Udayavni Special

ಪ್ರೀತಂಗೌಡರ ವಿರುದ್ಧ ಜೆಡಿಎಸ್‌ ವಾಗ್ಧಾಳಿ


Team Udayavani, Apr 9, 2020, 3:55 PM IST

ಪ್ರೀತಂಗೌಡರ ವಿರುದ್ಧ ಜೆಡಿಎಸ್‌ ವಾಗ್ಧಾಳಿ

ಹಾಸನ: ಶಾಸಕ ಪ್ರೀತಂ ಜೆ.ಗೌಡ ಅವರು ಕೋವಿಡ್ 19 ನಿಯಂತ್ರಣಕ್ಕಾಗಿ ಜನರಲ್ಲಿ ಜಾಗೃತಿ ಮೂಡಿಸುವ ಬದಲು ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿರುವ ತಮ್ಮ ಹಿಂಬಾಲಕರ ಪರ ವಕಾಲತ್ತು ವಹಿಸುತ್ತಿದ್ದಾರೆ ಎಂದು ಜೆಡಿಎಸ್‌ ಮುಖಂಡರು ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಪಂ ಉಪಾಧ್ಯಕ್ಷ ಎಚ್‌.ಪಿ.ಸ್ವರೂಪ್‌ ಮತ್ತು ಪಕ್ಷದ ಮುಖಂಡರು, ಕೋವಿಡ್ 19 ನಿಯಂತ್ರಣ ಕ್ರಮಗಳು ಆರಂಭವಾದರೂ ಶಾಸಕ ಪ್ರೀತಂ ಜೆ.ಗೌಡ ಅವರು ಕ್ಷೇತ್ರದತ್ತ ಬಾರದೇ ಮೂರು ವಾರ ಬೆಂಗಳೂರಿನಲ್ಲಿಯೇ ವಾಸ್ತವ್ಯ ಹೂಡಿದ್ದರು. ಅವರ ಹಿಂಬಾಲಕ ಕ್ವಾಲಿಟಿ ಬಾರ್‌ ಮಾಲೀಕ ನಿಷೇಧಾಜ್ಞೆ ಜಾರಿಯಲ್ಲಿದ್ದರೂ ಅಕ್ರಮವಾಗಿ ಮದ್ಯ ಮಾರಾಟ ಮಾಡಿದ ಪ್ರಕರಣ ಬಯಲಾಗುತ್ತಿದ್ದಂತೆ ಅವರ ರಕ್ಷಣೆಗಾಗಿ ಧಾವಿಸಿದ್ದಾರೆ. ಶಾಸಕರ ಆಪ್ತರು ಈಗಲೂ ತೋಟಗಳಲ್ಲಿ ಅಕ್ರಮವಾಗಿ ನಕಲಿ ಮದ್ಯವನ್ನು ತಯಾರಿಸಿ ದುಪ್ಪಟ್ಟು, ಮೂರು ಪಟ್ಟು ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ. ಅಂತಹವರ ರಕ್ಷಣೆಗೆ ಶಾಸಕರು ನಿಂತಿದ್ದಾರೆ ಎಂದು ದೂರಿದರು.

ನೆರವಿನ ನೆಪದಲ್ಲಿ ಪ್ರಚಾರ-ಆರೋಪ: ಕೋವಿಡ್ 19  ನಿಯಂತ್ರಣ, ಚಿಕಿತ್ಸಾ ವ್ಯವಸ್ಥೆಗಳ ಬಗ್ಗೆ ತಲೆ ಕೆಡಿಸಿಕೊಳ್ಳದ ಪ್ರೀತಂ ಜೆ.ಗೌಡ ಅವರು ತಮ್ಮ ಭಾವಚಿತ್ರವಿರುವ ಬ್ಯಾಗು ಗಳಲ್ಲಿ ಈಗ ದಿನಸಿ ಪದಾರ್ಥಗಳನ್ನು ತುಂಬಿ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದಾರೆ. ಸಂಕಷ್ಟದಲ್ಲಿರುವವರಿಗೆ ನೆರವಾಗುವ ಸಂದರ್ಭದಲ್ಲಿಯೂ ಪ್ರಚಾರ ಪಡೆಯುವಂತಹ ಕೀಳು ಅಭಿರುಚಿಯನ್ನು ಶಾಸಕರು ಪ್ರದರ್ಶಿಸುತ್ತಿ ದ್ದಾರೆ ಎಂದು ಟೀಕಿಸಿದರು.  ಸಂಸದ ಪ್ರಜ್ವಲ್‌ ರೇವಣ್ಣ, ಮಾಜಿ ಸಚಿವ ಎಚ್‌.ಡಿ.ರೇವಣ್ಣ, ಎಲ್ಲ ಜೆಡಿಎಸ್‌ ಶಾಸಕರು, ಮುಖಂಡರು ಅವರ ವ್ಯಾಪ್ತಿಯಲ್ಲಿ ಅಸಹಾಯಕರಿಗೆ ನೆರವಾಗುತ್ತಿದ್ದರೂ ನೆರವಿನ ನೆಪದಲ್ಲಿ ಪ್ರಚಾರ ಪಡೆಯುತ್ತಿಲ್ಲ ಎಂದರು.

