22 ವರ್ಷಗಳ ಜಮೀನು ವಿವಾದ: ಪೊಲೀಸರು, ರೈತ ಮುಖಂಡರ ಸಮ್ಮುಖದಲ್ಲಿ ಇತ್ಯರ್ಥ
Team Udayavani, Jan 8, 2022, 4:18 PM IST
ಆಲೂರು: ಸುಮಾರು 22 ವರ್ಷಗಳಿಂದ ಎರಡು ಕುಟಂಬಗಳ ನಡುವೆ ನಡೆಯುತ್ತಿದ್ದ ಜಮೀನು ವ್ಯಾಜ್ಯ ಸ್ಥಳೀಯ ರೈತ ಮುಖಂಡರು ಹಾಗೂ ಆಲೂರು ಪೋಲಿಸರ ಮದ್ಯ ಪ್ರವೇಶದಿಂದ ಇತ್ಯರ್ಥಗೊಂಡಂತಾಗಿದೆ.
ಆಲೂರು ತಾಲ್ಲೂಕಿನ ಕೆ.ಹೊಸಕೋಟೆ ಹೋಬಳಿ ಹೂಸ್ಕೂರು ಗ್ರಾಮದ ಪಾಲಕ್ಷ ಹಾಗೂ ತಮ್ಮಯ್ಯಸ್ವಾಮಿ ಇವರಿಬ್ಬರು ಸಹೋದರ ಸಂಬಂದಿಗಳಾಗಿದ್ದು ಅರ್ದ ಎಕರೆ ಜಮೀನಿಗಾಗಿ ಸುಮಾರು 22 ವರ್ಷಗಳಿಂದ ಪಾಲಕ್ಷ ಜಮೀನು ಸರ್ವೆ ಮಾಡಿಸಿದ್ರೆ ತಮ್ಮಯ್ಯಸ್ವಾಮಿ ಒಪ್ಪತ್ತಿರಲಿಲ್ಲ ತಮ್ಮಯ್ಯಸ್ವಾಮಿ ಸರ್ವೆ ಮಾಡಿಸಿದ್ರೇ ಪಾಲಕ್ಷ ಒಪ್ಪುತ್ತಿರಲಿಲ್ಲ ಹೀಗಾಗಿ ಒಬ್ಬರಿಗೊಬ್ಬರು ಜಿದ್ದಿಗೆ ಬಿದ್ದವರಂತೆ ಆಗಿಂದಾಗ್ಗೆ ಜಗಳ ಮಾಡಿಕೊಳ್ಳುತ್ತಿದ್ದರು ಕೆ.ಹೊಸಕೋಟೆ ಹೋಬಳಿ ರೈತ ಸಂಘದ ಮುಖಂಡ ಹೈದೂರು ಜಯಣ್ಣ ಹಾಗೂ ಮೋಹನ್ ಅವರು ಆಲೂರು ಪೋಲಿಸ್ ಅಧಿಕಾರಿಗಳ ಸಹಾಯದಿಂದ ಜಮೀನು ಸರ್ವೆ ಮಾಡಿಸಿ ಇಬ್ಬರನ್ನು ಒಟ್ಟಿಗೆ ಕೂರಿಸಿ ಅವರಿಗೆ ತಿಳಿ ಹೇಳಿ ಒಡೆದು ಹೋಗಿದ್ದ ಎರಡು ಕುಟುಂಬನ್ನು ಹೊಂದು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ರೈತ ಮುಖಂಡ ಜಯಣ್ಣ ಮಾತನಾಡಿ ಗ್ರಾಮೀಣ ಭಾಗದಲ್ಲಿ ಸಣ್ಣಪುಟ್ಟ ವಿಚಾರಕ್ಕೂ ದೊಡ್ಡದು ಮಾಡಿ ಕೋರ್ಟ್ ಪೊಲೀಸ್ ಠಾಣೆ ಮೆಟ್ಟಿಲು ಹತ್ತುತ್ತಿದ್ದು ನೆಮ್ಮದಿಯ ಜೊತೆಗೆ ಹಣ ಕಳೆದುಕೊಂಡು ಬೀದಿಗೆ ಬಂದಿದ್ದಾರೆ ಅದ್ದರಿಂದ ಯಾವುದೇ ಸಮಸ್ಯೆ ಇದ್ದರು ಪರಿಹಾರನೂ ಇರುತ್ತದೆ ಅದ್ದರಿಂದ ಜನಸಾಮಾನ್ಯರು ಸಣ್ಣಪುಟ್ಟ ವಿಚಾರವನ್ನ ದೊಡ್ಡದು ಮಾಡಿ ನೆಮ್ಮದಿ ಕಳೆದುಕೊಳ್ಳಬಾರದು ಎಂದರು.
ಈ ಸಂದರ್ಭದಲ್ಲಿ ಎ ಎಸ್ ಐ ಲೂಯಿಸ್,ಹೆಡ್ ಕಾನ್ಸಟೇಬಲ್ ದಿನೇಶ್,ನಂಜೇಗೌಡ,ತಾಲ್ಲೂಕು ಸರ್ವೆಯರ್ ಕುಮಾರ್,ಶಕೀಲ್ ಅಹಮದ್, ಕೆ.ಹೊಸಕೋಟೆ ಹೋಬಳಿ ರೈತಾ ಮುಖಂಡ ಜಯಣ್ಣ ಹೈದೂರು,ಮೋಹನ್,ಹಾಗೂ ಇತರರು ಹಾಜರಿದ್ದರು.