ಅಧಿಕಾರಿಗಳು ಸಮರ್ಪಕವಾಗಿ ಕೆಲಸ ಮಾಡಬೇಕು

Team Udayavani, Apr 21, 2019, 8:25 PM IST

ಅರಸೀಕೆರೆ: ಸರ್ಕಾರಿ ಅಧಿಕಾರಿಗಳು ಮಾತಿಗಿಂತಲೂ ಕೃತಿ ಲೇಸು ಎಂಬ ಬಗ್ಗೆ ಅಚಲ ವಿಶ್ವಾಸವಿಟ್ಟು, ನಮ್ಮ ಮನ ಮೆಚ್ಚುವಂತಹ ಕಾರ್ಯಗಳನ್ನು ಮಾಡಿದಾಗ ಮಾತ್ರ ಜನರ ಮೆಚ್ಚುಗೆಗೆ ಪಾತ್ರವಾಗುತ್ತೇವೆ ಎಂದು ನಗರಸಭಾ ನೂತನ ಪೌರಾಯುಕ್ತ ಚಲಪತಿ ತಿಳಿಸಿದರು.

ಚುನಾವಣಾ ಆಯೋಗದ ಆದೇಶದ ಮೇರೆಗೆ ನೀತಿ ಸಂಹಿತೆ ಜಾರಿಯಿರುವ ವರೆಗೆ ನಗರಸಭೆಯ ಪೌರಾಯುಕ್ತ ರಾಗಿ ನೇಮಕಗೊಂಡಿರುವ ಚಲಪತಿ ಅವರು ನಗರದ ಹೃದಯಭಾಗದಲ್ಲಿ
ರುವ ಸಾರ್ವಜನಿಕ ಗ್ರಂಥಾಲಯ ರಸ್ತೆಯಲ್ಲಿರುವ ಈಶ್ಯಾನ ಮೂಲೆ
ಆಂಜನೇಯ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ಅನೇಕ ವರ್ಷ
ಗಳಿಂದ ಸಂಗ್ರಹವಾಗಿದ್ದ ತ್ಯಾಜ್ಯ ವಸ್ತುಗಳ ಕಸದ ರಾಶಿಯನ್ನು ಶನಿವಾರ ಬೆಳಗ್ಗೆ ತಾವೇ ಮುಂದೆ ಖುದ್ದಾಗಿ ಪೌರಸೇವಾ ಕಾರ್ಮಿಕರ ಜೊತೆಗೆ ನಿಂತು ಕಸದ ರಾಶಿಯನ್ನು ತೆಗೆಯುವ ಕಾರ್ಯ ಮಾಡಿದರು.

18 ಟ್ರ್ಯಾಕ್ಟರ್‌ ಕಸ ತೆರವು: ಪೌರ ಕಾರ್ಮಿಕರ ನೆರವಿನಿಂದ ಸುಮಾರು 18 ಟ್ರ್ಯಾಕ್ಟರ್‌ಗೂ ಹೆಚ್ಚಿನ ಕಸದ ರಾಶಿಯನ್ನು ಹೊರ ಸಾಗಿಸಲಾಯಿತು.
ಸ್ವತ್ಛತಾ ಕಾರ್ಯದಲ್ಲಿ ನಗರಸಭೆಯ ಆರೋಗ್ಯ ನಿರೀಕ್ಷರಾದ ರಮೇಶ್‌
ಹಾಗೂ 25ಕ್ಕೂ ಹೆಚ್ಚಿನ ಪೌರಕಾರ್ಮಿಕರು ಭಾಗಿಯಾಗಿದ್ದರು.

ಈಶ್ಯಾನ ಮೂಲೆ ಆಂಜನೇಯ ಸ್ವಾಮಿ ದೇವಾಲಯದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎಸ್‌.ಎಂ.ಎಸ್‌.ರವಿಶಂಕರ್‌, ಸದಸ್ಯರಾದ ರೈಲ್ವೆ ರಂಗಸ್ವಾಮಿ ಹಾಗೂ ಇನ್ನಿತರ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ನಗರಸಭಾ ಪೌರಾಯುಕ್ತರ ಕಾರ್ಯವನ್ನು ಶ್ಲಾ àಸಿ
ಶಾಲು ಹೊದಿಸಿ ಗೌರವಿಸಿದರು.

