Udayavni Special

ಶಿರಾಡಿ ಸುರಂಗ ಮಾರ್ಗ, ವಿಮಾನ ನಿಲ್ದಾಣ ನಿರೀಕ್ಷೆ


Team Udayavani, Jul 5, 2019, 10:43 AM IST

hasan-tdy-1..

ಮಂದಗತಿಯಲ್ಲಿ ಸಾಗಿರುವ ಶಿರಾಡಿ ಘಾಟ್ ರಸ್ತೆ ಕಾಮಗಾರಿ.

ಹಾಸನ: ಕೇಂದ್ರದಲ್ಲಿ ಮೋದಿ ಸರ್ಕಾರ ಮತ್ತೂಮ್ಮೆ ಅಧಿಕಾರಕ್ಕೆ ಬಂದಿದ್ದು ವಿತ್ತ ಸಚಿವೆಯಾಗಿ ನಿರ್ಮಲಾ ಸೀತಾರಾಮನ್‌ ಮೊದಲ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದು ಹಾಸನ ಜಿಲ್ಲೆಯ ಜನತೆ ಅನೇಕ ನಿರೀಕ್ಷೆಗಳನ್ನು ಹೊಂದಿದ್ದಾರೆ.

ಹಾನಸದಲ್ಲಿ ಹಲವು ವರ್ಷ ನೆನಗುದಿಗೆ ಬಿದ್ದಿರುವ ವಿಮಾನ ನಿಲ್ದಾಣ ಮಂಜೂರಾತಿ, ಶಿರಾಡಿ ಘಾಟ್‌ನಲ್ಲಿ ಸುರಂಗ ಮತ್ತು ಮೇಲ್ಸೇತುವೆ ಮಾರ್ಗ, ಹಾಸನಕ್ಕೆ ಸ್ಮಾಟ್ ರ್ಸಿಟಿ ಯೋಜನೆ, ಹಾಸನ- ಬೆಲೂರು-ಚಿಕ್ಕಮಗಳೂರು ರೈಲು ಮಾರ್ಗ ನಿರ್ಮಾ ಣಗಳಲ್ಲದೆ ಪ್ರವಾಸೋದ್ಯಮ ಅಭಿವೃದ್ಧಿ ಪಡಿಸಲು ಹೆಚ್ಚು ಅನುದಾನ ನೀಡುವ ನಿರೀಕ್ಷೆಯನ್ನು ಜಿಲ್ಲೆಯ ರಾಜಕಾರಣಿಗಳು ಹಾಗೂ ಜನತೆ ಹೊಂದಿದ್ದಾರೆ.

ಸ್ಮಾರ್ಟ್‌ ಸಿಟಿ ಸೌಲಭ್ಯ ಅಗತ್ಯ: ಹಾಸನ ನಗರ ದಶಕದಿಂದ ತೀವ್ರವಾಗಿ ಬೆಳೆಯುತ್ತಿದ್ದು ಅನೇಕ ಮೂಲ ಸೌಕರ್ಯಗಳ ಅಗತ್ಯವಿದೆ. ಈ ನಿಟ್ಟಿನಲ್ಲಿ ಹಾಸನ ಸ್ಮಾರ್ಟ್‌ಸಿಟಿ ಯೋಜನೆ ಸೇರಬೇಕೆಂಬುದು ಎರಡ್ಮೂರು ವರ್ಷಗಳ ಬೇಡಿಕೆಯಾಗಿದೆ. ಈ ಹಿಂದೆ ಜಿಲ್ಲೆಯ ಸಂಸದರಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಸ್ಮಾರ್ಟ್‌ಸಿಟಿ ಹಾಗೂ ಜಿಲ್ಲೆಗೆ ಐಐಟಿ ತರಲು ಹೋರಾಟ ನಡೆಸಿದ್ಧಲ್ಲದೆ, ಪ್ರಧಾನಿ ಮೋದಿ ಅವರೊಂದಿಗೆ ಚರ್ಚೆ ನಡೆಸಿದ್ದರು.

