Udayavni Special

ದೇಶದಲ್ಲಿ ಮೊದಲು ಜಾತಿಪದ್ಧತಿ ತೊಲಗಿಸಿ

Team Udayavani, Nov 16, 2019, 3:00 AM IST

desdhadalli

ಆಲೂರು: ಮಹನೀಯರ ಜಯಂತಿ ಆಚರಣೆಗಳು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು. ಎಲ್ಲಾ ಮಹನೀಯರು, ಸಂತರು, ಶರಣರು ಸಮಾಜದ ಒಳಿತಿಗಾಗಿಯೇ ತಮ್ಮ ಸಂದೇಶಗಳನ್ನು ನೀಡಿದ್ದಾರೆ. ಇವರೆಲ್ಲರ ಜಯಂತಿಗಳಿಗೆ ಎಲ್ಲಾ ಧರ್ಮ, ಸಮಾಜದವರೂ ಪಾಲ್ಗೊಂಡಾಗ ಮಾತ್ರ ಮಹನೀಯರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರಲು ಸಾಧ್ಯ ಎಂದು ಶಾಸಕ ಎಚ್‌.ಕೆ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಮಿನಿವಿಧಾನ ಸೌಧದ ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡ ಕನಕದಾಸರ ಹಾಗೂ ಕಿತ್ತೂರು ರಾಣಿಚನ್ನಮ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.

ಮಹತ್ವದ ಕಾಣಿಕೆ: 16ನೇ ಶತಮಾನದಲ್ಲಿ ಸಮಾಜದಲ್ಲಿ ಮನೆ ಮಾಡಿರುವ ಅಸಮಾನತೆ, ಮೂಢನಂಬಿಕೆ, ಜಾತಿ, ಲಿಂಗ ಭೇದದ ನೋವನ್ನು ಅನುಭವಿಸಿದ ಕನಕದಾಸರು ಅವುಗಳನ್ನು ಸಮಾಜದಿಂದ ತೊಡೆದು ಹಾಕುವ ನಿಟ್ಟಿನಲ್ಲಿ ಮನುಕುಲಕ್ಕೆ ದಾಸ ಸಾಹಿತ್ಯದ ಮೂಲಕ ಮಹತ್ವದ ಕಾಣಿಕೆ ನೀಡಿದ್ದಾರೆ ಎಂದರು.

ಜಾತಿ ಪದ್ಧತಿ ಬಿಡಿ: ಪ್ರತಿ ಮಹಾತ್ಮನ ಆಚರಣೆ ಸಿದ್ಧಾಂತಗಳ ಹಿಂದೆ ಜಾತೀಯತೆ ಮನೆ ಮಾಡುತ್ತಿರುವುದು ವಿಷಾದನೀಯ. ಡಾ.ಬಿ.ಆರ್‌. ಅಂಬೇಡ್ಕರ್‌ ಸಂವಿಧಾನ ಬರೆದು 70 ವರ್ಷಗಳು ಕಳೆದರೂ ಕೂಡ ಅಸ್ಪೃಶ್ಯತೆ ಆಚರಣೆಯಲ್ಲಿದೆ, ದಲಿತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ ಸಮಾಜದಲ್ಲಿ ಅಸಮಾನತೆ ತಾಂಡವಾಗುತ್ತಿದೆ. ಇದು ದೇಶದ ಒಳಿತೆಗೆ ಮಾರಕವಾಗಿದೆ ಇದನ್ನು ಹೋಗಲಾಡಿಸಲು ಜನಪ್ರತಿನಿಧಿಗಳು, ಇಲಾಖೆಗಳ ಅಧಿಕಾರಿಗಳಿಂದ ಸಾಧ್ಯವಿಲ್ಲ ಬದಲಾಗಿ ಎಲ್ಲಾ ಸಮುದಾಯಗಳ ಜನರೆ ಸ್ವಯಂ ಪ್ರೇರಿತವಾಗಿ ಜಾತಿ ಪದ್ಧತಿಯನ್ನು ಬಿಡಬೇಕು ಎಂದು ಸಲಹೆ ನೀಡಿದರು.

