Udayavni Special

ಮನೆಗಳಿಗೆ ಕನ್ನ ಹಾಕಿದ್ದ 6 ಖದೀಮರ ಬಂಧನ

7.11 ಲಕ್ಷ ರೂ. ಚಿನ್ನಾಭರಣ ವಶ ! ಹಾಸನ ಗ್ರಾಮಾಂತರ, ಚನ್ನರಾಯಪಟ್ಟಣ ಪೊಲೀಸರ ಕಾರ್ಯಕ್ಕೆ ಶ್ಲಾಘನೆ

Team Udayavani, Feb 25, 2021, 7:26 PM IST

Hassan police

ಹಾಸನ: ಒಂಟಿ ಮನೆಗೆ ನುಗ್ಗಿ ಮನೆಯಲ್ಲಿದ್ದ ಮಹಿಳೆಯನ್ನು ಥಳಿಸಿ ಮಾಂಗಲ್ಯ ಸರ ಮತ್ತು ಮೊಬೈಲ್‌ ದೋಚಿದ್ದ ಐವರು ಆರೋಪಿ, ಮನೆ ಕಳವು ಮಾಡಿದ್ದ ಒಬ್ಬನನ್ನು ಪೊಲೀಸರು ಬಂಧಿಸಿ 7.11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಹಾಸನ ತಾಲೂಕು ಸಾಲಗಾಮೆ ಹೋಬಳಿ ಯಲ್ಲಗೊಂಡನಹಳ್ಳಿ ಗ್ರಾಮದಲ್ಲಿ ಫೆ.11ರಂದು ಸಂಜೆ 7.30ರ ಸಮಯದಲ್ಲಿ ಒಂಟಿ ಮನೆಗೆ ನುಗ್ಗಿ ಮಾಲಿಕರಾದ ಶಾರದಮ್ಮ ಅವರನ್ನು ಥಳಿಸಿ ಅವರ ಕೊರಳಲ್ಲಿದ್ದ 33 ಗ್ರಾಂ ಚಿನ್ನದ ಮಾಂಗಲ್ಯ ಸರ, ಮೊಬೈಲ್‌ ಅನ್ನು ಕಿತ್ತುಕೊಂಡು ಬೈಕ್‌ನಲ್ಲಿ ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡಿದ್ದ ಹಾಸನ ಗ್ರಾಮಾಂತರ ಪೊಲೀಸರ ವಿಶೇಷ ತಂಡವು ಮಾಹಿತಿ  ಸಂಗ್ರಹಿಸಿದಾಗ ಶಾರದಮ್ಮ ಅವರ ಪತಿ ಪ್ರತಿದಿನ ಸಂಜೆ ಸಂಜೆ 7 ಗಂಟೆಗೆ ಡೇರಿಗೆ ಹಾಲು ಕೊಡಲು ಹೋಗುತ್ತಾರೆ. ಆ ಸಮಯದಲ್ಲಿ ಶಾರದಮ್ಮ ಅವರು ಮನೆಯಲ್ಲಿ ಒಂಟಿಯಾಗಿರುತ್ತಾರೆ ಎಂದು ಅದೇ ಗ್ರಾಮದ ದಿಲ್ಲಿಗೌಡ(53) ಎಂಬಾತ ಹಣದ ಆಸೆಗಾಗಿ ನೀಡಿದ ಮಾಹಿತಿ ಮೇರೆಗೆ ಹಾಸನ ಸಮೀಪದ ಬೂವನಹಳ್ಳಿಯ ಭಾರತಿ ಕಾμ ಕ್ಯೂರಿಂಗ್‌ ಎದುರು ವಾಸಿಯಾದ ಶಶಿ (24), ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ಪಟ್ಟಣದ ನಿವಾಸಿ, ಕಾರು ಚಾಲಕ ತಿಪ್ಪೇಸ್ವಾಮಿ (32), ಬಳ್ಳಾರಿ ಜಿಲ್ಲೆ, ಕೂಡ್ಲಗಿ ತಾಲೂಕು, ಖಾನಹೊಸಹಳ್ಳಿಯ ಹಣ್ಣಿನ ವ್ಯಾಪಾರಿ ಭಾಷಾ (25) ಮತ್ತು ಚಿಕ್ಕಮಗಳೂರು ತಾಲೂಕು ಅಂಬಳೆ ಗ್ರಾಮದ ಎ.ಆರ್‌ .ಧ್ರುವಪ್ರಸಾದ್‌ (21) ಎಂಬವರು ಶಾರದಮ್ಮ ಅವರ ಮನೆಗೆ ನುಗ್ಗಿ ಮಾಂಗಲ್ಯ ಸರ ಮತ್ತು ಮೊಬೈಲ್‌ ದೋಚಿದ್ದರು.

