ಹೆದ್ದಾರಿ ಡಾಂಬರೀಕರಣ ಅಗತ್ಯ


Team Udayavani, Nov 1, 2019, 4:05 PM IST

hasan-tdy

ಸಕಲೇಶಪುರ: ರಾಜಕಾರಣಿಗಳ, ಅಧಿಕಾರಿಗಳ ಹಾಗೂ ಗುತ್ತಿಗೆದಾರ ಜೇಬು ತುಂಬಿಸುವ ರಾಷ್ಟ್ರೀಯ ಹೆದ್ದಾರಿ 75 ದುರಸ್ತಿ ಕಾಮಗಾರಿ ಹೆಸರಿನಲ್ಲಿ ದುಂದು ವೆಚ್ಚ ಮಾಡುವ ಬದಲು ಸಂಪೂರ್ಣವಾಗಿ ಮರು ಡಾಂಬರೀಕರಣ ಕಾಮಗಾರಿ ಆರಂಭಿಸುವುದೇ ಸೂಕ್ತ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಸಂಪೂರ್ಣ ಹಾಳಾಗಿರುವ ರಸ್ತೆ: ರಾಜ್ಯದ ರಾಜಧಾನಿ ಬೆಂಗಳೂರು ಹಾಗೂ ಕರಾವಳಿಯ ಪ್ರಮುಖ ನಗರಮಂಗಳೂರನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ಹಾಸನ ದಿಂದ ಮಾರನಹಳ್ಳಿವರೆಗಿನ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ. ಈ ಹಿನ್ನೆಲೆಯಲ್ಲಿ ರಸ್ತೆಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ತಾಲೂಕಿನ ಬಾಳ್ಳುಪೇಟೆ ಗ್ರಾಮದಲ್ಲಿ ನಿರಂತರವಾಗಿ 3 ದಿನಗಳ ಕಾಲ ಪ್ರತಿಭಟನೆ ಮಾಡಲಾಗಿತ್ತು.

ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ. ಮಾಧುಸ್ವಾಮಿ ಈ ಕುರಿತು ವಿಧಾನಸೌಧದಲ್ಲಿ ಲೋಕೋಪಯೋಗಿ ಸಚಿವರ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಿಧಾನಸೌಧ ದಲ್ಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ನಡೆದ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಹೆದ್ದಾರಿ ಪ್ರಾಧಿಕಾರದ ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.

7 ಕೋಟಿ ರೂ. ಅನುದಾನ ಬಿಡುಗಡೆ: ರಸ್ತೆ ದುರಸ್ತಿ ಕಾಮಗಾರಿಗೆ ಬಿಡುಗಡೆಯಾಗಿರುವ 7 ಕೋಟಿ ರೂ.ಅನುದಾನದಲ್ಲಿ ಶೀಘ್ರಕಾಮಗಾರಿ ಆರಂಭಿಸದಿದ್ದಲ್ಲಿ ಹಣವನ್ನು ಲೋಕೋಪಯೋಗಿ ಇಲಾಖೆಗೆ ಹಸ್ತಾಂತರಿಸಿನಾವೇ ಕಾಮಗಾರಿ ಮಾಡಿಸುತ್ತೇವೆ ಎಂದಿದ್ದಾರೆ. ರಸ್ತೆ ದುರಸ್ತಿಗೆ ಹಣ ಸಾಕಾಗದಿದ್ದಲ್ಲಿ ಇನ್ನೂ ಹೆಚ್ಚು ಹಣ ಬಿಡುಗಡೆ ಮಾಡುವ ಭರವಸೆ ಯನ್ನು ಸಚಿವರು ನೀಡಿದ್ದಾರೆ. ಹಾಸನದಿಂದ ಮಾರನಹಳ್ಳಿವರೆಗಿನ ಸುಮಾರು 55 ಕಿ.ಮೀ. ರಸ್ತೆ ಮರು ಡಾಂಬರೀಕರಣ ಮಾಡಲು ಸುಮಾರು 30ಕೋಟಿ ರೂ. ಬೇಕಾಗಬಹುದೆಂದು ಈ ಹಿಂದೆ ಅಂದಾಜಿಸಲಾಗಿತ್ತು. 7 ಕೋಟಿ ರೂ. ವೆಚ್ಚದಲ್ಲಿ ದುರಸ್ತಿ ಕಾಮಗಾರಿಗಾಗಿ ಈ ರೀತಿಕೋಟ್ಯಂತರ ರೂ. ಬಿಡುಗಡೆ ಮಾಡುವ ಬದಲು ಶಾಶ್ವತವಾಗಿ ಮರು ಡಾಂಬರೀಕರಣ ಮಾಡುಬಹುದಿತ್ತು. ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ.

ಈಗಾಗಲೇ ತಾಲೂಕಿನಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿರುವುದರಿಂದ ರಸ್ತೆ ದುರಸ್ತಿ ಕಾಮಗಾರಿ ಕೈಗೊಳ್ಳಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ ಮರು ಡಾಂಬರೀಕರಣ ಕಾರ್ಯಕ್ಕೆ ಟೆಂಡರ್‌ ಕರೆದು ಪ್ರಕ್ರಿಯೆ ನಡೆಸಲು 15ರಿಂದ 20 ದಿನಗಳು ಬೇಕಾಗಿದ್ದು ಇನ್ನು 20 ದಿನಗಳ ನಂತರ ಅಗತ್ಯಅನುದಾನ ಪಡೆದು ಮರುಡಾಂಬರೀಕರಣಮಾಡಬಹುದಿತ್ತು.

