
ಹಳ್ಳ ಹಿಡಿದ ಕೃಷಿ ಯಂತ್ರಧಾರೆ ಯೋಜನೆ
Team Udayavani, Jan 24, 2023, 2:58 PM IST

ಆಲೂರು: ದೂಳು ತುಂಬಿಕೊಂಡು, ಗಿಡ ಗಂಟಿಗಳ ಮಧ್ಯೆ ನಿಂತಿರುವ ಟ್ರ್ಯಾಕ್ಟರ್, ಟಿಲ್ಲರ್, ಒಕ್ಕಣೆ ಯಂತ್ರ, ಎಲ್ಲೆಂದರಲ್ಲೇ ಬಿದ್ದು ತುಕ್ಕು ಹಿಡಿಯುತ್ತಿರುವ ಕಲ್ಟಿವೇಟರ್‌ಗಳು ಈ ದೃಶ್ಯ ತಾಲೂಕಿನ ಕೆ.ಹೊಸಕೋಟೆ ಹೋಬಳಿ ಕೇಂದ್ರದಲ್ಲಿನ ಕೃಷಿ ಉಪಕರಣ ಗಳ ಬಾಡಿಗೆ ಸೇವಾ ಕೇಂದ್ರದಲ್ಲಿ ಕಂಡು ಬಂದಿದೆ.
ರೈತರಿಗೆ ಉಪಯೋಗ ಆಗಬೇಕಿದ್ದ ಕೋಟ್ಯಂತರ ರೂ.ನ ಯಂತ್ರಗಳು ಈಗ ಪಾಳು ಬಿದ್ದಿವೆ. ಇದರ ನಿರ್ವಹಣೆ ಹೊಣೆ ಹೊತ್ತಿರುವ ಅಧಿಕಾರಿಗಳು, ಚಿತ್ರ ದುರ್ಗ ಜಿಲ್ಲೆ ವರ್ಷ ಅಸೋಸಿಯೇಷನ್ ಖಾಸಗಿ ಸಂಸ್ಥೆಯ ನಿರ್ಲಕ್ಷ್ಯದಿಂದಾಗಿ ಕೃಷಿ ಯಂತ್ರಧಾರೆ ಯೋಜನೆ ಹಳ್ಳ ಹಿಡಿದಿದೆ.
ಸಣ್ಣ ಮತ್ತು ಮಧ್ಯಮ ವರ್ಗದ ರೈತರು ಕೃಷಿ ಚಟುವಟಿಕೆಗೆ ಅತ್ಯಾಧುನಿಕ ಯಂತ್ರಗಳನ್ನು ಖರೀದಿ ಸಲು ಸಾಧ್ಯವಿಲ್ಲ. ಹೀಗಾಗಿ, ಕಡಿಮೆ ದರದಲ್ಲಿ ಯಂತ್ರೋ ಪಕರಣಗಳನ್ನು ರೈತರಿಗೆ ಬಾಡಿಗೆ ನೀಡುವ ಉದ್ದೇಶದಿಂದ ಸರ್ಕಾರ 2014ರಲ್ಲೇ ಕೃಷಿ ಯಂತ್ರ ಧಾರೆ ಎಂಬ ಮಹತ್ವಾಕಾಂಕ್ಷೆಯ ಯೋಜನೆ ಆರಂಭಿಸಿತ್ತು.
ಮಧ್ಯಮ ಹಾಗೂ ಬಡ ಕುಟುಂಬದ ರೈತರಿಗೆ ಅನುಕೂಲ ಮಾಡುವ ಸಲುವಾಗಿ ತಾಲೂಕಿನ ಪ್ರತಿ ಹೋಬಳಿ ಮಟ್ಟದಲ್ಲಿ ಕೃಷಿ ಯಂತ್ರಧಾರೆ ಕೇಂದ್ರ ಆರಂಭಗೊಂಡು, ಎರಡ್ಮೂರು ವರ್ಷ ಕಳೆದರೂ, ಟೆಂಡರ್ ಪಡೆದ ಖಾಸಗಿ ಸಂಸ್ಥೆ ಸರಿಯಾಗಿ ನಿರ್ವಹಣೆ ಮಾಡದಿರುವುದರಿಂದ ವರ್ಷದಲ್ಲೇ ಮುಚ್ಚಿ ಹೋಗಿದೆ. ಅಲ್ಲಿರುವ ಕೃಷಿ ಉಪಕರಣಗಳು ತುಕ್ಕು ಹಿಡಿದು ಉಪಯೋಗಕ್ಕೆ ಬಾರದಂತಾಗಿವೆ. ಇದಕ್ಕೆ ಸಂಸ್ಥೆಯ ನಿರ್ಲಕ್ಷ್ಯವೇ ಕಾರಣ ಎಂದು ಹೇಳುವ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದರು.
