ಮಾಹಿತಿ ನೀಡದೇ ಕಸ್ತೂರಿ ರಂಗನ್ ವರದಿ ಜಾರಿ
ಮಲೆನಾಡಿನಲ್ಲಿ ಭುಗಿಲೆದ್ದ ಆಕ್ರೋಶ , ಮಾಹಿತಿ ನೀಡುವವರೆಗೂ ವರದಿ ಜಾರಿಗೆ ಬಿಡಲ್ಲ
Team Udayavani, Dec 7, 2020, 8:24 PM IST
ಸಕಲೇಶಪುರ: ಪಶ್ಚಿಮಘಟ್ಟ ಪ್ರದೇಶ ಸಂರಕ್ಷಿಸುವ ಕಸ್ತೂರಿ ರಂಗನ್ ವರದಿಯಲ್ಲಿ ತಾಲೂಕಿನ 34 ಗ್ರಾಮ ಸೇರಿಸಲಾಗಿದ್ದು, ಈ ಭಾಗದ ಜನರ ಆತಂಕಕ್ಕೆ ಕಾರಣವಾಗಿದೆ. ಅಲ್ಲದೆ, ಈ ವರದಿ ಜಾರಿಗೆ ವಿರೋಧಿಸಿ ಗ್ರಾಪಂ ಚುನಾವಣೆ ಬಹಿಷ್ಕರಿಸುವ ಮಾತುಗಳು ಗ್ರಾಮಸ್ಥರಿಂದಕೇಳಿ ಬರುತ್ತಿದೆ.ಪಶ್ಚಿಮ ಘಟ್ಟಗಳ ಸೂಕ್ಷ್ಮ ಪ್ರದೇಶಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ವಿಜ್ಞಾನಿ ಡಾ.ಕೆ.ಕಸ್ತೂರಿ ರಂಗನ್ ವರದಿಯನ್ನು ತಯಾರಿ ಮಾಡಿದ್ದು, ಇದರಅನುಷ್ಠಾನಕ್ಕೆ ಕೇಂದ್ರ ಪರಿಸರ ಸಚಿವಾಲಯ ಮುಂದಾಗಿದೆ.
ಹೊಸ ಅಭಿವೃದ್ಧಿ ಕಾರ್ಯಗಳನ್ನು ಪಶ್ಚಿಮ ಘಟ್ಟದಲ್ಲಿ ಮಾಡಬಾರದು ಎಂದು ಈ ವರದಿ ಪ್ರಮುಖವಾಗಿ ಹೇಳಿದೆ. ಯೋಜನೆಗೆ ಒಳಪಡುವ ರಾಜ್ಯ, ವ್ಯಾಪ್ತಿ: ಪರಿಸರ ಸೂಕ್ಷ್ಮ ವ್ಯಾಪ್ತಿಯಲ್ಲಿಗುಜರಾತ್‌ನಲ್ಲಿ448 ಚದರಕಿ.ಮೀ., ಮಹಾರಾಷ್ಟ್ರ ರಾಜ್ಯ ವ್ಯಾಪ್ತಿಯಲ್ಲಿ 17,340 ಚದರ ಕಿ.ಮೀ., ಗೋವಾವ್ಯಾಪ್ತಿಯಲ್ಲಿ1,461 ಚದರ ಕಿ.ಮೀ., ಕೇರಳ ರಾಜ್ಯ ವ್ಯಾಪ್ತಿಯಲ್ಲಿ 9993 ಚದರ ಕಿ.ಮೀ., ತಮಿಳುನಾಡು ರಾಜ್ಯ ವ್ಯಾಪ್ತಿಯಲ್ಲಿ 6914 ಚದರ ಕಿ.ಮೀ. ಬಂದರೆ, ಕರ್ನಾಟಕ ರಾಜ್ಯವ್ಯಾಪ್ತಿಯಲ್ಲಿ ಅತ್ಯಧಿಕ ಅಂದರೆ 20,668 ಚದರ ಕಿ.ಮೀ. ಬರುತ್ತಿದೆ. ಅದರಲ್ಲಿ ತಾಲೂಕಿನಲ್ಲಿ ಒಟ್ಟು34 ಗ್ರಾಮಗಳನ್ನು ಈ ವರದಿ ವ್ಯಾಪ್ತಿಯಲ್ಲಿ ಸೇರ್ಪಡೆ ಮಾಡಲಾಗುತ್ತಿದೆ.
