ಪುತ್ರ ಪ್ರಜ್ವಲ್‌ ಗೆಲುವಿಗೆ ರೇವಣ್ಣ ನಾನಾ ವೇಷ!

Team Udayavani, Mar 19, 2019, 5:04 AM IST

ಹಾಸನ: ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಪುತ್ರ ನಿಖಿಲ್‌ ನನ್ನು ಗೆಲ್ಲಿಸಲು ಶತಪ್ರಯತ್ನ ಪ್ರಾರಂಭಿಸಿರುವಂತೆ ಇತ್ತ ಅವರ ಸಹೋದರ ರೇವಣ್ಣ ತಾನೇನು ಕಮ್ಮಿ ಎನ್ನುವಂತೆ ತಮ್ಮ ಪುತ್ರ ಪ್ರಜ್ವಲ್‌ ನನ್ನು ಸಂಸತ್‌ ಗೆ ಕಳುಹಿಸಲೇಬೇಕೆಂದು ಪಣ ತೊಟ್ಟಿರುವಂತಿದೆ.

ಹಾಸನದಲ್ಲಿ ಮೊನ್ನೆ ತಾನೆ ಭರ್ಜರಿಯಾಗಿ ಪ್ರಚಾರ ಪ್ರಾರಂಭಿಸಿರುವ ಪ್ರಜ್ವಲ್‌ ರೇವಣ್ಣ ಸ್ಥಳೀಯ ವಿಪಕ್ಷ ನಾಯಕರನ್ನು ತಮ್ಮ ತೆಕ್ಕೆಗೆ ಸೆಳೆದುಕೊಳ್ಳುವ ಕೆಲಸ ಮಾಡುತ್ತಿದ್ದಾರೆ. ಇವತ್ತು ಸಚಿವ ರೇವಣ್ಣ ಅವರು ಕುಟುಂಬ ಸಹಿತ ತಮ್ಮ ಬದ್ಧ ರಾಜಕೀಯ ವಿರೋಧಿಯ ಮನೆಗೆ ತೆರಳಿ ತಮ್ಮ ಪುತ್ರನ ಗೆಲುವಿಗೆ ಆಶೀರ್ವಾದ ಮಾಡುವಂತೆ ಮನವಿ ಮಾಡಿಕೊಂಡಿರುವುದು ವಿಶೇಷವಾಗಿದೆ. ತಮ್ಮ ಬದ್ಧ ರಾಜಕೀಯ ಎದುರಾಳಿ ಕಾಂಗ್ರೆಸ್‌ ಮಾಜೀ ಶಾಸಕ ಪುಟ್ಟೇಗೌಡ ಅವರ ಮನೆಗೆ ಇಂದು ಬೆಳಿಗ್ಗೆ ತಮ್ಮ ಪುತ್ರ ಪ್ರಜ್ವಲ್‌, ಪತ್ನಿ ಭವಾನಿ ರೇವಣ್ಣ, ಶಾಸಕ ಸಿ.ಎನ್‌. ಬಾಲಕೃಷ್ಣ ಮತ್ತಿತರರ ಜೊತೆ ತೆರಳಿದ ಶಾಸಕ ರೇವಣ್ಣ ಅವರು ತಮ್ಮ ಪುತ್ರನ ಗೆಲುವಿಗೆ ನಿಮ್ಮ ಆಶೀರ್ವಾದ ಅಗತ್ಯವಿದೆ ಎಂದು ಕೇಳಿಕೊಂಡಿದ್ದಾರೆ. ‘ಕ್ಷೇತ್ರದ ಮತದಾರರ ಮನಸ್ಸನ್ನು ಗೆಲ್ಲುವಂತೆ ಕೆಲಸ ಮಾಡಿದರೆ ಅವರೇ ಆಶೀರ್ವಾದ ಮಾಡುತ್ತಾರೆ’ ಎಂದು ಪುಟ್ಟೇಗೌಡ ಅವರು ಪ್ರಜ್ವಲ್‌ ಗೆ ಈ ಸಂದರ್ಭದಲ್ಲಿ  ಕಿವಿಮಾತು ಹೇಳಿದ್ದಾರೆ ಎಂದೂ ತಿಳಿದುಬಂದಿದೆ.

