ಸಂಸದರ ಮಾತು ಅವರ ಸಂಸ್ಕಾರವನ್ನು ತೋರಿಸಿದೆ


Team Udayavani, Sep 25, 2022, 4:20 PM IST

ಸಂಸದರ ಮಾತು ಅವರ ಸಂಸ್ಕಾರವನ್ನು ತೋರಿಸಿದೆ

ಹಾಸನ: ಸಂಸದ ಪ್ರಜ್ವಲ್‌ ರೇವಣ್ಣ ಅವರು ನನ್ನ ಬಗ್ಗೆ ಏಕವಚನದಲ್ಲಿ ವಾಗ್ಧಾಳಿ ನಡೆಸಿರುವುದು ಹತಾಶೆಯ ಪ್ರತೀಕ ಎಂದು ಹಾಸನ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಜೆ.ಗೌಡ ಅವರು ತಿರುಗೇಟು ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಸದ ಪ್ರಜ್ವಲ್‌ ಅವರು ವಯಸ್ಸಿನಲ್ಲಿ ನನಗಿಂತ ಚಿಕ್ಕವರು. ಒಬ್ಬ ಶಾಸಕನ ಬಗ್ಗೆ ಅವರಾಡಿರುವ ಮಾತುಗಳು ಅವರ ಸಂಸ್ಕಾರಕ್ಕೆ ಸಾಕ್ಷಿಯಾಗಿವೆ. ಸಾರ್ವಜನಿಕವಾಗಿ ಹೇಗೆ ಮಾತನಾಡಬೇಕು ಎಂಬ ಬಗ್ಗೆ ಅವರಿಗೆ ಒಂದು ಕ್ಲಾಸ್‌ ತೆಗೆದುಕೊಂಡರೆ ಒಳ್ಳೆಯದು. ಬಹುಶಃ ಮುಂದಿನ ದಿನಗಳಲ್ಲಿ ಸಾರ್ವಜನಿಕರು ಅವರಿಗೆ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಪ್ರಬುದ್ಧತೆ ಇಲ್ಲ: ನನಗೆ ಹಾಸನ ಜಿಲ್ಲೆಯ ಜನರು ನನ್ನ ಸೋಲಿಸಲು ಕಾಯುತ್ತಿದ್ದಾರೆ ಎಂದು ಸಂಸದರು ಹೇಳಿ ದ್ದಾರೆ. ಆದರೆ, ನಾನು ಚುನಾವಣೆಗೆ ನಿಲ್ಲುವುದು ಹಾಸನ ವಿಧಾನಸಭಾ ಕ್ಷೇತ್ರದಲ್ಲಿ. ಓಟು ಹಾಕು ವವರು ಹಾಸನ ಕ್ಷೇತ್ರದ ಜನತೆ. ಜಿಲ್ಲೆಯ ಜನರಲ್ಲ. ಆ ಬಗ್ಗೆಯೂ ಅವರಿಗೆ ಮಾಹಿತಿ ಇಲ್ಲ. ಪ್ರಬುದ್ಧತೆ ಇಲ್ಲದೆ ತಾತನ ಹೆಸರು ಹೇಳಿಕೊಂಡು ರಾಜಕಾರಣ ಮಾಡಲು ಬಂದರೆ ಹೀಗೆ ಆಗುವುದು ಎಂದು ವ್ಯಂಗ್ಯವಾಡಿದರು.

ಪಿಕ್ಚರ್‌ ಇನ್ನೂ ಪ್ಲೇ ಆಗಿಲ್ಲ: 2023ರ ಸೆಮಿಫೈನಲ್‌ ನಲ್ಲಿ ನಾನು ಹಾಸನ ಕ್ಷೇತ್ರದಲ್ಲಿ ಗೆಲ್ತಿàನಿ. ಪಕ್ಷದ ಕ್ಷೇತ್ರಗಳಲ್ಲೂ ಬಿಜೆಪಿ ಗೆಲ್ಲಿ ಸ್ತೀನಿ. ಹಿಂದೆ ನಡೆದ ಎಂಪಿ ಎಲೆಕ್ಷನ್‌ನಲ್ಲಿ ಕಾಂಗ್ರೆಸ್‌ನವರ ಕಾಲು ಹಿಡಿದು ಎಂಪಿ ಆದರು. 2024ರ ಎಂಪಿ ಚುನಾವಣೆಯಲ್ಲಿ 2019ರ ಚುನಾವಣೆ ಪರಿಸ್ಥಿತಿ ಇರಲ್ಲ. ಮೂರೂ ಪಕ್ಷಗಳ ಅಭ್ಯರ್ಥಿ ಇರ್ತಾರೆ. ಆಗ ಪರದೆ ಮೇಲೆ ಪಿಕ್ಚರ್‌ ಹೇಗೆ ತೋರಿಸ್ತೀನಿ ನೋಡಲಿ ಎಂದು ಸವಾಲು ಹಾಕಿದರು.