ಗ್ರಾಮಸ್ಥರಲ್ಲಿ ಆತಂಕ: ಯೋಜನೆ ವ್ಯಾಪ್ತಿಯಲ್ಲಿ ಈ ಗ್ರಾಮಗಳು ಸೇರಿಕೊಂಡರೆ ಗಣಿಗಾರಿಕೆ, ಮರಳು ಗಾರಿಕೆ, ಪರಿಸರ ವಿರೋಧಿ ಕೈಗಾರಿಕೆ, ಜಲವಿದ್ಯುತ್‌ಯೋಜನೆಗಳಿಗೆ ನಿಷೇಧ ಇರುತ್ತದೆ. ಜೊತೆಗೆರಸಾಯನಿಕ ಗೊಬ್ಬರ, ಕೀಟನಾಶಗಳು ಬಳಸ ಬಾರದು, ಟಿಂಬರ್‌ಗಾಗಿ ಮರ ಕಡಿಯುವುದನ್ನುನಿಷೇಧಿಸಲಾಗಿದೆ. ಇನ್ನು ಹಲವಾರು ಅಂಶಗಳು ಈ ವರದಿಯಲ್ಲಿದ್ದು, ಬೆಳೆಗಾರರು ಹಾಗೂ ಗ್ರಾಮಸ್ಥರ ಆತಂಕಕ್ಕೆಕಾರಣವಾಗಿದೆ.
ಉಪಗ್ರಹ ಸರ್ವೆ ಬೇಡ: ವರದಿಯಲ್ಲಿ ಕೇವಲ ತಾಲೂಕಿನ 34 ಗ್ರಾಮಗಳು ಸೇರ್ಪಡೆಯಾಗುತ್ತ ದೆಂದು ಹೇಳಲಾಗುತ್ತಿದೆ. ಆದರೆ, ಇದರವಿಸ್ತೀರ್ಣದ ಬಗ್ಗೆ ಯಾವುದೇ ಮಾಹಿತಿ ಇಲ್ಲ.ಉಪಗ್ರಹದ ಮೂಲಕ ಸರ್ವೆ ಮಾಡಲಾಗಿರು ವುದರಿಂದ ವಾಸಸ್ಥಳಗಳೂ ಹಸಿರು ವಲಯದಲ್ಲೇಕಂಡು ಬರುತ್ತದೆ. ಈ ಹಿನ್ನೆಲೆಯಲ್ಲಿ ಉಪಗ್ರಹ ಸರ್ವೆ ಬದಲು, ಸಾಮಾನ್ಯ ಸರ್ವೆ ಮಾಡಬೇಕೆಂಬ ಒತ್ತಾಯಕೇಳಿ ಬರುತ್ತಿದೆ.
ಬಹುತೇಕ ಗ್ರಾಮಗಳಲ್ಲಿ ಶಾಲೆಗಳು, ಆಸ್ಪತ್ರೆಗಳು, ಮನೆಗಳು ಸಹ ಸರ್ಕಾರಿ ಜಾಗದಲ್ಲಿದ್ದು, ಇದನ್ನು ಏನು ಮಾಡಲಾಗುತ್ತದೆಂಬ ಮಾಹಿತಿ ಸಹ ಇಲ್ಲ. ಈ ಹಿನ್ನೆಲೆಯಲ್ಲಿ ಕೇಂದ್ರಕ್ಕೆ ಕೇರಳ ಸರ್ಕಾರ ಮಾಹಿತಿ ನೀಡಿದ್ದರಿಂದ 2500 ಚದರ ಮೀಟರ್‌ಗೂ ಹೆಚ್ಚು ಪ್ರದೇಶವನ್ನು ವರದಿಯಿಂದ ಕೈ ಬಿಡಲಾಗಿದೆ.ಆದರೆ, ಕರ್ನಾಟಕದಲ್ಲಿ ಈ ರೀತಿಯ ಯಾವುದೇ ಪ್ರಯತ್ನ ನಡೆದಿಲ್ಲ.
