Udayavni Special

ಮಧ್ಯಾಹ್ನಕ್ಕೆ ಗ್ರಾಪಂ ಕಚೇರಿ ಬಂದ್‌: ಜನರ ಪರದಾಟ


Team Udayavani, Mar 14, 2021, 1:51 PM IST

ಮಧ್ಯಾಹ್ನಕ್ಕೆ ಗ್ರಾಪಂ ಕಚೇರಿ ಬಂದ್‌: ಜನರ ಪರದಾಟ

ಚನ್ನರಾಯಪಟ್ಟಣ: ತಾಲೂಕಿನ ದಿಂಡಗೂರು ಗ್ರಾಪಂ ಕಚೇರಿಯನ್ನು ಮಧ್ಯಾಹ್ನಕ್ಕೆ ಮುಚ್ಚಲಾಗುತ್ತಿದೆ. ಅಲ್ಲದೆ, ವಾರದಲ್ಲಿ ಎರಡೂಮೂರು ದಿನ ಮಾತ್ರ ಅಧಿಕಾರಿಗಳು, ಸಿಬ್ಬಂದಿಸಮರ್ಪಕವಾಗಿ ಕರ್ತವ್ಯ ನಿರ್ವಹಣೆಮಾಡುತ್ತಿದ್ದಾರೆ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.

ಗ್ರಾಪಂ ಕಚೇರಿಯನ್ನು ಪ್ರತಿ ದಿನ ನಿಗದಿತ ಸಮಯಕ್ಕೆ ತೆರೆಯಲಾಗುತ್ತದೆ. ಆದರೆ,ಮಧ್ಯಾಹ್ನ ಊಟದ ಸಮಯಕ್ಕೆ ಬಾಗಿಲು ಹಾಕಿದರೆ ಪುನಃ ತೆರೆಯುವುದು ಬೆಳಗ್ಗಿಯೇ.ವಾರದಲ್ಲಿ ಎರಡು ಮೂರು ದಿನ ಮಾತ್ರ ಸರಿಯಾಗಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂಬ ಆರೋಪ ಕೇಳಿಬರುತ್ತಿದೆ.

ಗ್ರಾಪಂ ಸದಸ್ಯರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವುದರಿಂದ ಅಧಿಕಾರಿಗಳುಹಾಗೂ ಸಿಬ್ಬಂದಿ ಕೇಳುವವರಿಲ್ಲದಂತಾಗಿದೆ. ಇದರಿಂದ ಗ್ರಾಪಂ ಕಚೇರಿಯಿಂದ ಆಗಬೇಕಿರುವ ಕೆಲಸಗಳನ್ನು ಮಾಡಿಸಿಕೊಳ್ಳಲು ಜನಪರದಾಡಬೇಕಾಗಿದೆ. ಮಾ.12ರಂದೂ ಇದೇಪರಿಸ್ಥಿತಿ ಎದುರಾಗಿತ್ತು. ಮಾ.11ರಂದು ಶಿವರಾತ್ರಿ ಹಬ್ಬ ಸರ್ಕಾರಿ ರಜೆ ಇತ್ತು. 13ರಂದು 2ನೇಶನಿವಾರ, 14 ಭಾನುವಾರ ಅಂದೂ ಸರ್ಕಾರಿರಜೆ ಇರುವುದರಿಂದ ಮಾ.10ರ ಮಧ್ಯಾಹ್ನವೇ ಪಂಚಾಯಿತಿ ಅಧಿಕಾರಿಗಳು, ಸಿಬ್ಬಂದಿ ಬಾಗಿಲು ಹಾಕಿಕೊಂಡು ತೆರಳಿದ್ದಾರೆ. ಶುಕ್ರವಾರ ಬೆಳಗ್ಗೆತಡವಾಗಿ ಬಾಗಿಲು ತೆರೆದಿದ್ದ ಗ್ರಾಪಂ ಮಧ್ಯಾಹ್ನ 2 ಗಂಟೆ ವೇಳೆಗೆ ಬಾಗಿಲು ಮುಚ್ಚಿ ಬೀಗ ಹಾಕಲಾಗಿತ್ತು. ಇದರಿಂದ ಕಚೇರಿಗೆ ಆಗಮಿಸುತ್ತಿದ್ದ ಜನರಿಗೆ ತೊಂದರೆಯಾಗಿದೆ.

