Udayavni Special

ವಿದ್ಯುತ್‌ ದರ ಹೆಚ್ಚಳ ವಾಪಸ್‌ ಪಡೆಯಲಿ

Team Udayavani, Nov 7, 2020, 3:57 PM IST

hasan-tdy-1

ಹಾಸನ: ರಾಜ್ಯದಲ್ಲಿ ವಿದ್ಯುತ್‌ ದರ ಏರಿಕೆ ನಿರ್ಧಾರವನ್ನು ಹಿಂತೆಗೆದುಕೊಳ್ಳಬೇಕು ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಸರ್ಕಾರವನ್ನು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 5 ವಿದ್ಯುತ್‌ ಸರಬರಾಜು ಕಂಪನಿಗಳು 7,996 ಕೋಟಿ ರೂ. ನಷ್ಟದಲ್ಲಿದ್ದು, ಸರಿದೂಗಿಸಿಕೊಳ್ಳಲು ಪ್ರತಿ ಯೂನಿಟ್‌ಗೆ 40 ಪೈಸೆ ಹೆಚ್ಚಳಕ್ಕೆ ವಿದ್ಯುತ್‌ ಸರಬರಾಜುಕಂಪನಿಗಳು ಕೆಇಆರ್‌ಸಿಗೆ ಮನವಿ ಸಲಿಸಿದ್ದವು. ಕೆಇಆರ್‌ಸಿ ಯೂನಿಟ್‌ಗೆ 40 ಪೈಸೆ ವರೆಗೂ ಹೆಚ್ಚಳಕ್ಕೆ ಅನುಮತಿ ನೀಡಿದೆ. ಕೊರೊನಾ ಆರಂಭವಾದ ಸಂದರ್ಭದಲ್ಲಿ ಒಮ್ಮೆ, ಈಗ ಮತ್ತೂಮ್ಮೆ ದರ ಹೆಚ್ಚಳ ಮಾಡಿ ಗ್ರಾಹಕರ ಮೇಲೆ ಹೊರ ಹೊರಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಲಾಕ್‌ಡೌನ್‌ನಿಂದ ಜನರು ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ. ಅತಿವೃಷ್ಟಿಯಿಂದ ರೈತರು ಬೆಳೆ ಕಳೆದುಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಹಾಗೂ ವಿಧಾನಸಭೆಯ 2 ಕ್ಷೇತ್ರಗಳ ಉಪಚುನಾವಣೆ ಹಾಗೂ ಮೇಲ್ಮ ನೆಯ ಚುನಾವಣೆ ಮುಗಿದ ತಕ್ಷಣ ವಿದ್ಯುತ್‌ ದರ ಏರಿಕೆ ಮಾಡಿ ಜನರಿಗೆ ಸರ್ಕಾರ ಬರೆ ಹಾಕುತ್ತಿದೆ.ಈಗ ರೈತರು,ಬಡವರು ವಿದ್ಯುತ್‌ ದರ ಪಾವತಿಸಲು ಸಾಧ್ಯವೇ ಇಲ್ಲದ ಪರಿಸ್ಥಿತಿಯಲ್ಲಿದ್ದಾರೆ. ಆದ್ದರಿಂದ ದರ ಏರಿಕೆ ಆದೇಶ ತಕ್ಷಣ ತಡೆ ಹಿಡಿಯಬೇಕು ಎಂದು ಒತ್ತಾಯಿಸಿದರು.

ಎರಡು ಸರ್ಕಾರ ಅಧಿಕಾರ ನಡೆಸುವುದರೊಳಗೆ 10 ಬಾರಿ ವಿದ್ಯುತ್‌ ದರ ಏರಿಕೆ ಮಾಡಲಾಗಿದೆ. ಇಷ್ಟೊಂದು ದರ ಏರಿಕೆ ಮಾಡಿದ್ದರೂರೈತರಿಗೆಗುಣಮಟ್ಟದವಿದ್ಯುತ್‌ ಪೂರೈಕೆ ಮಾಡುತ್ತಿಲ್ಲ. ನಾನು ಇಂಧನ ಸಚಿವ ನಾಗಿದ್ದ 38 ತಿಂಗಳು ಒಮ್ಮೆಯೂ ವಿದ್ಯುತ್‌ ದರ ಏರಿಕೆ ಮಾಡಿರಲಿಲ್ಲ. ಬೆಸ್ಕಾಂನಲ್ಲಿ 600 ಕೋಟಿ ರೂ. ಉಳಿತಾಯ ಮಾಡಿ ಅದನ್ನು ನಿಶ್ಚಿತ ಠೇವಣಿ ಇರಿಸಿದ್ದೆ ಎಂದು ಹೇಳಿದರು.

