Udayavni Special

ಪ್ಲಾಸ್ಟಿಕ್‌ ನಿಷೇಧಕ್ಕೆ ಪುರಸಭೆ ಹಿಂದೇಟು


Team Udayavani, Jul 31, 2019, 1:25 PM IST

hasan-tdy-1

ಹೊಳೆನರಸೀಪುರ ಪುರಸಭೆ ಕಚೇರಿ.

ಹೊಳೆನರಸೀಪುರ: ಪಟ್ಟಣದ ಅಭಿವೃದ್ಧಿ ಹಾಗೂ ಸ್ವಚ್ಛತೆಗೆ ಜಿಲ್ಲಾಡಳಿತ ತಿರ್ಮಾನಿಸಿ ಆ.15ರಿಂದ ಸ್ವಚ್ಛ ಹಾಗು ಪ್ಲಾಸ್ಟಿಕ್‌ ಮುಕ್ತ ನಗರವನ್ನಾಗಿಸುವ ಅದೇಶ ಹಾಗೂ ಸೂಚನೆ ನೀಡಿದ್ದರೂ ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಪಟ್ಟಣದಲ್ಲಿ ಪಾrಸ್ಟಿಕ್‌ ನಿಷೇಧವಾಗಿಲ್ಲ.

ವರ್ತಕರ ವಿರೋಧ: ಕಳೆದ ಮೇ ತಿಂಗಳ ಮಧ್ಯ ಭಾಗದಲ್ಲಿ ಜಿಲ್ಲಾಡಳಿತ ಉಪವಿಭಾಗಧಿಕಾರಿಗಳ ನೇತೃತ್ವದಲ್ಲಿ ಪುರಸಭೆ ಮುಖ್ಯಾಧಿಕಾರಿಗಳ ಸಭಾಂಗಣ ದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆ ನಡೆಸಿ ಜೂ.1ರಿಂದ ಹೊಳೆನರಸೀಪುರ ಪಟ್ಟಣವನ್ನು ಪ್ಲಾಸ್ಟಿಕ್‌ ಮುಕ್ತವಾಗಿಸುವುದಾಗಿ ಘೋಷಿಸಿತು.

ಅಂದು ಸಭೆಯಲ್ಲಿ ಹಾಜರಿದ್ದ ಪಟ್ಟಣದ ವರ್ತಕರ ಸಂಘದ ಪ್ರತಿನಿಧಿಗಳು ಏಕಾ ಏಕಿ ಪ್ಲಾಸ್ಟಿಕ್‌ ಮುಕ್ತಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ಕಠಿಣ ನಿಧಾರದಿಂದ ಪಟ್ಟಣದ ವರ್ತಕರು ಸಾಕಷ್ಟು ಸಂಕಷ್ಟ ಎದುರಿಸಬೇಕಾಗುತ್ತದೆ. ಆದ್ದರಿಂದ ಪಟ್ಟಣದಲ್ಲಿ ಚಾಲ್ತಿಇರುವ ಪ್ಲಾಸ್ಟಿಕ್‌ ಕವರ್‌ಗಳು ಸೇರಿದಂತೆ ಎಲ್ಲಾ ಬಗೆಯ ಪ್ಲಾಸ್ಟಿಕ್‌ ಮುಕ್ತಗೊಳಿಸಲು ಕಾಲಾವಕಾಶ ನೀಡಬೇಕೆಂದು ಜೂ.1ರ ಬದಲಾಗಿ ಆ.15 ರಿಂದ ಪಟ್ಟಣವನ್ನು ಪ್ಲಾಸ್ಟಿಕ್‌ ಮುಕ್ತ ಎಂದು ಘೋಷಿಸುವಂತೆ ಸಲಹೆ ನೀಡಿತು.

