Udayavni Special

ಮಲೆನಾಡಲ್ಲೂ ಅಂತರ್ಜಲ ಕುಸಿತ: ಸಮಸ್ಯೆ

ಜಲಜೀವನ್‌ ಮಿಷನ್‌ ನಡಿ 41 ಗ್ರಾಮಗಳಿಗೆ ಕುಡಿವ ನೀರಿಗಾಗಿ ಟೆಂಡರ್‌

Team Udayavani, Apr 10, 2021, 2:02 PM IST

ಮಲೆನಾಡಲ್ಲೂ ಅಂತರ್ಜಲ ಕುಸಿತ: ಸಮಸ್ಯೆ

ಸಕಲೇಶಪುರ: ಮಲೆನಾಡಿನಲ್ಲೂ ಅಲ್ಲಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಅಂತರ್ಜಲದ ಮಟ್ಟ ಕುಸಿಯದಂತೆ ಮುಂದಿನ ದಿನಗಳಲ್ಲಿ ಕ್ರಮಕೈಗೊಳ್ಳಬೇಕಾಗಿದೆ.

ಪಶ್ಚಿಮ ಘಟ್ಟದ ತಪ್ಪಲಿನಲ್ಲಿರುವ ತಾಲೂಕು ನದಿ, ಹಳ್ಳ, ಕೆರೆ, ಜಲಪಾತಗಳಿಗೆ ಪ್ರಸಿದ್ಧಿಯಾಗಿದ್ದು, ಇಲ್ಲಿಹರಿಯುವ ಹೇಮಾವತಿ ನದಿ ನೀರನ್ನು ಜಿಲ್ಲೆಯ ಹಾಸನ, ಅರಸೀಕೆರೆ ತಾಲೂಕುಗಳು ಅಲ್ಲದೆ ದೂರದತುಮಕೂರಿಗೂ ಹರಿಸಿ ಅಲ್ಲಿನ ಜನರ ದಾಹವನ್ನುಇಂಗಿಸಲಾಗುತ್ತಿದೆ. ಇದಲ್ಲದೆ ಅರಬ್ಬೀ ಸಮುದ್ರಕ್ಕೆಹರಿಯುವ ಕೆಂಪುಹೊಳೆ ಸೇರಿದಂತೆ ವಿವಿಧ ಹಳ್ಳತೊಳ್ಳಗಳ ನೀರನ್ನು ಪೂರ್ವಭಿಮುಖವಾಗಿ ಹರಿಸುವಎತ್ತಿನ ಹೊಳೆ ಯೋಜನೆ ಕಾಮಗಾರಿ ಮುಂದುವರಿದಿದೆ.ಹೀಗೆ ವಿವಿಧ ಜಿಲ್ಲೆಗಳಿಗೆ ನೀರು ಹರಿಸುತಿದ್ದು, ತಾಲೂಕಿಗೆ ನೀರಿನ ಸಮಸ್ಯೆ ಸೃಷ್ಟಿಯಾಗಿದೆ.

ವಿವಿಧ ಅಭಿವೃದ್ದಿ ಕಾಮಗಾರಿಗಳಿಂದ ತಾಲೂಕಿನಲ್ಲಿಅಂರ್ತಜಲ ಬೇಸಿಗೆಯಲ್ಲಿ ಕಡಿಮೆಯಾಗುತ್ತಿದ್ದು,ಇದರಿಂದ ಕೆಲವೆಡೆ ನಿತ್ಯ ನೀರು ಪೂರೈಕೆ ಮಾಡಲಾಗದೆದಿನ ಬಿಟ್ಟು ದಿನ ನೀರು ಪೂರೈಕೆ ಮಾಡಬೇಕಾದಪರಿಸ್ಥಿತಿ ನಿರ್ಮಾಣವಾಗಿದೆ. ಮೇಲ್ನೋಟಕ್ಕೆ ತಾಲೂಕಿನ13 ಗ್ರಾಮಗಳಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಇದ್ದು, ಇನ್ನು 30ಕ್ಕೂ ಹೆಚ್ಚಿನ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುವ ಸಾಧ್ಯತೆಯಿದೆ. ಈಹಿನ್ನೆಲೆಯಲ್ಲಿ ಟ್ಯಾಂಕರ್‌ ಮೂಲಕ ನೀರುಸರಬರಾಜು, ಬಾವಿಯಲ್ಲಿ ಹೂಳು ತೆಗೆಯುವ ಕಾರ್ಯಕ್ರಮ ಹಾಗೂ ತಾತ್ಕಾಲಿಕವಾಗಿ ನೀರು ಪೂರೈಕೆ ಮಾಡಲು ಕಾಮಗಾರಿಗಳ ಬಗ್ಗೆ ಚಿಂತಿಸಲಾಗಿದೆ.