ಈ ಕುರಿತು ಎಸ್ಪಿ ಶ್ರೀನಿವಾಸಗೌಡ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಐವರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಆರೋಪಿಗಳು ಈ ಹಿಂದೆಯೂ ಹಲವು ಸುಲಿಗೆ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲಿನಲ್ಲಿದ್ದರು. ಆ ಸಮಯದಲ್ಲಿ ಪರಸ್ಪರ ಪರಿಚಯವಾಗಿದ್ದು, ಸುಲಿಗೆ ಕೃತ್ಯವನ್ನು ಮುಂದುವರಿಸಿ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ 33 ಗ್ರಾಂ ಮಾಂಗಲ್ಯ ಸರ, ಕೃತ್ಯಕ್ಕೆ ಬಳಸಿದ್ದ ಒಂದು ಪಲ್ಸರ್‌  ಬೈಕ್‌ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.

ಆರೋಪಿಗಳನ್ನು ಪತ್ತೆ ಹಚ್ಚಿದ ಇನ್‌ಸ್ಪೆಕ್ಟರ್‌ ಸುರೇಶ್‌, ಪಿಎಸ್‌ಐ ಬಸವರಾಜು, ಸಿಬ್ಬಂದಿ ರವಿಕುಮಾರ್‌,  ಕಾಂತರಾಜಪ್ಪ, ಸುಬ್ರಹ್ಮಣ್ಯ, ದೇವರಾಜು , ಗಿರೀಶ್‌ ಅವರನ್ನು ಶ್ಲಾಘಿಸಿದ್ದಾರೆ.

ಟಾಪ್ ನ್ಯೂಸ್

,mnbvcxz

ಆಕ್ಸಿಜನ್ ಪೂರೈಕೆ ಮಾಡಲು ತುರ್ತು ಕ್ರಮ : JSW ಸ್ಟೀಲ್ ದಿನಕ್ಕೆ 400 ಟನ್ ಆಮ್ಲಜನಕ ಪೂರೈಕೆ

ಜನಹಗ್ದಸ಻

ಮಾಜಿ ಶಾಸಕ ವಸಂತ ಅಸ್ನೋಟಿಕರ್ ಕೊಲೆ ಪ್ರಕರಣ: ಗುಂಡಿಟ್ಟಿದ್ದ ಮೊಹಿತೆಗೆ ಜೀವಾವಧಿ ಶಿಕ್ಷೆ

ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆಗೆ 5-6 ದಿನಗಳಲ್ಲಿ ಅನುಮತಿ: ಸಚಿವ ಜಗದೀಶ ಶೆಟ್ಟರ್‌

ಆಕ್ಸಿಜನ್‌ ಉತ್ಪಾದನಾ ಘಟಕ ಸ್ಥಾಪನೆಗೆ 5-6 ದಿನಗಳಲ್ಲಿ ಅನುಮತಿ: ಸಚಿವ ಜಗದೀಶ್ ಶೆಟ್ಟರ್

gdfgdsg

ಮೂತ್ರಪಿಂಡ ಕಸಿಗೆ ಕಿಮ್ಸ್‌ ಸಿದ್ಧ; ಒಪ್ಪಿಗೆಯಷ್ಟೇ ಬಾಕಿ ­

Migrants fear 2020 replay, say may run out of work and resources if lockdown extended

ಲಾಕ್ ಡೌನ್ ಭೀತಿ : ರಾಷ್ಟ್ರ ರಾಜಧಾನಿಯಿಂದ ಮತ್ತೆ ಗುಳೆ ಹೊರಟ ವಲಸೆ ಕಾರ್ಮಿಕರು..!?

