ರಾಷ್ಟ್ರೀಯ ಹೆದ್ದಾರಿ 75 ಪರಿಶೀಲಿಸಿದ ಅಧಿಕಾರಿಗಳು


Team Udayavani, Nov 3, 2019, 3:00 AM IST

rashtriya-heddari

ಸಕಲೇಶಪುರ: ಹಾಸನದಿಂದ ಮಾರನಹಳ್ಳಿಯವರೆಗೆ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ 75ನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳು ಶನಿವಾರ ಪರಿಶೀಲನೆ ಮಾಡಿದರು. ಹಾಸನದಿಂದ ಮಾರನಹಳ್ಳಿಯವರೆಗೆ ಹದಗೆಟ್ಟಿರುವ ರಾಷ್ಟ್ರೀಯ ಹೆದ್ದಾರಿ 75 ಸಂಪೂರ್ಣವಾಗಿ ಹದಗೆಟ್ಟಿದ್ದು ಹೆದ್ದಾರಿಯನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳ ವತಿಯಿಂದ ಕಳೆದ ವಾರ ಪರಿಶೀಲನೆ ಮಾಡಲಾಗಿತ್ತು.

ಈ ಹಿನ್ನೆಲೆಯಲ್ಲಿ ಹೆದ್ದಾರಿಯನ್ನು ವಿವಿಧೆಡೆ ಪರಿಶೀಲಿಸಿದ ನಂತರ ಪಟ್ಟಣದ ಹೇಮಾವತಿ ಸೇತುವೆಯನ್ನು ವೀಕ್ಷಣೆ ಮಾಡಲು ಆಗಮಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿ ಸೂರ್ಯವಂಶಿ ಅವರನ್ನು ವಿವಿಧ ಸಂಘಟನೆಗಳ ಮುಖಂಡರು ಮುತ್ತಿಗೆ ಹಾಕಿ ಇಲ್ಲಿ ದುರಸ್ತಿ ಮಾಡುವುದು ಬೇಡ, ಸಂಪೂರ್ಣವಾಗಿ ರಸ್ತೆ ಹದಗೆಟ್ಟಿರುವುದರಿಂದ ಮರು ಡಾಂಬರೀಕರಣ ಮಾಡಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿ ಸೂರ್ಯವಂಶಿ ನಾನು ಇಲ್ಲಿಗೆ ಕೇವಲ ಹೆದ್ದಾರಿಯ ಅವಸ್ಥೆಯನ್ನು ಪರಿಶೀಲನೆ ಮಾಡಲು ಬಂದಿದ್ದೇನೆ. ಮರುಡಾಂಬರೀಕರಣ ಕುರಿತು ಉನ್ನತ ಅಧಿಕಾರಿಗಳ ಜೊತೆಗೆ ಶೀಘ್ರವಾಗಿ ಚರ್ಚಿಸಲಾಗುವುದು ಎಂದರು.

ಅಧಿಕಾರಿಗಳ ಭೇಟಿಗೆ ಶ್ಲಾಘನೆ: ಈ ಸಂದರ್ಭದಲ್ಲಿ ಹೋರಾಟಗಾರರದ ತಾಪಂ ಸದಸ್ಯ ಯಡೇಹಳ್ಳಿ ಮಂಜುನಾಥ್‌ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ 75ನ್ನು ದುರಸ್ತಿ ಪಡಿಸುವಂತೆ ಆಗ್ರಹಿಸಿ ವಿವಿಧ ಸಂಘಟನೆಗಳಿಂದ ಈಗಾಗಲೇ ಪ್ರತಿಭಟನೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಸಚಿವ ಗೋವಿಂದ ಕಾರಜೋಳ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಾಧುಸ್ವಾಮಿ ಅವರು ಶನಿವಾರದಿಂದಲೇ ದುರಸ್ತಿ ಕಾರ್ಯ ಆರಂಭಿಸುವ ಭರವಸೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದುರಸ್ತಿ ಕಾರ್ಯ ಇಂದು ಸಾಂಕೇತಿಕವಾಗಿ ಆರಂಭಿಸಲಾಗಿದ್ದು ಉನ್ನತ ಅಧಿಕಾರಿಗಳು ಸ್ಥಳ ಪರಿಶೀಲಿಸಿರುವುದು ಶ್ಲಾಘನೀಯ ಎಂದರು.