ಶುದ್ಧ ನೀರು ಪಡೆಲು ತತ್ವಾರ: ಪಟ್ಟಣ ವ್ಯಾಪ್ತಿಯಲ್ಲಿ ಹೇಮಾವತಿ ನದಿ ನೀರು ಹರಿಯುತ್ತಿದ್ದು, ಈ ಹಿನ್ನೆಲೆಯಲ್ಲಿ ಹೇಮಾವತಿ ನದಿಯಿಂದ ಇಡಿ ಪಟ್ಟಣಕ್ಕೆನೀರು ಪೂರೈಕೆ ಮಾಡಲಾಗುತ್ತಿದೆ. ಆದರೆ, ಶುದ್ಧ ಕುಡಿಯುವ ನೀರಿನ ಪೂರೈಕೆ ಮರೀಚಿಕೆಯಾಗಿದೆ. ಹೇಮಾವತಿ ನದಿ ನೀರಿನ ಅಶುದ್ಧತೆಯಿಂದ ಬೇಸತ್ತಿರುವ ಪಟ್ಟಣದ ನಾಗರಿಕರು ಎಪಿಎಂಸಿ ಆವರಣದಲ್ಲಿರುವ ಶುದ್ಧ ಕುಡಿವ ನೀರಿನ ಘಟಕವನ್ನುಆಶ್ರಯಿಸಿದ್ದಾರೆ. ಕೆಲವು ಬಡಾವಣೆಗಳಿಗೆ ಬೋರ್‌ ವೆಲ್‌ ಮುಖಾಂತರವೂ ನೀರಿನ ಪೂರೈಕೆಯಾಗುತ್ತಿದೆ.

ಜೊತೆಗೆ ಹೇಮಾವತಿ ನದಿ ನೀರಿನಮಟ್ಟ ಕಡಿಮೆಯಾಗುತ್ತಿರುವುದರಿಂದ ನೀರು ಪೂರೈಕೆ ಸಮರ್ಪಕವಾಗಿ ಮಾಡಲು ಕಷ್ಟಕರವಾಗಿದೆ.ಜಲಜೀವನ್‌ ಮಿಷನ್‌ ನಡಿ 20 ಕೋಟಿ ವೆಚ್ಚದಲ್ಲಿತಾಲೂಕಿನ 41 ಗ್ರಾಮಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲು ಈಗಾಗಲೆ ಟೆಂಡರ್‌ ಪ್ರಕ್ರಿಯೆ ನಡೆದಿದ್ದು, ಬಾಕಿ ಉಳಿದ ಗ್ರಾಮಗಳಿಗೆ ಬರುವ ವರ್ಷ ಅನುದಾನ ಬಿಡುಗಡೆಯಾಗುವ ಸಾಧ್ಯತೆಯಿದೆ.

ಅಂತರ್ಜಲ ಕುಸಿತ ಕಂಡಿರುವ ಗ್ರಾಮಗಳು :

ತಾಲೂಕಿನ ಗ್ರಾಮಾಂತರ ಪ್ರದೇಶಗಳ ವಿಷಯಕ್ಕೆ ಬಂದರೆ ತಾಲೂಕಿನ 13 ಗ್ರಾಪಂಗಳಲ್ಲಿ ಅಂರ್ತಜಲಕುಸಿದು 30ಕ್ಕೂ ಹೆಚ್ಚು ಗ್ರಾಮಗಳಲ್ಲಿ ಕುಡಿಯುವನೀರಿಗೆ ತೊಂದರೆಯಾಗಿದೆ. ಆನೆಮಹಲ್‌ ಗ್ರಾಪಂ ವ್ಯಾಪ್ತಿಯ ಚಿಕ್ಕಸತ್ತಿಗಾಲ, ಬಿರಡಹಳ್ಳಿ ಗ್ರಾ.ಪಂ ವ್ಯಾಪ್ತಿಯ ಸುಂಡೆಕೆರೆ, ಬೆಳಗೋಡು ಗ್ರಾಪಂ ವ್ಯಾಪ್ತಿಯ ಈಶ್ವರಹಳ್ಳಿ, ಚಂಗಡಿಹಳ್ಳಿ ಗ್ರಾಪಂ ವ್ಯಾಪ್ತಿಯಹೆಗ್ಗಡಿಹಳ್ಳಿ, ದೇವಾಲದಕೆರೆ ಗ್ರಾಪಂ ವ್ಯಾಪ್ತಿಯಅಚ್ಚನಹಳ್ಳಿ, ಕುರುಭತ್ತೂರು ಗ್ರಾಪಂ ವ್ಯಾಪ್ತಿಯ ಉಮ್ಮತ್ತೂರು, ಕುರುಭತ್ತೂರು, ಬೆಳ್ಳೂರು,ಈಚಲಪುರ, ಹಾನುಬಾಳ್‌ ಗ್ರಾಪಂ ವ್ಯಾಪ್ತಿಯ ಅಚ್ಚರಡಿ, ಹೆತ್ತೂರು ಗ್ರಾಪಂ ವ್ಯಾಪ್ತಿಯ ಹಾಡ್ಯ, ಎಲ್ಲಕ್ಕಿಂತ ಹೆಚ್ಚಾಗಿ ವಳಲಹಳ್ಳಿ ಗ್ರಾಪಂ ವ್ಯಾಪ್ತಿಯ ವಳಲಹಳ್ಳಿ ಕಾಲೋನಿ, ಹಿರಿಯೂರು ಗ್ರಾಮದಲ್ಲಿ ತೀವ್ರ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.

