Udayavni Special

ವಿಶೇಷ ಮತಗಟ್ಟೆಗಳಲ್ಲಿ ಸಸಿ, ಮಜ್ಜಿಗೆ ವಿತರಣೆ


Team Udayavani, May 13, 2018, 1:04 PM IST

afridi.jpg

ಹುಣಸೂರು: ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾದ ಮತದಾನವನ್ನು ಸಂಭ್ರಮಿಸಲು ಇದೇ ಪ್ರಥಮ ಬಾರಿಗೆ ಸ್ವೀಪ್‌ ಸಮಿತಿ ಆಯೋಜಿಸಿದ್ದ ಬುಡಕಟ್ಟು ಜನರ ಸಾಂಪ್ರದಾಯಿಕ, ಪಿಂಕ್‌ ಹಾಗೂ ಮಾದರಿ ಮತಕೇಂದ್ರಗಳು ಮತದಾರರ ಪ್ರಮುಖ ಆಕರ್ಷಣೆಯಾಗಿತ್ತು.

ಹುಣಸೂರು-ನಾಗರಹೊಳೆ ಮುಖ್ಯ ರಸ್ತೆಯ ನಾಗಾಪುರ ಪುನರ್ವಸತಿ ಕೇಂದ್ರದ 3ನೇ ಬ್ಲಾಕ್‌ ನಲ್ಲಿನ ಗಿರಿಜನ ಆಶ್ರಮ ಕೇಂದ್ರದಲ್ಲಿ ಸ್ಥಾಪಿಸಿದ್ದ ಬುಡಕಟ್ಟು ಜನರ ಸಾಂಪ್ರದಾಯಿಕ ಮತಗಟ್ಟೆಗೆ ಸಂಭ್ರಮದಿಂದ ಆಗಮಿಸಿದ ಆದಿವಾಸಿಗಳು ತಮ್ಮದೇ ಶೈಲಿಯ ಗುಡಿಸಲ ಒಳ ಹೊಕ್ಕಿ ನಂತರ ಕೊಠಡಿಗೆ ತೆರಳಿ ಮತದಾನ ಮಾಡಿ ಸಂತಸಪಟ್ಟರು.

ಇನ್ನೂ ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೆಲ್ಲರೂ ಮೈಸೂರು ಪೇಟ ತೊಟ್ಟು, ಶ್ವೇತವಸ್ತ್ರ ಧರಿಸಿ ಕರ್ತವ್ಯ ನಿರ್ವಹಿಸಿದರು. ಮತದಾನ ಮಾಡಿದ ಎಲ್ಲರಿಗೂ ನಿಂಬೆ ಹಣ್ಣಿನ ಶರಬತ್ತು ನೀಡಿ ಧಣಿವಾರಿಸಿದರು. ವಿವಿಧ ಜಾತಿಯ ಸಸಿ ವಿತರಿಸಲಾಯಿತು.

ಗಾವಡಗೆರೆ ಹಾಗೂ ಬನ್ನಿಕುಪ್ಪೆಯ ಮತಗಟ್ಟೆಯನ್ನು ಸಂಪೂರ್ಣ ಪಿಂಕ್‌ ಬಣ್ಣದಲ್ಲಿ ಇಡೀ ಕೊಠಡಿಯನ್ನು ಕಂಗೊಳಿಸುವಂತೆ ಮಾಡಲಾಗಿತ್ತು, ಮತಗಟ್ಟೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳೆಲ್ಲರೂ ಪಿಂಕ್‌ ಬಣ್ಣದ ಸೀರೆ ಧರಿಸಿದ್ದರು. ಹೊರ ಆವರಣವನ್ನು ಪಿಂಕ್‌ ಬಣ್ಣದ ಬೆಲೂನ್‌ಗಳಿಂದ ಸಿಂಗರಿಸಲಾಗಿತ್ತು. ಪಿಂಕ್‌ ಸೀರೆ, ಚೂಡಿದಾರ್‌ ಧರಿಸಿ ಬರುವ ಎಲ್ಲಾ ಮಹಿಳೆಯರಿಗೆ ಉಚಿತವಾಗಿ ಸಸಿ ಹಾಗೂ ಎಲ್ಲ ಮತದಾರರಿಗೂ ಮಜ್ಜಿಗೆ ವಿತರಿಸಿ ಬಾಯಾರಿಕೆ ನೀಗಿಸಿದರು.

