ಜಿಲ್ಲೆಯಲ್ಲಿ ಮಳೆ ಕೊರತೆ ನಡುವೆ ಬಿತ್ತನೆ ಉತ್ತಮ

ಆಗಸ್ಟ್‌ನಲ್ಲಿ ತೀವ್ರ ಮಳೆಕೊರತೆ , ಮೆಕ್ಕೆ ಜೋಳದ ಬೆಳೆಗಾರರ ಆತಂಕ , ರಾಗಿ ಬಿತ್ತನೆಗೂ ಹಿನ್ನಡೆ ಆತಂಕ

Team Udayavani, Aug 26, 2021, 3:48 PM IST

ಜಿಲ್ಲೆಯಲ್ಲಿ ಮಳೆ ಕೊರತೆ ನಡುವೆ ಬಿತ್ತನೆ ಉತ್ತಮ

ಹಾಸನ: ಜಿಲ್ಲೆಯಲ್ಲಿ ಈ ವರ್ಷ ವಾಡಿಕೆಗಿಂತ ಕಡಿಮೆ ಮಳೆಯಾದರೂ ಬೆಳೆಗಳ ಬಿತ್ತನೆ ಪ್ರಮಾಣ ಸಮಾಧಾನಕರವಾಗಿದೆ. ಆದರೆ ಆಗಸ್ಟ್‌ನಲ್ಲಿ ಮಳೆ ಕೈಕೊಟ್ಟಿರುವುದರಿಂದ ಬೆಳೆಗಳು ಒಣಗುವ ಆತಂಕ ಅನ್ನದಾತರನ್ನು ಕಾಡುತ್ತಿದೆ.

ಮಾನ್ಸೂನ್‌ ಮಳೆ ಅಂದರೆ ಜೂನ್‌ನಿಂದ ಆ.24 ರವರೆಗೆ ವಾಡಿಕೆ ಮಳೆ587 ಮಿ.ಮೀ. ಆಗಬೇಕಾಗಿತ್ತಾದರೂ 496 ಮಿ.ಮೀ. ಮಳೆಯಾಗಿದ್ದು, ಶೇ.15 ಮಳೆಕೊರತೆಯಾಗಿದೆ. ಆಗಸ್ಟ್‌ನಲ್ಲಿ ವಾಡಿಕೆ ಮಳೆ166 ಮಿ.ಮೀ. ಮಳೆಯಾಗ ಬೇಕಾಗಿದ್ದು,ಕೇವಲ 89 ಮಿ.ಮೀ. ಮಳೆಯಾಗಿದ್ದು, ಶೇ.46 ರಷ್ಟು ಮಳೆ ಕೊರತೆಯಾಗಿದೆ.

ಮಾನ್ಸೂನ್‌ ಮಳೆ ಮಲೆನಾಡಿನಲ್ಲಿ ಹೆಚ್ಚು ಮಲೆನಾಡು ಪ್ರದೇಶದಲ್ಲಿ ವಾಡಿಕೆಗಿಂತ ಹೆಚ್ಚು ದಾಖಲಾಗುವುದು ಸಹಜ. ಆದರೆ, ಈ ವರ್ಷ ಜಿಲ್ಲೆಯ ಮಲೆನಾಡು ತಾಲೂಕುಗಳಲ್ಲಿ ಸಕಲೇಶಪುರ ಹೊತರುಪಡಿಸಿ ಮಾನ್ಸೂನ್‌ ಮಳೆ ಕೊರತೆಯಾಗಿದ್ದು. ಬಯಲುಸೀಮೆಯಲ್ಲಿ ವಾಡಿಕೆಗಿಂತ ಹೆಚ್ಚು
ಮಳೆ ದಾಖಲಾಗಿದೆ. ಜೂನ್‌ನಿಂದ ಆ.24 ರವರೆಗೆ ಆಲೂರು ತಾಲೂಕಿನಲ್ಲಿ ವಾಡಿಕೆಗಿಂತ ಶೇ.5ರಷ್ಟು ಮಳೆಕೊರತೆಯಾಗಿದ್ದರೆ, ಅರಕಲಗೂಡು ತಾಲೂಕಿನಲ್ಲಿ ಶೇ.17 ರಷ್ಟು, ಬೇಲೂರಿನಲ್ಲಿ ಶೇ.11 ರಷ್ಟು, ಹಾಸನ ತಾಲೂಕಿನಲ್ಲಿ ಶೇ.15 ರಷ್ಟು ಮಳೆ ಕೊರತೆಯಾಗಿದೆ. ಸಹಜವಾಗಿ ಮಲೆನಾಡು ಸಕಲೇಶಪುರ ತಾಲೂಕಿನಲ್ಲಿ ವಾಡಿಕೆಗಿಂತ ಶೇ.7 ರಷ್ಟು ಹೆಚ್ಚು ಮಳೆಯಾಗಿದ್ದರೆ, ಬಯಲುಸೀಮೆ ತಾಲೂಕುಗಳಾದ ಅರಸೀಕೆರೆಯಲ್ಲಿ ವಾಡಿಕೆಗಿಂತ ಶೇ.24 ರಷ್ಟು ಹೆಚ್ಚು ಮಳೆಯಾಗಿದೆ. ಚನ್ನರಾಯಪಟ್ಟಣ ತಾಲೂಕಿನಲ್ಲಿ ಶೇ.13 ರಷ್ಟು ಹೊಳೆನರಸೀಪುರ ತಾಲೂಕಿನಲ್ಲಿಯೂ ವಾಡಿಕೆಗಿಂತ ಶೇ.9 ರಷ್ಟು ಮಳೆಯಾಗಿದೆ.

