ರೆಡಿಯೋ ಕಾಲರ್‌ ಅಳವಡಿಕೆ ಕಣ್ಣೊರೆಸುವ ತಂತ್ರ


Team Udayavani, Jan 22, 2021, 12:46 PM IST

radio-collar-insertion-project

ಸಕಲೇಶಪುರ: ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯುವ ಬದಲು, ಹೋರಾಟ ಗಾರರ ಆಕ್ರೋಶವನ್ನು ತಾತ್ಕಾಲಿಕವಾಗಿ ತಣಿಸಲು ಈ ರೆಡಿಯೋ ಕಾಲರ್‌ ಅಳವಡಿಕೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂಬ ಆರೋಪ ಸಂತ್ರಸ್ತರ ಹೋರಾಟ ಸಮಿತಿಯಿಂದ ಕೇಳಿ ಬಂದಿದೆ.

ಆಲೂರು, ಸಕಲೇಶಪುರ ಮತ್ತು ಬೇಲೂರು ತಾಲೂಕಿನಲ್ಲಿ ಕಾಡಾನೆ ಸಮಸ್ಯೆ ದಶಕದಿಂದ ಇದೆ. ರೈತರು, ಕೂಲಿ ಕಾರ್ಮಿಕರ ಪ್ರಾಣದ ಜೊತೆಗೆ ಕಾಫಿ, ಮೆಣಸು, ಬಾಳೆ, ಭತ್ತ ಬೆಳೆ ಹಾನಿಯೂ ಆಗಿದೆ. ಇದರಿಂದ ಹಲವು ರೈತರ ಬದುಕು ಬೀದಿಗೆ ಬಂದಿದೆ. ಲಕ್ಷಾಂತರ ರೂ. ಖರ್ಚು ಮಾಡಿ, ತಲೆಮಾರುಗಳಿಂದ ಪೋಷಿಸಿಕೊಂಡು ಬಂದಿದ್ದ ಕಾಫಿ ಗಿಡ, ಮೆಣಸಿನ ಬಳ್ಳಿಯನ್ನು ರಾತ್ರಿ ಕಳೆದು ಬೆಳಗಾಗುವುದರೊಳಗೆ ಕಾಡಾನೆಗಳು ಮುರಿದು ಹಾಕಿ, ಬೆಳೆಗಾರರನ್ನು ಆರ್ಥಿಕ ಸಂಕಷ್ಟಕ್ಕೆ ದೂಡಿವೆ.

ಸೂಕ್ತ ಪರಿಹಾರ ಇಲ್ಲ: ಪ್ರತಿ ದಿನವೂ ಈ ಮೂರು ತಾಲೂಕಿನ ಯಾವುದಾದ್ರೂ ಭಾಗದಲ್ಲಿ ಕಾಡಾನೆಗಳು ಕಾಣಿಸಿಕೊಂಡು, ಬೆಳೆ ನಾಶ ಮಾಡಿರುವ ಸುದ್ದಿ ಕೇಳಿ ಬರುತ್ತಲೇ ಇರುತ್ತದೆ. ಈಗಾಗಲೇ ಕೋಟ್ಯಂತರ ರೂ. ಮೌಲ್ಯದ ಬೆಳೆ ನಾಶವಾಗಿದ್ದರೂ ಸರ್ಕಾರ ಸೂಕ್ತ ಪರಿಹಾರವನ್ನು ನೀಡಲು ವಿಳಂಬ ಮಾಡುತ್ತಿದೆ. ಇದು ಬೆಳೆಗಾರರು ಮತ್ತಷ್ಟು ಕೆರಳುವಂತೆ ಮಾಡಿದೆ.

