Udayavni Special

ಬೆಂಗಳೂರು-ಮಂಗಳೂರು ರೈಲಿಗೆ ಗಾಜಿನ ಚಾವಣಿ

ರೈಲು ಪ್ರಯಾಣಿಕರಿಗೆ ಶಿರಾಡಿ ಘಾಟಿ ಪ್ರಾಕೃತಿಕ ಸೌಂದರ್ಯ ಸವಿಯುವ ಅವಕಾಶ ಪ್ರವಾಸೋದ್ಯಮ ಚೇತರಿಕೆಗೆ ಸಹಾಯಕಾರಿ

Team Udayavani, Feb 13, 2021, 4:39 PM IST

ಬೆಂಗಳೂರು-ಮಂಗಳೂರು ರೈಲಿಗೆ ಗಾಜಿನ ಚಾವಣಿ

ಸಕಲೇಶಪುರ: ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಸದ್ಯದಲ್ಲೆ ವಿಸ್ಟಾಡೋಮ್‌ (ಗಾಜಿನ ಚಾವಣಿ) ಅಳವಡಿಸಲಾಗುವುದು ಎಂಬಮಾಹಿತಿ ಕೇಳಿ ಬಂದಿದ್ದು, ಇದು ರೈಲುಪ್ರಯಾಣಿಕರಿಗೆ, ಪ್ರಕೃತಿ ಪ್ರಿಯರಿಗೆ ಸಂತೋಷದ ಸುದ್ದಿಯಾಗಿದೆ.

ಬೆಂಗಳೂರು-ಮಂಗಳೂರು ನಡುವೆಸಕಲೇಶಪುರದಿಂದ ಸುಬ್ರಹ್ಮಣ್ಯದವರೆಗೆ ಹಾದುಹೋಗುವ 55 ಕಿ.ಮೀ. ರೈಲು ಮಾರ್ಗ ಪ್ರಯಾಣಿಕರಪಾಲಿಗೆ ಸ್ವರ್ಗ. ಕಳೆದ ಹಲವು ವರ್ಷಗಳಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳಿಗೆ ಗಾಜಿನ ಚಾವಣಿ, ಕಿಟಕಿಗಳನ್ನು ಅಳವಡಿಸುವಂತೆ ಸಾಕಷ್ಟು ಮನವಿ ಪ್ರಕೃತಿ ಪ್ರಿಯರಿಂದ ಕೇಳಿ ಬರುತ್ತಿತ್ತು.ಹಲವು ಮಂದಿ ಶಿರಾಡಿ ಘಾಟಿಯ ಸೌಂದರ್ಯ ಸವಿಯಲೆಂದೇ ಬೆಂಗಳೂರು- ಮಂಗಳೂರು ನಡುವಿನ ರೈಲಿನಲ್ಲಿ ಸಂಚರಿಸುತ್ತಿದ್ದರು. ಆದರೆ, ರೈಲಿನ ಕಿಟಕಿಗಳು ಚಿಕ್ಕದಾಗಿರುವುದರಿಂದ

ಪೃಕೃತಿಯನ್ನು ಪೂರ್ಣ ಪ್ರಮಾಣದಲ್ಲಿ ನೋಡಲು ಸಿಗುತ್ತಿರಲಿಲ್ಲ. ಇದನ್ನು ಮನಗಂಡ ರೈಲ್ವೆ ಇಲಾಖೆ ಮಂಗಳೂರು-ಬೆಂಗಳೂರು ನಡುವೆ ಸಂಚರಿಸುವ ರೈಲಿಗೆ ಸದ್ಯದಲ್ಲೇ ವಿಸ್ಟಾಡೋಮ್‌ (ಗಾಜಿನ ಚಾವಣಿ) ಅಳವಡಿಸಲು ನಿರ್ಧರಿಸಿದೆ. ಈ ಕುರಿತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸದಸ್ಯ ಪಿ.ಸಿ.ಮೋಹನ್‌ ಟ್ವೀಟ್‌ಮೂಲಕ ಮಾಹಿತಿ ನೀಡಿದ್ದಾರೆ.ಪ್ರಾಕೃತಿಕ ಸೌಂದರ್ಯ: ಪಶ್ಚಿಮ ಘಟ್ಟವನ್ನುಸೀಳಿಕೊಂಡು ಹೋಗುವ ಈ ರೈಲುಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ. ಈ ಬೋಗಿ ಅಳವಡಿಸಿದ್ದೇ ಆದಲ್ಲಿ, ಸಕಲೇಶಪುರ ಹಾಗೂ ಸುಬ್ರಮಣ್ಯ ‌ ರೋಡ್‌ ನಿಲ್ದಾಣದವರೆಗಿನ 55 ಕಿ.ಮೀ. ಉದ್ದದ ಹಚ್ಚ ಹಸಿರಿನಿಂದ ಕೂಡಿದ ಅರಣ್ಯ, ಜಲಪಾತ, ಸುರಂಗ, ಸೇತುವೆಗಳ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು.

