ರಸ್ತೆ ಅಗಲೀಕರಣ ಸ್ಥಗಿತ: ಅಭಿವೃದ್ಧಿಗೆ ಗ್ರಹಣ

ನ್ಯಾಯಾಲಯದಲ್ಲಿ ಪ‹ಕರಣ: ಅತ್ತ ಅಗಲೀಕರಣವೂ ಇಲ್ಲ , ಇತ್ತ ವರ್ತಕರಿಗೆ ಪರಿಹಾರವೂ ಇಲ್ಲ

Team Udayavani, Jul 22, 2019, 12:03 PM IST

ಸಕಲೇಶಪುರ: ಪಟ್ಟಣದ ಮುಖ್ಯರಸ್ತೆಯ ಅಗಲಿಕರಣ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿದ್ದು, ಅತ್ತ ರಸ್ತೆ ಅಗಲೀಕರಣವೂ ಇಲ್ಲ ಇತ್ತ ವರ್ತಕರಿಗೆ ಪರಿಹಾರವು ದೊರಕದ ಪರಿಣಾಮ ಪಟ್ಟಣದ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ.

2018 ಜುಲೈ 22ರಂದು ಮಳೆಯ ನಡುವೆಯೂ ಮುಂಜಾನೆ 6.30ಕ್ಕೆ ಸುಮಾರು 4 ಜೆಸಿಬಿಗಳು, ಒಂದು ಕ್ರೇನ್‌,10 ಕ್ಕೂ ಹೆಚ್ಚು ಟ್ರಾಕ್ಟರ್‌,ಒಂದು ಹಿಟಾಚಿ ಯಂತ್ರ ನೂರಾರು ಕಾರ್ಮಿಕರು ಹಾಗೂ 200 ಕ್ಕೂ ಅಧಿಕ ಪೋಲಿಸರನ್ನು ಬಳಸಿಕೊಂಡ ಅಂದಿನ ಉಪವಿಭಾಗಾಧಿಕಾರಿ ಲಕ್ಷ್ಮೀಕಾಂತರೆಡ್ಡಿ ಮೊದಲಿಗೆ ಪಟ್ಟಣದ ಹಳೇ ತಾಲೂಕು ಕಚೇರಿ ತೆರವುಗೊಳಿಸುವ ಮೂಲಕ ಏಕಾಏಕಿ ರಸ್ತೆ ಅಗಲಿಕರಣಕ್ಕೆ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು.

ಇದಾದ ಕೆಲವೆ ನಿಮಿಷಗಳಲ್ಲಿ ಪುರಸಭೆ ಮುಂಭಾಗ, ಹಳೇ ಬಸ್‌ ನಿಲ್ದಾಣ ಹಾಗೂ ಸಕಲೇಶ್ವರಸ್ವಾಮಿ ದೇವಸ್ಥಾನ ಸೇರಿದಂತೆ ಮೂರು ಸ್ಥಳದಿಂದ ಕಾರ್ಯಾಚರಣೆ ಆರಂಭವಾಗಿತ್ತು.

ಬೆದರಿದ ವರ್ತಕರು: ರಸ್ತೆ ಅಗಲೀಕರಣ ಯಾವಾಗ ಆರಂಭವಾಗಲಿದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲದ ಕಾರಣ ನಿರಾಂತಕವಾಗಿದ್ದ ಬಹುತೇಕ ವರ್ತಕರು ಮುಂಜಾನೆ ಆರಂಭವಾದ ಕಾರ್ಯಾಚರಣೆ ಕಂಡು ಹೌಹಾರಿದ್ದಲ್ಲದೆ ತಮ್ಮ ಅಂಗಡಿಗಳಲ್ಲಿದ್ದ ಸಾಮಾನುಗಳನ್ನು ಕೆಲವೇ ಗಂಟೆಗಳಲ್ಲಿ ತೆರವುಗೊಳಿಸಿ ಕಟ್ಟಡವನ್ನು ಕಾರ್ಯಾಚರಣೆಗೆ ಮುಕ್ತಗೊಳಿಸಿದ್ದರು. ಆದರೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ ವರ್ತಕರು ಮಾತ್ರ ತುಸು ನಿರಾಳರಾಗಿದ್ದರು.