ಕನಕರ ಆದರ್ಶ ಪಾಲಿಸಿ: ತಹಶೀಲ್ದಾರ್‌ ಶರೀನ್‌ ತಾಜ್‌ ಮಾತನಾಡಿ, ಕುರುಬ ಜನಾಂಗದಲ್ಲಿ ಜನಿಸಿದ ಕನಕದಾಸರು ಎಲ್ಲ ಜನಾಂಗದ ಹಿತವನ್ನು ಭಯಸಿದ ಅಪರೂಪದ ಶ್ರೇಷ್ಠ ಸಂತರಾಗಿ ಇತಿಹಾಸದ ಪುಟದಲ್ಲಿ ಉಳಿದ್ದಾರೆ. ಅವರು ಪ್ರತಿಪಾದಿಸಿದಂತಹ ತತ್ವಾದರ್ಶಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿ ಬದುಕು ಸಾಧ್ಯವಿದೆ, ಬ್ರಿಟಿಷರ ವಿರುದ್ಧ ಸೆಣಸಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಶೌರ್ಯ, ಸಾಹಸಕ್ಕೆ ಹೆಸರು ವಾಸಿಯಾಗಿ ನಾಡು-ನುಡಿಗಾಗಿ ದುಡಿದ ಮೊಟ್ಟ ಮೊದಲ ವೀರ ಮಹಿಳೆಯಾಗಿದ್ದಾರೆ. ಇಂದಿನ ಸಮಾಜಕ್ಕೆ ರಾಣಿ ಚೆನ್ನಮ್ಮವರ ಆದರ್ಶಗಳ ಅಗತ್ಯ ಹೆಚ್ಚಾಗಿದೆ ಎಂದು ತಿಳಿಸಿದರು.

ಶಿಕ್ಷಕ, ಸಾಹಿತಿ ಪರಮೇಶ್‌ ಮಡಬಲು ಮಾತನಾಡಿ, ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿ ಸಮಾಜದ ಆಸ್ತಿಯಾಗುತ್ತಾನೆ. ಮೇಲಾಗಿ, ಆತ ಚರಿತ್ರೆಯಲ್ಲಿ ದಾಖಲಾಗುತ್ತಾನೆ. ತನ್ನ ಶಿಸ್ತುಬದ್ಧ ಆಡಳಿತ ಮತ್ತು ಅಂತಃಕರಣಭರಿತ ನಿರ್ಣಯಗಳಿಂದಾಗಿ ಕಿತ್ತೂರು ರಾಣಿ ಚೆನ್ನಮ್ಮ ಇತಿಹಾಸದಲ್ಲಿ ಸುಭದ್ರ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.

ಹಾಸನ ಎಪಿಎಂಸಿ ಅಧ್ಯಕ್ಷ ಕೆ.ಎಸ್‌ ಮಂಜೇಗೌಡ, ತಾಪಂ ಸದಸ್ಯ ಸಿ.ವಿ.ಲಿಂಗರಾಜು, ಮಾಜಿ ಸದಸ್ಯ ಸುಬ್ಬಶೆಟ್ಟಿ, ತಾಪಂ ಕಾರ್ಯನಿರ್ವಣಾಧಿಕಾರಿ ಸತೀಶ್‌, ಬಿಇಒ ಹೊನ್ನೇಶ್‌ ಕುಮಾರ್‌, ಪಪಂ ಸದಸ್ಯೆ ತಾಹೆರಾ ಬೇಗಾಂ, ತೌಫಿಕ್‌, ಮಾಜಿ ಅಧ್ಯಕ್ಷ ಡಿ.ಎಸ್‌ ಜಯಣ್ಣ, ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಕುರುಬ ಸಮುದಾಯದ ಅಧ್ಯಕ್ಷ ಚಿಕ್ಕೇಗೌಡ, ಆಲೂರು ಪೊಲೀಸ್‌ ಠಾಣೆಯ ಪಿ.ಐ ರೇವಣ್ಣ, ನಿವೃತ್ತ ಶಿಕ್ಷಣಾಧಿಕಾರಿ ವಿಜಯಕಾಂತ್‌, ಶಿರಸ್ತೇದಾರ್‌ ಶ್ರೀಧರಮೂರ್ತಿ, ಹರೀಶ್‌ ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಚಾಮರಾಜನಗರ: 99 ಪ್ರಕರಣಗಳು ಪತ್ತೆ: ಇಬ್ಬರು ಸಾವು