ಎಷ್ಟು ಅನುದಾನ ತಂದಿದ್ದಾರೆ? ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿಯಾದರೆ ಹಾಸನ ಜಿಲ್ಲೆಗೆ ನಾನೇ ಮುಖ್ಯಮಂತ್ರಿಯಾದಂತೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಪ್ರೀತಂ ಜೆ.ಗೌಡರು ರಾಜ್ಯ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಎಷ್ಟು ಅನುದಾನ ಘೋಷಣೆ ಮಾಡಿಸಿದ್ದಾರೆಂಬುದನ್ನು ಹೇಳಲಿ ಎಂದು ಸವಾಲು ಹಾಕಿದರು.

ಎಚ್‌.ಡಿ.ರೇವಣ್ಣ ಹಾಸನ ಮೆಡಿಕಲ್‌ ಕಾಲೇಜಿಗೆ 200 ಕೋಟಿ ರೂ. ಅನುದಾನ ತಂದು ಅಭಿವೃದ್ಧಿಪಡಿಸಿದ ಪರಿಣಾಮ ನೆರೆಯ ಜಿಲ್ಲೆಯ ಜನರು ಹಾಸನಕ್ಕೆ ಬಂದು ಆರೋಗ್ಯ ಸೇವೆ ಪಡೆದುಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಶಾಸಕ ಪ್ರೀತಂ ಗೌಡರಿಗೆ ರಾಜಕಾರಣ ವ್ಯಾಪಾರವಾಗಿದೆ. ಕೃಷಿ ಪತ್ತಿನ ಸಹಕಾರ ಸಂಘಗಳ ಚುನಾವಣೆಗೂ ಜನರು ಹಿಂದೇಟು ಹಾಕುವಂತೆ ಹಣದ ಥೈಲಿಯ ರಾಜಕಾರಣವನ್ನು ಆರಂಭಿಸಿದ್ದಾರೆ. ಇಂತಹ ರಾಜಕಾರಣಕ್ಕೆ ಜನರೇ ತಕ್ಕ ಉತ್ತವನ್ನು ಮುಂದಿನ ದಿನಗಳಲ್ಲಿ ಕೊಡಲಿದ್ದಾರೆ ಎಂದು ಹೇಳಿದರು.

ಹಾಸನ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಸ್‌. ದ್ಯಾವೇಗೌಡ, ಎಚ್‌ಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಎಚ್‌.ಸಿ.ಗಿರೀಶ್‌, ನಗರಸಭೆ ಮಾಜಿ ಅಧ್ಯಕ್ಷ ಎಚ್‌.ಎಸ್‌.ಅನಿಲ್‌ಕುಮಾರ್‌, ಮಾಜಿ ಸದಸ್ಯ ಎಂ.ಕೆ.ಕಮಲ್‌ಕುಮಾರ್‌, ಜಿಲ್ಲಾ ಜೆಡಿಎಸ್‌ ವಕ್ತಾರ ಎಚ್‌.ಎಸ್‌.ರಘು ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

true-caller

4.75ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್ ನಲ್ಲಿ ಲೀಕ್? ಟ್ರೂಕಾಲರ್ ಹೇಳಿದ್ದೇನು?

ವಲಸೆ ಕಾರ್ಮಿಕರ ಕರುಣಾಜನಕ ಕಥೆ: ಅಮ್ಮಾ ಎದ್ದೇಳು… ತಾಯಿಯ ಶವದ ಬಳಿ ಮಗುವಿನ ಆಟ

ವಲಸೆ ಕಾರ್ಮಿಕರ ಕರುಣಾಜನಕ ಕಥೆ: ಅಮ್ಮಾ ಎದ್ದೇಳು… ತಾಯಿಯ ಶವದ ಬಳಿ ಮಗುವಿನ ಆಟ!

