Udayavni Special

ಆಕ್ಸಿಜನ್‌ ಪ್ಲಾಂಟ್‌ ಹೆಸರಲ್ಲಿ ಲೂಟಿ: ಸಂಸದ ಪ್ರಜ್ವಲ್‌ ರೇವಣ್ಣ

Team Udayavani, May 14, 2021, 3:29 PM IST

13skpp1_2_pprajval_crafford_hosp_1305bg_2

ಸಕಲೇಶಪುರ: ಆಕ್ಸಿಜನ್‌ ಪೂರೈಕೆ ಹೆಸರಿನಲ್ಲಿ ಕೇಂದ್ರ -ರಾಜ್ಯ ಸರ್ಕಾರ ಹಣ ಹೊಡೆಯಲು ಮುಂದಾಗಿದ್ದು ಈ ಕುರಿತು ಎಲ್ಲಾ ದಾಖಲಾತಿ ತನ್ನ ಬಳಿ ಇದೆ ಎಂದು ಸಂಸದ ಪ್ರಜ್ವಲ್‌ ರೇವಣ್ಣ ಹೇಳಿದರು.

ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಕೋವಿಡ್‌ ಟಾಸ್ಕ್ ಫೋರ್ಸ್‌ ಸಭೆ ನಡೆಸಿದ ನಂತರ ಮಾತನಾಡಿದರು. ಆಕ್ಸಿಜನ್‌ ಪ್ಲಾಂಟ್‌ ಮಾಡುವ ಕಂಪನಿಗಳು ಜರ್ಮನಿಯಲ್ಲಿ ಹೆಚ್ಚಾಗಿದ್ದು ಜರ್ಮನಿಯಿಂದ ಇದಕ್ಕೆ ಬೇಕಾದ ಮಿಷನರಿ ತರಿಸಲು ಯೋಜನೆ ಮಾಡಲಾಗಿತ್ತು. ಆದರೆ, ನಂತರ ಇದನ್ನು ಕೈಬಿಟ್ಟು ನಮ್ಮ ದೇಶದಲ್ಲಿರುವ 2 ಆಮ್ಲಜನಕ ಪ್ಲಾಂಟ್‌ ಮಾಡುವ ಕಂಪನಿಗಳಿಗೆ ಆಮ್ಲ ಜನಕ ಪೂರೈಕೆ ಮಾಡುವ ಯಂತ್ರಗಳಿಗೆ ಇವರೇ ಒಂದು ದರ ನಿಗದಿ ಮಾಡಿದ್ದಾರೆ. ಆದರೆ, ಇದಿಷ್ಟೂ ಸಾಲದಂತೆ ಈ ಆಮ್ಲ ಜನಕ ಮಿಷನರಿ ಕೂರಿಸಲು ಸುಮಾರು 10×10 ಅಡಿ ಕಟ್ಟಡ ನಿರ್ಮಾಣ ಮಾಡಲು ಪ್ರತಿ ಪ್ಲಾಂಟ್‌ಗೆ 35 ಲಕ್ಷ ನಿಗದಿ ಮಾಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಈ ಆಮ್ಲ ಜನಕ ಯಂತ್ರಗಳನ್ನು ಕಂಟೈನರ್‌ ಒಳಗೆ ಇಡ ಬಹುದಿತ್ತು. ಇದು ಕೇವಲ 2 ಲಕ್ಷ ದಲ್ಲಿ ಮುಗಿಯುತ್ತಿತ್ತು. ಆದರೆ 2 ಲಕ್ಷದಲ್ಲಿ ಮುಗಿಯುವ ಕೆಲಸಕ್ಕೆ 35 ಲಕ್ಷ ಪ್ರತಿ ಪ್ಲಾಂಟ್‌ಗೆ ವಿನಿಯೋಜಿಸಲಾಗುತ್ತಿದೆ. ಇದಿಷ್ಟು ಸಾಲದಂತೆ ಮೊದಲಿಗೆ ಈ ಕಾಮಗಾರಿ ಲ್ಯಾಂಡ್‌ ಆರ್ಮಿಗೆ ಕೊಡಲು ಯೋಜಿಸಲಾಗಿತ್ತು. ಆದರೆ, ಯಾವಾಗ 30 ಜಿಲ್ಲೆಗೆ ತಲಾ 2 ಪ್ಲಾಂಟ್‌ ನೀಡಲು ಯೋಜಿಸಲಾಯಿತೋ ತಕ್ಷಣ ಆರೋಗ್ಯ ಇಲಾಖೆಯಿಂದ ಸಿಂಗಲ್‌ ಟೆಂಡರ್‌ ಕರೆದು 2 ದಿನಗಳಲ್ಲಿ ಮುಗಿಯುವ ಕೆಲ ಸಕ್ಕೆ ಹೆಚ್ಚು ದಿನ ಬೇಕಾಗುವಂತೆ ಮಾಡಿದ್ದಾರೆ. ಇದರಲ್ಲಿ ಭ್ರಷ್ಟಚಾರ ಉಂಟಾಗು ತ್ತಿರುವುದು ನೇರವಾಗಿ ಕಾಣುತ್ತಿದೆ. ಮುಖ್ಯ ಮಂತ್ರಿಗಳು ಅಥವಾ ಆರೋಗ್ಯ ಸಚಿವರು ಕೇಳಿದ್ದಲ್ಲಿ ನಾನು ದಾಖಲಾತಿ ಬಿಡುಗಡೆ ಮಾಡುತ್ತೇನೆಂದು ತಿಳಿಸಿದರು.