ಜಲ್ಲಿಗಾಗಿ ಕೋರೆ ಪಡೆಯಲು ಅನುಮತಿ ನೀಡಿ: ರಾಜ್‌ಕಮಲ್‌ಕಂಪನಿಯ ವ್ಯವಸ್ಥಾಪಕ ಸುರಾನ ಮಾತನಾಡಿ, ಗುಣಮಟ್ಟದ ರಸ್ತೆಯಾಗಬೇಕಾದಲ್ಲಿ ಗುಣಮಟ್ಟದ ವಸ್ತುಗಳು ಸಿಗಬೇಕು. ಕಳಪೆ ಗುಣಮಟ್ಟದ ವಸ್ತುಗಳನ್ನು ಹಾಕುವುದರಿಂದ ರಸ್ತೆ ಕಾಮಗಾರಿಯ ಗುಣಮಟ್ಟ ಕುಸಿಯುತ್ತದೆ. ಕಾಮಗಾರಿಗೆ ಬೇಕಾದ ಜಲ್ಲಿಗಾಗಿ ಕೋರೆ ಪಡೆಯಲು ಅನುಮತಿ ನೀಡುವಂತೆ ಬೆಂಗಳೂರಿನ ಕಚೇರಿಗೆ ನೀಡಲಾಗಿದೆ.

ಆದರೆ ಇಲ್ಲಿಯವರೆಗೆ ಕಡತವನ್ನು ಅಲ್ಲಿಯ ಅಧಿಕಾರಿಗಳು ವಿಲೇವಾರಿ ಮಾಡದಿರುವುದರಿಂದ ಚತುಷ್ಪಥ ರಸ್ತೆಯ ಕಾಮಗಾರಿ ವಿಳಂಬವಾಗಿದೆ. ಕಲ್ಲಿನ ಕೋರೆಯ ಕಡತ ಶೀಘ್ರವಾಗಿ ವಿಲೇವಾರಿವಾದಲ್ಲಿ ನಾಳೆಯಿಂದಲೆ ಕಾಮಗಾರಿ ಆರಂಭಿಸಲಾಗುವುದು ಎಂದರು. ಈ ಸಂದರ್ಭದಲ್ಲಿ ಹೋರಾಟಗಾರರಾದ ಫಾರೂಕ್‌, ಮಲ್ಲೇಶ್‌, ಉಮೇಶ್‌, ಸಾಗರ್‌ ಜಾನೆಕೆರೆ, ಅಜಿತ್‌, ಮುಂತಾದವರು ಹಾಜರಿದ್ದರು.

ಈ ಹಿಂದೆ ಕಾಮಗಾರಿ ನಡೆಸಿರುವ ಐಸೊಲೆಕ್ಸ್‌ ಕಂಪನಿಯವರಿಗೆ ಚತುಷ್ಪಥ ರಸ್ತೆ ಕಾಮಗಾರಿ ನಡೆಸಲು ಮತ್ತೂಂದು ಅವಕಾಶ ನೀಡುವ ಸಾಧ್ಯತೆ ಇದೆ. ಸದ್ಯಕ್ಕೆ ದುರಸ್ತಿ ಕಾರ್ಯವನ್ನು ಇಂದಿನಿಂದಲೇ ನಡೆಸುವಂತೆ ಗುತ್ತಿಗೆದಾರರಿಗೆ ಆದೇಶಿಸಲಾಗಿದೆ.
-ಸೂರ್ಯವಂಶಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಲಯ ಅಧಿಕಾರಿ

ಟಾಪ್ ನ್ಯೂಸ್

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

1theft

ತನ್ನ ಮನೆಯಲ್ಲೇ ಚಿನ್ನ ಕದ್ದು ನಕಲಿ ಒಡವೆ ಇಟ್ಟಿದ್ದ ಕಳ್ಳಿ!

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

ಭಗತ್‌ ಸಿಂಗ್‌ ಕೈಬಿಟ್ಟಿಲ್ಲ , ಹೆಡ್ಗೆವಾರ್ ಸೇರ್ಪಡೆ ತಪ್ಪಿಲ್ಲ; 

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

ದಕ್ಷಿಣ ಕನ್ನಡ ಜಿಲ್ಲೆ: ಕಚ್ಚಾ ರಸ್ತೆಗಳದ್ದೇ ಸಾಮ್ರಾಜ್ಯ!

astro

ಬುಧವಾರದ ರಾಶಿ ಫಲ, ಇಲ್ಲಿವೆ ನಿಮ್ಮ ಗ್ರಹಬಲ

4ರ ಅದೃಷ್ಟ ಯಾರಿಗೆ? ರಾಜ್ಯಸಭೆ ಚುನಾವಣೆಯಲ್ಲಿ ಮತ್ತೆ ಕುದುರೆ ವ್ಯಾಪಾರದ ಭೀತಿ

4ರ ಅದೃಷ್ಟ ಯಾರಿಗೆ? ರಾಜ್ಯಸಭೆ ಚುನಾವಣೆಯಲ್ಲಿ ಮತ್ತೆ ಕುದುರೆ ವ್ಯಾಪಾರದ ಭೀತಿ

ಕೆಎಸ್‌ಆರ್‌ಟಿಸಿ ಸಿಬಂದಿ ಕೊರತೆ; ನಿವೃತ್ತ ಚಾಲಕರ ಮೊರೆ

ಕೆಎಸ್‌ಆರ್‌ಟಿಸಿ ಸಿಬಂದಿ ಕೊರತೆ; ನಿವೃತ್ತ ಚಾಲಕರ ಮೊರೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಕಾಡಾನೆ ಹಾವಳಿ ಹೆಚ್ಚಳ: ಕಾಂಗ್ರೆಸ್‌