ಆದರೆ ಈ ಬಾರಿ ಜಿಲ್ಲೆಗೆ ನೂತನ ಸಂಸದ ದೇವೇಗೌಡರ ಮೊಮ್ಮಗ ಪ್ರಜ್ವಲ್ ರೇವಣ್ಣ ಇರುವುದರಿಂದ ಕೇಂದ್ರದ ಮೇಲೆ ಅಷ್ಟಾಗಿ ಒತ್ತಡ ಹೇರಲು ಸಾಧ್ಯವಿಲ್ಲ. ಒಂದು ವೇಳೆ ಇವರ ತಾತ ದೇವೇಗೌಡರು ತುಮಕೂರಿನಿಂದ ಸಂಸದರಾಗಿ ಆಯ್ಕೆಯಾಗಿ ತಾತನೊಂದಿಗೆ ಮೊಮ್ಮಗನೂ ಜೊತೆಗೂಡಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬಹುದಿತ್ತು, ಆದರೆ ಈಗ ಪ್ರಜ್ವಲ್ ಜಿಲ್ಲೆಯ ಬೇಡಿಕೆ ಈಡೇರಿಸಲು ಸಂಸತ್‌ನಲ್ಲಿ ಏಕಾಂಗಿಯಾಗಿ ಹೋರಾಟ ಮಾಡಬೇಕಿದೆ.

ಶಿರಾಡಿಘಾಟ್ : ಶಿರಾಡಿಘಾಟ್ ಸುರಂಗ ಎಕ್ಸ್‌ಪ್ರೆಸ್‌ ಹೈವೆ ಮೇಲ್ಸೇತುವೆ ನಿರೀಕ್ಷೆಯಲ್ಲಿದ್ದು ರಾಜ್ಯದ ಕರಾವಳಿ ಮತ್ತು ರಾಜಧಾನಿ ಬೆಂಗಳೂರು ಮೂಲಕ ಚನೈ ಬಂದರು ಸಂಪರ್ಕಿಸುವ ಪ್ರಮುಖ ರಾಷ್ಟ್ರೀಯ ಹೆದ್ದಾರಿ-75 ಜಿಲ್ಲೆಯಲ್ಲಿ ಹಾದು ಹೋಗಿರುವುದರಿಂದ ಬೆಂಗಳೂರು-ಮಂಗಳೂರು ನಡುವೆ ಇರುವ ಶಿರಾಡಿಘಾಟ್ ರಸ್ತೆ ಮಳೆಗಾಲ ಬಂತೆಂದರೆ ಭೂ ಕುಸಿತದಿಂದ ವಾಹನ ಸಂಚಾರಕ್ಕೆ ಅನೇಕ ತೊಂದರೆ ಆಗಲಿದೆ ಹಾಗಾಗಿ ಶಿರಾಡಿಘಾಟ್ ಚತುಷ್ಟಪಥ ಸುರಂಗ ಮತ್ತು ಮೇಲ್ಸೇತುವೆ ನಿರ್ಮಾಣ ಮಾಡುವ ನಿರೀಕ್ಷೆಯನ್ನು ಹೊಂದಿದ್ದಾರೆ. ಬೆಲೂರು-ಹಾಸನ-ಚಿಕ್ಕಮಗಳೂರು-ಶೃಂಗೇರಿ ರೈಲು ಮಾರ್ಗ ನಿರ್ಮಾಣದ ಸರ್ವೆ ಮುಕ್ತಾಯವಾಗಿದ್ದು ಈಗಾಗಲೆ ಚಿಕ್ಕಮಗಳೂರು-ಬೆಲೂರು- ಸಕಲೇಶಪುರ ರೈಲು ಮಾರ್ಗಕ್ಕೆ ಮಂಜೂರಾತಿ ದೊರೆತಿದೆ, ಆದರೆ ಬೆಲೂರುನಿಂದ ಸಕಲೇಶಪುರ ನಡುವೆ ರೈಲು ಮಾರ್ಗ ನಿರ್ಮಾಣದಿಂದ ಹೆಚ್ಚು ಪ್ರಯೋಜನ ವಿಲ್ಲ ಎಂಬ ಲೆಕ್ಕಾಚಾರದಿಂದ ಚಿಕ್ಕಮಗಳೂರು-ಬೇಲೂರು-ಹಾಸನ ಮಾರ್ಗವಾಗಿ ರೈಲು ಸಂಚಾರ ಮಾಡ ಬೇಕಿದೆ. ಇದಕ್ಕಾಗಿ ಸರ್ವೆಕಾರ್ಯ ಮುಗಿದಿದ್ದು 460 ಕೋಟಿ ರೂ. ಯೋಜನೆ ಅಂದಾಜು ಮಾಡಲಾಗಿದೆ.

ಈ ಯೋಜನೆಗೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಹಣ ನೀಡಲು ಮುಂದಾದರೆ ರಾಜ್ಯದ ಮೈತ್ರಿ ಸರ್ಕಾರ ದಿಂದ ಶೇ.50ರಷ್ಟು ಅನುದಾನವನ್ನು ತಂದು ಆದಷ್ಟು ಬೇಗ ಕಾಮಗಾರಿ ಮುಕ್ತಾಯ ಮಾಡಿಸುತ್ತೇನೆ ಎಂದು ಜಿಲ್ಲಾ ಮಂತ್ರಿ ಎಚ್.ಡಿ.ರೇವಣ್ಣ ತುದಿಗಾಲಿನಲ್ಲಿ ನಿಂತಿ ದ್ದಾರೆ. ಇವರ ಆಸೆಗೆ ಇಂದು ನಡೆಯುವ ಬಜೆಟ್ ಯಾವ ರೀತಿಯಲ್ಲಿ ಪೂರಕವಾಗಲಿದೆ ಎನ್ನುವದು ತಿಳಿಯಲಿದೆ.

 

● ಎನ್‌. ನಂಜುಂಡೇಗೌಡ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹೈನು ಉದ್ಯಮಕ್ಕೆ ಡಿಜಿಟಲ್‌ ಸ್ಪರ್ಶ; ಕರಾವಳಿಗರ My MPCS ಆ್ಯಪ್‌ಗೆ ರಾಜ್ಯವ್ಯಾಪಿ ಬೇಡಿಕೆ

ಹೈನು ಉದ್ಯಮಕ್ಕೆ ಡಿಜಿಟಲ್‌ ಸ್ಪರ್ಶ; ಕರಾವಳಿಗರ My MPCS ಆ್ಯಪ್‌ಗೆ ರಾಜ್ಯವ್ಯಾಪಿ ಬೇಡಿಕೆ

ಮುಖ್ಯಮಂತ್ರಿ ಬದಲಿಲ್ಲ ; 2023ರ ವರೆಗೂ ಬಿಎಸ್‌ವೈ ಮುಖ್ಯಮಂತ್ರಿ: ನಳಿನ್‌

ಮುಖ್ಯಮಂತ್ರಿ ಬದಲಿಲ್ಲ ; 2023ರ ವರೆಗೂ ಬಿಎಸ್‌ವೈ ಮುಖ್ಯಮಂತ್ರಿ: ನಳಿನ್‌

ತರಕಾರಿ ವ್ಯಾಪಾರ ಯುವಕನ ಬದುಕು ಬದಲಿಸಿತು

ತರಕಾರಿ ವ್ಯಾಪಾರ ಯುವಕನ ಬದುಕು ಬದಲಿಸಿತು

ಅಕ್ಟೋಬರ್‌ ಅ. 21-23: ಎಫ್ಎಟಿಎಫ್ ಸಭೆ ಕಪ್ಪುಪಟ್ಟಿಗೆ ಸೇರಲಿದೆಯೇ ಪಾಕಿಸ್ಥಾನ?

ಕಪ್ಪುಪಟ್ಟಿಗೆ ಸೇರಲಿದೆಯೇ ಪಾಕಿಸ್ಥಾನ?

ಜೀವನ ಎಂದರೆ ಅದು ನಾವೇ!

ಜೀವನ ಎಂದರೆ ಅದು ನಾವೇ!

Health

ಚಿಂತನೆ: ಆರೋಗ್ಯ ಸೇವೆಯ ದುರ್ಬಲ ಕೊಂಡಿ

cHINA

ತೈವಾನ್‌ ಜತೆ ವ್ಯಾಪಾರ?, ಚೀನ ಪ್ರಾಬಲ್ಯ ತಡೆಗೆ ಕೇಂದ್ರ ಸರಕಾರದಿಂದ ಹೊಸ ಸೂತ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