ಆಗಸ್ಟ್‌ ತಿಂಗಳಲ್ಲಿನಲ್ಲಿಯೂ ಬಯಲು ಸೀಮೆ ತಾಲೂಕುಗಳಾದ ಅರಸೀಕೆರೆ ತಾಲೂಕಿನಲ್ಲಿ ವಾಡಿಕೆಗಿಂತ ಶೇ.10ರಷ್ಟು ಹೆಚ್ಚು ಮಳೆಯಾಗಿದ್ದರೆ, ಚನ್ನರಾಯಪಟ್ಟಣ ತಾಲೂಕಿನಲ್ಲಿಯೂ ಶೇ.14 ರಷ್ಟು ಹೆಚ್ಚು ಮಳೆಯಾಗಿದೆ. ಆಲೂರು ತಾಲೂಕಿನಲ್ಲಿ ಶೇ.57 ರಷ್ಟು ಮಳೆಕೊರತೆಯಾಗಿದ್ದು,
ಅರಕಲಗೂಡು – ಶೇ. 49, ಬೇಲೂರು – ಶೇ.35, ಹಾಸನ -ಶೇ.33, ಹೊಳೆನರಸೀಪುರ – ಶೇ.48 ಹಾಗೂ ಸಕಲೇಶಪುರ ತಾಲೂಕಿನಲ್ಲಿ ಶೇ.32 ರಷ್ಟು ಮಳೆಕೊರತೆ ದಾಖಲಾಗಿದೆ. ಒಟ್ಟಾರೆ ಆಗಸ್ಟ್‌ನಲ್ಲಿ ಜಿಲ್ಲೆಯಲ್ಲಿ ಶೇ.46 ರಷ್ಟು ಮಳೆಕೊರತೆ ದಾಖಲಾಗಿದೆ.

ಇದನ್ನೂ ಓದಿ:ವಿರಾಟ್ ಕೊಹ್ಲಿಯು ತೆಂಡೂಲ್ಕರ್ ಗೆ ಕರೆ ಮಾಡಿ ಸಲಹೆ ಪಡೆಯಲಿ: ಗಾವಸ್ಕರ್

ಮುಸುಕಿನ ಜೋಳಕ್ಕೆಹಾನಿ ಸಂಭವ: ಜಿಲ್ಲೆಯಲ್ಲಿ ಮುಸುಕಿನ ಜೋಳ ಈಗ ತೆನೆ ಬಿಡುವ ಸಮಯ. ಈಗ ಮಳೆಕೈ ಕೊಟ್ಟಿರುವುದರಿಂದ ಜೋಳಕಾಳುಕಟ್ಟದೆ ಹಾನಿ ಸಂಭವಿಸುವ ಆತಂಕ ಬೆಳೆಗಾರರನ್ನುಕಾಡುತ್ತಿದೆ. ಇನ್ನು ನಾಲ್ಕೈದು ದಿನಗಳಲ್ಲಿ ಮಳೆ ಬಾರದಿದ್ದರೆ ಮುಸುಕಿನ ಜೋಳದ ಇಳುವರಿಯಲ್ಲಿ ಭಾರೀ ನಷ್ಟವುಂಟಾಗುವ ಸಾಧ್ಯತೆ ಇದೆ. ರಾಗಿ ಬಿತ್ತನೆಗೂ ಈಗ ಮಳೆಯ ಅಗತ್ಯವಿದೆ. ಬಿತ್ತನೆಯಾಗಿರುವ ರಾಗಿ ಬೆಳವಣಿಗೆಗೂ ಈಗ ಮಳೆಯ ಅಗತ್ಯವಿದ್ದು, ಮಳೆಗಾಗಿ ರೈತರು ಮುಗಿಲು ನೋಡುವಂತಾಗಿದೆ.ಕಳೆದೆರಡು ದಿನಗಳ ಹಿಂದೆ ಜಿಲ್ಲೆಯಲ್ಲಿ
ಚದುರಿದಂತೆ ಮಳೆಯಾಗಿ ಅಶಾಭಾವ ಮೂಡಿಸಿತ್ತು. ಆದರೆ ಎರಡು ದಿನಗಳಿಂದೀಚೆಗೆ ಬಿರು ಬಿಸುಲಿನ ವಾತಾವರಣವಿದ್ದು, ಸದ್ಯಕ್ಕೆ ಮಳೆ ಬಾರದೇನೋ ಎಂಬ ಆತಂಕಕಾಡುತ್ತಿದೆ.