ಇದರಿಂದ ಕೋಪಗೊಂಡ ಯುವಕರ ಗುಂಪು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದು, ತಾಲೂಕು ಆಡಳಿತದ ವಿರುದ್ಧ ಹಿಡಿಶಾಪ ಹಾಕಿದ್ದಾರೆ. ಪಿಡಿಒಗೆ ದೂರವಾಣಿ ಕರೆ ಮಾಡಿದರೂ ಸ್ಪಂದಿಸುತ್ತಿಲ್ಲ, ಸೌಲಭ್ಯಕ್ಕಾಗಿಅರ್ಜಿ ಸಲ್ಲಿಸಿದ್ದು, ತಿಂಗಳಿಂದ ಯಾವುದೇ ಉತ್ತರ ನೀಡದೆ, ಉಡಾಫೆಯಿಂದ ನಡೆದುಕೊಳ್ಳುತ್ತಿದ್ದಾರೆ ಎಂದು ಜೋಗಿಪುರದ ಯುವಕ ನಂದನ್‌ ದೂರಿದರು.

ಕೆಲಸ ನಿಮಿತ್ತ ಗ್ರಾಪಂ ಕಚೇರಿಗೆ ಶುಕ್ರವಾರ ಮಧ್ಯಾಹ್ನ 2 ಗಂಟೆಯಲ್ಲಿಆಗಮಿಸಿದ್ದೆ. ಆದರೆ, ಬಾಗಿಲು ಮುಚ್ಚಿರುವುದು ಕಂಡುಬಂದಿತು. ಡಿ.ದರ್ಜೆ ನೌಕರರೂ ಇರಲಿಲ್ಲ. ತಕ್ಷಣ ಅಧಿಕಾರಿಗಳಿಗೆ ಕರೆಮಾಡಿದೆ. ಅವರೂ ಸ್ವೀಕರಿಸಲಿಲ್ಲ. ಈಗಾದ್ರೆಜನರು ತಮ್ಮ ಕೆಲಸ ಗಳನ್ನು ಮಾಡಿಸಿ ಕೊಳ್ಳಲು ಯಾರ ಬಳಿ ಹೋಗಬೇಕು. ಅಭಿಷೇಕ್‌, ಜೋಗಿಪುರ ಗ್ರಾಮದ ಯುವಕ

ಗ್ರಾಮಗಳ ಅಭಿವೃದ್ಧಿಯೇ ನಮ್ಮ ಗುರಿ. ಕರ್ತವ್ಯದ ವೇಳೆ ಕಚೇರಿಬಾಗಿಲು ಹಾಕಿಕೊಂಡು ಹೋಗುವುದು ಸರಿಯಲ್ಲ. ಈ ಬಗ್ಗೆ ಇದೂವರೆಗೆ ಯಾವುದೇ ದೂರು ಬಂದಿಲ್ಲ, ಕೂಡಲೇ ಮಾಹಿತಿ ಪಡೆದು ಮೇಲಧಿಕಾರಿಗಳಗಮನಕ್ಕೆ ತಂದು ಪಿಡಿಒ ಹಾಗೂ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲಾಗುವುದು. ಻ಸುನೀಲ್‌ ಕುಮಾರ್‌, ತಾಪಂ ಇಒ, ಚನ್ನರಾಯಪಟ್ಟಣ

ಟಾಪ್ ನ್ಯೂಸ್

fghdgrr

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ‘ಬಾರ್‌’ ಸೀಜ್‌

hghfdsa

ರಾಜ್ಯದಲ್ಲಿ ಇಂದು 23558 ಕೋವಿಡ್ ಕೇಸ್ ಪತ್ತೆ : 116 ಸಾವು!

ಮದುವೆ ಮಾಡು.. ಕೋವಿಡ್‌ ನೋಡು..

ಮದುವೆ ಮಾಡು.. ಕೋವಿಡ್‌ ನೋಡು..