ಸೌಲಭ್ಯಗಳು: ವಿಸ್ಟಾಡೋಮ್‌ ಕೋಚ್‌ಅನ್ನು ಹಾಲಿ ಇರುವ ಎಂಜಿನ್‌ಅಳವಡಿಸಲಾಗುತ್ತದೆ. ಒಂದುಬೋಗಿಯಲ್ಲಿ 40 ಒರಗಿಕೊಳ್ಳುವ ಆಸನಗಳಿದ್ದು, ಇವುಗಳು 360 ಡಿಗ್ರಿಯಲ್ಲಿ ಸುತ್ತುತ್ತವೆ. ಇದರಲ್ಲಿ ಜಿಪಿಎಸ್‌ ಆಧಾರಿತ ಮಾಹಿತಿ ವ್ಯವಸ್ಥೆ ಮೈಕ್ರೋ ಓವೆನ್‌, ಸಣ್ಣ ಫ್ರಿಡ್ಜ್, ಎ.ಸಿ ಸೌಲಭ್ಯ ಇರಲಿದೆ ಎಂದು ಹೇಳಲಾಗುತ್ತಿದೆ.

ವಿಸ್ಟಾಡೋಮ್‌ ಬೋಗಿಗಳನ್ನು ಎಲ್ಲಾ ರೈಲುಗಳಿಗೆಅಳವಡಿಸಲಾಗುತ್ತದೆಯೇ ಅಥವಾ ಒಂದೇ ರೈಲಿಗೆ ಅಳವಡಿಸಲಾಗುತ್ತದೆಯೇ ಎಂಬುದರ ಕುರಿತುಮಾಹಿತಿ ಇಲ್ಲ. ಕೇವಲ ಒಂದೆರಡು ಬೋಗಿಗಳನ್ನುವಿಸ್ಟಾಡೋಮ್‌ ಮಾಡುವ ಬದಲು ಸಂಪೂರ್ಣರೈಲನ್ನು ವಿಸ್ಟಾಡೋಮ್‌ ಮಾಡಿದರೆ ಪ್ರಕೃತಿಪ್ರಿಯರಿಗೆ, ಕರಾವಳಿಗೆ ಪ್ರವಾಸಕ್ಕೆ ಹೋಗುವವರುರೈಲಿನಲ್ಲೇ ಪ್ರಯಾಣಿಸುವುದರಲ್ಲಿ ಯಾವುದೇಅನುಮಾನವಿಲ್ಲ. ಈ ಮಾರ್ಗದಲ್ಲಿ ಹಗಲುವೇಳೆಯಲ್ಲಿ ಸಂಚರಿಸುವ ಎಲ್ಲಾ ರೈಲುಗಳನ್ನುವಿಸ್ಟಾಡೋಮ್‌ ಮಾಡಬೇಕು ಎಂಬ ಮಾತುಗಳು ಕೇಳಿ ಬರುತ್ತಿದೆ.