ಕಟ್ಟೆಮಳಲವಾಡಿ, ಮನುಗನಹಳ್ಳಿ, ಬಿಳಿಕೆರೆ, ಚಿಲ್ಕುಂದ ಮತಗಟ್ಟೆಗಳನ್ನು ತಳಿರು ತೋರಣಗಳಿಂದ ಮದುವೆ ಮನೆಯಂತೆ ಸಿಂಗರಿಸಲಾಗಿತ್ತು. ಹೆಂಗಸರು,ಗಂಡಸರಿಗೆ ಪ್ರತ್ಯೇಕವಾಗಿ ಸಾಲು ವ್ಯವಸ್ಥೆ ಮಾಡಲಾಗಿತ್ತು. ಸ್ವಾಗತಕಾರರು ಮತದಾರರನ್ನು ಆತ್ಮೀಯವಾಗಿ ಸ್ವಾಗತಿಸಿದರು. ಕೆಲ ಹೊತ್ತು ಮಜ್ಜಿಗೆ ವಿತರಿಸಿದರು.

ಕೆಲ ಮತದಾರರು ಮದುವೆ ಮನೆಯಂತೆ ಶ್ರಂಗರಿಸಿದ್ದು, ಮದುವೆ ಪಂಟಪಕ್ಕೆ  ಬಂದ ಅನುಭವವಾಯಿತೆಂದು ಪತ್ರಿಕೆ ಜೊತೆ ಸಂತಸ ಹಂಚಿಕೊಂಡರು. ಎಲ್ಲ ಮಾದರಿ ಮತಗಟ್ಟೆಗಳಿಗೆ ಸ್ವೀಪ್‌ ಸಮಿತಿಯ ಅಧ್ಯಕ್ಷ, ಜಿಪಂ ಕಾರ್ಯ ನಿರ್ವಾಹಕ ಅಕಾರಿ ಶಿವಶಂಕರ್‌, ಸಂಚಾಲಕ ಕೃಷ್ಣಕುಮಾರ್‌ ಇನ್ನಿತರೆ ಅಧಿಕಾರಿಗಳು ಭೇಟಿ ನೀಡಿ ಮತದಾರರೊಂದಿಗೆ ಚರ್ಚಿಸಿ ಸಸಿ ವಿತರಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

lords of rings : ಈ “ಗಿಮ್ಲಿ’ ಚಿತ್ರದಲ್ಲಿರುವ ವಿಶೇಷತೆ ಬಗ್ಗೆ ಗೊತ್ತಾ?

ಆಕಸ್ಮಿಕ ವಿದ್ಯುತ್ ತಗುಲಿ ಎತ್ತಿನೊಂದಿಗೆ ಇಬ್ಬರು ರೈತರ ಸಾವು

ಕೆಲಸ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ವಿದ್ಯುತ್ ಅವಘಡ ಎತ್ತು ಸೇರಿ ಇಬ್ಬರು ರೈತರ ಸಾವು

0

ಆರ್ ಸಿಬಿ – ಮುಂಬೈ : ಟಾಸ್ ಗೆದ್ದ ಮುಂಬೈ ಬೌಲಿಂಗ್ ಆಯ್ಕೆ

ಟಬ್‌ಗ ಬಿದ್ದ ಆನೆ ಮರಿ; ಗಜ ಸ್ನಾನದ ವೈಖರಿಗೆ ಮನಸೋತ ನೆಟ್ಟಿಗರು!

ಟಬ್‌ಗ ಬಿದ್ದ ಆನೆ ಮರಿ; ಗಜ ಸ್ನಾನದ ವೈಖರಿಗೆ ಮನಸೋತ ನೆಟ್ಟಿಗರು!