ಚಾಮರಾಜನಗರ: 99 ಕೋವಿಡ್ ಪ್ರಕರಣಗಳು ಪತ್ತೆ: ಇಬ್ಬರು ಸಾವು

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

ಅಂಗವೈಕಲ್ಯ ಮೆಟ್ಟಿ UPSCಯಲ್ಲಿ 465ನೇ ರ‍್ಯಾಂಕ್‍ ಪಡೆದ ಮೇಘನಾಳನ್ನು ಅಭಿನಂದಿಸಿದ ಡಿಸಿಎಂ

ಅಂಗವೈಕಲ್ಯ ಮೆಟ್ಟಿ UPSCಯಲ್ಲಿ 465ನೇ ರ‍್ಯಾಂಕ್‍ ಪಡೆದ ಮೇಘನಾಳನ್ನು ಅಭಿನಂದಿಸಿದ ಡಿಸಿಎಂ

hack

ನಿಮ್ಮ ಸ್ಮಾರ್ಟ್ ಪೋನ್ ಹ್ಯಾಕ್ ಆಗಿದೆ ಎಂದು ಹೇಗೆ ಪತ್ತೆಹಚ್ಚುವುದು ? ಇಲ್ಲಿವೆ ಮಾಹಿತಿ

ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್‌ ಸ್ಟ್ರೆಂತ್‌ ಮ್ಯಾಟರ್ಸ್”

ಮಾನಸಿಕ ಸ್ಥೈರ್ಯ ವೃದ್ಧಿಗೆ “ಮೆಂಟಲ್‌ ಸ್ಟ್ರೆಂತ್‌ ಮ್ಯಾಟರ್ಸ್”

ವೆಂಟಿಲೇಟರ್ ನಲ್ಲಿ ಪ್ರಣಬ್ ಮುಖರ್ಜಿ; ಮಾಜಿ ರಾಷ್ಟ್ರಪತಿ ಆರೋಗ್ಯ ಸ್ಥಿತಿ ಗಂಭೀರ

ವೆಂಟಿಲೇಟರ್ ನಲ್ಲಿ ಪ್ರಣಬ್ ಮುಖರ್ಜಿ; ಮಾಜಿ ರಾಷ್ಟ್ರಪತಿ ಆರೋಗ್ಯ ಸ್ಥಿತಿ ಗಂಭೀರ

ಹಾಸನ: 145 ಹೊಸ ಕೋವಿಡ್ ಸೋಂಕು ಪ್ರಕರಣಗಳು, ಮೂವರು ಸೋಂಕಿತರು ಸಾವು

ಹಾಸನ: 145 ಹೊಸ ಕೋವಿಡ್ ಸೋಂಕು ಪ್ರಕರಣಗಳು, ಮೂವರು ಸೋಂಕಿತರು ಸಾವು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಾಸನ: 145 ಹೊಸ ಕೋವಿಡ್ ಸೋಂಕು ಪ್ರಕರಣಗಳು, ಮೂವರು ಸೋಂಕಿತರು ಸಾವು