ತಾಲೂಕು ಆಡಳಿತದ ಕಾರ್ಯಾಚರಣೆಯಿಂದ ಕಟ್ಟಡಗಳು ಹಾನಿಗೊಳ್ಳಲಿವೆ ಎಂಬ ಉದ್ದೇಶದಿಂದ ಹಲವಾರು ವರ್ತಕರು ಖುದ್ದು ತಮ್ಮ ಕಟ್ಟಡಗಳನ್ನು ತೆರವುಗೊಳಿಸಿಕೊಂಡರು. ತಡೆಯಾಜ್ಞೆ ತಂದಿದ್ದ ಹಲವು ವರ್ತಕರು ಸಹ ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಣೆಯಿಂದ ತೆರವುಗೊಳಿಸಿಕೊಂಡು ಕಾರ್ಯಾಚರಣೆಗೆ ಸಹಕರಿಸಿದ್ದರು. ಕಾರ್ಯಾಚರಣೆ ವೇಳೆ ಮುಂದಾಳತ್ವ ವಹಿಸಿದ್ದ ಉಪವಿಭಾಗಧಿಕಾರಿ ಕಟ್ಟಡ ತೆರವು ಕಾರ್ಯಾಚರಣೆ ಆರಂಭವಾಗಿದ ಕ್ಷಣದಿಂದ ಕಾರ್ಯಾಚರಣೆ ಅಂತ್ಯದ ವರಗೆ ಸ್ಥಳದಲ್ಲೇ ಹಾಜರಿದ್ದು ಇವರೊಂದಿಗೆ ತಹಶೀಲ್ದಾರ್‌ ನಾಗಭೂಷಣ್‌, ಡಿವೈಎಸ್‌ಪಿ ಜಗದೀಶ್‌, ತಾಪಂ ಕಾರ್ಯನಿರ್ವಹಣಾಧಿಕಾರಿ ಡಾ. ಪುನೀತ್‌,ಪುರಸಭೆ ಮುಖ್ಯಾಧಿಕಾರಿ ವಿಲ್ಸನ್‌ ಹಾಜರಿದ್ದರು.

ಸಾವಿರಾರು ಜನರಿಂದ ವೀಕ್ಷಣೆ: ಕಟ್ಟಡತೆರವು ಕಾರ್ಯಾ ಚರಣೆ ವಿಚಾರ ಜನರಿಂದ ಜನರಿಗೆ ತಿಳಿದು ಸಾವಿ ರಾರು ಜನರು ವೀಕ್ಷಣೆಗೆ ಧಾವಿಸಿದ್ದರಿಂದ ಎಚ್ಚೆತ್ತ ಪೋಲಿಸ್‌ ಇಲಾಖೆ ಪಟ್ಟಣದ ತೇಜಸ್ವಿ ಚಿತ್ರಮಂದಿರ ದಿಂದ ಚಂಪಕನಗರ ಬಡಾವಣೆ ಹಾಗೂ ಅಶೋಕ ರಸ್ತೆಯಿಂದ ಅಜಾದ್‌ ರಸ್ತೆ ವರೆಗೆ ನಿಷೇಧಾಜ್ಞೆ ಜಾರಿ ಗೊಳಿಸಿದ್ದರೂ ಸಾವಿರಾರು ಜನರು ಮಳೆಯಲ್ಲೇ ಕಟ್ಟಡ ತೆರವು ವೀಕ್ಷಣೆಗಾಗಿ ಜಮಾಯಿಸಿದ್ದರು.

ಇತ್ಯರ್ಥವಾಗದ ಪ್ರಕರಣ: ಹಲವು ವರ್ಷಗಳಿಂದ ನೆಲೆವೂರಿದ್ದ ವರ್ತಕರ ಹಾಗೂ ಅವರ ಕುಟುಂಬಗಳಿಗೆ ಕನಿಷ್ಠ ಪರಿಹಾರವಿಲ್ಲದೇ ಏಕಾಏಕಿ ಸುರಿಯುವ ಮಳೆಯಲ್ಲಿ ಅಂಗಡಿಗಳನ್ನು ಹಾಗೂ ಮನೆಗಳನ್ನು ತೊರೆಯಬೇಕಾದ ಪರಿಸ್ಥಿತಿಯಿಂದ ನಲುಗಿ ಹೋದರೆ ಇತ್ತ ನಾಗರಿಕರಿಗೆ ರಸ್ತೆ ಅಗಲಿಕರಣವಾಗುತ್ತದೆ ಎಂಬ ಸಂತೋಷ ಕಂಡು ಬರುತ್ತಿತ್ತು. ಆದರೆ ಕೆಲವು ವರ್ತಕರು ತಮ್ಮ ಕಟ್ಟಡಕ್ಕೆ ಪರಿಹಾರ ನೀಡದೇ ತೆರವು ಕಾರ್ಯ ನಡೆಸಲಾಗುತ್ತಿದೆ ಎಂದು ಆರೋಪಿಸಿ ತೆರವು ಕಾರ್ಯ ವಿರೋಧಿಸಿ ನ್ಯಾಯಾಲಯದ ಮೆಟ್ಟಿಲೇರಿ ದ್ದರಿಂದ ನ್ಯಾಯಾಲಯ ತೆರವು ಕಾರ್ಯಕ್ಕೆ ತಡೆ ನೀಡಿತು. ನಂತರದ ಆರು ತಿಂಗಳಿನಲ್ಲಿ ನಾಲ್ಕು ಬಾರಿ ವರ್ತಕರು ಹಾಗೂ ತಾಲೂಕು ಆಡಳಿತದ ವಾದ ಆಲಿಸಿದ ರಾಜ್ಯ ಉಚ್ಚನ್ಯಾಯಾಲಯ ಪ್ರಕರಣವನ್ನು ಜಿಲ್ಲಾಧಿಕಾರಿಗಳ ನ್ಯಾಯಾಲಯಕ್ಕೆ ಹಸ್ತಾಂತರಿಸಿತ್ತು. ಕಳೆದ 6 ತಿಂಗಳಿನಿಂದ ಜಿಲ್ಲಾಧಿಕಾರಿಗಳ ನ್ಯಾಯಾಲ ಯದಲ್ಲಿ ಪ್ರಕರಣ ಬಾಕಿ ಇದ್ದು ಇಬ್ಬರು ಜಿಲ್ಲಾಧಿಕಾರಿಗಳು ಬದಲಾವಣೆಯಾಗಿದ್ದರಿಂದ ಪ್ರಕರಣ ಕಡತದಲ್ಲೆ ಬಾಕಿಯಾಗಿದೆ.

