ಹೆಣ್ಣಾನೆಗೆ ರೆಡಿಯೋ ಕಾಲರ್‌ ಅಳವಡಿಕೆ


Team Udayavani, Jan 23, 2021, 1:56 PM IST

Radio collar insertion into the female  Elephant

ಆಲೂರು: ತಾಲೂಕಿನಲ್ಲಿ ಗುರುವಾರದಿಂದ ಪ್ರಾರಂಭವಾದ ಕಾಡಾನೆ ಹಿಡಿಯುವ ಕಾರ್ಯಾಚರಣೆ ಶುಕ್ರವಾರವೂ ಮುಂದುವರಿಯಿತು. ಎರಡು ದಿನಗಳ ಸತತ ಕಾರ್ಯಾಚರಣೆ ಬಳಿಕ ಹೆಣ್ಣಾನೆಯೊಂದು ಪ್ರತ್ಯಕ್ಷವಾಗಿದ್ದು, ಅರವಳಿಕೆ ಮದ್ದು ನೀಡಿ ರೆಡಿಯೋ ಕಾಲರ್‌ ಅನ್ನು ಮರ ಅಳವಡಿಕೆ ಮಾಡಲಾಯಿತು.

ಕಾರ್ಯಾಚರಣೆಯಿಂದ ಘಾಸಿಗೊಂಡ ಕಾಡಾನೆಗಳ ಗುಂಪು, ತಾಲೂಕಿನ ದೊಡ್ಡಬೆಟ್ಟದಿಂದ ಬೋಸ್ಮಾನಹಳ್ಳಿ ಹಾಗೂ ಪಾರ್ವತಮ್ಮ ಬೆಟ್ಟದ ಸುತ್ತಮುತ್ತಲಿನ ದಟ್ಟವಾದ ಕಾಡುಗಳಲ್ಲಿ ಸೇರಿಕೊಂಡಿವೆ. ಇದರಿಂದ ಕಾರ್ಯಾಚರಣೆಗೆ ಸ್ವಲ್ಪಮಟ್ಟಿಗೆ ಅಡಚಣೆ ಆಗಿದೆ. ನಂತರ ಮೂರು ಸಾಕಾನೆಗಳ ಮೂಲಕ ಸತತ 3 ಗಂಟೆಗಳ ಪ್ರಯತ್ನದ ಫ‌ಲವಾಗಿ ಹೆಣ್ಣಾನೆಯೊಂದನ್ನು ಗುರುತಿಸಿ, ಶಾರ್ಪ್‌ ಶೂಟರ್‌ ವೆಂಕಟೇಶ್‌ ರೈಫ‌ಲ್‌ ಮೂಲಕ ಅರವಳಿಕೆ ಮದ್ದು ಇಂಜೆಕ್ಟ್ ಮಾಡಿದರು.

ಅರವಳಿಕೆ ಮದ್ದು ನೀಡಿದ ನಂತರ ಆ ಆನೆಯು ಕಾಡಿನಲ್ಲಿ ಮರೆಯಾಗಿತ್ತು. ನಂತರ ಮರದ ಬುಡದಲ್ಲಿ ನಿಂತಿದ್ದ ಆನೆ ಯನ್ನು ಸಾಕಾನೆಗಳ ಸಹಕಾರದಿಂದ ಪತ್ತೆ ಹಚ್ಚಿ, ರೆಡಿಯೋಕಾಲರ್‌ ಅಳವಡಿಸಲಾಯಿತು. ಈ ಆನೆಗೆ ಹಿಂದೆ ನಡೆದಿದ್ದ ಕಾರ್ಯಾಚರಣೆ ವೇಳೆ ರೆಡಿಯೋ ಕಾಲರ್‌ ಅಳವಡಿಕೆ ಮಾಡಲಾಗಿತ್ತು.

ಆದರೆ, ಅದು ಎಲ್ಲೋ ಉದುರಿ ಹೋಗಿದ್ದರಿಂ ಅರಣ್ಯ ಅಧಿಕಾರಿಗಳು ಹೊಸದಾಗಿ ಅಳವಡಿಸಿದ್ದಾರೆ. ಉಳಿದೆರಡು ಹೆಣ್ಣಾನೆಗಳನ್ನು ಪತ್ತೆ ಹಚ್ಚಲು ಶನಿವಾರವೂ ಕಾರ್ಯಾಚರಣೆ ಮುಂದುವರಿಯಲಿದೆ. ಶುಕ್ರವಾರ ಮಧ್ಯಾಹ್ನ 3 ಗಂಟೆಯಲ್ಲಿ ಕುಶಾಲನಗರ ದುಭಾರೆ ಆನೆ ಶಿಬಿರದಿಂದ ಸುಗ್ರೀವ ಹಾಗೂ ಧನಂಜಯ ಹೆಸರಿನ ಎರಡು ಆನೆಗಳನ್ನು ಕರೆ ತರಲಾಗಿದ್ದು, ಶನಿವಾರ ಬೆಳಗ್ಗೆ 6.30ರಿಂದ ಇನ್ನೆರಡು ಹೆಣ್ಣಾನೆಗಳಿಗೆ ರೇಡಿಯೊ ಕಾಲರ್‌ ಅಳವಡಿಸಲು ಪ್ರಯತ್ನ ಮುಂದುವರಿಸಲಾಗುವುದು, ಜನಸಾಮಾನ್ಯರ ಪ್ರಾಣಕ್ಕೆ ಕುತ್ತು ತಂದ ಪುಂಡಾನೆ ಸೆರೆ ಹಿಡಿದು, ಸ್ಥಳಾಂತರ ಮಾಡಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿ ಮೂಲಗಳು ತಿಳಿಸಿವೆ. ಆನೆ ಹಿಡಿಯುವ ಕಾರ್ಯಾಚರಣೆ ಪ್ರಾರಂಭವಾಗಿರು ವುದರಿಂದ ಕಾಡಾನೆಗಳು ಘಾಸಿಯಾಗಿವೆ. ಮಾವುತರು ಡಾಕ್ಟರ್‌ ಗಳ ಸಹಕಾರದೊಂದಿಗೆ ಶಾರ್ಪ್‌ ಶೂಟರ್‌ಗಳು ಸಾಕಾನೆ ಗಳೊಂದಿಗೆ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.