ಹಿರಿಯೂರು ಗ್ರಾಮದಲ್ಲಿ ಅಂರ್ತಜಲಪೂರ್ಣವಾಗಿ ಬತ್ತಿಹೋಗಿದ್ದು ಗ್ರಾಮಸ್ಥರುನೀರಿಗಾಗಿ ಪರದಾಡುತ್ತಿದ್ದಾರೆ. ಗ್ರಾಮಗಳ ಜತೆಗೆ ತಾಲೂಕಿನ ಹಸುಗವಳ್ಳಿ, ಓಂನಗರ, ಕಿರೇಹಳ್ಳಿ ಕ್ರೈಸ್ತ ಕಾಲೋನಿ, ದೊಡ್ಡನಾಗರಗ್ರಾಮ, ಬರ್ಲಿಕೆರೆ, ಶೆಟ್ಟಿಹಳ್ಳಿ, ನೀಕನಹಳ್ಳಿ, ನೆಲಗಳ್ಳಿ,ಹಿರುದ್ದಿ, ಆಚಂಗಿ, ಗುಂಡಿಗೆರೆ, ತೊಣಬನಹರೆ,ಕಿರ್ಕಳ್ಳಿ, ಹಳ್ಳಿ ಬೈಲು, ಕುಂಬರಡಿ, ನಡೇಹಳ್ಳಿ,ಹೆಬ್ಬಸಾಲೆ, ಕಾಗಿನೆರೆ, ಅತ್ತಿಹಳ್ಳಿ, ಕ್ಯಾನಹಳ್ಳಿ, ಹುಲ್ಲಳ್ಳಿ,ಚಿಮ್ಮಿಕೋಲು, ಕಿರುಹುಣಸೆ, ಹಾಲೇಬೇಲೂರು, ಕಬ್ಬಿನಗದ್ದೆ, ದೊಡ್ಡಕುಂದೂರು, ಬೊಬ್ಬನಹಳ್ಳಿ,ಕರಡಿಗಾಲ, ಮರ್ಜನಹಳ್ಳಿ, ಯಸಳೂರು, ಕೆರೋಡಿಗ್ರಾಮಗಳಲ್ಲಿ ಅಂರ್ತಜಲ ಮಟ್ಟ ಕಡಿಮೆಯಾಗುವಸಾಧ್ಯತೆಯಿದ್ದು, ಈ ಗ್ರಾಮಗಳಲ್ಲಿ ನೀರು ಪೂರೈಕೆ ಮಾಡಲು ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.

ಗ್ರಾಮದಲ್ಲಿರುವ 3 ತೆರೆದ ಬಾವಿಗಳಲ್ಲೂಅಂರ್ತಜಲ ಬತ್ತಿ ಹೋಗಿದ್ದು,ಗ್ರಾಮಸ್ಥರು ನೀರಿಗಾಗಿ ಪರದಾಡುವ ಪರಿಸ್ಥಿತಿಉಂಟಾಗಿದೆ. ಗ್ರಾಪಂನವರು ತಾತ್ಕಾಲಿಕವಾಗಿಕುಡಿವ ನೀರನ್ನು ಪೂರೈಕೆ ಮಾಡಲು ಯಾವುದೆ ಕ್ರಮ ಕೈಗೊಂಡಿಲ್ಲ.  ಚಂದ್ರಶೇಖರ್‌, ಹಿರಿಯೂರು ಗ್ರಾಮಸ್ಥ

ಜಲಜೀವನ್‌ ಮಿಷನ್‌ನಡಿ ತಾಲೂಕಿನ 41 ಗ್ರಾಮಗಳಿಗೆ ನೀರು ಪೂರೈಕೆ ಮಾಡಲು ಈಗಾಗಲೆ ಟೆಂಡರ್‌ಕರೆಯಲಾಗಿದೆ. ಜೊತೆಗೆ ಗ್ರಾಪಂಗಳಿಗೆತಾತ್ಕಾಲಿಕವಾಗಿ ನೀರಿನ ಸಮಸ್ಯೆ ಎದುರಾಗದಂತೆ ಕ್ರಮಕ್ಕೆ ಸೂಚಿಸಲಾಗಿದೆ.  – ಹರೀಶ್‌, ತಾಪಂ ಇಒ