ಅಧಿಕಾರಿಗಳು ಜನರ ಸೇವಕರು:
ನಂತರ ಪೌರಾಯುಕ್ತರು ಮಾತನಾಡಿ, ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಸೇವಕರು ಎಂಬುವುದನ್ನು ಅರ್ಥ ಮಾಡಿಕೊಳ್ಳಬೇಕಾಗಿದೆ. ಮಾತಿಗಿಂತಲೂ ಕೃತಿ ಲೇಸು ಎಂಬ ಬಗ್ಗೆ ನಾವುಗಳು ಅಚಲ ವಿಶ್ವಾಸವನ್ನು ಬೆಳೆಸಿಕೊಂಡು ಮತ್ತೂಬ್ಬರಿಗೆ ತಾಕೀತು ಮಾಡುವ ಜೊತೆಗೆ ತಾವೇ ಖುದ್ದಾಗಿ ಮುಂದೆ ನಿಂತಾಗ ನಮ್ಮ ಜೊತೆ ಜೊತೆಗೆ ಇನ್ನಿತರರು ಕೈ ಜೋಡಿಸಲು ಪ್ರೇರಣೆ
ಬರುತ್ತದೆ. ಈ ಬಗ್ಗೆ ಅಧಿಕಾರಿಗಳು ನಮ್ಮ ಜೊತೆಯ ಅಧಿಕಾರಿಗಳ ಜೊತೆಗೆ ಕೆಲಸ ಮಾಡಿದರೇ ತಪ್ಪು ಎನ್ನುವ ಕೀಳರಿಮೆಯನ್ನು ಬಿಟ್ಟಾಗ ಮಾತ್ರ ಎಲ್ಲರೊಂದಿಗೆ ಕೂಡಿ ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಪ್ರಾಮಾಣಿಕತೆಗೆ ಬೆಲೆಯಿದೆ: ದಕ್ಷತೆ ಹಾಗೂ ಪ್ರಾಮಾಣಿಕತೆಗೆ ಎಂದಿಗೂ ಎಲ್ಲೆಡೆ ಬೆಲೆಯಿದೆ. ಅದನ್ನು ಅನುಷ್ಠಾನಗೊಳಿಸುವ ಇಚ್ಛಾಶಕ್ತಿಯನ್ನು ನಾವು ನಮಲ್ಲಿ ಬೆಳೆಸಿಕೊಂಡಾಗ ಮಾತ್ರ ನಮ್ಮ ಮನಸ್ಸು ಮೆಚ್ಚುವಂತೆ ನಡೆದುಕೊಳ್ಳಬಹುದು, ಅಂತೆಯೇ
ಸಾರ್ವಜನಿಕರಿಂದಲೂ ಪ್ರಶಂಸೆಗೆ ಪಾತ್ರರಾಗಬಹುದು ಎಂದು
ಹೇಳಿದರು.

ಸಾರ್ವಜನಿಕರು ಹಾಗೂ ವಿವಿಧ ಜನಪರ ಸಂಘಟನೆಗಳು ನಗರದ ಸ್ವತ್ಛತೆ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕೆಂದು ಕರೆ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಮನುಷ್ಯನಿಗೆ ವಯಸ್ಸು ಸರಿದಂತೆ ಆರೋಗ್ಯದಲ್ಲಿ ಏರುಪೇರಾಗುವುದು ಸಹಜ. ಕಣ್ಣಿನ ದೃಷ್ಟಿ ಮಂದವಾಗುವುದು, ತಲೆನೋವು ಬರುವುದು ಮೊದಲಾದ ಸಮಸ್ಯೆಗಳ ಉಂಟಾಗುತ್ತದೆ....

  • ಮಾರುತಿ ಸುಝುಕಿ 800 ಜಮಾನಾ ಮುಗಿದು 2000ನೇ ಇಸವಿಯಲ್ಲಿ ಮೊದಲ ಬಾರಿಗೆ ಆಲ್ಟೋ 800 ಮಾರುಕಟ್ಟೆಗೆ ಬಂದಿದ್ದಾಗ ದೊಡ್ಡ ಸುದ್ದಿಯಾಗಿತ್ತು. ಬಳಿಕ 2012ರಲ್ಲಿ ಹೊಸ ಆಲ್ಟೋ...

  • ಬೆಂಗಳೂರು: ಸತತ ಬರಗಾಲದಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಮಳೆರಾಯನನ್ನು ಒಲಿಸಿಕೊಳ್ಳಬೇಕೆಂದು ಕಸರತ್ತು ನಡೆಸುತ್ತಿದೆ. ಗ್ರಾಮೀಣಾ ಭಿವೃದ್ಧಿ...

  • ಬೆಂಗಳೂರು: ರಾಜ್ಯದ ವಿವಿಧೆಡೆ ಬೇಸಿಗೆ ಮಳೆಯ ಅಬ್ಬರ ಮುಂದುವರಿದಿದ್ದು, ಸಿಡಿಲಿಗೆ ಮತ್ತಿಬ್ಬರು ಬಲಿಯಾಗಿದ್ದಾರೆ. ಈ ಮಧ್ಯೆ, ಬುಧವಾರ ಮುಂಜಾನೆ 8.30ಕ್ಕೆ ಅಂತ್ಯಗೊಂಡ...

  • ಕುತ್ತಾರು: ಕುತ್ತಾರು ಶ್ರೀ ರಾಜರಾಜೇಶ್ವರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್‌ ಬಜರಂಗದಳ ಶ್ರೀ ರಾಜರಾಜೇಶ್ವರಿ ಘಟಕದ ವತಿಯಿಂದ ಮಳೆಗಾಗಿ...

  • ಮಂಗಳೂರು/ಉಡುಪಿ: ಮತದಾನಕ್ಕೂ ಮತ ಎಣಿಕೆಗೂ 35 ದಿನಗಳಷ್ಟು ದೀರ್ಘಾವಧಿಯ ಕಾಯುವಿಕೆ ಕರಾವಳಿ ಮತ್ತು ಮಲೆನಾಡು ವ್ಯಾಪ್ತಿಯ ಎರಡು ಮುಖ್ಯ ಲೋಕಸಭಾ ಕ್ಷೇತ್ರಗಳಿಗೆ...