ಇದನ್ನೂ ಓದಿ:ಶಾಲಾ ಮಕ್ಕಳಿಗೆ ನೇತ್ರ ತಪಾಸಣಾ ಶಿಬಿರ

ಮಲೆನಾಡು ಪ್ರದೇಶದಲ್ಲಿ ಉಪಟಳ ನೀಡುತ್ತಿರುವ ಕಾಡಾನೆಗಳ ಹಾವಳಿ ತಡೆಗೆ ಕಾರ್ಯಾಚರಣೆ ಮುಂದುವರಿಸಲಾಗಿದೆ. ಕಳೆದ ಎರಡು ದಿನಗಳಿಂದ ರೆಡಿಯೋ ಕಾಲರ್‌ ಅವಳಡಿಸಲು ಕಾರ್ಯಾಚರಣೆ ನಡೆಸುತ್ತಿದ್ದರೂ ಕಾಡಾನೆಗಳ ಹಿಂಡು ಕಾಣಿಸಿಕೊಂಡಿರಲಿಲ್ಲ. ಆದರೆ, ಶುಕ್ರವಾರ ಕಾಡಾನೆಗಳು ಕಾಣಿಸಿಕೊಂಡಿವೆ. ಅದರಲ್ಲಿ ಒಂದು ಆನೆಗೆ ಯಶಸ್ವಿಯಾಗಿ ರೆಡಿಯೋ ಕಾಲರ್‌ ಅಳವಡಿಸಿ ಮತ್ತೆ ಕಾಡಿಗೆ ಬಿಡಲಾಗಿದೆ.
ಡಾ.ಬಸವರಾಜು, ಡಿಎಫ್ಒ

ಟಾಪ್ ನ್ಯೂಸ್

avatar purusha

‘ಲಡ್ಡು ಬಂದು ಬಾಯಿಗೆ ಬಿತ್ತಾ…’ ಅವತಾರ್‌ ಪುರುಷ ಹಾಡು

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆ

5banahatti

ಕಾಂಗ್ರೆಸ್ ಜಾತಿಯ ಟ್ರಂಪ್ ಕಾರ್ಡ್ ಬಳಸಿ ಮತ ಕೇಳುತ್ತಿದ್ದಾರೆ: ಬನಹಟ್ಟಿ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಹೂಡಿಕೆದಾರರಲ್ಲಿ ಹುಮ್ಮಸ್ಸು: ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 500ಕ್ಕೂ ಅಧಿಕ ಅಂಕ ಏರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆ

ಒಮಿಕ್ರಾನ್ ಆತಂಕ: ಭಾರತದಲ್ಲಿ 6,990 ಕೋವಿಡ್ ಪ್ರಕರಣ ಪತ್ತೆ, 3.4 ಕೋಟಿ ಮಂದಿ ಚೇತರಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಡಾನೆ

ಕಾಡಾನೆಗಳಿಂದ ಸೋಲಾರ್‌ ಬೇಲಿ ಹಾಳು

ಆಲೂರು: ಅಕಾಲಿಕ ಮಳೆಯಿಂದ ನೊಂದ ಬಡ ಕುಟುಂಬ

ಆಲೂರು: ಅಕಾಲಿಕ ಮಳೆಯಿಂದ ನೊಂದ ಬಡ ಕುಟುಂಬ

ತಲ್ವಾರ್‌ ಹಿಡಿದು ಬೈಕ್‌ ವ್ಹೀಲಿಂಗ್‌

ತಲ್ವಾರ್‌ ಹಿಡಿದು ಬೈಕ್‌ ವ್ಹೀಲಿಂಗ್‌

ಶೀಘ್ರವಾಗಿ ಬೆಳೆ ಹಾನಿ ಪರಿಹಾರ ವಿತರಿಸಿ

ಶೀಘ್ರವಾಗಿ ಬೆಳೆ ಹಾನಿ ಪರಿಹಾರ ವಿತರಿಸಿ

ಸಾಧುಗಳ ಬೇಟಿ

ದೇಗುಲಗಳಿಗೆ ನಾಗಾ ಸಾಧುಗಳು ಭೇಟಿ

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

11police’

ಅಬಕಾರಿ ದಾಳಿ: 1 ಲಕ್ಷ ಮೌಲ್ಯದ ಮದ್ಯ ಜಪ್ತಿ

10crop

ಬೆಳೆ ಹಾನಿ; ಎಕರೆಗೆ 40 ಸಾವಿರ ನೀಡಲು ರೈತರ ಆಗ್ರಹ

avatar purusha

‘ಲಡ್ಡು ಬಂದು ಬಾಯಿಗೆ ಬಿತ್ತಾ…’ ಅವತಾರ್‌ ಪುರುಷ ಹಾಡು

robbery

ಪಿಸ್ತೂಲ್‌ ತೋರಿಸಿ ಸಿನಿಮೀಯ ರೀತಿ ದರೋಡೆ..!

9lake

23 ವರ್ಷದ ನಂತರ ತುಂಬಿದ ಹಳೇಬೀಡು ಕೆರೆಗೆ ಶಾಸಕರಿಂದ ಬಾಗಿನ ಅರ್ಪಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.