ಕೆಲವು ದಿನಗಳ ಹಿಂದೆ ಪ್ರಜ್ವಲ್‌ ರೇವಣ್ಣ ಅವರು ಹಾಸನ ಗ್ರಾಮಾಂತರ ಬಿ.ಜೆ.ಪಿ. ಅಧ್ಯಕ್ಷ ಅಗಿಲೆ ಯೋಗೀಶ್‌ ಅವರ ಮನೆಗೇ ತೆರಳಿ ಅವರನ್ನು ತಮ್ಮ ಪಕ್ಷಕ್ಕೆ ಬರಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಈ ಬಾರಿಯ ಲೋಕ ಸಮರವನ್ನು ಸವಾಲಾಗಿ ಸ್ವೀಕರಿಸಿರುವ ಗೌಡರ ಕುಟುಂಬವು ತಮ್ಮ ಇಬ್ಬರು ಯುವ ನಾಯಕರಿಗೆ ರಾಜಕಾರಣದಲ್ಲಿ ಗಟ್ಟಿ ಸ್ಥಾನವನ್ನು ನಿರ್ಮಿಸಿಕೊಡಲು ಹರಸಾಹಸಪಡುತ್ತಿರುವುದಂತೂ ಸ್ಪಷ್ಟವಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಸಹಾಯಾನುದಾನ ಮತ್ತು ವಂತಿಗೆ ಹಾಗೂ ತೆರಿಗೆ ಪಾಲಿನ ಕಡಿತದ ಪರಿಣಾಮ 2020-21 ನೇ ಸಾಲಿನ ಬಜೆಟ್‌ ಮೇಲೆ ಪರಿಣಾಮ ಬೀರಲಿದ್ದು...

  • ಹುಬ್ಬಳ್ಳಿ: ಮಹದಾಯಿ ಕುರಿತು ಕೇಂದ್ರದಿಂದ ಅಧಿಸೂಚನೆ ಹೊರಡಿಸುವುದು ವಿಶೇಷವಾಗಿ ಇಬ್ಬರು ಸಚಿವರಿಗೆ ಪ್ರತಿಷ್ಠೆಯಾಗಿತ್ತು. ಕೇಂದ್ರ ಸಚಿವ ಪ್ರಹ್ಲಾದ ಜೋಶಿ,...

  • ಕಾರವಾರ: ಕೊರೊನಾ ವೈರಸ್‌ ಕಾರಣಕ್ಕೆ ಜಪಾನ್‌ನ ಯೊಕೊಹಾಮಾದಲ್ಲಿ ಡೈಮಂಡ್‌ ಪ್ರಿನ್ಸಸ್‌ ಎಂಬ ಕ್ರೂಸ್‌ ಹಡಗಿನಲ್ಲಿ ಬಂಧಿಯಾಗಿದ್ದ ಕಾರವಾರ ಮೂಲದ ಅಭಿಷೇಕ್‌...

  • ಮುದಗಲ್ಲ (ರಾಯಚೂರು): ಚೀನಾದಲ್ಲಿ ಮಾರಣಹೋಮ ನಡೆಸಿರುವ ಕೊರೊನಾ ವೈರಸ್‌ ಪರಿಣಾಮ ಇಲ್ಲಿನ ಕಲ್ಲು ಗಣಿಗಾರಿಕೆ ಮೇಲೂ ಆಗಿದೆ. ಕೊರೊನಾ ವೈರಸ್‌ ಪರಿಣಾಮ ಚೀನಾ ಸೇರಿ...

  • ಬೆಂಗಳೂರು: ಸಿದ್ದರಾಮಯ್ಯ ಹೇಳಿದ ಕೂಡಲೇ ಕಾಂಗ್ರೆಸ್‌ ಬಿಟ್ಟು ಹೋಗಿರುವವರು ವಾಪಸ್‌ ಬರ್ತಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕಿ ಮಾರ್ಗರೇಟ್‌ ಆಳ್ವಾ ಹೇಳಿಕೆಯನ್ನು...

ಹೊಸ ಸೇರ್ಪಡೆ