ಕಷ್ಟದ ಕಾಲದಲ್ಲಿ ಜನರ ದುಡ್ಡನ್ನು ಅನವಶ್ಯಕವಾಗಿ ಪೋಲು ಮಾಡುತ್ತಿರು ವುದು ಸರಿಯಲ್ಲ, ಕೊರೊನಾದಂತಹ ಸಂಕಷ್ಟದ ಕಾಲದಲ್ಲೂ ಹಣ ಲೂಟಿ ಮಾಡುತ್ತಿರು ವುದು ಬೇಸರದ ಸಂಗತಿ ಎಂದರು.

ಟಾಪ್ ನ್ಯೂಸ್

ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಮನೆಗೆ ಇಡಿ ದಾಳಿ

ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಮನೆಗೆ ಇಡಿ ದಾಳಿ

kgf

ಪ್ಲ್ಯಾನ್ ಬಿ ರೆಡಿ: ರಿಲೀಸ್‌ ಡೇಟ್‌ ಚರ್ಚೆಯಲ್ಲಿ ಸ್ಟಾರ್‌ ಸಿನಿಮಾ ನಿರ್ಮಾಪಕರು

ಮುಂಗಾರು ಮಳೆಗಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಜುಲೈವರೆಗೆ ಕಾಯಬೇಕು: ಐಎಂಡಿ

ಮುಂಗಾರು ಮಳೆಗಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಜುಲೈವರೆಗೆ ಕಾಯಬೇಕು: ಐಎಂಡಿ

ಹೇಗಿದೆ ಸ್ಯಾಮ್‍ ಸಂಗ್‍ ಎಂ 42 ಎಂ ಸರಣಿಯ ಮೊದಲ 5ಜಿ ಫೋನ್‍?

ಸ್ಯಾಮ್‍ ಸಂಗ್‍ ಎಂ 42: ಹೇಗಿದೆ ಎಂ ಸರಣಿಯ ಮೊದಲ 5ಜಿ ಫೋನ್‍?

Manabi Bandyopadhyay was born in Naihati, West Bengal in an educated family as Somnath Bandyopadhyay. She is the first transgender professor

ಸಕ್ಸಸ್ ಸ್ಟೋರಿ : ಡಾಕ್ಟರ್ ಆಫ್ ಫಿಲಾಸಫಿ ಪಡೆದ ದೇಶದ ಮೊದಲ ತೃತೀಯ ಲಿಂಗಿ ಮಾನವಿ.!

ದೆಹಲಿಗೆ ಹಾರಿದ ವಿಜಯೇಂದ್ರ: ಸಿಎಂ ಭೇಟಿಯಾದ ಭೂಪೇಂದ್ರ  ಯಾದವ್!’

ದೆಹಲಿಗೆ ಹಾರಿದ ವಿಜಯೇಂದ್ರ: ಯಡಿಯೂರಪ್ಪ ಭೇಟಿಯಾದ ಭೂಪೇಂದ್ರ ಯಾದವ್!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

camera

ನಾಗರಹೊಳೆಯಲ್ಲಿ 8 ಟ್ರ್ಯಾಪಿಂಗ್ ಕ್ಯಾಮರಾ ಕಳ್ಳತನ

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ಜುಲೈ 1ರಿಂದ ಟಿವಿ ಮುಂದೆ ಮಕ್ಕಳಿಗೆ ಪಾಠ!

