ಜಿಲ್ಲಾಧಿಕಾರಿ ವಿರುದ್ಧ ರೇವಣ್ಭ ರೌದ್ರಾವತಾರ
Team Udayavani, May 11, 2021, 3:38 PM IST
ಹಾಸನ: ಜಿಲ್ಲೆಯ ಸೋಂಕಿತರಿಗೆ ಚಿಕಿತ್ಸೆ ವ್ಯವಸ್ಥೆ ಕಲ್ಪಿಸುವಲ್ಲಿ ಜಿಲ್ಲಾಧಿಕಾರಿ ಆರ್.ಗಿರೀಶ್ ಅವರು ಸಂರ್ಪೂಣ ವಿಫಲರಾಗಿದ್ದಾರೆ ಎಂದು ಜೆಡಿಎಸ್ ಮುಖಂಡ, ಶಾಸಕ ಎಚ್.ಡಿ.ರೇವಣ್ಣ ಕೆಂಡಾಮಂಡಲವಾದರು.
ಆರೋಗ್ಯ ಸಚಿವ ಕೆ.ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಕೆ.ಗೋಪಾಲಯ್ಯ ಅವರು ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸಾ ವ್ಯವಸ್ಥೆಯ ಪರಿಶೀಲನಾ ಸಭೆ ಆರಂಭಿಸುವ ಮೊದಲೇ ಜಿಲ್ಲಾಧಿ ಕಾರಿ ಯವರ ಆಸಡ್ಡೆ ಬಗ್ಗೆ ಪ್ರಸ್ತಾಪಿಸಿದ ರೇವಣ್ಣ, ಮುಖ್ಯಮಂತ್ರಿಯವರೇ ಪ್ರತಿ ತಾಲೂಕಿಗೂ 25 ಲಕ್ಷ ರೂ. ಬಿಡುಗಡೆ ಮಾಡಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ನೆರವಾಗಿ ಎಂದುಒಂದು ವಾರದ ಹಿಂದೆ ಸೂಚನೆ ನೀಡಿದರೂ ಜಿಲ್ಲಾಧಿಕಾರಿಯವರು ಸ್ಪಂದಿ ಸಿಲ್ಲ. ಸೋಮವಾರ ಬೆಳಗ್ಗೆ 10 ಲಕ್ಷ ರೂ. ಬಿಡುಗಡೆ ಮಾಡಿದ್ದಾರೆ.ನಾವೇನು ಭಿಕ್ಷೆ ಕೇಳುತ್ತಿದ್ಧೇವೆಯೇ ? ನಮ್ಮನ್ನು ಭಿಕಾರಿಗಳು ಎಂದು ತಿಳಿದುಕೊಂಡಿ ದ್ದಾರೆಯೇ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭೆ ಪ್ರಾರಂಭವಾದ ನಂತರ ಜಿಲ್ಲಾಧಿಕಾರಿ ಯವರು ಜಿಲ್ಲೆಯ ಸ್ಥಿತಿಗತಿಯ ಮಾಹಿತಿ ನೀಡಲು ಪ್ರಾರಂಭಿಸುತ್ತಿದ್ದಂತೆಯೇ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ ಅವರು, ಶಾಸಕರ ಸಲಹೆಗಳಿಗೆ ಮಾನ್ಯತೆ ನೀಡದ ಜಿಲ್ಲಾಧಿಕಾರಿಯವರು ಈ ಸಭೆಯಲ್ಲಿ ಮಾತನಾಡಕೂಡದು. ಅವರು ಮಾತನಾಡುವುದಿದ್ದರೆ ನಾನು ಸಭೆಯಿಂದ ಹೊರ ಹೋಗುವೆ ಎಂದು ಕೂಗಾಡಿದರು.
ಹಾಸ್ಟೆಲ್‌ಗಳಲ್ಲಿ ಕೊರೊನಾ ಕೇರ್ ಕೇಂದ್ರಗಳ ಮಾಡಿ, ರೆಮ್‌ಡೆಸಿವಿಯರ್ ಇಂಜೆಕ್ಷನ್ ಕಾಳಸಂತೆ ಮಾರಾಟದ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದರೂ ಜಿಲ್ಲಾಧಿಕಾರಿ ಕ್ರಮಕೈಗೊಂಡಿಲ್ಲ. ಅವರ ಮಾತನ್ನೇನು ಕೇಳುವುದು ಎಂದು ಜಿಲ್ಲಾಧಿಕಾರಿಯವರು 10 ಲಕ್ಷ ರೂ.ಬಿಡುಗಡೆ ಮಾಡಿದ್ದ ಆದೇಶದ ಪ್ರತಿಯನ್ನು ಹರಿದು ವೇದಿಯಲ್ಲಿದ್ದ ಜಿಲ್ಲಾಧಿಕಾರಿಯವರ ಮುಂದೆಎಸೆದು ಸಭೆಯಿಂದ ಹೊರ ಹೋಗಲು ಮುಂದಾದರು. ಸಂಸದ ಪ್ರಜ್ವ ಲ್ ರೇವಣ್ಣ, ಶಾಸಕರಾದಸಿ.ಎನ್.ಬಾಲಕೃಷ್ಣ ಅವರು ಮನವಿ ಮಾಡಿದರು. ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ರೇವಣ್ಣ ಅವರ ಕೈ ಹಿಡಿದು ಸಮಾಧಾನ ಮಾಡಿದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಆಮೆಗತಿಯಲ್ಲಿ ಚತುಷ್ಪಥ ರಸ್ತೆ ಕಾಮಗಾರಿ
ಸಕಲೇಶಪುರ: ಮುಂದುವರೆದ ಕಾಡಾನೆ ಹಾಗೂ ಮಾನವ ಸಂಘರ್ಷ; ಕಾಡಾನೆ ದಾಳಿಗೆ ಅಮಾಯಕ ವೃದ್ದ ಬಲಿ
ಜನತೆಗೆ ರುಚಿಸದ ಇಂದಿರಾ ಕ್ಯಾಂಟೀನ್ ಆಹಾರ
ಸಕಲೇಶಪುರ : ಸುತ್ತಮುತ್ತ ಪ್ರದೇಶದಲ್ಲಿ ದಾಂಧಲೆ ನಡೆಸಿ ಭೀತಿ ಹುಟ್ಟಿಸಿದ್ದ ಪುಂಡಾನೆ ಸೆರೆ
ಆಲೂರು: ಪೊಲೀಸರ ದಾಳಿ; ಶೆಡ್ ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 25 ಜಾನುವಾರುಗಳ ರಕ್ಷಣೆ