ಯಾರೊಂದಿಗೂ ಮೈತ್ರಿಯಿಲ್ಲ: ದೇವೇಗೌಡ

Team Udayavani, Nov 7, 2019, 9:48 PM IST

ಹಾಸನ: ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಮನೆಗೆ ಸಂಬಂಧ ಮಾಡೋಕೆ ನಾನು ಹೋಗಬೇಕಾ? ನನಗೂ ರಾಜಕೀಯ ಮಾಡೋದು ಗೊತ್ತಿದೆ. 6 ದಶಕಗಳ ಕಾಲ ಹೋರಾಟದ ರಾಜಕೀಯ ಮಾಡುತ್ತಾ ಬಂದಿದ್ದೇನೆ. ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂಬ ಕನಿಷ್ಠ ಪ್ರಜ್ಞೆ ಇದೆ ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಬಿಜೆಪಿ ಜತೆ ಜೆಡಿಎಸ್‌ ಮೈತ್ರಿ ಮಾಡಿಕೊಳ್ಳುವ ಕುರಿತ ಪ್ರಶ್ನೆಗೆ ಸಿಡಿಮಿಡಿಗೊಂಡ ದೇವೇಗೌಡರು, ಜಗದೀಶ್‌ ಶೆಟ್ಟರ್‌ ಅವರು ಅದೇನೋ ಮರು ಮದುವೆ, ಬೇಳೆ ಕಾಳು ಎಂದಿದ್ದಾರೆ.

ಆದರೆ, ನಾನು ಈ ವಯಸ್ಸಿನಲ್ಲಿ ಯಾರೊಂದಿಗೂ ಸಂಬಂಧ ಮಾಡೋಕೆ ಹೋಗುವ ಅಗತ್ಯವಿಲ್ಲ. ಜೆಡಿಎಸ್‌ ಕುರಿತು ಏನೇನೋ ಮಾತನಾಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮುಖ ಮತ್ತೆ ನೋಡ್ತೀನಾ ಎಂದು ಕಿಡಿ ಕಾರಿದರು.

ಮಾಧ್ಯಮಗಳಿಗೂ ಒಂದು ಸಾಮಾನ್ಯ ಜ್ಞಾನವಿಲ್ಲ. ರಾಜಕೀಯ ಮಾತಾಡಿದರೆ ಏನೇನೋ ತೋರಿಸುತ್ತೀರಾ ಎಂದು ಮಾಧ್ಯಮಗಳ ವಿರುದ್ಧವೂ ಹರಿಹಾಯ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