ಉಪವಿಭಾಗಾಧಿಕಾರಿ ಅನುಮೋದನೆ: ಪಟ್ಟಣದ ವರ್ತಕ ಸಂಘದ ಪ್ರತಿನಿಧಿಗಳ ಆಶಯಕ್ಕೆ ಸ್ಪಂದಿಸಿದ ಉಪವಿಭಾಗಾಧಿಕಾರಿ ಡಾ.ಎಚ್.ಎಲ್.ನಾಗರಾಜು ಅವರು ಕಾಲಾವಕಾಶಕ್ಕೆ ಅನುಮೋದನೆ ನೀಡಿದ್ದಲ್ಲದೆ, ಪ್ಲಾಸ್ಟಿಕ್‌ ಮುಕ್ತಗೊಳಿಸುವ ನಿಟ್ಟಿನಲ್ಲಿ ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳ ನಾಲ್ಕಾರು ತಂಡಗಳನ್ನು ರಚಿಸಿ ಜೂ.1 ರಿಂದಲೇ ಪಟ್ಟಣದಲ್ಲಿನ ವರ್ತಕರ ಅಂಗಡಿಗಳು, ಹೋಟೆಲ್, ಕ್ಯಾಂಟಿನ್‌ಗಳ ಮೇಲೆ ಏಕಾಏಕಿ ದಾಳಿ ನಡೆಸಿ ಅವರಲ್ಲಿನ ಪ್ಲಾಸ್ಟಿಕ್‌ಗಳನ್ನು ವಶಪಡಿಸಿಕೊಳ್ಳಲು ತಿರ್ಮಾನಿಸಿತು.

ಅನುಷ್ಠಾನವಾಗದ ಆದೇಶ: ಆದರೆ ಈ ಸಭೆ ನಡೆದು ಸುಮಾರು ಎರಡು ತಿಂಗಳು ಕಳೆದರೂ ಪುರಸಭೆ ಯಾಗಲೀ ಜಿಲ್ಲಾಡಳಿತದ ಪರವಾಗಿ ಆಗಮಿಸಿದ್ದ ಉಪವಿಭಾಗಾಧಿಕಾರಿಗಳಾಗಲೀ ಇಲ್ಲಿಯವರೆಗೂ ಯಾವೊಂದು ಕ್ರಮಕೈಗೊಂಡ ಬಗ್ಗೆ ಒಂದೇ ಒಂದು ಮಾಹಿತಿ ಇಲ್ಲವಾಗಿದೆ.

ಒಂದು ಮೂಲದ ಪ್ರಕಾರ ಪ್ಲಾಸ್ಟಿಕ್‌ ಮುಕ್ತವಾಗಿಸಲು ಮುಂದಾಗಬೇಕಿದ್ದ ಅಧಿಕಾರಿಗಳಲ್ಲಿ ಸಹಮತವಿಲ್ಲದೇ ಇರುವುದು ಅನುಷ್ಠಾನಕ್ಕೆ ದೊಡ್ಡ ಬಂಡೆಯಂತೆ ಆಗಿದೆ.

ಇಚ್ಛಾಶಕ್ತಿ ಕೊರತೆ: ಮೇ ತಿಂಗಳಲ್ಲಿ ನಡೆದ ಸಭೆ ನಡೆಯಲು ರಾಜ್ಯ ಸರ್ಕಾರ ನೀಡಿದ ಸೂಚನೆ ಮೇಲೆ ಸಭೆ ನಡೆಸಿ ಸಭೆಯಲ್ಲಿನ ನಡಾವಳಿಗಳನ್ನು ರಾಜ್ಯದ ಮಟ್ಟದ ಇಲಾಖೆಗೆ ಕೈತೊಳೆದುಕೊಂಡಿತೆ ಹೊರತು ಪ್ಲಾಸ್ಟಿಕ್‌ ಮುಕ್ತಗೊಳಿಸಲು ಯಾರೊಬ್ಬರಿಗೂ ಇಚ್ಛಾ ಶಕ್ತಿ ಇಲ್ಲದಿರುವುದು ಕಾರಣವೆಂದು ಹೇಳಲಾಗುತ್ತಿದೆ.