ಚುನಾವಣೆಗೆ ನಾನು ಸಿದ್ಧ: ನಾನಂತೂ ಚುನಾವಣೆಗೆ ರೆಡಿಯಾಗಿದ್ದೇನೆ. ಇದುವರೆಗೂ ಹಾಸನ ವಿಧಾನಸಭಾ ಕ್ಷೇತ್ರದ ಯಾವುದೇ ಹಳ್ಳಿಗೂ ಹೋಗದ ಸಂಸದರು, ಈಗಲಾದರೂ ಒಮ್ಮೆ ಕ್ಷೇತ್ರವನು ಸುತ್ತಿ ಬರಲಿ. ಇವರು ಸಂಸದರಾದ ಮೇಲೆ ಯಾವುದೇ ಶಾಶ್ವತ ಯೋಜನೆ ಜಿಲ್ಲೆಗಾಗಲಿ ಹಾಸನ ವಿಧಾನಸಭಾ ಕ್ಷೇತ್ರ ಕ್ಕಾಗಲಿ ಮಂಜೂರು ಮಾಡಿಸಿಲ್ಲ ಎಂದು ಆರೋಪಿಸಿದರು.

ಕ್ಷೇತ್ರ ಸುತ್ತಾಡಿದರೆ ಭವಾನಿ ಸ್ಪರ್ಧಿಸಲ್ಲ: ಹಾಸನ ವಿಧಾನಸಭಾ ಕ್ಷೇತ್ರದ ಸ್ಪರ್ಧಾಕಾಂಕ್ಷಿಯಾಗಿರುವ ಭವಾನಿ ರೇವಣ್ಣ ಅವರು ಕ್ಷೇತ್ರದ ಎಲ್ಲ ಹಳ್ಳಿಗಳನ್ನೂ ಸುತ್ತಾಡಿ ಬಂದರೆ, ಕ್ಷೇತ್ರದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ಆಗಿರುವ ಅಭಿವೃದ್ಧಿ, ಕ್ಷೇತ್ರದ ಜನರ ಸ್ಪಂದನೆ ಗೊತ್ತಾಗುತ್ತದೆ. ಆ ಮೇಲೆ ಭವಾನಿ ರೇವಣ್ಣ ಅವರು ಚುನಾವಣೆಗೆ ನಿಲ್ಲೋದಿಲ್ಲ ಎಂದು ಶಾಸಕ ಪ್ರೀತಂ ಜೆ.ಗೌಡ ಅವರು ಟಾಂಗ್‌ ಕೊಟ್ಟರು.

ಹಾಸನ ಕ್ಷೇತ್ರದಲ್ಲಿ ಈಗ ಸಕ್ರಿಯರಾಗಿರುವ ಭವಾನಿ ರೇವಣ್ಣ ಅವರು ಅಭ್ಯರ್ಥಿ ಆದರೆ ನನಗೆ ಸಂತೋಷ. ಅವರು ಸ್ಪರ್ಧೆಗಿಳಿಯುವ ಧೈರ್ಯವನ್ನು ಗಣಪತಿ ಕೊಡಲಿ ಎಂದು ಪ್ರಾರ್ಥನೆ ಮಾಡುವೆ ಎಂದು ವ್ಯಂಗ್ಯವಾಡಿದರು.

ಭವಾನಿ ಅವರಿಗೆ 3 ಸ್ಥಾನ: ವೈಟ್‌ ಪ್ಯಾಂಟ್‌, ವೈಟ್‌ ಶರ್ಟ್‌ ಹಾಕಿಕೊಂಡ ಐದಾರು ಜನರನ್ನು ಜೊತೆಯಲ್ಲಿ ಇಟ್ಟುಕೊಂಡಿರು ವ ಸಂಸದರು ಚುನಾವಣೆ ಗೆಲ್ತಿàನಿ ಎಂಬ ಭ್ರಮೆಯಲ್ಲಿದ್ದಾರೆ. ನನ್ನ ಸವಾಲು ಸ್ವೀಕರಿಸಿ ಹಾಸನ ವಿಧಾನ ಸಭಾ ಕ್ಷೇತ್ರದ ಚುನಾವಣೆಗೆ ಬರಲಿ, ನೋಡೋಣ.ಅವರ ತಾಯಿ ಭವಾನಿ ರೇವಣ್ಣ ಅವರನ್ನು ಕರೆ ತಂದು ನಿಲ್ಲಿಸಿದರೂ ಅವರಿಗೆ ಮೂರನೇ ಸ್ಥಾನವೇ ಗತಿ ಎಂದು ಶಾಸಕ ಪ್ರೀತಂ ಜೆ ಗೌಡ ಹರಿಹಾಯ್ದರು.

