Udayavni Special

ಅರಕಲಗೂಡು: 35 ಗ್ರಾಪಂಗೆ ಶೇ.86.63 ಮತದಾನ


Team Udayavani, Dec 23, 2020, 4:16 PM IST

ಅರಕಲಗೂಡು: 35 ಗ್ರಾಪಂಗೆ ಶೇ.86.63 ಮತದಾನ

ಅರಕಲಗೂಡು: ತಾಲೂಕಿನಲ್ಲಿ 35 ಗ್ರಾಪಂಗಳ ಚುನಾವಣೆ ಬಹುತೇಕ ಶಾಂತಿಯುತವಾಗಿದ್ದು, ಶೇ.846.63 ಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ರಾಮನಾಥಪುರ ಹೋಬಳಿ ರುದ್ರಪಟ್ಟಣ ಗ್ರಾಮದ ಮತಗಟ್ಟೆಯ ಹೊರಭಾಗದಲ್ಲಿ ಪೊಲೀಸ್‌ ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆದಿದ್ದು ಹೊರತುಪಡಿಸಿ, ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ.

ಸೋಂಕಿತರಿಗೆ ಮತದಾನಕ್ಕೆ ಅವಕಾಶ: ತಾಲೂಕಿನಲ್ಲಿ ಕೋವಿಡ್ ಸೋಂಕು ದೃಢಪಟ್ಟ 15 ಮಂದಿಗೆ ಸಂಜೆ 4ರಿಂದ 5ರವರೆಗೆ ಮತದಾನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಪ್ರತಿ ಸೋಂಕಿತರಿಗೂ ಪಿಪಿಇ ಕಿಟ್‌ಹಾಕಿಸಿ ಮತಗಟ್ಟೆಗೆ ಕರೆತಂದು,ಹಕ್ಕು ಚಲಾಯಿಸುವುದಕ್ಕೆ ಅವಕಾಶ ನೀಡಲಾಗಿತ್ತು. ಪ್ರತಿ ಮತಗಟ್ಟೆಯಲ್ಲೂ ಕೋವಿಡ್‌-19 ಪರೀಕ್ಷಿಸಿ, ಸ್ಯಾನಿಟೈಸರ್‌ ನೀಡುವ ಮೂಲಕ ಪ್ರತಿ ಮತದಾರನಿಗೂ ಮಾಸ್ಕ್ ಕಡ್ಡಾಯವಾಗಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ಕಂಡು ಬಂದಿತ್ತು.

ಚಿನ್ನ ಬೆಳ್ಳಿ, ಹಣ, ಕೋಳಿ ಹಂಚಿಕೆ: ಗ್ರಾಮ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿಗಳು ಮತದಾರರ ಓಲೈಕೆಗೆ ಸೋಮವಾರ ರಾತ್ರಿ ಚಿನ್ನ ಬೆಳ್ಳಿಯ ವಸ್ತುಗಳನ್ನು ನೀಡಿ ಮತಯಾಚಿಸಿದರೆ, ಇನ್ನೂ ಕೆಲವುಕಡೆ ಒಂದು ಮತಕ್ಕೆ ಸಾವಿರ ರೂ.ನಿಂದ 5 ಸಾವಿರ ರೂ.ವರೆಗೂ ನೀಡಲಾಗಿದೆ.

ಮತಗಟ್ಟೆಗಳ ಸುತ್ತ ವಾಮಾಚಾರ :  ಅರಕಲಗೂಡು ತಾಲೂಕಿನ ಹುಲ್ಲಂಗಾಲದ ಮತಗಟ್ಟೆಯ ಸುತ್ತ ಸೋಮವಾರ ಕುಡಿಕೆ, ನಿಂಬೆಹಣ್ಣು, ಚಪ್ಪಲಿ, ಅರಿಶಿಣ ಕುಂಕುಮ ನೆಲದಲ್ಲಿ ಹೂತು ಗ್ರಾಮಸ್ಥರಿಗೆಭಯಹುಟ್ಟಿಸಿದ ಪ್ರಸಂಗ ಮಾಸುವ ಮುನ್ನವೇ, ಮಂಗಳವಾರ ಮಲ್ಲಿಪಟ್ಟಣಹೋಬಳಿ ಎಚ್‌ ಆರ್‌ಪಿ ಕಾಲೋನಿ ಮತ್ತು ಚೌರಗಲ್ಲು ಗ್ರಾಮದ ರಸ್ತೆ ಮಧ್ಯೆಯಲ್ಲಿ ವಾಮಾಚಾರ

ಕುಡಿಕೆಯೊಳಗೆ ಮೂವರು ಅಭ್ಯರ್ಥಿಗಳ ಭಿತ್ತಿಪತ್ರಗಳ ಜೊತೆಗೆ ಕೋಳಿ ತಲೆ, ಹಂದಿಮುಳ್ಳು, ಪ್ರಾಣಿಗಳ ಹಲ್ಲು ಇನ್ನು ಇತರೆ ಸಾಮಗ್ರಿಗಳನ್ನು ಇಟ್ಟು ವಾಮಾಚಾರ ನಡೆಸಲಾಗಿದೆ.

