Udayavni Special

ಮಲೆನಾಡಿನಲ್ಲಿ ಮಳೆ ಕೊರತೆ: ಬಿತ್ತನೆಗೆ ಹಿನ್ನಡೆ

ಕಳೆದ ವರ್ಷ ಅತಿವೃಷ್ಟಿ, ಈ ವರ್ಷ ಅನಾವೃಷ್ಟಿಯಿಂದ ರೈತರಿಗೆ ಸಂಕಷ್ಟ • ವಾಡಿಕೆಗಿಂತ ಶೇ.20 ಕಡಿಮೆ ಮಳೆ

Team Udayavani, Jul 19, 2019, 11:56 AM IST

hasan-tdy-1

ಸಕಲೇಶಪುರ ತಾಲೂಕಿನ ಬೆಳ್ಳೂರು ಗ್ರಾಮದಲ್ಲಿ ಭತ್ತವನ್ನು ನಾಟಿ ಮಾಡಲಾಗುತ್ತಿದೆ.

ಸಕಲೇಶಪುರ: ಮಲೆನಾಡಿನಲ್ಲಿ ಹಿಂದೆಂದೂ ಕಾಣದ ರೀತಿಯಲ್ಲಿ ಮಳೆ ಆಷಾಢದಲ್ಲೇ ಕಾಣೆಯಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ತೀವ್ರ ಸಂಕಷ್ಟ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿದೆ.

2018ರಲ್ಲಿ ಅತಿವೃಷ್ಟಿಯಿಂದ ತಾಲೂಕು ನಲುಗಿ ಹೋಗಿದ್ದು ಈ ಬಾರಿ ಅನಾವೃಷ್ಟಿಯಿಂದ ತಾಲೂಕು ತತ್ತರಿಸುವ ಸಾಧ್ಯತೆಯಿದೆ. 2019ರ ಜನವರಿ 1ರಿಂದ ಜುಲೈ 17ರವರೆಗೆ ತಾಲೂಕಿನಲ್ಲಿ ವಾಡಿಕೆಯಂತೆ 1074 ಮಿ.ಮೀ. ಮಳೆಯಾಗಬೇಕಾಗಿದ್ದು, ಆದರೆ ಕೇವಲ 864ಮಿ.ಮೀ. ಮಳೆಯಾಗಿದ್ದು ಇದರಿಂದ ಶೇ.20 ವಾಡಿಕೆಗಿಂತ ಕಡಿಮೆ ಮಳೆಯಾಗಿದೆ.

ತೀವ್ರ ಮಳೆ ಕೊರತೆ: ಬೆಳಗೋಡು ಹೋಬಳಿಯಲ್ಲಿ 1,002 ಮಿ.ಮೀ. ವಾಡಿಕೆ ಮಳೆಯಾಗಬೇಕಾಗಿದ್ದು ಆದರೆ ಕೇವಲ 573 ಮಿ.ಮೀ. ಮಳೆಯಾಗಿರುವುದರಿಂದ ಶೇ.43 ಮಳೆ ಕೊರತೆ ಬೆಳಗೋಡು ಹೋಬಳಿಯಲ್ಲಿ ಉಂಟಾಗಿದೆ. ಸಕಲೇಶಪುರ ಹೋಬಳಿಯಲ್ಲಿ 1,018 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ 797 ಮಿ.ಮೀ. ಮಳೆಯಾಗಿದ್ದು ಶೇ22 ಮಳೆ ಕೊರತೆ ಉಂಟಾಗಿದೆ.ಹಾನುಬಾಳ್‌ ಹೋಬಳಿಯಲ್ಲಿ 1,191 ಮಿ.ಮೀ. ಮಳೆಯಾಗಬೇಕಾಗಿದ್ದು ಆದರೆ 1,072ಮಿ.ಮೀ. ಮಳೆ ಉಂಟಾಗಿದ್ದು ಶೇ.10 ಕಡಿಮೆ ಮಳೆಯಾಗಿದೆ. ಅತಿ ಹೆಚ್ಚು ಮಳೆ ಬೀಳುವ ಹೆತ್ತೂರು ಹೋಬಳಿಯಲ್ಲಿ ವಾಡಿಕೆಯಂತೆ 1,096ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಕೇವಲ 935 ಮಿ.ಮೀ. ಮಳೆಯುಂಟಾಗಿ ಶೇ.15 ಪ್ರಮಾಣ ಕಡಿಮೆಯಾಗಿದೆ. ಯಸಳೂರು ಹೋಬಳಿಯಲ್ಲಿ 937 ಮಿ.ಮೀ. ಮಳೆಯಾಗಬೇಕಾಗಿದ್ದು ಆದರೆ 662 ಮಿ.ಮೀ. ಮಳೆಯಾಗಿದ್ದು ಶೇ.29 ಮಳೆ ಕಡಿಮೆಯಾಗಿದೆ.