Statement about Covid Vaccine by Dr, K Sudhakar

ಕೋವಿಡ್ ವಿರುದ್ಧದ ಹೋರಾಟದಲ್ಲಿ ಲಸಿಕೆ ಅತ್ಯಂತ ದೊಡ್ಡ ಅಸ್ತ್ರ : ಸುಧಾಕರ್

kjhgfsdfyty

ಕನ್ನಡದ ಯಾವ ಧಾರಾವಾಹಿಯೂ ಮಾಡದ ದಾಖಲೆಯನ್ನು ‘ಜೊತೆಜೊತೆಯಲಿ’ ಮಾಡಿದೆ

ನಿಗದಿಗೊಂಡಿರುವ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಅವಕಾಶ ಕಲ್ಪಿಸಿ : ರಘುಪತಿ ಆಗ್ರಹ   

ನಿಗದಿಗೊಂಡಿರುವ ಕಾರ್ಯಕ್ರಮಗಳು ಸುಸೂತ್ರವಾಗಿ ನಡೆಯಲು ಅವಕಾಶ ಕಲ್ಪಿಸಿ:ರಘುಪತಿ ಭಟ್ ಆಗ್ರಹ  

gdrtr

‘ವೀರು ಭಾಯ್ ನನ್ನ ಸಾಲರಿ ಹೈಕ್ ಮಾಡಿಸಿ’ ಎಂದು ಕೇಳಿದ್ದರಂತೆ ಅಮಿತ್ ಮಿಶ್ರಾಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pilgrims who received the full covid vaccine

ಸಂಪೂರ್ಣ ಕೋವಿಡ್‌ ಲಸಿಕೆ ಪಡೆದ ಯಾತ್ರಿಕರು …ಕತಾರ್‌ನಲ್ಲಿ ವಿಶ್ವದ ಮೊದಲ ವಿಮಾನ ಹಾರಾಟ

The water of the channels supports the villages

ವರ್ಷಧಾರೆ, ನಾಲೆಗಳ ನೀರೇ ಹಳ್ಳಿ ಗಳಿಗೆ ಆಸರೆ

Candidates’ mood towards Channarayapatna

ಅಭ್ಯರ್ಥಿಗಳ ಚಿತ್ತ ಚನ್ನರಾಯಪಟ್ಟಣದತ್ತ

1573 crore for water

ಬಹುಗ್ರಾಮ ನೀರಿಗೆ 1573 ಕೋಟಿ

ಜಲಾಶಯ ಇದ್ದರೂ ಶಾಶ್ವತ ನೀರಿಲ್ಲ

ಜಲಾಶಯ ಇದ್ದರೂ ಶಾಶ್ವತ ನೀರಿಲ್ಲ

MUST WATCH

udayavani youtube

ಗಮನಿಸಿ: ವೀಕೆಂಡ್ ಕರ್ಫ್ಯೂ ಸಮಯದಲ್ಲಿ ಮದುವೆಯಾಗುವುದಾದರೆ ಈ ನಿಯಮಗಳನ್ನು ಪಾಲಿಸಲೇಬೇಕು!

udayavani youtube

ಬೀದರ್: ಬೆಡ್ ಕೊರತೆ. ಫುಟ್ ಪಾತ್ ನಲ್ಲೇ ನರಳಾಡಿದ ರೋಗಿಗಳು

udayavani youtube

ತಮಿಳುನಾಡಿನ ಅಪ್ಪಟ ರೇಷ್ಮೆ, ಕೃಷ್ಣ ನೂರಿನ ಜಯಲಕ್ಷ್ಮಿಯಲ್ಲಿ

udayavani youtube

ರಾಮನವಮಿ ವಿಶೇಷ | ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಅವರೊಂದಿಗೆ ಸಂದರ್ಶನ

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

ಹೊಸ ಸೇರ್ಪಡೆ

fghdgrr

ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ‘ಬಾರ್‌’ ಸೀಜ್‌

21-26

ಸಿದ್ದರಾಮಯ್ಯಗೆ ತಲೆಕೆಟ್ಟು ಹನ್ನೆರಡಾಣೆ ಆಗಿದೆ: ಈಶ್ವರಪ್ಪ

gdrtrtyt

ಜಿಪಂ ಚುನಾವಣೆಗೆ ಕೋವಿಡ್ 2ನೇ ಅಲೆ ಅಡ್ಡಿ

hghfdsa

ರಾಜ್ಯದಲ್ಲಿ ಇಂದು 23558 ಕೋವಿಡ್ ಕೇಸ್ ಪತ್ತೆ : 116 ಸಾವು!

21-25

ಅಪೂರ್ಣ ಕಾಮಗಾರಿ ಮಾಡಿದರೆ ಕ್ರಮ ಕೈಗೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.