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುವಂತೆ ಅರಣ್ಯ ಇಲಾಖೆ, ಸರ್ಕಾರದ ವಿರುದ್ಧ ಸಾಕಷ್ಟು ಬಾರಿ ಮಲೆನಾಡು ಭಾಗದ ಬೆಳೆಗಾರರು ಪ್ರತಿಭಟನೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇತ್ತೀಚೆಗೆ ಜಿಲ್ಲೆಗೆ ನೂತನ ಉಪ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಆಗಮಿಸಿದ ಬಸವರಾಜ್‌, ಶಾಸಕ ಎಚ್‌.ಕೆ.ಕುಮಾರಸ್ವಾಮಿ ಅಧ್ಯಕ್ಷತೆಯಲ್ಲಿ ಬೆಳೆಗಾರರ ಅಭಿಪ್ರಾಯವನ್ನು ತಿಳಿಯಲು ಪಟ್ಟಣದಲ್ಲಿ ಸಭೆ ಆಯೋಜಿಸಿದ್ದರು. ಸಭೆಯಲ್ಲಿ ಹಾಜರಿದ್ದ ಬಹುತೇಕ ಬೆಳೆಗಾರರು ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕ ಬೇಕು, ಈ ಕುರಿತು ಅರಣ್ಯ, ಜಿಲ್ಲಾ ಉಸ್ತುವಾರಿ ಮಂತ್ರಿಗಳು ಬೆಳೆಗಾರರ ಸಭೆ ಕರೆಯಬೇಕೆಂದು ಆಗ್ರಹಿಸಿದ್ದರು. ಈ ವೇಳೆ ಸಭೆಯಲ್ಲಿ ಹಾಜರಿದ್ದ ಅರಣ್ಯ ಅಧಿಕಾರಿಗಳು ಕಾಡಾನೆಗಳ ಉಪಟಳವನ್ನು ತಾತ್ಕಾಲಿಕವಾಗಿ ತಡೆಯಲು ಮೂರು ಆನೆಗೆ ರೆಡಿಯೋ ಕಾಲರ್‌ ಅಳವಡಿಕೆ, ಒಂದು ಆನೆ ಹಿಡಿಯಲು ಸರ್ಕಾರದಿಂದ ಅನುಮತಿ ಸಿಕ್ಕಿದೆ ಎಂದು ಹೇಳಿದ್ದರು. ಅದರಂತೆ ಈಗ ಕಾರ್ಯಾಚರಣೆ ನಡೆಸ ಲಾಗುತ್ತಿದೆ. ಆದರೆ, ಇದರಿಂದ ಶಾಶ್ವತ ಪರಿಹಾರ ಸಿಗುವುದಿಲ್ಲ ಎಂದು ಬೆಳೆಗಾರರ ದೂರಾಗಿದೆ.

ತಾಲೂಕಿಗೆ 22ರಂದು ಅರಣ್ಯ ಸಚಿವರು ಬರಲಿದ್ದು, ಬೆಳೆಗಾರರೊಂದಿಗೆ ಕಾಡಾನೆ ಸಮಸ್ಯೆ ಕುರಿತು ಸಭೆ ನಡೆಸುತ್ತಾರೆ ಎಂದು ಅರಣ್ಯ ಅಧಿಕಾರಿಗಳು ಆಶ್ವಾಸನೆ ನೀಡಿದ್ದರು. ಅಷ್ಟರಲ್ಲಿ ಅರಣ್ಯ ಖಾತೆ ಹೊಂದಿದ್ದ ಆನಂದ್‌ಸಿಂಗ್‌ ಬದಲಾಗಿದ್ದಾರೆ. ಅರವಿಂದ್‌ ಲಿಂಬಾವಳಿ ಈಗ ಖಾತೆ ಹೊಣೆ ಹೊತ್ತಿದ್ದು, ಅವರಾದ್ರೂ ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕುತ್ತಾರೆಯೋ ಅಥವಾ ಆನಂದ್‌ಸಿಂಗ್‌ರಂತೆ ನೀಡದೇ ಸುಮ್ಮ ನಿ ರತ್ತಾರೋ ಕಾದು ನೋಡ ಬೇ ಕು. ಒಟ್ಟಾರೆ ನೂತನ ಸಚಿವರು, ಸರ್ಕಾರ ಅಧಿಕಾರ ಬಂದಾಗಲೆಲ್ಲ ಪ್ರತಿಭ ಟನೆ ಮಾಡಿ ಗಮನ ಸೆಳೆದರೂ ಏನೂ ಪರಿಹಾರ ಆಗಿಲ್ಲ. ಕಾಡಾನೆ ಸಮಸ್ಯೆಯಿಂದ ಯಾವಾಗ ಮುಕ್ತಿ ದೊರೆಯುತ್ತದೋ ಎಂದು ಮಲೆನಾಡಿಗರು ದಿನ ಎಣಿಸುತ್ತಿದ್ದಾರೆ.