ಈ ರೈಲಿನ ಜೊತೆಗೆ ಊಟಿ, ಕಣ್ಣೂರು ನಡುವೆ ಸಂಚರಿಸುವ ರೈಲಿನಂತೆ ಇಲ್ಲೂ ಸಕಲೇಶಪುರ -ಸುಬ್ರಹ್ಮಣ್ಯ, ಸುಬ್ರಹ್ಮಣ್ಯ – ಸಕಲೇಶಪುರದ ನಡುವೆ ಸಂಚಾರ ಆರಂಭಿಸಿದ್ರೆ ಪ್ರವಾಸೋದ್ಯಮದ ಚೇತರಿಕೆಗೆ ಸಹಾಯವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ಗೋಪಾಲಯ್ಯ, ಸಂಸದ ಪ್ರಜ್ವಲ್‌ ರೇವಣ್ಣ ಇತ್ತ ಗಮನ ಹರಿಸಬೇಕಾಗಿದೆ.

 ಸುಧೀರ್‌ ಎಸ್‌.ಎಲ್‌.

ಟಾಪ್ ನ್ಯೂಸ್

ಕಲಾಪದಲ್ಲಿ ‘ಒಂದು ದೇಶ- ಒಂದು ಚುನಾವಣೆ ಚರ್ಚೆ’: ಡಿ ಕೆ ಶಿವಕುಮಾರ್ ಆಕ್ರೋಶ

ಕಲಾಪದಲ್ಲಿ ‘ಒಂದು ದೇಶ- ಒಂದು ಚುನಾವಣೆ ಚರ್ಚೆ’: ಡಿ ಕೆ ಶಿವಕುಮಾರ್ ಆಕ್ರೋಶ

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

puneeth-rajkumar

‘ಯುವರತ್ನ’ ಹಾಡಿನಲ್ಲಿ ಗುರು-ಶಿಷ್ಯರ ಚಿತ್ರಣ

ಜೈಲರ್ ಹತ್ಯೆ ಪ್ರಕರಣ: ಉತ್ತರಪ್ರದೇಶ STF ಎನ್ ಕೌಂಟರ್ ಗೆ ಇಬ್ಬರು ಶಾರ್ಪ್ ಶೂಟರ್ ಸಾವು

ಜೈಲರ್ ಹತ್ಯೆ ಪ್ರಕರಣ: ಉತ್ತರಪ್ರದೇಶ STF ಎನ್ ಕೌಂಟರ್ ಗೆ ಇಬ್ಬರು ಶಾರ್ಪ್ ಶೂಟರ್ ಸಾವು

sandalwood movies released in february 2021

ಎರಡು ತಿಂಗಳಲ್ಲಿ ಬಿಡುಗಡೆಯಾಯ್ತು 30 ಸಿನಿಮಾ!

ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

ನಾಲ್ಕು ರೈಸ್ ಮಿಲ್ ಅಧಿಕಾರಿಗಳು ದಿಢೀರ್ ದಾಳಿ: 6.61 ಲಕ್ಷ ರೂ. ಮೌಲ್ಯದ ಪಡಿತರ ಅಕ್ಕಿ ವಶ

ಕರಾವಳಿಯಲ್ಲಿ ಮುಂಜಾನೆ ಆವರಿಸಿದ ದಟ್ಟ ಮಂಜು! ಸೂರ್ಯನ ಕಿರಣಕ್ಕೆ ಮಂಜಿನ ತಡೆ

ಕರಾವಳಿಯಲ್ಲಿ ಮುಂಜಾನೆ ಆವರಿಸಿದ ದಟ್ಟ ಮಂಜು! ಸೂರ್ಯನ ಕಿರಣಕ್ಕೆ ಮಂಜಿನ ತಡೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಲಾ ಕಟ್ಟಡ ಶಿಥಿಲ; ಭಯದ ನೆರಳಲ್ಲಿ ಬೋಧನೆ

ಶಾಲಾ ಕಟ್ಟಡ ಶಿಥಿಲ; ಭಯದ ನೆರಳಲ್ಲಿ ಬೋಧನೆ

ಕಾಫಿ ತೋಟದಲ್ಲಿ ಈಗ ಹೂ ನಗೆ

ಕಾಫಿ ತೋಟದಲ್ಲಿ ಈಗ ಹೂ ನಗೆ

ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅನುದಾನ

ಬಜೆಟ್‌ನಲ್ಲಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚಿನ ಅನುದಾನ

ವಿಮಾನ ನಿಲ್ದಾಣ: ಮತ್ತೆ ಗರಿಗೆದರಿದ ನಿರೀಕ್ಷೆ

ವಿಮಾನ ನಿಲ್ದಾಣ: ಮತ್ತೆ ಗರಿಗೆದರಿದ ನಿರೀಕ್ಷೆ

ಕಂದಾಯೋತ್ಸವದಲ್ಲಿ ಪರಿಸರ ಮಾಲಿನ್ಯ: ಆಕ್ರೋಶ

ಕಂದಾಯೋತ್ಸವದಲ್ಲಿ ಪರಿಸರ ಮಾಲಿನ್ಯ: ಆಕ್ರೋಶ

MUST WATCH

udayavani youtube

ನಾಗರಹೊಳೆ ಹುಲಿ ಸಂರಕ್ಷಿತ ಅರಣ್ಯದಲ್ಲಿ ಬೆಂಕಿ

udayavani youtube

ಬಿಗಿಯಾದ ಬಟ್ಟೆ ಧರಿಸಿದರೆ ಆಗುವ ಆರೋಗ್ಯ ಸಮಸ್ಯೆ ಏನು?

udayavani youtube

ಇಂದಿನ ಸುದ್ದಿ ಸಮಾಚಾರ | Udayavani 03-March-2021 News Bulletin | Udayavani

udayavani youtube

ಮಂಗಳೂರು ಜೈಲು ಮೇಲ್ದರ್ಜೆಗೇರಿಸಲಾಗುವುದು; ಡಿಜಿಪಿ ಅಲೋಕ್ ಕುಮಾರ್

udayavani youtube

Udayavani 02-March-2021 News Bulletin | Udayavani

ಹೊಸ ಸೇರ್ಪಡೆ

ಕಲಾಪದಲ್ಲಿ ‘ಒಂದು ದೇಶ- ಒಂದು ಚುನಾವಣೆ ಚರ್ಚೆ’: ಡಿ ಕೆ ಶಿವಕುಮಾರ್ ಆಕ್ರೋಶ

ಕಲಾಪದಲ್ಲಿ ‘ಒಂದು ದೇಶ- ಒಂದು ಚುನಾವಣೆ ಚರ್ಚೆ’: ಡಿ ಕೆ ಶಿವಕುಮಾರ್ ಆಕ್ರೋಶ

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

ಪುತ್ತೂರು: ಜೆಸಿಬಿಯಲ್ಲಿ ಗುಂಡಿ ಅಗೆಯುವ ವೇಳೆ ಮಣ್ಣಿನಡಿ ಸಿಲುಕಿದ ಕಾರ್ಮಿಕರು!

puneeth-rajkumar

‘ಯುವರತ್ನ’ ಹಾಡಿನಲ್ಲಿ ಗುರು-ಶಿಷ್ಯರ ಚಿತ್ರಣ

ಜೈಲರ್ ಹತ್ಯೆ ಪ್ರಕರಣ: ಉತ್ತರಪ್ರದೇಶ STF ಎನ್ ಕೌಂಟರ್ ಗೆ ಇಬ್ಬರು ಶಾರ್ಪ್ ಶೂಟರ್ ಸಾವು

ಜೈಲರ್ ಹತ್ಯೆ ಪ್ರಕರಣ: ಉತ್ತರಪ್ರದೇಶ STF ಎನ್ ಕೌಂಟರ್ ಗೆ ಇಬ್ಬರು ಶಾರ್ಪ್ ಶೂಟರ್ ಸಾವು

sandalwood movies released in february 2021

ಎರಡು ತಿಂಗಳಲ್ಲಿ ಬಿಡುಗಡೆಯಾಯ್ತು 30 ಸಿನಿಮಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.