ಜಿಲ್ಲಾ ಸಚಿವರ ನಿರಾಸಕ್ತಿ: ಜಿಲ್ಲಾ ಉಸ್ತುವಾರಿ ಮಂತ್ರಿಗಳು ಶಾಸಕರು ಸಹ ಸಮಸ್ಯೆ ಬಗೆಹರಿಸಲು ಅಷ್ಟಾಗಿ ಆಸಕ್ತಿವಹಿಸದ ಕಾರಣ ಕಡತ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊಳೆಯುತ್ತಿದೆ.

ವ್ಯಾಪಾರ, ವಹಿವಾಟು ಕುಸಿತ: ಬೆಂಗಳೂರು- ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 75 ಪಟ್ಟಣದ ಮುಖಾಂತರ ಹಾದು ಹೋಗಿದ್ದು, ಇದ ರಿಂದ ವಾಹನಗಳ ಸಂಚಾರದ ಒತ್ತಡ ಹೆಚ್ಚಾಗುತ್ತಿದೆ.

ಅರ್ಧಂಭರ್ದ ಅಗಲೀಕರಣದಿಂದ ಹಳೆಯ ಪಟ್ಟಣ ದಂತೆ ಭಾಸವಾಗುತ್ತಿದೆ. ಕೆಲವು ವರ್ತಕರು ಮಾತ್ರ ನಿಯಮದಂತೆ ಕಟ್ಟಡ ಕಟ್ಟಿಕೊಂಡಿದ್ದಾರೆ. ಆದರೆ ಬಹುತೇಕರು ಒಡೆದ ಜಾಗದಲ್ಲಿ ತಾತ್ಕಾಲಿಕ ಶೀಟು ಗಳನ್ನು ಹಾಕಿಕೊಂಡು ಅಂಗಡಿ ಮಾಡಿಕೊಂಡಿದ್ದಾರೆ. ಮುಖ್ಯರಸ್ತೆಯಲ್ಲಿ ವಾಹನಗಳ ನಿಲುಗಡೆ ರದ್ದು ಮಾಡಲಾಗಿದ್ದು ಇದರಿಂದ ವಾಹನಗಳು ಅಂಗಡಿಗಳ ಮುಂಭಾಗ ನಿಲ್ಲಲು ಅವಕಾಶವಿಲ್ಲದೇ ವ್ಯಾಪಾರ ವ್ಯವಹಾರಗಳು ಕಡಿಮೆಯಾಗಿದೆ.

ಜಿಲ್ಲೆಯ ಚನ್ನರಾಯಪಟ್ಟಣ, ಹಾಸನ, ಅರಕಲಗೂಡು, ಅರಸೀಕೆರೆಯಲ್ಲಿ ರಸ್ತೆ ಅಗಲೀಕರಣ ಸರಾಗವಾಗಿ ನಡೆದು ಪಟ್ಟಣಗಳು ಅಭಿವೃದ್ಧಿಯತ್ತ ಮುನ್ನುಗ್ಗುತ್ತಿದೆ. ಅದರೆ ಸಕಲೇಶಪುರ ಪಟ್ಟಣ ಮಾತ್ರ ಹಿಂದಕ್ಕೆ ಹೋಗುತ್ತಿದ್ದು ಪಟ್ಟಣದ ಅಭಿವೃದ್ಧಿ ಸಂಪೂರ್ಣ ಮರೀಚಿಕೆಯಾಗಿದೆ. ಕಳೆದ ಆರು ತಿಂಗಳಿನಿಂದ ತೀರ್ಪು ನಿರೀಕ್ಷಿಸುತ್ತಿರುವ ಜನರಿಗೆ ಹಾಗೂ ವರ್ತಕರಿಗೆ ವರ್ಷ ಕಳೆದರೂ ಯಾವುದೇ ತೀರ್ಪು ಹೊರಬರದ ಹಿನ್ನೆಲೆಯಲ್ಲಿ ನಿರಾಸೆಯಾಗಿದೆ.

 

● ಸುಧೀರ್‌ ಎಸ್‌.ಎಲ್

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