ಖಾಸಗೀಕರಣ: ರಾಜ್ಯದಲ್ಲಿ ವಿದ್ಯುತ್‌ ಉಪ ಕೇಂದ್ರಗಳನ್ನು ನಿರ್ಮಿಸಲು ಕೇಂದ್ರ ಸರ್ಕಾರ ದಿಂದ 1200 ಕೋಟಿ ರೂ. ಅನುದಾನ ತಂದು ರಾಜ್ಯದಲ್ಲಿ 600ಕ್ಕೂ ಹೆಚ್ಚು ಉಪ ಕೇಂದ್ರ ನಿರ್ಮಿಸಿದ್ದೆ. ಆದರೆ, ಈಗ ಇಂಧನ ಇಲಾಖೆಯಲ್ಲಿ ಲೂಟಿ ನಡೆಯುತ್ತಿದೆ. ಇಲಾ ಖೆಯ ಲ್ಲಿನ 10 ವರ್ಷಗಳ ವ್ಯವಹಾರದ ಸಮಗ್ರ ತನಿಖೆ ನಡೆಯಬೇಕು. ಆಗ ಏನೇನು ನಡೆದಿದೆ ಎಂಬುದು ಗೊತ್ತಾಗುತ್ತದೆ. ಇದೇ ಪರಿಸ್ಥಿತಿ ಮುಂದುವರಿದರೆ ವಿಮಾನ ನಿಲ್ದಾಣ ಗಳ ನಿರ್ವಹಣೆಯನ್ನು ಅದಾನಿ ಕಂಪನಿಗೆ ವಹಿಸಿದಂತೆ ವಿದ್ಯುತ್‌ ಸರಬರಾಜು ಕಂಪನಿಗಳನ್ನೂ ಖಾಸಗೀಕರಣ ಮಾಡುವ ಸ್ಥಿತಿ ಬರಬಹುದು ಎಂದು ರೇವಣ್ಣ ಆತಂಕ ವ್ಯಕ್ತಪಡಿಸಿದರು.

ಪಸೆಂಟೇಜ್‌ ವ್ಯವಹಾರ: ಜಲಸಂಪನ್ಮೂಲ ಇಲಾಖೆಯಲ್ಲಿ ಪರ್ಸೆಂಟೇಜ್‌ ವ್ಯವಹಾರ ದಿನೇ ದಿನೆ ಹೆಚ್ಚಳವಾಗುತ್ತಿದೆ. ಗುತ್ತಿಗೆದಾರರು ಬಿಲ್‌ ಪಡೆಯಲು ಬೆಂಗಳೂರು ಮಟ್ಟದಲ್ಲಿ ಶೇ.12 ಕೊಡಬೇಕು. ಆನಂತರ ಸ್ಥಳೀಯ ಎಂಜಿನಿಯರ್‌ಗಳ ಮಟ್ಟದಲ್ಲಿ ಶೇ.10 ಪರ್ಸೆಂಟೇಜ್‌ ಕೊಡುವ ಅನಿವಾರ್ಯ ಸ್ಥಿತಿ ಇದೆ. ಮೋದಿ ಅವರು ಹಿಂದಿನ ಸಮ್ಮಿಶ್ರ ಸರ್ಕಾರವನ್ನು 10 ಪರ್ಸೆಂಟ್‌ ಸರ್ಕಾರ ಎಂದು ಟೀಕಿಸುತ್ತಿದ್ದರು. ಈಗ ಸರ್ಕಾರ ಎಷ್ಟು ಪರ್ಸೆಂಟ್‌ ತೆಗೆದುಕೊಳ್ಳುತ್ತಿದೆ ಎಂಬುದರ ಬಗ್ಗೆ ಪ್ರಧಾನಿಯವರು ಹೇಳಲಿ ಎಂದು ಸವಾಲು ಹಾಕಿದರು.

