ಮ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ತಾಲೂಕು ಆಡಳಿತದ ಜೊತೆಗೆ ಆಗಮಿಸಿ ಮಹಾತ್ಮ ಗಾಂ ಧೀಜಿ ಅವರ ಚಿತಾಭಸ್ಮದ ಸ್ಮಾರಕಕ್ಕೆ ಭೇಟಿನೀಡಿ ಪುಷ್ಪ ನಮನ ಸಲ್ಲಿಸಿದ ನಂತರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶಪ್ರೇಮಕ್ಕೆ ಸ್ಫೂರ್ತಿಯಾಗಿದ್ದರು: ರಾಷ್ಟ್ರಪಿತ ಮಹಾತ್ಮ ಗಾಂ ಧೀಜಿ ಸತ್ಯ ಮತ್ತು ಅಹಿಂಸೆಯ ಪ್ರಬಲ ಅಸ್ತ್ರ ಬಳಸಿ ಬ್ರಿಟಿಷರಿಂದ ದೇಶಕ್ಕೆ ಸ್ವಾತಂತ್ರ ತಂದು ಕೊಟ್ಟರು. ಅವರ ಸ್ವದೇಶಿ ಆಂದೋಲನ, ಗ್ರಾಮ ಸ್ವರಾಜ್ಯದ ಪರಿಕಲ್ಪನೆ, ಭಾರತೀಯರಲ್ಲಿ ದೇಶ ಪ್ರೇಮವನ್ನು ಜಾಗೃತಗೊಳಿಸಲು ಸ್ಫೂರ್ತಿ ನೀಡಿದ್ದವು ಎಂದರು.

ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ಅಗತ್ಯ: ಇಂದಿನ ಆಧುನಿಕತೆಯ ತಾಂತ್ರಿಕಯುಗದ ಪೈಪೋಟಿಯಲ್ಲಿ ಕೃಷಿ ಕ್ಷೇತ್ರ ಬೆಳೆಸುವ ಜೊತೆಗೆ ಸಣ್ಣ ಕೈಗಾರಿಕೆಗಳಾದ ಕರಕುಶಲ, ಗುಡಿ ಕೈಗಾರಿಕೆಗಳಿಗೆ ಸರ್ಕಾರ ಗ್ರಾಮೀಣ ಪ್ರದೇಶಗಳಲ್ಲಿ ನಡೆಸಲು ಪ್ರೋತ್ಸಾಹ ನೀಡಲು ವಿವಿಧ ಯೋಜನೆ ರೂಪಿಸಿ ಜಾರಿಗೆ ತರುವ ಮೂಲಕ ಮಾನವ ಸಂಪನ್ಮೂಲ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದರು.

ಉದ್ಯೋಗ ಸೃಷ್ಟಿಸಿ: ಗುಡಿ ಕೈಗಾರಿಕೆಗಳು ತಯಾರಿಸುವ ವಸ್ತುಗಳನ್ನೇ ಬೃಹತ್‌ ಕೈಗಾರಿಕೆಗಳು ತಯಾರು ಮಾಡುತ್ತಿರುವ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ನಿರುದ್ಯೋಗ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸರ್ಕಾರ ಎಚ್ಚರ ವಹಿಸುವ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗ ಸೃಷ್ಟಿಗೆ ಹೆಚ್ಚಿನ ಆದ್ಯತೆ ನೀಡಿ ಜನರು ನಗರ ಪ್ರದೇಶಗಳ ಕಡೆಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಬೇಕಾಗಿದೆ ಎಂದರು.

ಶಾಸ್ತ್ರೀಜಿ ಅಪ್ರತಿಮ ದೇಶಭಕ್ತ: ಮಾಜಿ ಪ್ರಧಾನಿ ಲಾಲ್‌ ಬಹದೂರ್‌ ಶಾಸ್ತ್ರಿಯವರು ಅತ್ಯಂತ ಸರಳ ಜೀವಿ, ಅಪ್ರತಿಮ ದೇಶಭಕ್ತ ನಾಯಕರಾಗಿದ್ದು, ಸ್ವತ್ಛ ಮತ್ತು ದಕ್ಷ ಆಡಳಿತಕ್ಕೆ ಹೆಸರಾಗಿದ್ದ ಅವರ ಜೀವನ ಆದರ್ಶಗಳು ನಮ್ಮೆಲ್ಲರಿಗೂ ದಾರಿ ದೀಪವಾಗಿದೆ ಎಂದು ತಿಳಿಸಿದರು.

ಗಾಂಧೀಜಿ ಚಿತಾ ಭಸ್ಮ: ಇಲ್ಲಿನ ಕಸ್ತೂರ ಬಾ ರಾಷ್ಟ್ರೀಯ ಸ್ಮಾರಕ ಕೇಂದ್ರದಲ್ಲಿ ಮಹಾತ್ಮ ಗಾಂಧೀಜಿ ಅವರ ಚಿತಾಭಸ್ಮದ ಸ್ಮಾರಕವಿದ್ದು, ಈ ಕೇಂದ್ರವನ್ನು ಕರ್ನಾಟಕ ರಾಜ್ಯದ ರಾಜಘಾಟ್‌ ಎಂದು ಪ್ರಸಿದ್ಧಿ ಪಡಿಸುವ ಉದ್ದೇಶದಿಂದ ಸುಮಾರು 3.5 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನ ಕಲ್ಪಿಸಲಾಗುತ್ತದೆ. ಕಸ್ತೂರಬಾ ಶಿಬಿರವನ್ನು ಪ್ರವಾಸೋದ್ಯಮ ಕೇಂದ್ರವನ್ನಾಗಿ ಅಭಿವೃದ್ಧಿ ಪಡಿಸಲು ತಾವು ಶಕ್ತಿ ಮೀರಿ ಶ್ರಮಿಸುವುದಾಗಿ ಹೇಳಿದರು.