ಟೆಂಡರ್‌ ಮುಗಿದ ನಂತರ ಎರಡೂ ಭಾಗಗಳಿಂದ ಕಾಮಗಾರಿ ಆರಂಭಿಸಿದ್ದಲ್ಲಿ ವೇಗವಾಗಿ ಕಾಮಗಾರಿ ಮುಗಿಸಬಹುದು. ಕಳೆದ ಒಂದು ವರ್ಷಗಳಿಂದ ನರಕ ಅನುಭವಿಸಿರುವ ಸಾರ್ವಜನಿಕರು ಇನ್ನು ಒಂದು ತಿಂಗಳು ಕಾಮಗಾರಿ ವಿಳಂಬವಾಗಿದಲ್ಲಿ ಯಾರೂ ಅಷ್ಟಾಗಿ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಕೋಟ್ಯಂತರ ರೂ. ವೆಚ್ಚ: ಈಗಾಗಲೇ ಹೆದ್ದಾರಿ ದುರಸ್ತಿ ಹೆಸರಿನಲ್ಲಿ ರಾಜ್ಯ ಸರ್ಕಾರ ಕೋಟ್ಯಂತರ ರೂ. ವೆಚ್ಚ ಮಾಡಿದ್ದರೂ ರಸ್ತೆ ಅಭಿವೃದ್ಧಿಯಾಗದೇ ಸಾರ್ವಜನಿಕರಿಗೆ ತೊಂದರೆಯಾಗಿದೆ. ಸರ್ಕಾರ ಮತ್ತೂಮ್ಮೆ ರಾಷ್ಟ್ರೀಯ ಹೆದ್ದಾರಿದುರಸ್ತಿ ಕಾರ್ಯಕ್ಕೆ ಅಧಿಕೃತವಾಗಿ ಹಣ ಬಿಡುಗಡೆ ಮಾಡುತ್ತಿರುವುದು ಅಧಿಕಾರಿಗಳು, ಗುತ್ತಿಗೆದಾರ ರಿಗೆ ಹಬ್ಬವಾಗುವುದರಲ್ಲಿ ಅನುಮಾನವಿಲ್ಲ.

 

-ಸುಧೀರ್‌ ಎಸ್‌.ಎಲ್‌

ಟಾಪ್ ನ್ಯೂಸ್

1-dfdsf

ದಾವೋಸ್ ನಲ್ಲಿ ಸಿಎಂ: ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

1-sdsa-d

ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು : ಅಜಂ ಖಾನ್

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

ಮೇ 27ಕ್ಕೆ ವೀಲ್ ಚೇರ್ ರೋಮಿಯೋ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮೇ 27ಕ್ಕೆ “ವೀಲ್ ಚೇರ್ ರೋಮಿಯೋ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಕಾಡಾನೆ ಸಮಸ್ಯೆ: ವಾರದೊಳಗೆ ಸಭೆ ನಿರೀಕ್ಷೆ

ಕೋಡಿಮಠ ಸರ್ವ ಜನಾಂಗದ ಶಾಂತಿಯ ತೋಟ

ಕೋಡಿಮಠ ಸರ್ವ ಜನಾಂಗದ ಶಾಂತಿಯ ತೋಟ

Untitled-1

ಎಟಿಎಂಗಳಿಗೆ ಹಣ ತುಂಬಲು ಹೋಗುತ್ತಿದ್ದ ವಾಹನದಿಂದ 43 ಲಕ್ಷ ರೂ. ದೋಚಿದ್ದವರು ಸೆರೆ

ಎಟಿಆರ್‌ ಕಣ್ಣಿಗೆ ಬೆಣ್ಣೆ , ಕೆಎಂಶಿ ಕಣ್ಣಿಗೆ ಸುಣ್ಣ ಏಕೆ?; ಬಿಜೆಪಿ

ಎಟಿಆರ್‌ ಕಣ್ಣಿಗೆ ಬೆಣ್ಣೆ , ಕೆಎಂಶಿ ಕಣ್ಣಿಗೆ ಸುಣ್ಣ ಏಕೆ?; ಬಿಜೆಪಿ

ಬೀದಿನಾಯಿಗಳ ಹಾವಳಿ: ಆತಂಕದಲಿ ಸಾರ್ವಜನಿಕರು

ಬೀದಿನಾಯಿಗಳ ಹಾವಳಿ: ಆತಂಕದಲಿ ಸಾರ್ವಜನಿಕರು

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

12

ಶಿಕ್ಷಣದಿಂದ ಬದಲಾವಣೆ ಸಾಧ್ಯ: ಪರಶುರಾಮ

ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

result

‌ಫಲಿತಾಂಶದಿಂದ ಕಾಂಗ್ರೆಸ್‌ಗೆ ಮರ್ಮಾಘಾತ ­

ಬೆಂಗಳೂರು: ಉಡುಗೊರೆ, ಲಾಟರಿ ನೆಪದಲ್ಲಿ ವಂಚನೆ

ಬೆಂಗಳೂರು: ಉಡುಗೊರೆ, ಲಾಟರಿ ನೆಪದಲ್ಲಿ ವಂಚನೆ

1-dfdsf

ದಾವೋಸ್ ನಲ್ಲಿ ಸಿಎಂ: ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.