ಪ್ರವಾಸೋದ್ಯಮಕ್ಕೆ ಪೆಟ್ಟು: ಯೋಜನೆ ವರದಿ ಸಹ ಇಂಗ್ಲಿಷ್‌ನಲ್ಲಿದ್ದು, ಇದನ್ನು ಕೂಡಲೇ ಕನ್ನಡಕ್ಕೆ ತರ್ಜುಮೆ ಮಾಡಿಅಧಿಕಾರಿಗಳು ಗ್ರಾಮಸ್ಥರಿಗೆ ಮಾಹಿತಿ ನೀಡುವ ಕೆಲಸ ಆರಂಭಿಸಬೇಕಾಗಿದೆ.ಕೆಂಪು, ಹಸಿರು, ಕೇಸರಿ ವಲಯಗಳೆಂದು ವಿಂಗಡಿಸಲಾಗುತ್ತಿದ್ದು, ಈ ಕುರಿತು ಚಿಂತನೆ ಮಾಡಬೇಕಾಗಿದೆ. ತಾಲೂಕಿನಪಶ್ಚಿಮಘಟ್ಟಗಳ ತಪ್ಪಲುಗಳಲ್ಲಿ ರೆಸಾರ್ಟ್‌ಹಾಗೂ ಹೋಂಸ್ಟೇಗಳ ಸಂಖ್ಯೆ ಹೆಚ್ಚಿದೆ. ಯೋಜನೆ ವರದಿ ಅನುಷ್ಠಾನಗೊಂಡರೆ ಪ್ರವಾಸೋದ್ಯಮಕ್ಕೂತೀವ್ರ ಪೆಟ್ಟು ಬೀಳುವ ಸಾಧ್ಯತೆಯಿದೆ.
ನಾಮಪತ್ರ ಸಲ್ಲಿಸದಂತೆ ಮನವಿ: ಪರಿಸರ ಸೂಕ್ಷ್ಮ ವಲಯ ಯೋಜನೆ ಕುರಿತು ಜನರಿಗೆ ಯಾವುದೇ ಮಾಹಿತಿ ನೀಡದೆ ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದ್ದಕ್ಕೆ ಕೇರಳದಲ್ಲಿ ಯೋಜನಾ ವ್ಯಾಪ್ತಿಯ ಜನರ ಆಕ್ರೋಶ ಭುಗಿಲೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಹಾನುಬಾಳ್ ಹೋಬಳಿ ಕಸ್ತೂರಿ ರಂಗನ್ ವರದಿ ವಿರೋಧಿ ಹೋರಾಟ ಸಮಿತಿಯುಭಾನುವಾರ ಹಾನುಬಾಳ್‌ನಲ್ಲಿ ಬೆಳೆಗಾರರ ಸಭೆಕರೆದಿತ್ತು. ಮುಂಬರುವ ಗ್ರಾಪಂ ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿರುವ ಅಕಾಂಕ್ಷಿಗಳಿಗೆ ನಾಮಪತ್ರ ಸಲ್ಲಿಸಿದಂತೆ ಮನವೊಲಿಸಲು ಸಿದ್ಧತೆ ನಡೆಸಲಾಗಿದೆ.ಪ್ರಥಮ ಹಂತದಲ್ಲಿ ಹಾನುಬಾಳ್, ಹೆತ್ತೂರು,ಹೆಗ್ಗದ್ದೆ ಗ್ರಾಪಂ ಮುಂಭಾಗ ಸೋಮವಾರಪ್ರತಿಭಟನೆ ಮಾಡಲು ಯೋಜಿಸಲಾಗಿದೆ. ಒಟ್ಟಾರೆಯಾಗಿ ಅಧಿಕಾರಿಗಳು ಕಸ್ತೂರಿ ರಂಗನ್ ಯೋಜನೆಕುರಿತು ಸರಿಯಾದ ಮಾಹಿತಿ ನೀಡದ ಕಾರಣ, ಮಲೆನಾಡಿನ ಕೆಲವು ಭಾಗಗಳ ಜನತೆ ಬೀದಿ ಗಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.
Ad
ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444