ಕಾಡಾನೆ ದಾಳಿಗೆ ವ್ಯಕ್ತಿ ಬಲಿ: ಕಾಡಾನೆ ದಾಳಿ ತಡೆಗೆ ಶಾಶ್ವತ ಪರಿಹಾರಕ್ಕೆ ಪ್ರತಿಭಟನೆ
Team Udayavani, Feb 11, 2021, 2:57 PM IST
ಹಾಸನ: ಕಾಡಾನೆ ದಾಳಿಗೆ ಆಲೂರು ತಾಲೂಕು ಹಸಿಡೆ ಗ್ರಾಮದ ವಸಂತ ಎಂಬವರು ಬಲಿಯಾದ ಘಟನೆಯಿಂದ ಆಕ್ರೋಶಗೊಂಡ ಸ್ಥಳೀಯರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಘಟನೆ ನಡೆಯತು.
ಹಸಿಡೆ ಗ್ರಾಮದ ವಸಂತ (55 ವ) ಅವರು ಬುಧವಾರ ಸಂಜೆ ಕಾಡಾನೆ ದಾಳಿಗೆ ಬಲಿಯಾಗಿದ್ದರು.
ಇದನ್ನೂ ಓದಿ:ಶಿವಮೊಗ್ಗ ಉಂಬ್ಳೇಬೈಲಿನಲ್ಲಿ ಮತ್ತೆ ಕಾಡಾನೆ ಕಾಟ: ಅಡಿಕೆ ಗಿಡಗಳನ್ನು ಹಾಳುಗಡೆವಿದ ಕಾಡಾನೆ
ಕಾಡಾನೆ ದಾಳಿ ತಡೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಆಗ್ರಹಿಸಿ ವಸಂತ ಅವರ ಶವವನ್ನು ಜಿಲ್ಲಾಧಿಕಾರಿ ಕಚೇರಿ ಬಳಿಯಿಟ್ಟು ಪ್ರತಿಭಟನೆ ನಡೆಸಿದರು. ಜನರ ಪ್ರತಿಭಟನೆಗೆ ಮಣಿದ ಜಿಲ್ಲಾಧಿಕಾರಿಯರು ಲಿಖಿತ ಭರವಸೆ ನೀಡಿದರು.
ಫೆ.16 ರಂದು ಅರಣ್ಯ ಸಚಿವ ಅರವಿಂದ ಲಿಂಬಾಳಿ, ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ, ಶಾಸಕ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಸಭೆ ನಿಗದಿ ಮಾಡಲಾಯಿತು. ಇದರ ಬಳಿಕ ಪ್ರತಿಭಟನೆ ಹಿಂತೆಗೆದುಕೊಂಡ ಪ್ರತಿಭಟನಾಕಾರರು ಶವ ಸಂಸ್ಕಾರಕ್ಕೆ ಹೊರಟರು.