hasan-tdy-2

ಕವಿತೆಗಳ ಸೃಷ್ಟಿ ಸುಲಭವಲ್ಲ : ಶಿವಲೀಲಾ ಹುಣಸಗಿ

hasan-tdy-1

ಪಟ್ಲ ಬೆಟ್ಟಕ್ಕೆ ಬರುವ ಪ್ರವಾಸಿಗರಿಗಿಲ್ಲ ರಕ್ಷಣೆ

hASAN-TDY-4

ಕೋವಿಡ್ ಹುತಾತ್ಮರಿಗೆ ಬಾರದ ಪರಿಹಾರ

hasan-tdy-3

ಆಹಾರ ಸಚಿವ ಉಸ್ತುವಾರಿ ಜಿಲ್ಲೆಯಲ್ಲಿ ಕಳಪೆ ರಾಗಿ ವಿತರಣೆ

hasan-tdy-2

ನಿಲ್ಲದ ಮಳೆ: ಹೊಲದಲ್ಲೇ ಉಳಿದ ಬೆಳೆ

MUST WATCH

udayavani youtube

ಮಂಗಳೂರು: ಡ್ರಗ್ಸ್ ಜಾಗೃತಿ ಬರಹದಿಂದ ಗಮನಸೆಳೆಯುತ್ತಿದೆ ಸಿಟಿ ಬಸ್

udayavani youtube

ನವರಾತ್ರಿ – Navratri ಹಬ್ಬದ ವೈಶಿಷ್ಟ್ಯವೇನು? | Udayavani

udayavani youtube

Mudipu‌ illegal quarrying allegations ವಿಚಾರ; ನನಗೆ ಯಾವುದೇ ಸಂಬಂದ ಇಲ್ಲ:Rajesh Naik

udayavani youtube

ಹಡಿಲು ಗದ್ದೆಯಲ್ಲಿ ಭತ್ತ ಬೆಳೆದು ಯಶಸ್ವಿಯಾದ ಕೃಷಿ !

udayavani youtube

ಕೃಷಿಯಲ್ಲಿ ಲಾಭಗಳಿಸಬೇಕಾದರೆ ಸಮಗ್ರ ಕೃಷಿ ಪದ್ಧತಿಯನ್ನು ಪಾಲಿಸಿ | Udayavaniಹೊಸ ಸೇರ್ಪಡೆ

ಹೈನು ಉದ್ಯಮಕ್ಕೆ ಡಿಜಿಟಲ್‌ ಸ್ಪರ್ಶ; ಕರಾವಳಿಗರ My MPCS ಆ್ಯಪ್‌ಗೆ ರಾಜ್ಯವ್ಯಾಪಿ ಬೇಡಿಕೆ

ಹೈನು ಉದ್ಯಮಕ್ಕೆ ಡಿಜಿಟಲ್‌ ಸ್ಪರ್ಶ; ಕರಾವಳಿಗರ My MPCS ಆ್ಯಪ್‌ಗೆ ರಾಜ್ಯವ್ಯಾಪಿ ಬೇಡಿಕೆ

ಮುಖ್ಯಮಂತ್ರಿ ಬದಲಿಲ್ಲ ; 2023ರ ವರೆಗೂ ಬಿಎಸ್‌ವೈ ಮುಖ್ಯಮಂತ್ರಿ: ನಳಿನ್‌

ಮುಖ್ಯಮಂತ್ರಿ ಬದಲಿಲ್ಲ ; 2023ರ ವರೆಗೂ ಬಿಎಸ್‌ವೈ ಮುಖ್ಯಮಂತ್ರಿ: ನಳಿನ್‌

ತರಕಾರಿ ವ್ಯಾಪಾರ ಯುವಕನ ಬದುಕು ಬದಲಿಸಿತು

ತರಕಾರಿ ವ್ಯಾಪಾರ ಯುವಕನ ಬದುಕು ಬದಲಿಸಿತು

ಅಕ್ಟೋಬರ್‌ ಅ. 21-23: ಎಫ್ಎಟಿಎಫ್ ಸಭೆ ಕಪ್ಪುಪಟ್ಟಿಗೆ ಸೇರಲಿದೆಯೇ ಪಾಕಿಸ್ಥಾನ?

ಕಪ್ಪುಪಟ್ಟಿಗೆ ಸೇರಲಿದೆಯೇ ಪಾಕಿಸ್ಥಾನ?

ಜೀವನ ಎಂದರೆ ಅದು ನಾವೇ!

ಜೀವನ ಎಂದರೆ ಅದು ನಾವೇ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.