ಈ ವಾರದೊಳಗೆ ಮಳೆಯಾದರೆ ಹಾನಿಯಿಲ್ಲ
ಜಿಲ್ಲೆಯಲ್ಲಿ ಆಗಸ್ಟ್‌ ತಿಂಗಳಲ್ಲಿ ಶೇ. 45 ಕ್ಕೂ ಹೆಚ್ಚು ಮಳೆ ಕೊರತೆ ಕಾಡಿದೆ.ಬೆಳೆಗಳು ಒಣಗುತ್ತಿಲ್ಲ. ಈ ವಾರದೊಳಗೆ ಮಳೆಯಾದರೆ ಬೆಳೆಗಳು ಚೇತರಿಸಿಕೊಳ್ಳತ್ತವೆ. ಹಾನಿಯೇನೂ ಆಗುವುದಿಲ್ಲ. ಮುಂದಿನ ವಾರವೂ ಮಳೆ ಬಾರದಿದ್ದರೆ ಬೆಳೆಗಳಿಗೆ ಹಾನಿಯಾಗುತ್ತದೆ. ಜಿಲ್ಲೆಯಲ್ಲಿ ಸರಾಸರಿ ಶೇ. 90ಬಿತ್ತನೆಯಾಗಿದೆ. ಬೆಳೆಗಳ ಸ್ಥಿತಿಯೂ ಉತ್ತಮವಾಗಿದೆ. ರಸಗೊಬ್ಬರದ ಕೊರತೆ ಇದುವರೆಗೂ ಎದುರಾಗಿಲ್ಲ. ಹೆಚ್ಚು ಪ್ರಮಾಣದಲ್ಲಿ ಯೂರಿಯಾರಸಗೊಬ್ಬರ ಅಗತ್ಯವಿದೆ. ಮುಂದಿನ ತಿಂಗಳಿಗೆ ಬೇಕಾಗುವಷ್ಟು ಗೊಬ್ಬರ ಪೂರೈಕೆಗೆ ಬೇಡಿಕೆ ಸಲ್ಲಿಸಲಾಗಿದೆ ಎಂದು ಎಂದು ಜಂಟಿಕೃಷಿ ನಿರ್ದೇಶಕ ಕೆ.ಎಚ್‌.ರವಿ ತಿಳಿಸಿದರು.

ಈವರೆಗೆ ಜಿಲ್ಲೆಯಲ್ಲಿ ಒಟ್ಟು ಶೇ.90 ಬಿತ್ತನೆ
ಜಿಲ್ಲೆಯಲ್ಲಿ ಈ ವರ್ಷ ಆ.24 ವರೆಗೆ ಶೇ.89.79 ರಷ್ಟು ಬಿತ್ತನೆಯಾಗಿದೆ. ಒಟ್ಟು 2,08,564 ಹೆಕ್ಟೇರ್‌ನಲ್ಲಿ ವಿವಿಧ ಬೆಳೆಗಳ ಬಿತ್ತನೆ ಗುರಿದ್ದು, ಈವರೆಗೆ1,87,259 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.ಕಳೆದ ವರ್ಷದಂತೆ ಈ ವರ್ಷವೂ ಮೆಕ್ಕೆ ಜೋಳ ಬೆಳೆ ಗುರಿ ಮೀರಿ ಬಿತ್ತನೆಯಾಗಿದೆ. ಈ ವರ್ಷ 76000 ಹೆಕ್ಟೇರ್‌ ಬಿತ್ತನೆ ಗುರಿಗೆ ಬದಲಾಗಿ 85,540 ಹೆಕ್ಟೇರ್‌ ಬಿತ್ತನೆಯಾಗಿದೆ. ಭತ್ತದ34,000 ಹೆಕ್ಟೇರ್‌ ಬಿತ್ತನೆ ಗುರಿಯಿದ್ದು, ಈವರೆಗೆ 22,580 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಬಿಳಿಜೋಳ10160 ಹೆಕ್ಟೇರ್‌ ಬಿತ್ತನೆ ಗಿರಿಯಿದ್ದರೂ ಕೇವಲ 369 ಹೆಕ್ಟೇರ್‌ನಲ್ಲಷ್ಟೇ ಬಿತ್ತನೆಯಾಗಿದೆ.