ಜುಲೈನಲ್ಲೂ ಕೃಪೆ ತೋರದ ವರುಣ: ಜೂನ್‌ ತಿಂಗಳಿನಲ್ಲಿ ಒಟ್ಟಾರೆಯಾಗಿ ಶೇ.31ರಷ್ಟು ಮಳೆಯ ಕೊರತೆ ಉಂಟಾಗಿದ್ದು ಇದೀಗ ಜುಲೈ ಮೊದಲ ವಾರದಲ್ಲಿ ಮಳೆ ಬಿದ್ದಿದ್ದು, ಎರಡನೇ ಹಾಗೂ ಮೂರನೇ ವಾರದಲ್ಲಿ ಮಳೆ ಸಂಪೂರ್ಣವಾಗಿ ಕೈಕೊಟ್ಟು ಬಿಸಿಲಿನ ವಾತವರಣ ಮೂಡಿರುವುದು ಆತಂಕಕಾರಿಯಾಗಿದೆ. ಜೂನ್‌ ಮಾಹೆಯಲ್ಲಿ ಕೇವಲ 290ಮಿ.ಮೀ. ಮಳೆಯಾಗಿದ್ದು ಇದೀಗ ಜುಲೈ 17ರವರೆಗೆ 492 ಮಿ.ಮೀ. ಮಳೆಯಾಗಿದೆ. ಮಲೆನಾಡಿನಲ್ಲಿ ಬೇರೆ ಸಮಯದಲ್ಲಿ ಮಳೆ ಕೈಕೊಟ್ಟರು ಸಹ ಜುಲೈ ಮಾಹೆಯಲ್ಲಿ ಭರ್ಜರಿಯಾಗಿ ಮಳೆ ಬರುವುದು ವಾಡಿಕೆಯಾಗಿದ್ದು ಆದರೆ ಈ ಬಾರಿ ಜುಲೈ ಮಾಹೆಯಲ್ಲಿ ಹಿಂದೆಂದೂ ಕಾಣದ ಬಿಸಿಲು ಕಾಣುತ್ತಿದೆ.

ಕಾಫಿ ಬೆಳೆಗಾರರಿಗೂ ಸಂಕಷ್ಟ: ತೀವ್ರ ಮಳೆ ಬೀಳುವ ಪ್ರದೇಶಗಳಾದ ಹೊಂಗಡಹಳ್ಳ, ವನಗೂರು, ಬಿಸಿಲೆ, ಕಾಗಿನಹರೆ, ದೇವಾಲದಕೆರೆ, ಕಾಡುಮನೆ, ಹೆಗ್ಗದ್ದೆ, ಮಾರನಹಳ್ಳಿ ಮುಂತಾದ ಕಡೆಗಳಿಗೆ ಮಳೆಯ ಪ್ರಮಾಣ ಕಡಿಮೆಯಾಗಿರುವುದರಿಂದ ಆ ಭಾಗದ ಕಾಫಿ ಬೆಳೆಗಾರರಿಗೆ ತುಸು ಅನುಕೂಲವಾಗುವುದರಲ್ಲಿ ಅನುಮಾನವಿಲ್ಲ ಆದರೆ ಬೆಳಗೋಡು, ಸಕಲೇಶಪುರ ಸುತ್ತಮುತ್ತಲಿನ ಕೆಲವು ಗ್ರಾಮಗಳ ಕಾಫಿ ಬೆಳೆಗಾರರು ಮಳೆಯ ಕೊರತೆಯಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಮಳೆಯ ಕೊರತೆಯ ನಡುವೆಯೂ ಕೃಷಿ ಚಟುವಟಿಕೆಗಳು ಭರದಿಂದ ನಡೆಯುತ್ತಿದೆ.