ಗಡಿನಾಡು ಬೀದರ್ ಜಿಲ್ಲೆಗೆ ಕಂಟಕವಾದ ಮಹಾರಾಷ್ಟ್ರ: ಇಂದು 12 ಹೊಸ ಪ್ರಕರಣಗಳು

ಗಡಿನಾಡು ಬೀದರ್ ಗೆ ಕಂಟಕವಾದ ಮಹಾರಾಷ್ಟ್ರ: ಇಂದು 12 ಹೊಸ ಪ್ರಕರಣಗಳು ಪತ್ತೆ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಮಹದಾಯಿ ಯೋಜನೆ ಅನುಷ್ಠಾನ ಕೇಂದ್ರ ಸಚಿವರೊಂದಿಗೆ ಚರ್ಚೆ : ರಮೇಶ ಜಾರಕಿಹೊಳಿ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಪೊಲೀಸ್ ತಪಾಸಣೆ ಇಲ್ಲ

ಇಂದಿನಿಂದ ಉಡುಪಿ ಜಿಲ್ಲಾ ಗಡಿಗಳಲ್ಲಿ ಹಗಲು ಹೊತ್ತು ಪೊಲೀಸ್ ತಪಾಸಣೆ ಇರಲ್ಲ!

ಚಿಕ್ಕಮಗಳೂರು : 5 ದಿನಗಳ ಬಳಿಕ ಮೂವರಲ್ಲಿ ಕೋವಿಡ್ ಪಾಸಿಟಿವ್

ಚಿಕ್ಕಮಗಳೂರು : 5 ದಿನಗಳ ಬಳಿಕ ಮೂವರಲ್ಲಿ ಕೋವಿಡ್ ಪಾಸಿಟಿವ್

ಕಲಬುರಗಿಯಲ್ಲಿ ಕೋವಿಡ್ ಮಹಾ ಸ್ಫೋಟ: ಒಂದೇ ದಿನ 28 ಜನರಿಗೆ ಮಹಾಮಾರಿ‌ ದೃಢ

ಕಲಬುರಗಿಯಲ್ಲಿ ಕೋವಿಡ್ ಮಹಾ ಸ್ಫೋಟ: ಒಂದೇ ದಿನ 28 ಜನರಿಗೆ ಮಹಾಮಾರಿ‌ ದೃಢ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

nooru praka

ಹಾಸನ: ಶತಕ ದಾಟಿದ ಕೋವಿಡ್‌ 19 ಸೋಂಕು

sankramika

ಸಾಂಕ್ರಾಮಿಕ ರೋಗ ಹರಡದಂತೆ ಜಾಗೃತಿ ಮೂಡಿಸಿ

raste-abhi-hsn

ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಚಾಲನೆ

kobbarige

ಕೊಬ್ಬರಿಗೆ 15 ಸಾವಿರ ರೂ. ಬೆಂಬಲ ಬೆಲೆ ನೀಡಿ

saniha son

ಹಾಸನ: ಶತಕದ ಸನಿಹ ಸೋಂಕಿತರು

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

ಬೇಸಿಗೆಯಲ್ಲೂ ನೀರಿಗಿಲ್ಲ ಕೊರತೆ

ಬೇಸಿಗೆಯಲ್ಲೂ ನೀರಿಗಿಲ್ಲ ಕೊರತೆ

27-May-13

ಕೋವಿಡ್ ಸೋಂಕಿತ ಕಾರ್ಮಿಕರಿಗೆ ಉತ್ತಮ ಚಿಕಿತ್ಸೆ : ಡಿಎಚ್‌ಒ

27-May-12

ಸೀಲ್‌ಡೌನ್‌ ಪ್ರದೇಶದ ಜನರಿಗೆ ದಿನಸಿ ವಿತರಣೆ

true-caller

4.75ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್ ನಲ್ಲಿ ಲೀಕ್? ಟ್ರೂಕಾಲರ್ ಹೇಳಿದ್ದೇನು?

ವಲಸೆ ಕಾರ್ಮಿಕರ ಕರುಣಾಜನಕ ಕಥೆ: ಅಮ್ಮಾ ಎದ್ದೇಳು… ತಾಯಿಯ ಶವದ ಬಳಿ ಮಗುವಿನ ಆಟ

ವಲಸೆ ಕಾರ್ಮಿಕರ ಕರುಣಾಜನಕ ಕಥೆ: ಅಮ್ಮಾ ಎದ್ದೇಳು… ತಾಯಿಯ ಶವದ ಬಳಿ ಮಗುವಿನ ಆಟ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.