ವಾರಾಂತ್ಯ ಕರ್ಫ್ಯೂ: ದ.ಕ.ದಲ್ಲಿ ಇನ್ನೆರಡು ದಿನ ದಿನಸಿ, ತರಕಾರಿ ಅಲಭ್ಯ

ವಾರಾಂತ್ಯ ಕರ್ಫ್ಯೂ: ದ.ಕ.ದಲ್ಲಿ ಇನ್ನೆರಡು ದಿನ ದಿನಸಿ, ತರಕಾರಿ ಅಲಭ್ಯ

ದ.ಕ.: ಜು. 1ರಿಂದ ಸೀಮಿತ ಖಾಸಗಿ, ಸಿಟಿ ಬಸ್‌ ಸಂಚಾರ

ದ.ಕ.: ಜು. 1ರಿಂದ ಸೀಮಿತ ಖಾಸಗಿ, ಸಿಟಿ ಬಸ್‌ ಸಂಚಾರ

ಉಡುಪಿಯಲ್ಲಿ  ಬೆಳಗ್ಗೆ ಖರೀದಿಗೆ ಅವಕಾಶ

ಉಡುಪಿಯಲ್ಲಿ  ಬೆಳಗ್ಗೆ ಖರೀದಿಗೆ ಅವಕಾಶ

MUST WATCH

udayavani youtube

ಕೊಮೆ : ಮೀನುಗಾರರಿಂದ ಸಮುದ್ರ ಪೂಜೆ

udayavani youtube

ನಾನು ಸೋತು ಹೋಗಿದ್ದೇನೆ ಸ್ವಾಮಿ; ಜವಳಿ ವ್ಯಾಪಾರಿಯ ನೋವಿನ ಮಾತು

udayavani youtube

ಕಾನೂನು ಎಲ್ಲರಿಗೂ ಒಂದೇ,ಎಷ್ಟೇ ದೊಡ್ಡವನಾದರೂ ಕಾನೂನು ಪಾಲನೆ ಮಾಡಬೇಕು: ಉಡುಪಿ DC ವಾರ್ನಿಂಗ್

udayavani youtube

ನೇಗಿಲು ಹಿಡಿದು ಉಳುಮೆ ಮಾಡಿದ ಶಾಸಕ ರೇಣುಕಾಚಾರ್ಯ

udayavani youtube

ಖಾಸಗಿ TECHIE, ದೇಸಿ ದನ ಸಾಕಣೆಯಲ್ಲಿ ಯಶಸ್ಸು ಕಂಡಿದ್ದು ಹೇಗೆ ?

ಹೊಸ ಸೇರ್ಪಡೆ

ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಮನೆಗೆ ಇಡಿ ದಾಳಿ

ಅಕ್ರಮ ಹಣ ವರ್ಗಾವಣೆ: ಮಹಾರಾಷ್ಟ್ರ ಮಾಜಿ ಗೃಹ ಸಚಿವ ಅನಿಲ್ ದೇಶ್ ಮುಖ್ ಮನೆಗೆ ಇಡಿ ದಾಳಿ

kgf

ಪ್ಲ್ಯಾನ್ ಬಿ ರೆಡಿ: ರಿಲೀಸ್‌ ಡೇಟ್‌ ಚರ್ಚೆಯಲ್ಲಿ ಸ್ಟಾರ್‌ ಸಿನಿಮಾ ನಿರ್ಮಾಪಕರು

camera

ನಾಗರಹೊಳೆಯಲ್ಲಿ 8 ಟ್ರ್ಯಾಪಿಂಗ್ ಕ್ಯಾಮರಾ ಕಳ್ಳತನ

ಮುಂಗಾರು ಮಳೆಗಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಜುಲೈವರೆಗೆ ಕಾಯಬೇಕು: ಐಎಂಡಿ

ಮುಂಗಾರು ಮಳೆಗಾಗಿ ಪಂಜಾಬ್, ಹರ್ಯಾಣ, ದೆಹಲಿಯಲ್ಲಿ ಜುಲೈವರೆಗೆ ಕಾಯಬೇಕು: ಐಎಂಡಿ

ಹೇಗಿದೆ ಸ್ಯಾಮ್‍ ಸಂಗ್‍ ಎಂ 42 ಎಂ ಸರಣಿಯ ಮೊದಲ 5ಜಿ ಫೋನ್‍?

ಸ್ಯಾಮ್‍ ಸಂಗ್‍ ಎಂ 42: ಹೇಗಿದೆ ಎಂ ಸರಣಿಯ ಮೊದಲ 5ಜಿ ಫೋನ್‍?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.