● ಸುಧೀರ್‌ ಎಸ್‌.ಎಲ್

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

ಬಿಜೆಪಿ ಸಂಸ್ಥಾಪನಾ ದಿನ ಆಚರಿಸಲು ಕೋವಿಡ್ ಸಂಕಷ್ಟವನ್ನು ಉಪಯೋಗಿಸಿತೆ ಬಿಜೆಪಿ: ಎಚ್ ಡಿಕೆ

world-wide-covid19

ಕೋವಿಡ್-19 ಮರಣಮೃದಂಗ: ವಿಶ್ವದಾದ್ಯಂತ 64,720 ಬಲಿ, 12ಲಕ್ಷ ದಾಟಿದ ಸೋಂಕಿತರ ಸಂಖ್ಯೆ

donald-trump-jpeg

ಪರಿಸ್ಥಿತಿ ಬಿಗಡಾಯಿಸುತ್ತಿದೆ, ಸಾವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ: ಟ್ರಂಪ್

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಮೃತ್ಯುಂಜಯನ ನೆನೆದು ದೀಪ ಹಚ್ಚೋಣ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಲಾಕ್‌ಡೌನ್‌: ರಾಜ್ಯಾದ್ಯಂತ ಸಡಿಲಗೊಳ್ಳುತ್ತಿರುವ ಬಿಗಿ; ಹೆಚ್ಚಿದ ಭೀತಿ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

ಅಂಡರ್‌-17 ವನಿತಾ ವಿಶ್ವಕಪ್‌ ಮುಂದೂಡಿಕೆ

Water-Drowning

ಜಾರಿ ಬಿದ್ದ ಮೊಬೈಲ್ ತೆಗೆಯಲು ಹೋಗಿ ನಾಲ್ಕು ಕಂದಮ್ಮಗಳು ನೀರುಪಾಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇಂದಿನಿಂದ 25 ಸಾವಿರ ಲೀ. ಹಾಲು ಉಚಿತ ವಿತರಣೆ

ಇಂದಿನಿಂದ 25 ಸಾವಿರ ಲೀ. ಹಾಲು ಉಚಿತ ವಿತರಣೆ

hasan-tdy-2

ತರಕಾರಿ ಖರೀದಿಗೆ ಮುಗಿಬಿದ್ದ ಜನರು

hasan-tdy-1

ಜಿಲ್ಲೆಯ 16ಮಂದಿ ಧರ್ಮ ಸಭೆಯಲ್ಲಿ ಭಾಗಿ

ಹಾಲು ಖರೀದಿ ರಜೆ ಘೋಷಣೆಗೆ ವಿರೋಧ

ಹಾಲು ಖರೀದಿ ರಜೆ ಘೋಷಣೆಗೆ ವಿರೋಧ

ಹಾಸನದಲ್ಲಿ ತರಕಾರಿ ಖರೀದಿಗೆ ನೂಕು ನುಗ್ಗಲು

ಹಾಸನದಲ್ಲಿ ತರಕಾರಿ ಖರೀದಿಗೆ ನೂಕು ನುಗ್ಗಲು

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಸಾರಿಗೆ ನಿಯಂತ್ರಣ ಕೊಠಡಿ: ಸವದಿ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ಗಡಿ ಬಂದ್‌ ಸಡಿಲಿಕೆ ಇಲ್ಲ : ಬಿಎಸ್‌ವೈ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ

ನಮಾಜ್‌: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಅರ್ಜಿ

ಕೆಎಸ್‌ಆರ್‌ಟಿಸಿ: ವೇತನ ಕಡಿತ ಇಲ್ಲ

ಕೆಎಸ್‌ಆರ್‌ಟಿಸಿ: ವೇತನ ಕಡಿತ ಇಲ್ಲ

ತಬ್ಲಿಘಿ ಹಿಂದಿದೆ ಜೆಹಾದ್‌ ಹುನ್ನಾರ: ಶೋಭಾ

ತಬ್ಲಿಘಿ ಹಿಂದಿದೆ ಜೆಹಾದ್‌ ಹುನ್ನಾರ: ಶೋಭಾ