ರಾಗಿ 68,417 ಹೆಕ್ಟೇರ್‌ ಬಿತ್ತನೆ ಗುರಿದ್ದು, ಈವರೆಗೆ49,976 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದ್ದು,ಕಿರುಧಾನ್ಯಗಳು220 ಹೆಕ್ಟೇರ್‌ ಗುರಿಗೆ ಬದಲಾಗಿ ಕೇಲವ25 ಹೆಕ್ಟೇರ್‌ ಬಿತ್ತನೆಯಾಗಿವೆ.ಒಟ್ಟು ಏಕದಳ ಧ್ಯಾನ್ಯಗಳ ಬಿತ್ತನೆ ಗುರಿ 1,88,787 ಹೆಕ್ಟೇರ್‌ ಇದ್ದು, ಈವರೆಗೆ1,58,490 ಹೆಕ್ಟೇರ್‌ ಬಿತ್ತನೆಯಾಗಿದೆ . ವಾಣಿಜ್ಯ ಬೆಳೆಗಳು6549 ಹೆಕ್ಟೇರ್‌ ಬಿತ್ತನೆ ಗುರಿಯಿದ್ದು,10,541 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಒಟ್ಟು2,08,564 ಹೆಕ್ಟೇರ್‌ ಬಿತ್ತಗೆ ಗುರಿಯಿದ್ದು, ಈವರೆಗೆ1,87,259 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿ ಶೇ.89.79 ರಷ್ಟು ಬಿತ್ತನೆಯಾಗಿದೆ ಎಂದುಕೃಷಿ ಇಲಾಖೆ ಮಾಹಿತಿ ನೀಡಿದೆ.

-ಎನ್‌. ನಂಜುಂಡೇಗೌಡ

ಟಾಪ್ ನ್ಯೂಸ್

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ

ನಿಮ್ಮ ಮನೆ ದೇವರು, ಮತದಾರರು ಒಳ್ಳೆಯದು ಮಾಡ್ತಾರಾ?: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwewq

Belur: ದೈತ್ಯ ‘ಕರಡಿ’ ಆನೆ ಕೊನೆಗೂ ಸೆರೆ

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್‌

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

K. S. Eshwarappa ವಿರುದ್ಧ ಶಿಸ್ತು ಕ್ರಮ: ಬಿ.ವೈ. ವಿಜಯೇಂದ್ರ

9

Lok Sabha Election: ಕಾಂಗ್ರೆಸ್‌ನಲ್ಲಿ ಒಗ್ಗಟ್ಟಿನ ಜಪ; ಮೈತ್ರಿಗೆ ಆತಂಕ 

banHassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

Hassan: ಬಿಜೆಪಿ ಮುಖಂಡನ ಮೇಲೆ ಹಲ್ಲೆ: ಪ್ರೀತಂ ಗೌಡ ಬೆಂಬಲಿಗರಿಂದ ಹಲ್ಲೆ ನಡೆದಿರುವ ಶಂಕೆ

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Kota: ಬೈಕ್‌ ಅಪಘಾತ; ಯುವಕ ಸಾವು

Kota: ಬೈಕ್‌ ಅಪಘಾತ; ಯುವಕ ಸಾವು

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

ಬರ ಪರಿಹಾರದಲ್ಲಿ ಸಿಎಂ, ಕಾಂಗ್ರೆಸ್‌ ರಾಜಕೀಯ: ಅಶೋಕ್‌

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

“ಬರ ಪರಿಹಾರ ಕೊಡಿ, ಇಲ್ಲವೇ ರಾಜ್ಯಕ್ಕೆ ಬರಲೇಬೇಡಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.