ಮಿತಿ ಮೀರಿದ ಪ್ಲಾಸ್ಟಿಕ್‌ ಕಸ: ಪ್ರಸ್ತುತ ಪಟ್ಟಣದ ಯಾವ ಭಾಗದಲ್ಲಿ ನೋಡಿದರೂ ಕಸ ಕಡ್ಡಿ ಪ್ಲಾಸ್ಟಿಕ್‌ನಿಂದ ತಾಂಡವವಾಡುತ್ತಿದೆ. ಸ್ವಚ್ಛ ಭಾರತ್‌ ಅಭಿಯಾನ ಆರಂಭಿಸಿರುವ ಪುರಸಭೆ ಇಬ್ಬರು ರಾಯಭಾರಿಗಳನ್ನು ಆಯ್ಕೆ ಮಾಡಿಕೊಂಡು ಪಟ್ಟಣವನ್ನು ಸ್ವಚ್ಛ ಪಟ್ಟಣ ವಾಗಿಸುವ ನಿಟ್ಟಿನಲ್ಲಿ ಮುಂದಾಗಿದೆ. ಆದರೆ ಪಟ್ಟಣ ವನ್ನು ಸ್ವಚ್ಛವಾಗಿಸುವ ನಿಟ್ಟಿನಲ್ಲಿ ಪುರಸಭೆ ಪಟ್ಟಣದ ಸಂಘ ಸಂಸ್ಥೆಗಳನ್ನು ಸೇರಿಸಿಕೊಳ್ಳದೇ ಇರುವುದು ಮತ್ತು ಪಟ್ಟಣದ ವರ್ತಕರು ಹಾಗೂ ಹೋಟೇಲ್ ಕ್ಯಾಂಟಿನ್‌ಗಳು ಮಾತ್ರ ಪುರಸಭೆಯ ನೀತಿ ನಿಯಮ ಗಳಿಗೆ ಸ್ಪಂದಿಸದೆ ಇರುವುದು ಯೋಜನೆ ಕೈಗೂಡುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

 

● ರಾಧಾಕೃಷ್ಣ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಿಯಾಜ್‌, ಇಕ್ಬಾಲ್‌ ಸಹಿತ 18 ಉಗ್ರರು ಭಯೋತ್ಪಾದಕರು

ರಿಯಾಜ್‌, ಇಕ್ಬಾಲ್‌ ಸಹಿತ 18 ಉಗ್ರರು ಭಯೋತ್ಪಾದಕರು

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

ಎಲ್ಲ ಜಿಲ್ಲೆಗಳಲ್ಲಿ ರಾಜ್ಯ ಕಾರ್ಯಕಾರಿಣಿ ಸಭೆಗೆ ತೀರ್ಮಾನ

ಸೂರ್ಯನ ಬೆಳಕು ಬೀಳುವ ಚಂದ್ರನ ಮೇಲ್ಮೈನಲ್ಲೂ ಜಲಕಣ!

ಸೂರ್ಯನ ಬೆಳಕು ಬೀಳುವ ಚಂದ್ರನ ಮೇಲ್ಮೈನಲ್ಲೂ ಜಲಕಣ!

ಅಮಿತಾಭ್‌ಗೆ “ವಿಶ್ವಾಸಾರ್ಹ” ಪಟ್ಟ; “ನಂಬಿಕಸ್ಥ” ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ

ಅಮಿತಾಭ್‌ಗೆ “ವಿಶ್ವಾಸಾರ್ಹ” ಪಟ್ಟ; ಬಾಲಿವುಡ್‌ ನಟಿ ದೀಪಿಕಾ ಪಡುಕೋಣೆ “ನಂಬಿಕಸ್ಥ” ಪಟ್ಟ

ಅಪ್ಪ-ಮಗನಿಗೆ 7 ಗಂಟೆ ಪೊಲೀಸರಿಂದ ಚಿತ್ರಹಿಂಸೆ!