ಪಿಎಸ್‌ಐ, ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನ : 

ರಾಮನಾಥಪುರ ಹೋಬಳಿ ರುದ್ರಪಟ್ಟಣ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಯಲ್ಲಿಮತಗಟ್ಟೆಯ ಬಳಿ ಅಭ್ಯರ್ಥಿ ಸಾಗರ ಮತ್ತು ಇತರರು ಮತದಾರರಿಗೆ ಮದ್ಯ,ಊಟವನ್ನು ಹಂಚುತ್ತಿದ್ದಾರೆ ಎಂಬ ವಿಷಯ ತಿಳಿದ ಪಿಎಸ್‌ಐ, ಸ್ಥಳಕ್ಕೆ ತೆರಳಿ ಮತಗಟ್ಟೆಯ ಸುತ್ತಮುತ್ತ ಈ ರೀತಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ, ಮದ್ಯ, ಊಟ ಹಂಚದಂತೆ, ಇಲ್ಲಿಂದ ತೆರಳುವಂತೆ ಗದರಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಅಭ್ಯರ್ಥಿ ಸಾಗರ ಮತ್ತು ಇತರರು ಪಿಎಸ್‌ಐಅಜಯಕುಮಾರ ಅವರ ಬಟ್ಟೆ ಹಿಡಿದು ಎಳೆದಾಡಿ, ಪೊಲೀಸ್‌ ಜೀಪಿಗೆ ಬೆಂಕಿ ಹಚ್ಚುವುದಾಗಿ ತಿಳಿಸಿ ಅವಾಚ್ಯಶಬ್ಧಗಳಿಂದ ನಿಂದಿಸಿದ್ದಾರೆ. ಪರಿಸ್ಥಿತಿ ಕೈಮೀರುವ ಸ್ಥಿತಿ ತಲೆದೂರಿದ್ದರಿಂದ ಸ್ಥಳದಿಂದ ಹೊರಬರಲು ಯತ್ನಿಸಿದಾಗ, ಪೊಲೀಸ್‌ ಜೀಪಿಗೆ ಅಡ್ಡ ಕುಳಿತು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ ಘಟನೆನಡೆಯಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 25 ರಿಂದ 30 ಜನರ ಮೇಲೆ ನೀತಿಸಂಹಿತೆ ಉಲ್ಲಂಘನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರಿಂದ ಕೊಣನೂರು ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಸಿಪಿಐ ಸತ್ಯನಾರಾಯಣ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

PM Narendra Modi to address ‘Parakram Diwas’ celebrations in Kolkata on January 23, confirms PMO

‘ಪರಾಕ್ರಂ ದಿವಸ್’ ಆಚರಣೆಗೆ ಮೋದಿ ಕೋಲ್ಕತ್ತಾಗೆ ಭೇಟಿ ಖಚಿತ : ಪಿಎಮ್ಒ

ಸಚಿವರ ಖಾತೆ ಹಂಚಿಕೆಯಲ್ಲಿ ನನ್ನ ಹಸ್ತಕ್ಷೇಪ ಇಲ್ಲ: ಬಿ.ವೈ.ವಿಜಯೇಂದ್ರ

ಸಚಿವರ ಖಾತೆ ಹಂಚಿಕೆಯಲ್ಲಿ ನನ್ನ ಹಸ್ತಕ್ಷೇಪ ಇಲ್ಲ: ಬಿ.ವೈ.ವಿಜಯೇಂದ್ರ

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ

BMW 3 Series Gran Limousine launched in India: Price, specs and everything you need to know

ಭಾರತದಲ್ಲಿ ಬಿಎಂಡಬ್ಲ್ಯು3 ಸೀರೀಸ್ ಗ್ರಾನ್ ಲಿಮೋಸಿನ್ ಬಿಡುಗಡೆ

ಜೋ ಅಧಿಕಾರ ಸ್ವೀಕಾರ ಬೆನ್ನಲ್ಲೇ ಟ್ರಂಪ್ ಆಡಳಿತಾವಧಿಯ 28 ಅಧಿಕಾರಿಗಳ ಮೇಲೆ ಚೀನಾ ನಿರ್ಬಂಧ

ಜೋ ಅಧಿಕಾರ ಸ್ವೀಕಾರ ಬೆನ್ನಲ್ಲೇ ಟ್ರಂಪ್ ಆಡಳಿತಾವಧಿಯ 28 ಅಧಿಕಾರಿಗಳ ಮೇಲೆ ಚೀನಾ ನಿರ್ಬಂಧ!

ಕುತೂಹಲ ಮೂಡಿಸಿದ ಬೊಮ್ಮಾಯಿ- ಕುಮಾರಸ್ವಾಮಿ ಭೇಟಿ: ರಾಜಕೀಯ ಮಾತಡಿಲ್ಲ ಎಂದ ಉಭಯ  ನಾಯಕರು

ಕುತೂಹಲ ಮೂಡಿಸಿದ ಬೊಮ್ಮಾಯಿ- ಕುಮಾರಸ್ವಾಮಿ ಭೇಟಿ: ರಾಜಕೀಯ ಮಾತನಾಡಿಲ್ಲ ಎಂದ ಉಭಯ ನಾಯಕರು

ಕಾಪು ತಾಲೂಕಿನ 16 ಗ್ರಾ.ಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರ

ಕಾಪು ತಾಲೂಕಿನ 16 ಗ್ರಾ.ಪಂಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕಟ: ಇಲ್ಲಿದೆ ಸಂಪೂರ್ಣ ವಿವರಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Radio collar installation to Elephant

ಕಾಡಾನೆಗಳಿಗೆ ರೆಡಿಯೋ ಕಾಲರ್‌ ಅಳವಡಿಕೆ

There is no bird flu,

ಹಕ್ಕಿ ಜ್ವರ ಇಲ್ಲ, ಧೈರ್ಯವಾಗಿ ಕೋಳಿ ಮಾಂಸ ತಿನ್ನಿ

ತಾಲೂಕು ಪಂಚಾಯತ್‌ ಇರಲಿ; ಅಧಿಕಾರ, ನೇರ ಅನುದಾನ ಕೊಡಲಿ

ತಾಲೂಕು ಪಂಚಾಯತ್‌ ಇರಲಿ; ಅಧಿಕಾರ, ನೇರ ಅನುದಾನ ಕೊಡಲಿ

ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಬಾವಿಯಲ್ಲಿ ಪತ್ತೆ; ಕೊಲೆ ಶಂಕೆ

ಕಲ್ಲು ಕಟ್ಟಿರುವ ಸ್ಥಿತಿಯಲ್ಲಿ ವ್ಯಕ್ತಿ ಮೃತದೇಹ ಬಾವಿಯಲ್ಲಿ ಪತ್ತೆ; ಕೊಲೆ ಶಂಕೆ

Death of children who went to swim

ಈಜಲು ಹೋದ ಮಕ್ಕಳಿಬರು ಸಾವು

MUST WATCH

udayavani youtube

PLASTIC ನಿಂದ ತಯಾರಾದ ECHO BRICKS ನ ಉಪಯೋಗಗಳು ಹಾಗೂ ಪ್ರಯೋಜನಗಳು

udayavani youtube

Manipalದ Auto Rickshaw ಚಾಲಕನಿಂದ Battery ಚಾಲಿತ Yamaha R15 ನೂತನ ಆವಿಷ್ಕಾರ

udayavani youtube

ಸರ್ವಿಸ್‌ ಆನ್‌ ವೀಲ್ಸ್‌ : ಮನೆ ಬಾಗಿಲಿಗೆ ಸರಕಾರಿ ಸೇವೆ

udayavani youtube

ಗುಜರಿ ವಸ್ತುಗಳನ್ನು ಬಳಸಿ ವಾಹನವನ್ನು ತಯಾರಿಸಿದ ಉಡುಪಿಯ ಯುವಕ

udayavani youtube

ಕೊಣಾಜೆ ಭಜನಾ ಮಂದಿರದಲ್ಲಿ ಕುಕೃತ್ಯ ಎಸಗಿದ ದುಷ್ಕರ್ಮಿಗಳು: ಭಗವಧ್ವಜಕ್ಕೆ ಅವಮಾನ!

ಹೊಸ ಸೇರ್ಪಡೆ

ಬೀದರನ ಮಾರ್ಕೆಟ್‌ ಠಾಣೆಗೆ 22ನೇ ರ್‍ಯಾಂಕ್‌

ಬೀದರನ ಮಾರ್ಕೆಟ್‌ ಠಾಣೆಗೆ 22ನೇ ರ್‍ಯಾಂಕ್‌

ಅನುದಾನ-ಅಧಿಕಾರ ಹೆಚ್ಚಳದಿಂದ ತಾಪಂ ಬಲಗೊಳಿಸಿ

ಸಾಗರ: ದನಗಳಿಗೆ ನೀರು ಕುಡಿಸಲು ಹೋಗಿದ್ದ ಯುವತಿ ಬಾವಿಗೆ ಬಿದ್ದು ಸಾವು!

ಸಾಗರ: ದನಗಳಿಗೆ ನೀರು ಕುಡಿಸಲು ಹೋಗಿದ್ದ ಯುವತಿ ಬಾವಿಗೆ ಬಿದ್ದು ಸಾವು!

Road Safety Sapthaha

ರಸ್ತೆ ಸುರಕ್ಷಾ ಸಪ್ತಾಹ-ಅಪರಾಧ ತಡೆ ಮಾಸಾಚರಣೆ

PM Narendra Modi to address ‘Parakram Diwas’ celebrations in Kolkata on January 23, confirms PMO

‘ಪರಾಕ್ರಂ ದಿವಸ್’ ಆಚರಣೆಗೆ ಮೋದಿ ಕೋಲ್ಕತ್ತಾಗೆ ಭೇಟಿ ಖಚಿತ : ಪಿಎಮ್ಒ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.