ಇದನ್ನೂ ಓದಿ:ಭಾರತೀಯ Facebook ಬಳಕೆದಾರರ ಡಾಟಾಕ್ಕೆ ಕನ್ನ: ಕೇಂಬ್ರಿಡ್ಜ್ ಅನಾಲಿಟಿಕಾ ವಿರುದ್ಧ CBI ಕೇಸ್

ಸಕಲೇಶಪುರ- ಆಲೂರು ಭಾಗ ದಲ್ಲಿ 70 ಆನೆ ತಿರುಗಾಡುತ್ತಿವೆ. ಇದರಲ್ಲಿ 3ಕ್ಕೆ ಮಾತ್ರ ರೆಡಿಯೋ ಕಾಲರ್‌ ಹಾಕಲಾಗುತ್ತಿದೆ. ಇದರಿಂದ ಕಾಡಾನೆ ಗಳು ಎಲ್ಲಿದೆ ಎಂದು ತಿಳಿಯುವುದು ಬಿಟ್ಟರೆ, ಬೇರೆ ಯಾವುದೇ ಉಪಯೋಗವಿಲ್ಲ. ಈ ಹಿಂದೆ ಹಾಕಿದ್ದ ರೆಡಿಯೋ ಕಾಲರ್‌ಗಳು ಕಾರ್ಯನಿರ್ವಹಿಸುತ್ತಿಲ್ಲ, ಶಾಶ್ವತ ಪರಿಹಾರ ಹುಡುಕುವ ಬದಲು, ಸಂತ್ರಸ್ತ ರೈತರ ಕಣ್ಣೊರೆಸಲು ಈ ತಾತ್ಕಾಲಿಕ ಕಾರ್ಯಾಚರಣೆ ನಡೆಸುತ್ತಿದೆ ಅಷ್ಟೇ.

 ಶಶಿಧರ್ಹೊಸಗದ್ದೆ, ಅಧ್ಯಕ್ಷರು, ಕಾಡಾನೆ ಸಂತ್ರಸ್ಥರ ಹೋರಾಟ ಸಮಿತಿ

 

ಸುಧೀರ್ಎಸ್‌.ಎಲ್

ಟಾಪ್ ನ್ಯೂಸ್

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಬ್ರೆಝಿಲ್‌, ಸ್ವಿಜರ್ಲೆಂಡ್‌ಗೆ ನಾಕೌಟ್‌ ಅರ್ಹತೆ

ಬ್ರೆಝಿಲ್‌, ಸ್ವಿಜರ್ಲೆಂಡ್‌ಗೆ ನಾಕೌಟ್‌ ಅರ್ಹತೆ

ಫಿಫಾ ವಿಶ್ವಕಪ್‌: ಸೆರ್ಬಿಯದೆದುರು ಸ್ವಿಸ್‌ಗೆ ರೋಚಕ ಜಯ

ಫಿಫಾ ವಿಶ್ವಕಪ್‌: ಸೆರ್ಬಿಯದೆದುರು ಸ್ವಿಸ್‌ಗೆ ರೋಚಕ ಜಯ

police

ಪ್ರಿಯಾಂಕ್ ಖರ್ಗೆ ಪರಮಾಪ್ತ ರಾಜು ಕಪನೂರ್ ಬಂಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬಸ್‌ ನಿಲ್ದಾಣದಲ್ಲಿ ದುರ್ನಾತ:ಪ್ರಯಾಣಿಕರಿಗೆ ನಿತ್ಯ ನರಕ