ಹಾಸನ: 145 ಹೊಸ ಕೋವಿಡ್ ಸೋಂಕು ಪ್ರಕರಣಗಳು, ಮೂವರು ಸೋಂಕಿತರು ಸಾವು

ನಫೆಡ್‌ ಕೊಬ್ಬರಿ ಖರೀದಿ ಕೇಂದ್ರಕ್ಕೆ ಚಾಲನೆ

ನಫೆಡ್‌ ಕೊಬ್ಬರಿ ಖರೀದಿ ಕೇಂದ್ರಕ್ಕೆ ಚಾಲನೆ

ರೈಲ್ವೆ ಖಾಸಗೀಕರಣ ವಿರೋಧಿಸಿ ಧರಣಿ

ರೈಲ್ವೆ ಖಾಸಗೀಕರಣ ವಿರೋಧಿಸಿ ಧರಣಿ

hasan-tdy-1

ಕ್ವಿಟ್‌ ಇಂಡಿಯಾ ನೆನಪು ಕಾರ್ಯಕ್ರಮ

ಲೂಟಿಕೋರ ಸರ್ಕಾರದಿಂದ ಅಭಿವೃದ್ಧಿ ಸ್ಥಗಿತ

ಲೂಟಿಕೋರ ಸರ್ಕಾರದಿಂದ ಅಭಿವೃದ್ಧಿ ಸ್ಥಗಿತ

MUST WATCH

udayavani youtube

ಮಿತ್ತಬಾಗಿಲು ಗ್ರಾಮದ ಕಾಡುಮನೆ ಬಳಿ ಭಾರಿ ಭೂಕುಸಿತ: ಆತಂಕದಲ್ಲಿ ನಿವಾಸಿಗಳು

udayavani youtube

SSLC ಪರೀಕ್ಷೆಯಲ್ಲಿ ರಾಜ್ಯದಲ್ಲಿ ದ್ವಿತೀಯ ಸ್ಥಾನ ಹಂಚಿಕೊಂಡ ನಿಧಿ ರಾವ್

udayavani youtube

ದೇಶದ ಕೃಷಿಕ ಒಬ್ಬ ಉದ್ಯಮಿ ಯಾಗಬೇಕು ಪ್ರಧಾನಿಗಳ ಆಶಾಯ | Narendra Modi Agriculture

udayavani youtube

ಅಮೃತ’ ಗಾನ ಧಾರೆ: ಮದುವೆ ಔತಣ ಕೂಟದಲ್ಲಿ ಪತಿ-ಪತ್ನಿ ‘ಯಕ್ಷ ಗಾನ ವೈಭವ’

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATIONಹೊಸ ಸೇರ್ಪಡೆ

ಚಾಮರಾಜನಗರ: 99 ಪ್ರಕರಣಗಳು ಪತ್ತೆ: ಇಬ್ಬರು ಸಾವು

ಚಾಮರಾಜನಗರ: 99 ಕೋವಿಡ್ ಪ್ರಕರಣಗಳು ಪತ್ತೆ: ಇಬ್ಬರು ಸಾವು

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

ಕೂಲಿ ಕೆಲಸದ ಜೊತೆಗೆ ವಿದ್ಯಾಭ್ಯಾಸ ಮಾಡಿ SSLCಯಲ್ಲಿ616 ಅಂಕ : ಶಿಕ್ಷಣ ಸಚಿವರಿಂದ ಅಭಿನಂದನೆ

ಅಂಗವೈಕಲ್ಯ ಮೆಟ್ಟಿ UPSCಯಲ್ಲಿ 465ನೇ ರ‍್ಯಾಂಕ್‍ ಪಡೆದ ಮೇಘನಾಳನ್ನು ಅಭಿನಂದಿಸಿದ ಡಿಸಿಎಂ

ಅಂಗವೈಕಲ್ಯ ಮೆಟ್ಟಿ UPSCಯಲ್ಲಿ 465ನೇ ರ‍್ಯಾಂಕ್‍ ಪಡೆದ ಮೇಘನಾಳನ್ನು ಅಭಿನಂದಿಸಿದ ಡಿಸಿಎಂ

ಮುಂಬಯಿ: 1ಲಕ್ಷ ದಾಟಿದ ಚೇತರಿಸಿಕೊಂಡವರ ಸಂಖ್ಯೆ

ಮುಂಬಯಿ: 1ಲಕ್ಷ ದಾಟಿದ ಚೇತರಿಸಿಕೊಂಡವರ ಸಂಖ್ಯೆ

hack

ನಿಮ್ಮ ಸ್ಮಾರ್ಟ್ ಪೋನ್ ಹ್ಯಾಕ್ ಆಗಿದೆ ಎಂದು ಹೇಗೆ ಪತ್ತೆಹಚ್ಚುವುದು ? ಇಲ್ಲಿವೆ ಮಾಹಿತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.