ಜಿಲ್ಲಾದ್ಯಂತ ಶಾಲಾ ಶಿಕ್ಷಕರ ಆಕ್ರೋಶ

Team Udayavani, Jul 7, 2019, 12:08 PM IST

ಹೊಳೆನರಸೀಪುರ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಕಾರಿಗಳು ಅಧ್ಯಕ್ಷೆ ಪುಷ್ಪಲತ ಅವರ ನೇತ್ರತ್ವದಲ್ಲಿ ಬಿಒ ಲೋಕೇಶ್‌ ಅವರಿಗೆ ಮನವಿ ಪತ್ರ ಆರ್ಪಿಸಿದರು.

ಹೊಳೆನರಸೀಪುರ: ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸೂಚನೆಯಂತೆ ಜು. 9ರಂದು ಜಿಲ್ಲಾ ಮಟ್ಟದಲ್ಲಿ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸುವುದಾಗಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಪುಷ್ಪಲತಾ ತಿಳಿಸಿದರು.

ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಆರ್ಪಿಸಿದ ನಂತರ ಸುದ್ದಿಗಾರರೊಂದಿಗೆ ಮಾನಾಡಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಈಗಾಗಲೇ ಮೂರು ಹಂತಗಳಲ್ಲಿ ಧರಣಿ ಸತ್ಯಾಗ್ರಹದ ಮೂಲಕ ಮನವಿ ಸಲ್ಲಿಸಿದ್ದರೂ, ರಾಜ್ಯ ಸರ್ಕಾರ ನಮ್ಮಗಳ ಮನವಿಯನ್ನು ಪುರಸ್ಕರಿಸಿಲ್ಲ, ಜೊತೆಗೆ ಶಿಕ್ಷಕರಿಗೆ ದೊರಕಬೇಕಾದ ಸವಲತ್ತು ಬಡ್ತಿ ಸೇರಿದಂತೆ ಎಲ್ಲ ರೀತಿಯಲ್ಲಿ ಅನ್ಯಾಯಕ್ಕೆ ಒಳಗಾಗಿದ್ದೇವೆ. ಹೊಸ ಪಿಂಚಣಿ ಯೋಜನೆ ರದ್ದು ಗೊಳಿಸಿ ಹಳೇ ಮಾದರಿ ಯೋಜನೆಯನ್ನು ಪುನರಾರಂಭಿಸಬೇಕೆಂದು ಒತ್ತಾಯಿಸಿದರು.

ಕಳೆದ ಮೂರು ವರ್ಷಗಳಿಂದ ಶಿಕ್ಷಕರ ವರ್ಗಾವಣೆಯಾಗದೆ ಈಗ ಪ್ರಕ್ರಿಯೆ ಪ್ರಾರಂಭವಾಗಿದ್ದು, ವರ್ಗಾವಣೆ ಮುಗಿದ ತಕ್ಷಣ ಅಕ್ಟೋಬರ್‌ ತಿಂಗಳಲ್ಲಿ ನಮ್ಮಗಳ ಬೇಡಿಕೆಯನ್ನು ಈಡೇರಿಸಬೇಕೆಂದು ಆಗ್ರಹಪಡಿಸಿ ಆರನೇ ವೇತನ ಆಯೋಗದ ಅಂತಿಮ ವರಿದಿಯ ಶಿಫಾರಸಿನ ಪ್ರಕಾರ ಮುಖ್ಯ ಗುರುಗಳಿಗೆ ಅಯಾ ವರ್ಷದ ಬಡ್ತಿ ನೀಡಬೇಕು ಹಾಗು ಪ್ರಾಥಮಿಕ ಶಾಲಾ ಶಿಕ್ವಕರಿಗೆ ಉಪನಿರ್ದೇಶಕರ ಹುದ್ದೆಯವರೆಗೆ ಬಡ್ತಿ ನೀಡಬೇಕು ಪ್ರಾಥಮಿಕ ಶಾಲೆಗಳಲ್ಲಿಯೇ ಎಲ್ಕೆಜಿ, ಯುಕೆಜಿ ಆರಂಭಿಸುವಂತೆ ಮನವಿ ಮಾಡಿದರು.

ನಾಡಿದ್ದು ಒಂಬತ್ತರಂದು ಮಂಗಳವಾರ ಜಿಲ್ಲಾ ಕೇಂದ್ರದಲ್ಲಿ ನಮ್ಮ ತಾಲೂಕಿನ 7 ನೂರಕ್ಕು ಹೆಚ್ಚು ಶಿಕ್ಷಕರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು. ಮನವಿ ಪತ್ರ ಸಲ್ಲಿಕೆ ವೇಳೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪದಾಕಾರಿಗಳು ಹಾಜರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