ಬಸ್‌ ನಿಲ್ದಾಣದಲ್ಲಿ ದುರ್ನಾತ:ಪ್ರಯಾಣಿಕರಿಗೆ ನಿತ್ಯ ನರಕ

tdy-18

ಕಾಡಾನೆ ಹಾವಳಿ: ಡಿ.2ರಂದು ಬೃಹತ್‌ ಪ್ರತಿಭಟನೆ

tdy-19

ಚಿರತೆಗಳ ಬಗ್ಗೆ ಎಚ್ಚರವಿರಲಿ, ನಿರ್ಲಕ್ಷ್ಯ ಬೇಡ

ಕೋಡಿಮಠದಲ್ಲಿ ಲಕ್ಷ ದೀಪೋತ್ಸವ ಸಂಪನ್ನ

ಕೋಡಿಮಠದಲ್ಲಿ ಲಕ್ಷ ದೀಪೋತ್ಸವ ಸಂಪನ್ನ

ಕುಡಿಯುವ ನೀರಿಗೆ ಹಾಹಾಕಾರ

ಕುಡಿಯುವ ನೀರಿಗೆ ಹಾಹಾಕಾರ

MUST WATCH

udayavani youtube

ಫ್ಲಿಪ್ ಮಾಡಲು ಏನೆಲ್ಲಾ ತಯಾರಿ ಮಾಡಿಕೊಳ್ಳಬೇಕು

udayavani youtube

ಬಂಡೂರು ಕುರಿ ತಳಿ ಖರೀದಿಸುವ ಮುನ್ನ ಈ ವಿಷಯಗಳ ಬಗ್ಗೆ ನಿಮಗೆ ತಿಳಿದಿರಲಿ

udayavani youtube

ಆರೋಗ್ಯಕ್ಕೂ ರುಚಿಕ್ಕೂ ಉತ್ತಮ ಸಿದ್ದು ಹಲಸು

udayavani youtube

Oxygen Cylinder ಇಲ್ಲದಿದ್ದರೂ ಉಪಯೋಗಕ್ಕೆ ಬರುತ್ತದೆ ಈ machine ! | Girija Surgicals

udayavani youtube

ಶ್ರೀ ದುರ್ಗಾ ಆದಿಶಕ್ತಿ ಕ್ಷೇತ್ರ ದೊಡ್ಡಣಗುಡ್ಡೆ ಕ್ಷೇತ್ರದಲ್ಲಿ ‘ದೀಪೋತ್ಸವ’ ಸಂಭ್ರಮ

ಹೊಸ ಸೇರ್ಪಡೆ

ಮೂಡುಬಿದಿರೆ ಪರಿಸರದಲ್ಲಿ ದಿಢೀರ್‌ ಮಳೆ

ಮೂಡುಬಿದಿರೆ ಪರಿಸರದಲ್ಲಿ ದಿಢೀರ್‌ ಮಳೆ

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ: ಅರುಣ್‌ ಸಿಂಗ್‌

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ದತ್ತಪೀಠದಲ್ಲಿ ಪಾದುಕೆ ಪೂಜೆ ನೆರವೇರಿಸಲು ಇಬ್ಬರು ಅರ್ಚಕರ ನೇಮಕ

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ವಿಶ್ವಕಪ್‌: ನೇಮರ್‌ ಆಟ ಮುಗಿಯಿತೇ?

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

ಫಿಫಾ ವಿಶ್ವಕಪ್‌: ನೆದರ್ಲೆಂಡ್ಸ್‌ ಕ್ವಾರ್ಟರ್‌ ಫೈನಲ್‌ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.