ಅಹಿಂಸಾ ದಿನಾಚರಣೆ: ತಹಶೀಲ್ದಾರ್‌ ಸಂತೋಷ್‌ ಕುಮಾರ್‌ ಮಾತನಾಡಿ, ಸತ್ಯ, ಅಹಿಂಸೆಯನ್ನು ಪ್ರತಿಪಾದಿಸುವ ಮೂಲಕ ಸರಳ ಜೀವನ ನಡೆಸಿದ ಮಹಾತ್ಮ ಗಾಂಧೀಜಿಯವರ ದಿನಾಚರಣೆಯನ್ನು ಅಂತಾರಾಷ್ಟ್ರೀಯ ಅಹಿಂಸಾ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿಯಾಗಿದೆ ಎಂದರು.

ಮಹಾತ್ಮ ಗಾಂಧೀಜಿಯವರು ಸಾಮಾಜಿಕ ಚಿಂತಕ, ತತ್ವಜ್ಞಾನಿ ಯಾಗಿದ್ದು, ಅವರ ಸರ್ವೋದಯ ಪರಿಕಲ್ಪನೆ, ವೃತ್ತಿಗೌರವಕ್ಕೆ ಶ್ರೇಷ್ಠತೆ ನೀಡಬೇಕೆಂಬ ಪ್ರತಿಪಾದನೆ ಹಾಗೂ ತತ್ವ ರಹಿತ ರಾಜಕೀಯ, ಪಕ್ಷಾತೀತ ರಾಜಕೀಯ ಪ್ರಜಾಪ್ರಭುತ್ವ ಆಡಳಿತಕ್ಕೆ ಸ್ಫೂರ್ತಿ ಎಂಬ ವಿಚಾರಧಾರೆಗಳು, ಗ್ರಾಮ ಸ್ವರಾಜ್ಯದ ಸ್ವದೇಶಿ ಆಂದೋಲನ, ಪರಿಸರದ ಸ್ವತ್ಛತೆ ಕೂಡ ಸೇರಿದ್ದು, ಪ್ರತಿಯೊಬ್ಬರು ತಮ್ಮ ಮನೆಗಳ ಸುತ್ತಮುತ್ತಲಿನ ಪರಿಸರ ಸ್ವತ್ಛತೆಯನ್ನು ಕಾಪಾಡುವುದು ಆದ್ಯ ಕರ್ತವ್ಯ ಎನ್ನುವುದನ್ನು ಅವರು ಪ್ರತಿಪಾದಿಸುತ್ತಿದ್ದರು ಎಂದು ತಿಳಿಸಿದರು.

ಸರ್ವಧರ್ಮ ಗ್ರಂಥ ಪಠಣ:
ಸಮಾರಂಭದಲ್ಲಿ ಸರ್ವಧರ್ಮಗಳ ಗ್ರಂಥಗಳಾದ ಭಗವದ್ಗೀತೆ, ಬೈಬಲ್‌ ಗ್ರಂಥ, ಕುರಾನ್‌ ಗ್ರಂಥಗಳನ್ನು ಪಠಿಸಲಾಯಿತು. ಭಾರತ ಸ್ಕೌಟ್ಸ್‌ ಮತ್ತು ಗೆ„ಡ್‌ನ‌ ಕಾಮೇಶ್ವರಿ ಭಟ್‌ ತಂಡ ಸರ್ವಧರ್ಮ ಪ್ರಾರ್ಥನೆ ನೆರವೇರಿಸಿತು.ಕಾರ್ಯಕ್ರಮದಲ್ಲಿ ತಾಪಂ ಇಒ ಎಸ್‌.ಪಿ.ನಟರಾಜ್‌ ಪ್ರಾಸ್ತಾವಿಕವಾಗಿ ಮಾತನಾಡಿದರು.

ತಾಪಂ ಅಧ್ಯಕ್ಷ ರೂಪ ಗುರುಮೂರ್ತಿ, ಕಸ್ತೂರ ಬಾ ಟ್ರಸ್ಟ್‌ನ ಪ್ರತಿನಿ ಧಿ ಉಷಾ ಅಬ್ರಾಲ್‌, ಜಿಪಂ ಸದಸ್ಯ ಮಾಡಾಳು ಸ್ವಾಮಿ, ಅನಂತ ಸದ್ವಿದ್ಯಾ ಸಂಸ್ಥೆಯ ಆರ್‌.ಅನಂತಕುಮಾರ್‌, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅರುಣ್‌ ಕುಮಾರ್‌, ಕ್ಷೇತ್ರ ಶಿಕ್ಷಣಾಧಿಕಾರಿ ಮೋಹನ್‌ಕುಮಾರ್‌, ದೈಹಿಕ ಶಿಕ್ಷಣ ಪರಿವೀಕ್ಷಕ ಬಸವರಾಜ್‌ ಮಾತನಾಡಿದರು.

ಪೌರಾಯುಕ್ತ ಕಾಂತರಾಜು, ಹಿರಿಯ ಕ್ರೀಡಾಪಟು ಎಚ್‌.ಟಿ.ಮಹದೇವ್‌ ಸೇರಿದಂತೆ ವಿವಿಧ ಇಲಾಖೆಗಳ ಅ ಧಿಕಾರಿಗಳು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾ ಧಿಕಾರಿಗಳು ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