ತುಕ್ಕು ಹಿಡಿಯುತ್ತಿವೆ ಯಂತ್ರಗಳು: ಕರವೇ ಹೋಬಳಿ ಅಧ್ಯಕ್ಷ ವಿವೇಕ್ ವೈದ್ಯನಾಥ್ ಮಾತನಾಡಿ, ರೈತ ರಿಗೆ ಕೃಷಿ ಯಂತ್ರಗಳನ್ನು ಕಡಿಮೆ ದರದಲ್ಲಿ ಬಾಡಿಗೆ ನೀಡುವ ಸಲುವಾಗಿ ತಾಲೂ ಕಿನ ಕೆ.ಹೊಸಕೋಟೆ ಗ್ರಾಮದಲ್ಲಿ ಬಾಡಿಗೆ ಯಂತ್ರ ಗಳ ಕೇಂದ್ರ ತೆರೆಯ ಲಾಗಿದೆ. ಆದರೆ, ನಿರ್ವ ಹಣೆ ಹೊಣೆ ಹೊತ್ತಿರುವ ಸಂಸ್ಥೆಯವರ ನಿರ್ಲಕ್ಷ್ಯ ದಿಂದ ರೈತರಿಗೆ ಉಪಯೋಗ ಆಗಬೇಕಿದ್ದ ಯಂತ್ರ ಗಳು ಕಚೇರಿ ಮುಂಭಾಗದಲ್ಲಿ ತುಕ್ಕು ಹಿಡಿಯುತ್ತಿವೆ.ಇವರಿಗೆ ಯಾರು ಹೇಳು ವವರು, ಕೇಳುವವರು ಇಲ್ಲ ದಂತಾಗಿದೆ. ಜನರ ತೆರಿಗೆ ಹಣ ಲೂಟಿ ಮಾಡುತ್ತಿದ್ದಾರೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಂಸ್ಥೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಒತ್ತಾಯಿಸಿದರು.
ರೈತರಿಗೆ ಕಡಿಮೆ ದರದಲ್ಲಿ ಬಾಡಿಗೆ ನೀಡುವ ಸಲುವಾಗಿ ಕೃಷಿ ಯಂತ್ರಗಳ ನಿರ್ವಹಣೆ, ಪೂರೈಕೆ ಹೊಣೆ ಚಿತ್ರದುರ್ಗ ಜಿಲ್ಲೆ ವರ್ಷ ಅಸೋಸಿಯೇಷನ್ ಸಂಸ್ಥೆ ವಹಿಸಿಕೊಂಡಿದೆ. ಸಂಸ್ಥೆ ಸರಿಯಾಗಿ ನಿರ್ವಹಿಸದ ಕಾರಣ, ಎರಡ್ಮೂರು ನೋಟಿಸ್ ನೀಡಲಾಗಿದೆ. ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲು ಸರ್ಕಾರದ ಗಮನಕ್ಕೆ ತರಲಾಗಿದೆ. ವಾರದ ಹಿಂದೆ ನಡೆದ ಜಿಪಂ ಸಭೆಯಲ್ಲಿ ಸಿಇಒ ಕೂಡ ಸಂಸ್ಥೆಯಿಂದ ಸಮಜಾಯಿಸಿ ಕೇಳಿದ್ದಾರೆ. ಸಂಸ್ಥೆ ವಿರುದ್ಧ ಸದ್ಯದಲ್ಲಿ ಕ್ರಮ ಕೈಗೊಳ್ಳುವ ನಿರೀಕ್ಷೆ ಇದೆ. – ಮನು, ಕೃಷಿ ಇಲಾಖೆ ಸಹಾಯಕ ನಿರ್ದೇಶಕ.
ರೈತರ ಅನುಕೂಲಕ್ಕಾಗಿ ಸರ್ಕಾರ ಸಾಕಷ್ಟು ಅನುದಾನ ಬಿಡುಗಡೆ ಮಾಡಿದೆ. ಅಸಮರ್ಥ ಅಧಿಕಾರಿ ಗಳಿಂದ ಸರ್ಕಾರದ ಯೋಜನೆ ಗಳು ಹಳ್ಳ ಹಿಡಿದಿವೆ. ಲಕ್ಷಾಂತರ ರೂ.ನ ಯಂತ್ರಗಳು ತುಕ್ಕು ಹಿಡಿಯು ತ್ತಿವೆ. ಬಾಡಿಗೆ ಪಡೆದ ಮಾಲಿಕರಿಗೂ ಸರಿಯಾಗಿ ಹಣ ನೀಡದೆ ವಂಚಿಸ ಲಾಗುತ್ತಿದೆ. ನಿರ್ವಹಣೆ ಮಾಡದ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಿ. – ಧರ್ಮಪ್ಪ, ರೈತ, ಕಾಡ್ಲೂರು ಗ್ರಾಮ.
– ಕುಮಾರಸ್ವಾಮಿ ಟಿ.ತಿಮ್ಮನಹಳ್ಳಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ
