ಕನ್ನಡದ ಕಂಪು ಸಾರುವ ಕೆಎಸ್ಸಾರ್ಟಿಸಿ ಬಸ್‌

Team Udayavani, Nov 4, 2019, 4:48 PM IST

ರಾಮನಾಥಪುರ: ನವೆಂಬರ್‌ ತಿಂಗಳಲ್ಲಿ ಕನ್ನಡದ ಪ್ರೇಮ ಮೆರೆಯುವವರೇ ಹೆಚ್ಚು. ಆದರೆ ವರ್ಷವೆಲ್ಲಾ ಕನ್ನಡ, ಕನ್ನಡ ನಾಡಿನ ಹಿರಿಮೆಯನ್ನು ಪಸರಿಸುವ ಬಸ್‌ಚಾಲಕ, ನಿರ್ವಾಹಕರು ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಅರಕಲಗೂಡು ತಾಲೂಕು ರಾಮನಾಥಪುರದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಡಿಪೋ ಚಾಲಕ ಬಾಬು ಮತ್ತು ನಿರ್ವಾಹಕ ನಟನಾಯ್ಕ ಅವರು ತಾವು ಕರ್ತವ್ಯ ನಿರ್ವಹಿಸುವ ರಾಮನಾಥಪುರ – ಮೈಸೂರು ಮಾರ್ಗದ ಬಸ್‌ನ್ನು ಕನ್ನಡದ ತೇರಿನಂತೆ ಸಿಂಗರಿಸಿ ಕನ್ನಡದ ಕಂಪನ್ನು ಹರಡುತ್ತಿದ್ದಾರೆ. ಪ್ರತಿದಿನ ರಾಮನಾಥಪುರದಿಂದ ರುದ್ರ ಪಟ್ಟಣದ ಮಾರ್ಗವಾಗಿ ಮೈಸೂರಿಗೆ ಸಂಚರಿ ಸುವ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕನ್ನಡ ನಾಡಿನ ಹಿರಿಮೆ ಸಾರುವ ಚಿತ್ರಗಳು, ಕವಿ ಪುಂಗವರ ಭಾವಚಿತ್ರಗಳು ಹಾಗೂ ನಾಡು, ನುಡಿ ಉಳಿ ಸುವ ಸಂದೇಶಗಳಿಂದಲೇ ಬಸ್‌ನ್ನು ಅಲಂಕರಿಸಿ ಕನ್ನಡಾಭಿಮಾನ ಮೆರೆಯುತ್ತಿದ್ದಾರೆ.

ಕನ್ನಡ ತೇರು ಕಿರು ಪರಿಚಯ: ಬಸ್‌ನ ಒಳ ಭಾಗದ ಆಸನಗಳ ಸುತ್ತ ಚಾಲಕ ಬಾಬು ಹಾಗೂ ನಿರ್ವಾಹಕ ನಟನಾಯ್ಕ ಅವರು ತಮ್ಮ ಬಸ್‌ಗೆ ಕನ್ನಡದ ತೇರು ಹಾಗೂ ಸ್ವತ್ಛ ಭಾರತ ಎಂದು ನಾಮಕರಣ ಮಾಡಿದ್ದಾರೆ. ಬಸ್‌ನಲ್ಲಿ ನಾಡದೇವಿ ಭುವನೇಶ್ವರಿ, ಕಾವೇರಿ ಮಾತೆಯ ಭಾವಚಿತ್ರ, ಕನ್ನಡದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತರು, ಸಂಗೀತ ಗಾರರು, ಕವಿಗಳು, ದಾರ್ಶನಿಕರ ಭಾವಚಿತ್ರಗಳನ್ನು ಅಳವಡಿಸಿದ್ದಾರೆ. ಜಗಜ್ಯೋತಿ ಬಸವಣ್ಣ, ಪಂಪ, ರನ್ನ, ಜನ್ನ, ಜೇಡರದಾಸಿಮಯ್ಯ, ಅಲ್ಲಮಪ್ರಭು, ಕಿತ್ತೂರು ಚನ್ನಮ್ಮ, ಒನಕೆ ಓಬ್ಬವ್ವ, ಟಿಪ್ಪುಸುಲ್ತಾನ್‌, ಕೇಂಪೇಗೌಡ, ರಾಷ್ಟ್ರ ಕವಿ ಕುವೆಂಪು, ಸಂಧಾನ ಶಿಲ್ಪಿ ಡಾ ಬಿ.ಅರ್‌. ಅಂಬೇಡ್ಕರ್‌, ಸರ್‌ ಎಂ. ವಿಶ್ವೇಶ್ವರಯ್ಯ, ಸ್ವಾಮಿ ವಿವೇಕಾನಂದ, ಡಾ.ಬಿ.ಆರ್‌.ಅಂಬೇಡ್ಕರ್‌, ಚಿತ್ರನಟರಾದ ಡಾ. ರಾಜಕುಮಾರ್‌, ವಿಷ್ಣುವರ್ಧನ್‌, ಸಿದ್ಧ ಗಂಗಾ ಶ್ರೀ ಲಿಂ.ಶಿವಕುಮಾರ ಮಹಾ ಸ್ವಾಮೀಜಿ, ಧರ್ಮಸ್ಥಳ ವೀರೇಂದ್ರಹೆಗ್ಗಡೆ, ಸಂಗೀತ ಗ್ರಾಮ ರುದ್ರಪಟ್ಟಣದ ಸಪ್ತ ಸ್ವರ ದೇವತಾ ಮಂದಿರ ಸೇರಿದಂತೆ ಕನ್ನಡ ನಾಡು-ನುಡಿ ಶ್ರಮಿಸಿದವರ ಭಾವಚಿತ್ರ ಹಾಗೂ ಅವರ ಕಿರುಪರಿಚಯ ಮಾಹಿತಿಗಳು ಬಸ್‌ನ ಒಳಭಾಗದಲ್ಲಿ ತುಂಬಿ ಹೋಗಿವೆ.

ಸ್ವಾತಂತ್ರ್ಯ ಹೋರಾಟಗಾರರಾದ ಝಾನ್ಸಿ ರಾಣಿ ಲಕ್ಷ್ಮಿಭಾಯಿ, ಮಹಾತ್ಮಗಾಂಧಿ, ನೆಹರು, ವಲ್ಲಭಬಾಯಿ ಪಟೇಲ್‌ ಮತ್ತಿತರರ, ಭಾವಚಿತ್ರಗಳನ್ನು ಹಾಕಿ ಭಾವಚಿತ್ರದ ಪಕ್ಕದಲ್ಲಿ ನಾಯಕರ ಸಾಧನೆ, ಜಾತ್ಯತೀತ ನಿಲುವುಗಳ ಮಾಹಿತಿಯನ್ನು ಉಲ್ಲೇಖೀಸುವ ಮಾಹಿತಿ ಬಸ್‌ನ ಒಳ ಕವಚವನ್ನು ಆವರಿಸಿದ್ದು, ಈ ಬಸ್‌ನಲ್ಲಿ ಸಂಚರಿಸುವವರಿಗೆ ಕನ್ನಡ ನಾಡು, ಭಾರತ ಇತಿಹಾಸದ ಕಿರು ಪರಿಚಯವೇ ಆಗುತ್ತದೆ. ಚಾಲಕ ಬಾಬು ಕಳೆದ 28 ವರ್ಷಗಳ ಅಪಘಾತ ರಹಿಸತ ಸೇವೆಗಾಗಿ ಬೆಳ್ಳಿ ಪದಕ ಪಡೆದುಕೊಂಡಿದ್ದಾರೆ.

ಶ್ಲಾಘನೀಯ ಕಾರ್ಯ: ವರ್ಷವಿಡೀ ಬಸ್‌ನ್ನು ಕನ್ನಡಮಯವಾಗಿ ಮಾಡಿರುವ ಉತ್ತಮ ಬಸ್‌ ಚಾಲಕ ಚಾಲಕ ಬಾಬು, ಹಾಗೂ ನಿರ್ವಾಹಕರಾದ, ನಟನಾಯ್ಕ, ಗೋವಿಂದಶೆಟ್ಟಿ ಅವರು ಕರ್ತವ್ಯದ ಒತ್ತಡದ ನಡುವೆಯೂ ರಾಜ್ಯ, ರಾಷ್ಟ್ರಭಿಮಾನ ಮೆರೆಯುತ್ತಿರು ವುದು ಶ್ಲಾಘನೀಯ ಎಂದು ರಾಮನಾಥಪುರ ಡಿಪೋ ವ್ಯವಸ್ಥಾಪಕ ದೇವರಾಜೇಗೌಡ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • „ಡಿ.ಎಸ್‌. ಕೊಪ್ಪದ ಸವದತ್ತಿ: ಪಟ್ಟಣದಲ್ಲಿ ಟ್ರಾಫಿಕ್‌ ಸಮಸ್ಯೆಗೆ ಕಡಿವಾಣ ಹಾಕಲು ಏಕಮುಖೀ ಸಂಚಾರ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಆದರೆ ಸಾರಿಗೆ ಬಸ್‌ಗಳು...

  • ಜಮಖಂಡಿ: ನಗರದಲ್ಲಿ ಮಾವಾ ಮಾರಾಟ ದಂಧೆ ಜೋರಾಗಿದೆ. ತಂಬಾಕು, ಅಡಿಕೆ ಉಪಯೋಗಿಸಿ ಮನೆಯಲ್ಲಿ ಮಾವಾ ಸಿದ್ಧಗೊಳಿಸಿ ಮಾರಾಟ ಮಾಡುವ ದಂಧೆ ರಾಜಾರೋಷವಾಗಿ ನಡೆಯುತ್ತಿದ್ದು,...

  • ಬಸವರಾಜ ಹೊಂಗಲ್‌ ಧಾರವಾಡ: ಈ ಜಿಲ್ಲೆ ಸಹಕಾರಿ ಕ್ಷೇತ್ರಕ್ಕೆ ಕೊಟ್ಟ ಕೊಡುಗೆಯನ್ನು ದೇಶವಷ್ಟೇ ಅಲ್ಲ ಏಷಿಯಾ ಖಂಡವೇ ಸ್ಮರಿಸುತ್ತದೆ. ಇಲ್ಲಿ ಸರ್ಕಾರಕ್ಕೂ ಮೊದಲೇ...

  • ಇಂಧೋರ್: ಭಾರತದ ವೇಗಿಗಳ ಬಿಗು ದಾಳಿಗೆ ನಲುಗಿದ ಬಾಂಗ್ಲಾದೇಶ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 150 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ. ಮುಶ್ಫಿಕರ್...

  • ಚಿಕ್ಕಮಗಳೂರು: ದೌರ್ಜನ್ಯಕ್ಕೆ ಒಳಗಾದ ಮಹಿಳೆಯರು ಮತ್ತು ಮಕ್ಕಳಿಗೆ ಸಾಂತ್ವನ ಹೇಳುವುದರೊಂದಿಗೆ ಅವರಿಗೆ ಅಗತ್ಯ ಕಾನೂನಡಿ ನೆರವು, ಚಿಕಿತ್ಸೆ ಹಾಗೂ ಪರಿಹಾರ ಕಲ್ಪಿಸಲು...