ಮಹಾ ರಥೋತ್ಸವ ವೇಳೆ ಅಪಾಯದಿಂದ ಗೌಡರು ಪಾರು

Team Udayavani, Mar 3, 2018, 6:30 AM IST

ಹೊಳೆನರಸೀಪುರ: ಪಟ್ಟಣದಲ್ಲಿ ಶುಕ್ರವಾರ ನಡೆದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಮಹಾರಥೋತ್ಸವದ ವೇಳೆ ಸಂಭವಿಸಬಹುದಾದ ಅವಘಡದಿಂದ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ದಂಪತಿ ಪಾರಾಗಿದ್ದಾರೆ.

ಬೆಳಗ್ಗೆ 9.30ರ ಹೊತ್ತಿನಲ್ಲಿ ರಥೋತ್ಸವ ಆರಂಭವಾದಾಗ ಎಚ್‌.ಡಿ.ದೇವೇಗೌಡ ದಂಪತಿ ಮೊಮ್ಮಕ್ಕಳೊಂದಿಗೆ ಹಾಜರಿದ್ದರು. ಈ ವೇಳೆ ಸೇರಿದ್ದ ಸಾವಿರಾರು ಭಕ್ತರ ನೂಕಾಟದ ನಡುವೆ ನಮಿಸುತ್ತ ನಿಂತಿದ್ದ ದೇವೇಗೌಡ ದಂಪತಿಯತ್ತ ರಥ ಬರುತ್ತಿತ್ತು. ರಥದ ಚಕ್ರಕ್ಕೆ ಗೊದ್ದನ (ಮರದ ತುಂಡು) ಕೊಡುವುದೂ ವಿಳಂಬವಾಯಿತು. 

ಅಷ್ಟರಲ್ಲಿ ಎಚ್‌.ಡಿ.ರೇವಣ್ಣ ಅವರೂ ದೇವೇಗೌಡರತ್ತ ಧಾವಿಸಿ ಬಂದು ಅವರನ್ನು ಹಿಂದಕ್ಕೆ ಎಳೆದುಕೊಂಡು ಅಪಾಯ ತಪ್ಪಿಸಿದರು. ಗೊರೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ದೇವೇಗೌಡರು, ಗಾಬರಿಯಾಗುವಂತಹ ಘಟನೆಯೇನೂ ನಡೆಯಲಿಲ್ಲ ಎಂದು ಸ್ಪಷ್ಟಪಡಿಸಿದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