ಸ್ಥಳೀಯ ಶಾಸಕರ ನಿರ್ಲಕ್ಷ್ಯದಿಂದ ಕಾಡಾನೆ ಹಾವಳಿ ಹೆಚ್ಚಳ: ಕಾಂಗ್ರೆಸ್‌

ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ

ಕಾಡಾನೆ ಸಮಸ್ಯೆ ಬಗೆಹರಿಸುವಂತೆ ಪ್ರತಿಭಟನೆ

Untitled-2

ಸಂಬಳವಿಲ್ಲದೇ ಹೊರಗುತ್ತಿಗೆ ನೌಕರರ ಸಂಕಷ್ಟ

ಪದೆ-ಪದೇ ಟ್ರ್ಯಾಕ್ಟರ್‌ನಲ್ಲಿ ತಾಂತ್ರಿಕ ದೋಷ

ಪದೆ-ಪದೇ ಟ್ರ್ಯಾಕ್ಟರ್‌ನಲ್ಲಿ ತಾಂತ್ರಿಕ ದೋಷ

ತಾಲೂಕಿನ ಎಳನೀರಿಗೆ ಹೊರ ರಾಜ್ಯದಲ್ಲೂ ಬೇಡಿಕೆ

ತಾಲೂಕಿನ ಎಳನೀರಿಗೆ ಹೊರ ರಾಜ್ಯದಲ್ಲೂ ಬೇಡಿಕೆ

MUST WATCH

udayavani youtube

SSLC ನಂತ್ರ ನಿಮಗಿದೆ ಭರಪೂರ ಅವಕಾಶ !!

udayavani youtube

ಕಾರಿಂಜೇಶ್ವರ ದೇವಸ್ಥಾನದ ಬಳಿ ಬೃಹತ್ ಬಂಡೆಕಲ್ಲು ಕುಸಿತ

udayavani youtube

ವಿಧಾನಪರಿಷತ್ ಹಂಗಾಮಿ ಸಭಾಪತಿಯಾಗಿ ರಘುನಾಥ್ ಮಲ್ಕಾಪುರೆ ನೇಮಕ

udayavani youtube

ಉದ್ಘಾಟನೆಗೆ ಶಾಸಕರೇ ಬರಬೇಕಂತೆ; ಕಾಫಿನಾಡಲ್ಲಿ ರಸ್ತೆಗೆ ಬೀಗ ಹಾಕಿದ ಬಿಜೆಪಿ ಸದಸ್ಯರು!

udayavani youtube

ಜ್ಞಾನವಾಪಿ ಮಸೀದಿ ಸರ್ವೇ ಸಂಪೂರ್ಣ; ಬಾವಿಯಲ್ಲಿ ‘ಶಿವಲಿಂಗ’ಪತ್ತೆ

ಹೊಸ ಸೇರ್ಪಡೆ

sunil-kumar

ಹೊಸ ಉಪಕೇಂದ್ರದಿಂದ ಬಂಟ್ವಾ ಳದ 14 ಸಾವಿರ ಗ್ರಾಹಕರಿಗೆ ನಿರಂತರ ವಿದ್ಯುತ್‌

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

ಹೊರಟದ್ದು ಕೊಲ್ಲೂರಿಗೆ; ತಲುಪಿದ್ದು ಗೋವಾಕ್ಕೆ! ಬಸ್ ಚಾಲಕನ ಯಡವಟ್ಟಿಗೆ ಯಾತ್ರಾರ್ಥಿಗಳು ಗರಂ

rain

ಹೆಸ್ಕಾತ್ತೂರು: ಭೀಕರ ಗಾಳಿ ಮಳೆಗೆ ಹಲವು ಮನೆಗಳಿಗೆ ಹಾನಿ

ajri

ಆಜ್ರಿ: ಮಲ್ಲಿಗೆ ಕೃಷಿಯಲ್ಲಿ ಖುಷಿ ಕಂಡ ಕನಕಕ್ಕ

1theft

ತನ್ನ ಮನೆಯಲ್ಲೇ ಚಿನ್ನ ಕದ್ದು ನಕಲಿ ಒಡವೆ ಇಟ್ಟಿದ್ದ ಕಳ್ಳಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.