ಜಲ ಸಂಪನ್ಮೂಲ ಇಲಾಖೆಯಲ್ಲಿನ ಭ್ರಷ್ಟಾಚಾರ, ಬೆಂಗಳೂರಿನಲ್ಲಿರುವ ಕಾವೇರಿ ನೀರಾ ವರಿ ನಿಗಮದ ವಿರುದ್ಧ ಶೀಘ್ರದಲ್ಲಿಯೇ ಧರಣಿ ಕೂರುವೆ ಎಂದು ಹೇಳಿದ ರೇವಣ್ಣ ಅವರು, ರಾಜಕಾರಣಿಗಳಿಗೆ ಕಮೀಷನ್‌ ಕೊಡುತ್ತಿರುವ ಕೆಲ ಅಧಿಕಾರಿಗಳು ಜೈಲಿಗೆ ಹೋಗಬೇಕಾದ ದಿನ ಬರುತ್ತಿದೆ ಎಂದೂ ಎಚ್ಚರಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವೀರಶೈವ ಮೀಸಲಾತಿ ಶೀಘ್ರ ತೀರ್ಮಾನವಾಗದಿದ್ದರೆ ಹೋರಾಟ: ಪಂಚಮಸಾಲಿ ಪೀಠ ಸ್ವಾಮೀಜಿ ಎಚ್ಚರಿಕೆ

ವೀರಶೈವ ಮೀಸಲಾತಿ ಶೀಘ್ರ ತೀರ್ಮಾನವಾಗದಿದ್ದರೆ ಹೋರಾಟ: ಪಂಚಮಸಾಲಿ ಪೀಠ ಸ್ವಾಮೀಜಿ ಎಚ್ಚರಿಕೆ

Only-women-passengers,-no-children-allowed-in-Mumbai-local-trains

ಮುಂಬೈ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣ ನಿರ್ಬಂಧ: ಕಠಿಣ ಮಾರ್ಗಸೂಚಿ ಜಾರಿಗೆ !

ws-40

ಚಳಿಗಾಲಕ್ಕೆ ಟ್ರೆಂಡಿ ಬಟ್ಟೆ

ದ್ವೇಷದಿಂದ ಕಂಗನಾ ನಿವಾಸ ಭಾಗಶಃ ಧ್ವಂಸ, ಇದು ಕಾನೂನು ಸಮ್ಮತವಲ್ಲ: ಹೈಕೋರ್ಟ್

ದ್ವೇಷದಿಂದ ಕಂಗನಾ ನಿವಾಸ ಭಾಗಶಃ ಧ್ವಂಸ, ಇದು ಕಾನೂನು ಸಮ್ಮತವಲ್ಲ: ಹೈಕೋರ್ಟ್

ಬಿಎಸ್ ವೈ ಲಿಂಗಾಯತ ಬ್ರಹ್ಮಾಸ್ತ್ರಕ್ಕೆ ಹಿನ್ನಡೆ: ಆತುರದ ತೀರ್ಮಾನ ಮಾಡದಂತೆ ವರಿಷ್ಠರ ಸೂಚನೆ

ಬಿಎಸ್ ವೈ ಲಿಂಗಾಯತ ಬ್ರಹ್ಮಾಸ್ತ್ರಕ್ಕೆ ಹಿನ್ನಡೆ: ಆತುರದ ತೀರ್ಮಾನ ಮಾಡದಂತೆ ವರಿಷ್ಠರ ಸೂಚನೆ

ನೂತನ ವಿಜಯನಗರ ಜಿಲ್ಲೆಗೆ ಆರು ತಾಲೂಕುಗಳು ಸೇರ್ಪಡೆ: ಹೊಸಪೇಟೆ ಜಿಲ್ಲಾಕೇಂದ್ರ

ನೂತನ ವಿಜಯನಗರ ಜಿಲ್ಲೆಗೆ ಆರು ತಾಲೂಕುಗಳು ಸೇರ್ಪಡೆ: ಹೊಸಪೇಟೆ ಜಿಲ್ಲಾಕೇಂದ್ರ

ಜಮ್ಮು-ಕಾಶ್ಮೀರ: ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮತ್ತೆ ಬಂಧನ, ಮಗಳಿಗೆ ಗೃಹಬಂಧನ

ಜಮ್ಮು-ಕಾಶ್ಮೀರ: ಮಾಜಿ ಸಿಎಂ ಮೆಹಬೂಬಾ ಮುಫ್ತಿ ಮತ್ತೆ ಬಂಧನ, ಮಗಳಿಗೆ ಗೃಹಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮದುವೆಗೆ ಜನರ ಮಿತಿ ಮೀರಿದರೆ ದಂಡ

ಮದುವೆಗೆ ಜನರ ಮಿತಿ ಮೀರಿದರೆ ದಂಡ

ಗ್ರಾಪಂ ಚುನಾವಣೆಗೆ ಪಕ್ಷ ಸಂಘಟನೆ

ಗ್ರಾಪಂ ಚುನಾವಣೆಗೆ ಪಕ್ಷ ಸಂಘಟನೆ

H.-D.-Revanna

60ದೇವಾಲಯ ಜೀರ್ಣೋದ್ಧಾರ

ಪರಿಹಾರದ ಹಣ ದುರುಪಯೋಗ ಆರೋಪ

ಪರಿಹಾರದ ಹಣ ದುರುಪಯೋಗ ಆರೋಪ

hsn-tdy-1

ಪ್ರಸಿದ್ಧ ದ್ವಾರಸಮುದ್ರ ಕೆರೆ ಏರಿ ಮಧ್ಯದಲ್ಲೇ ಬಿರುಕು

MUST WATCH

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

udayavani youtube

ಮಂಗಳೂರು: ಉಪ್ಪುನೀರು ತಡೆ ಅಣೆಕಟ್ಟು ಕಾಮಗಾರಿ ವೀಕ್ಷಿಸಿದ ಸಚಿವ ಮಾಧುಸ್ವಾಮಿ

udayavani youtube

ಕರಾವಳಿಯಲ್ಲೂ ಪರಿಚಯವಾಯಿತು ಜಪಾನಿನ ಕೊಕೆಡಾಮ ಕಲೆ

ಹೊಸ ಸೇರ್ಪಡೆ

ಯುಗಪುರುಷನ ನೆನೆದ ಗಣೇಶ್‌

ಯುಗಪುರುಷನ ನೆನೆದ ಗಣೇಶ್‌

ವೀರಶೈವ ಮೀಸಲಾತಿ ಶೀಘ್ರ ತೀರ್ಮಾನವಾಗದಿದ್ದರೆ ಹೋರಾಟ: ಪಂಚಮಸಾಲಿ ಪೀಠ ಸ್ವಾಮೀಜಿ ಎಚ್ಚರಿಕೆ

ವೀರಶೈವ ಮೀಸಲಾತಿ ಶೀಘ್ರ ತೀರ್ಮಾನವಾಗದಿದ್ದರೆ ಹೋರಾಟ: ಪಂಚಮಸಾಲಿ ಪೀಠ ಸ್ವಾಮೀಜಿ ಎಚ್ಚರಿಕೆ

Only-women-passengers,-no-children-allowed-in-Mumbai-local-trains

ಮುಂಬೈ ರೈಲುಗಳಲ್ಲಿ ಮಕ್ಕಳಿಗೆ ಪ್ರಯಾಣ ನಿರ್ಬಂಧ: ಕಠಿಣ ಮಾರ್ಗಸೂಚಿ ಜಾರಿಗೆ !

ws-40

ಚಳಿಗಾಲಕ್ಕೆ ಟ್ರೆಂಡಿ ಬಟ್ಟೆ

ದ್ವೇಷದಿಂದ ಕಂಗನಾ ನಿವಾಸ ಭಾಗಶಃ ಧ್ವಂಸ, ಇದು ಕಾನೂನು ಸಮ್ಮತವಲ್ಲ: ಹೈಕೋರ್ಟ್

ದ್ವೇಷದಿಂದ ಕಂಗನಾ ನಿವಾಸ ಭಾಗಶಃ ಧ್ವಂಸ, ಇದು ಕಾನೂನು ಸಮ್ಮತವಲ್ಲ: ಹೈಕೋರ್ಟ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.