 

ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಟೀಮ್‌ ಇಂಡಿಯಾದ ಶ್ರೀಲಂಕಾ ಪ್ರವಾಸ : ಮುಂಬಯಿಗೆ ಬಂದ ಧವನ್‌ ಪಡೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್ಐ ನಂಟು ಶಂಕೆ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಸಮುದ್ರ ವಿಮಾನ ಸಾರಿಗೆ ಮೂಲಸೌಕರ್ಯಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿ: ಹರ್ದೀಪ್ ಸಿಂಗ್ ಪುರಿ

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

ಕೋವಿಡ್ ವಿರುದ್ಧ ಜಯ : ಜು.4ರಂದು ಅಮೆರಿಕದಲ್ಲಿ ಸ್ವಾತಂತ್ರ್ಯೋತ್ಸವ !

Chamarajanagara covid case

ಚಾಮರಾಜನಗರದಲ್ಲಿ ಎರಡಂಕಿಗಿಳಿದ ಕೋವಿಡ್ ಕೇಸ್‌ಗಳು : ಇಂದು 93 ಪ್ರಕರಣಗಳು ದೃಢಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

covid news

ಕೊರೊನಾದಿಂದ ಮೃತರ ಕುಟುಂಬಕ್ಕೆ ನೆರವು

covid news

ಕೊರೊನಾದಿಂದ ಮೃತರ ಕುಟುಂಬಕ್ಕೆ ನೆರವು

incident held at hasana

ಭಾರೀ ಮಳೆ: ಮನೆ ಮೇಲೆ ಮರ ಕುಸಿತ

Ventilator contribution

ತಾಲೂಕು ಆಸ್ಪತ್ರೆಗೆ ವೆಂಟಿಲೇಟರ್‌ ಕೊಡುಗೆ

Congress activists protest

ಕಟ್ಟಾಯದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಪ್ರತಿಭಟನೆ

MUST WATCH

udayavani youtube

ಆ ಒಂದು ವಿಶೇಷ ಕಾರಣಕ್ಕಾಗಿ ಸಂಚಾರಿ ವಿಜಯ್ ಉಡುಪಿಗೆ ಬಂದಿದ್ರು !

udayavani youtube

ಐಸಿಸಿ ಟೆಸ್ಟ್ ಫೈನಲ್ ಗೆ ಕಾದಿದೆ ಪೇಸ್ ಆ್ಯಂಡ್ ಬೌನ್ಸಿ ಪಿಚ್

udayavani youtube

ವಿಶಿಷ್ಟವಾಗಿ DRAGON FRUIT ಬೆಳೆದ ಕಾರ್ಕಳದ ರೈತನಿಗೆ ಭೇಷ್ ಎಂದ ಮಂಗಳೂರು ಕಮೀಷನರ್

udayavani youtube

ಬಿರುಕು ಬಿಟ್ಟ ಮರವೂರು ಸೇತುವೆ: ಸಂಚಾರ ನಿರ್ಬಂಧ; ಬದಲಿ ರಸ್ತೆ ವ್ಯವಸ್ಥೆ

udayavani youtube

ನಿಮ್ಮ ಮಾನಸಿಕ ಸ್ಥಿತಿ ಸರಿ ಮಾಡಿಕೊಳ್ಳಿ’:ನಟ ಚೇತನ್ ವಿರುದ್ಧ ಆಕ್ರೋಶಗೊಂಡ ರಕ್ಷಿತ್ ಶೆಟ್ಟಿ

ಹೊಸ ಸೇರ್ಪಡೆ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ : ಅಂಕ ಪದ್ಧತಿ ಬದಲಾಯಿಸಿದ ಐಸಿಸಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

ಮುಶ್ಫಿಕರ್‌, ಕ್ಯಾಥರಿನ್‌ಗೆ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ

15-21

ಗುತ್ತಿಗೆದಾರರ ವಿರುದ್ಧ ಕ್ರಮ : ಹಾಲಪ್ಪ

15-20

ಪರಿಹಾರ ಮಧ್ಯವರ್ತಿಗಳ ಪಾಲಾಗದಂತೆ ಕ್ರಮ ಕೈಗೊಳ್ಳಿ

15-19

ಕೊರೋನಾ ತಡೆಗೆ ಗ್ರಾಂ ಪಂಚಾಯತ್ ಗಳತ್ತ ಹೆಜ್ಜೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.