ಅಪ್ಪ-ಮಗನಿಗೆ 7 ಗಂಟೆ ಪೊಲೀಸರಿಂದ ಚಿತ್ರಹಿಂಸೆ!

IPL 2020‌ : ಹೈದರಾಬಾದ್‌, ಡೆಲ್ಲಿ ಮುಖಾಮುಖಿ: ವಾರ್ನರ್ ಪಡೆಗೆ 88 ರನ್ ಗಳ ಗೆಲುವು

IPL 2020‌ : ಹೈದರಾಬಾದ್‌, ಡೆಲ್ಲಿ ಮುಖಾಮುಖಿ: ಡೇವಿಡ್‌ ವಾರ್ನರ್‌ಗೆ ಗೆಲುವಿನ ಗಿಫ್ಟ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೇಲೂರಿಗೆ ಪ್ರವಾಸಿಗರ ದಂಡು

ಬೇಲೂರಿಗೆ ಪ್ರವಾಸಿಗರ ದಂಡು

hasan-tdy-1

ವಿಜಯ ದಶಮಿಯೊಂದಿಗೆ ಗೊಂಬೆಗಳ ದರ್ಬಾರ್‌ಗೆ ತೆv

hasan-tdy-1

ಬಸ್‌ ನಿಲ್ದಾಣಕ್ಕೆ ಅಗತ್ಯ ಸೌಲಭ್ಯ

dhanvir

ಬಂಡೀಪುರದಲ್ಲಿ ರಾತ್ರಿ ಸಫಾರಿ: ಚಿತ್ರನಟ ಧನ್ವೀರ್ ವಿರುದ್ದ ಪ್ರಕರಣ ದಾಖಲು

ಕೆರೆ ಬತ್ತದಂತೆ ನೋಡಿಕೊಳ್ಳಿ

ಕೆರೆ ಬತ್ತದಂತೆ ನೋಡಿಕೊಳ್ಳಿ

MUST WATCH

udayavani youtube

ಭಕ್ತಿ-ಸಂಭ್ರಮದ ಮಂಗಳೂರು ದಸರಾ -2020 ಸಂಪನ್ನ

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!ಹೊಸ ಸೇರ್ಪಡೆ

ರಿಯಾಜ್‌, ಇಕ್ಬಾಲ್‌ ಸಹಿತ 18 ಉಗ್ರರು ಭಯೋತ್ಪಾದಕರು

ರಿಯಾಜ್‌, ಇಕ್ಬಾಲ್‌ ಸಹಿತ 18 ಉಗ್ರರು ಭಯೋತ್ಪಾದಕರು

ಮುಂಗಾರು ಬೆಳೆ ಸಮೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 100 ಸಾಧನೆ

ಮುಂಗಾರು ಬೆಳೆ ಸಮೀಕ್ಷೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 100 ಸಾಧನೆ

ಸ್ವೋದ್ಯೋಗಕ್ಕೆ ಜೀವಾಮೃತವಾದ ಕೃಷಿ ಕಾಯಕ

ಸ್ವೋದ್ಯೋಗಕ್ಕೆ ಜೀವಾಮೃತವಾದ ಕೃಷಿ ಕಾಯಕ

ಕಟಪಾಡಿ : ಶಿಥಿಲಾವಸ್ಥೆಯಲ್ಲಿ ಓವರ್‌ಹೆಡ್‌ ಟ್ಯಾಂಕ್‌

ಕಟಪಾಡಿ : ಶಿಥಿಲಾವಸ್ಥೆಯಲ್ಲಿ ಓವರ್‌ಹೆಡ್‌ ಟ್ಯಾಂಕ್‌

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

ಕರಾವಳಿಯಲ್ಲಿ ವಿಶ್ವ ಮಟ್ಟದ ಅಕ್ವೇರಿಯಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.