ಮಂತ್ರಾಲಯ ವಿದ್ಯಾಪೀಠದ ಮಕ್ಕಳ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

ಮಂತ್ರಾಲಯ ವಿದ್ಯಾಪೀಠದ ಬಾಲಕನ ಬಯಕೆಯನ್ನು ಈಡೇರಿಸಿದ ಸುಬುಧೇಂದ್ರ ಶ್ರೀಗಳು..!

madhu

ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಗೂ ಕೋವಿಡ್ ಸೋಂಕು ದೃಢ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಳೆ ಸಮೀಕ್ಷೆ: ರೈತರು ಆ್ಯಪ್‌ ಮೂಲಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

ಬೆಳೆ ಸಮೀಕ್ಷೆ: ರೈತರು ಆ್ಯಪ್‌ ಮೂಲಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ

Hasan-tdy-1

ಅಪರಾಧ ಪ್ರಕರಣ ನಿಯಂತ್ರಿಸಲು ಜಾಗೃತರಾಗಿ

ಕೋವಿಡ್ ದಿಂದ ರಾಮಮಂದಿರ ನಿರ್ಮಾಣಕ್ಕೆ ಹಿನ್ನಡೆ: ಸ್ವಾಮೀಜಿ

ಕೋವಿಡ್ ದಿಂದ ರಾಮಮಂದಿರ ನಿರ್ಮಾಣಕ್ಕೆ ಹಿನ್ನಡೆ: ಸ್ವಾಮೀಜಿ

ಬ್ರಾಹ್ಮಣ ಸಮುದಾಯದ ಜನಗಣತಿ ಆಗಲಿ

ಬ್ರಾಹ್ಮಣ ಸಮುದಾಯದ ಜನಗಣತಿ ಆಗಲಿ

HASAN-TDY-1

ಕಾಮಗಾರಿ ವಿಳಂಬ; ಗುತ್ತಿಗೆದಾರರಿಗೆ ದಂಡ

MUST WATCH

udayavani youtube

ಕರ್ನಾಟಕ ಬಂದ್: ಬಜ್ಪೆ, ಬೆಳ್ತಂಗಡಿ, ಉಜಿರೆಯಲ್ಲಿ‌ ನೀರಸ ಪ್ರತಿಕ್ರಿಯೆ

udayavani youtube

ಭೂ ಸುಧಾರಣೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ವಿರೋಧಿಸಿ Moodbidri, BC Roadನಲ್ಲಿ Protest

udayavani youtube

ಮಂಗಳೂರು: ರೈತ ವಿರೋಧಿ ಮಸೂದೆಯನ್ನು ವಿರೋಧಿಸಿ ವಿವಿಧ ಸಂಘಟನೆಗಳಿಂದ ಜಂಟಿ ಪ್ರತಿಭಟನೆ

udayavani youtube

JD(s) workers clash with Police at Shimoga anti farm bill protest | Udayavani

udayavani youtube

ಹೀರೆಕಾಯಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆಹೊಸ ಸೇರ್ಪಡೆ

isiri-tdy-1

ಗ್ರಾಮೀಣ ಯುವಕನ ಸಾಧನೆ : ರೈತ ಪರ ಡಂಪರ್‌

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

LACಯಲ್ಲಿ ಬ್ರಹ್ಮೋಸ್, ಆಕಾಶ್ ಮತ್ತು ನಿರ್ಭಯಾ ನಿಯೋಜನೆ ; ಹೆಚ್ಚುತ್ತಿದೆ ಗಡಿ ಟೆನ್ಷನ್!

ಕೋವಿಡ್‌ ನಿಯಮ ಉಲ್ಲಂಘನೆ 2 ಖಾಸಗಿ ಆಸ್ಪತ್ರೆಗಳಿಗೆ ತಲಾ 1 ಲಕ್ಷ ರೂ. ದಂಡ

ಕೋವಿಡ್‌ ನಿಯಮ ಉಲ್ಲಂಘನೆ 2 ಖಾಸಗಿ ಆಸ್ಪತ್ರೆಗಳಿಗೆ ತಲಾ 1 ಲಕ್ಷ ರೂ. ದಂಡ

ಶಿವಮೊಗ್ಗದಲ್ಲಿ ದುಷ್ಮನ್‌ ಚಿತ್ರೀಕರಣಕ್ಕೆ ಚಾಲನೆ

ಶಿವಮೊಗ್ಗದಲ್ಲಿ ದುಷ್ಮನ್‌ ಚಿತ್ರೀಕರಣಕ್ಕೆ ಚಾಲನೆ

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದ್ರೆ ಕ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.