ಮಂಡ್ಯ:  413 ಮಂದಿಗೆ ಸೋಂಕು ದೃಢ: 113 ಮಂದಿ ಬಿಡುಗಡೆ

ಮಂಡ್ಯ:  413 ಮಂದಿಗೆ ಕೋವಿಡ್ ಸೋಂಕು ದೃಢ: 113 ಮಂದಿ ಬಿಡುಗಡೆ

ಕಲಬುರಗಿ : ಅಪಘಾತದಲ್ಲಿ ಗಂಭೀರ ಗಾಯಗೊಂಡ 6 ವರ್ಷದ ಬಾಲಕನಿಗೆ ವೆಂಟಿಲೇಟರ್ ಸಿಗದೆ ಸಾವು

ಕಲಬುರಗಿ : ಅಪಘಾತದಲ್ಲಿ ಗಂಭೀರ ಗಾಯಗೊಂಡ 6 ವರ್ಷದ ಬಾಲಕನಿಗೆ ವೆಂಟಿಲೇಟರ್ ಸಿಗದೆ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸರಳವಾಗಿ ನಡೆದ ಹೂವಿನ ಕರಗ ಮಹೋತ್ಸವ

ಸರಳವಾಗಿ ನಡೆದ ಹೂವಿನ ಕರಗ ಮಹೋತ್ಸವ

dfgbdsfgs

ಗದಗ ಜಿಲ್ಲೆಯಲ್ಲಿ ಕೋವಿಡ್‌ ನಿಯಮಕ್ಕೆ ಕ್ಯಾರೆ ಎನ್ನದ ಜನ

Untitled-2

ಆಸ್ಪತ್ರೆಯಲ್ಲಿ ಹಣ ನೀಡಿದರಷ್ಟೇ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ

hjghfh

ಕೋವಿಡ್ ಭೀತಿ ಮಧ್ಯೆಯೂ ಸಂತೆ ಜೋರು

ghfghtyt

ಬೆಳಗಾವಿಯಲ್ಲಿ ‘ಮಹಾ’ ಕಚೇರಿ ತಿರುಕನ ಕನಸು  : ಸಾಹಿತಿ ಪ್ರೊ. ಸುಬ್ರಾವ ಎಂಟೆತ್ತಿನವರ

MUST WATCH

udayavani youtube

ಮಾದರಿ ಕೋವಿಡ್ ಠಾಣೆಯಾಗಿ ಮಂಗಳೂರಿನ ಉರ್ವ ಪೊಲೀಸ್ ಠಾಣೆ

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

udayavani youtube

ಬಿಯರಿಗಾಗಿ ಮುಗಿಬಿದ್ದು ಜನರ ಕಿತ್ತಾಟ

udayavani youtube

ಚಿಕ್ಕಮಗಳೂರು: 9 ವರ್ಷದ ಹಳೇ ಗ್ಲೂಕೋಸ್ ನೀಡಿದ ಮೆಡಿಕಲ್ ಸ್ಟೋರ್; ಕಂಗಾಲಾದ ಗ್ರಾಹಕ !

ಹೊಸ ಸೇರ್ಪಡೆ

ಸರಳವಾಗಿ ನಡೆದ ಹೂವಿನ ಕರಗ ಮಹೋತ್ಸವ

ಸರಳವಾಗಿ ನಡೆದ ಹೂವಿನ ಕರಗ ಮಹೋತ್ಸವ

hfyhtryt

ಹಲವು ತಿಂಗಳಿಂದ ಕೈ ಸೇರಿಲ್ಲ ಪಿಂಚಣಿ! ­

dfgbdsfgs

ಗದಗ ಜಿಲ್ಲೆಯಲ್ಲಿ ಕೋವಿಡ್‌ ನಿಯಮಕ್ಕೆ ಕ್ಯಾರೆ ಎನ್ನದ ಜನ

,mnbvcxz

ಆಕ್ಸಿಜನ್ ಪೂರೈಕೆ ಮಾಡಲು ತುರ್ತು ಕ್ರಮ : JSW ಸ್ಟೀಲ್ ದಿನಕ್ಕೆ 400 ಟನ್ ಆಮ್ಲಜನಕ ಪೂರೈಕೆ

Untitled-2

ಆಸ್ಪತ್ರೆಯಲ್ಲಿ ಹಣ ನೀಡಿದರಷ್ಟೇ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.