ಟಾಪ್ ನ್ಯೂಸ್

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಸಿಗದ ಚಿರತೆ; ತಪ್ಪದ ಆತಂಕ

ಸಿಗದ ಚಿರತೆ; ತಪ್ಪದ ಆತಂಕ

1

ಸೋಮವಾರದ ರಾಶಿ ಫಲ; ವಿದ್ಯಾರ್ಥಿಗಳಿಗೆ, ಉದ್ಯೋಗಸ್ತರಿಗೆ ಉತ್ತಮ ಫ‌ಲಿತಾಂಶ ಸಿಗುವ ಸಮಯ

Kharge

ಕೆಲಸ ಮಾಡಿ; ಇಲ್ಲವೇ ಹುದ್ದೆ ತೊರೆಯಿರಿ: ಮುಖಂಡರಿಗೆ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಸ್ಪಷ್ಟ ಮಾತು

ಎಂಟು ವರ್ಷಗಳಲ್ಲಿ ದೇಗುಲಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಹಸಿ.!

ಎಂಟು ವರ್ಷಗಳಲ್ಲಿ ದೇಗುಲಕ್ಕೆ 400 ಮೆಟ್ಟಿಲು ನಿರ್ಮಿಸಿದ ಸಾಹಸಿ.!

ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್‌.!

ಮೆಟ್ಟಿಲಿನಿಂದ ಜಾರಿ ಬಿದ್ದು ಅನಿಯಂತ್ರಿತ ಮಲವಿಸರ್ಜನೆ ಮಾಡಿಕೊಂಡ ಪುಟಿನ್‌.!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸ್‌ ನಿಲ್ದಾಣದಲ್ಲಿ ದುರ್ನಾತ:ಪ್ರಯಾಣಿಕರಿಗೆ ನಿತ್ಯ ನರಕ

ಬಸ್‌ ನಿಲ್ದಾಣದಲ್ಲಿ ದುರ್ನಾತ:ಪ್ರಯಾಣಿಕರಿಗೆ ನಿತ್ಯ ನರಕ

tdy-18

ಕಾಡಾನೆ ಹಾವಳಿ: ಡಿ.2ರಂದು ಬೃಹತ್‌ ಪ್ರತಿಭಟನೆ

tdy-19

ಚಿರತೆಗಳ ಬಗ್ಗೆ ಎಚ್ಚರವಿರಲಿ, ನಿರ್ಲಕ್ಷ್ಯ ಬೇಡ

ಕೋಡಿಮಠದಲ್ಲಿ ಲಕ್ಷ ದೀಪೋತ್ಸವ ಸಂಪನ್ನ

ಕೋಡಿಮಠದಲ್ಲಿ ಲಕ್ಷ ದೀಪೋತ್ಸವ ಸಂಪನ್ನ

ಕುಡಿಯುವ ನೀರಿಗೆ ಹಾಹಾಕಾರ

ಕುಡಿಯುವ ನೀರಿಗೆ ಹಾಹಾಕಾರ

MUST WATCH

udayavani youtube

ನಾಯಿ ಮರಿ ತರುತ್ತಿದ್ದೀರಾ ? ಈ ಅಂಶವನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಿ | ಬೀಗಲ್ ನಾಯಿ

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

ಹೊಸ ಸೇರ್ಪಡೆ

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಛತ್ತೀಸ್‌ಗಢದಲ್ಲೊಬ್ಬ ರಾಬಿನ್‌ಹುಡ್‌ ಕಳ್ಳ.!

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಡಿಪಿಡಿಪಿ ನಿಬಂಧನೆಗಳಿಂದ ಸ್ಟಾರ್ಟ್‌ಅಪ್‌ಗಳಿಗೆ ವಿನಾಯಿತಿ?

ಸಿಗದ ಚಿರತೆ; ತಪ್ಪದ ಆತಂಕ

ಸಿಗದ ಚಿರತೆ; ತಪ್ಪದ ಆತಂಕ

1

ಸೋಮವಾರದ ರಾಶಿ ಫಲ; ವಿದ್ಯಾರ್ಥಿಗಳಿಗೆ, ಉದ್ಯೋಗಸ್ತರಿಗೆ ಉತ್ತಮ ಫ‌ಲಿತಾಂಶ ಸಿಗುವ ಸಮಯ

Kharge

ಕೆಲಸ ಮಾಡಿ; ಇಲ್ಲವೇ ಹುದ್ದೆ ತೊರೆಯಿರಿ: ಮುಖಂಡರಿಗೆ ಕಾಂಗ್ರೆಸ್‌ ಅಧ್ಯಕ್ಷ ಖರ್ಗೆ ಸ್ಪಷ್ಟ ಮಾತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.