Udayavni Special

ಗ್ರಾಮೀಣ ಭಾಗದಲ್ಲೂ ಬಸ್‌ ಓಡಿಸಿ

ಲಾಕ್‌ಡೌನ್‌ ತೆರವಾಗಿದ್ರೂ ಹಳ್ಳಿಗರಿಗಿಲ್ಲ ಬಸ್‌ ಭಾಗ್ಯ

Team Udayavani, Sep 22, 2020, 3:57 PM IST

ಗ್ರಾಮೀಣ ಭಾಗದಲ್ಲೂ ಬಸ್‌ ಓಡಿಸಿ

ಸಾಂದರ್ಭಿಕ ಚಿತ್ರ

ಚನ್ನರಾಯಪಟ್ಟಣ: ಕೇಂದ್ರ ಹಾಗೂ ರಾಜ್ಯ ಸರ್ಕಾರ ಲಾಕ್‌ಡೌನ್‌ ತೆರವು ಮಾಡಿ ಎರಡು ತಿಂಗಳು ಸಮೀಪಿಸಿದೆ. ಆದರೆ, ಗ್ರಾಮೀಣ ಭಾಗಕ್ಕೆ ಇನ್ನೂ ಕೆಎಸ್‌ಆರ್‌ಟಿಸಿ ಬಸ್‌ ಸಂಚರಿಸುತ್ತಿಲ್ಲ. ಇದರಿಂದ ಹಳ್ಳಿಗರು ಗೂಡ್ಸ್‌ ಆಟೋ, ಮಿನಿ ಟೆಂಪೋ, ದಾರಿಯಲ್ಲಿ ಬರುವ ದ್ವಿಚಕ್ರ ವಾಹನಗಳನ್ನು ತಡೆ ಮಾಡಿಕೊಂಡು ತಾಲೂಕು ಕೇಂದ್ರಕ್ಕೆ, ಇತರೆ ಸ್ಥಳಗಳಿಗೆ ಹೋಗಬೇಕಾಗಿದೆ.

ಚನ್ನರಾಯಪಟ್ಟಣ ಘಟಕದಿಂದ 104ಮಾರ್ಗಗಳಲ್ಲಿಬಸ್‌ ಸಂಚಾರ ಮಾಡಬೇಕಿದೆ. ಆದರೆ, ಈಗ 65 ಮಾರ್ಗದಲ್ಲಿ ಮಾತ್ರ ಓಡಾಟ ನಡೆಸುತ್ತಿವೆ. ಉಳಿದ 39 ಮಾರ್ಗದಲ್ಲಿ ಬಸ್‌ ಸಂಚರಿಸದೇ ಜನತೆ ಸರಕು ಸಾಗಣೆ ವಾಹನ ಗಳು, ಪ್ರಯಾಣಿಕರ ಆಟೋ, ಖಾಸಗಿ ವಾಹನ ಅವಲಂಬಿಸುವಂತಾಗಿದೆ.  ಈಗಾಗಲೇ ವಾರದ ಸಂತೆಗಳು ಆರಂಭವಾಗಿರುವುದರಿಂದ ತರಕಾರಿ, ದಿನಸಿ, ಇತರೆ ಪದಾರ್ಥ ಕೊಳ್ಳುವವರು, ಮಾರಾಟ ಮಾಡುವವರ ಪರಿಸ್ಥಿತಿ ಹೇಳ ತೀರದಾಗಿದೆ.

 ಆದಾಯ ಇಲ್ಲ: ಲಾಕ್‌ಡೌನ್‌ ತೆರವು ಮಾಡಿದಮಾರನೇ ದಿನ 85 ಮಾರ್ಗದಲ್ಲಿ ಬಸ್‌ ಸಂಚಾರಮಾಡಿದವು. ಅಲ್ಲಿ ಒಂದು ಕಿ.ಮೀ.ಗೆ6 ರಿಂದ7 ರೂ. ಮಾತ್ರ ಹಣ ಸಂಗ್ರಹವಾಗುತ್ತಿತ್ತು. ಹೀಗಾಗಿ ಅಂತಹ ಮಾರ್ಗಗಳಲ್ಲಿ ಸಂಚಾರ ನಿಲ್ಲಿಸಲಾಗಿದೆ. ಇನ್ನು ಒಂದು ಕಿ.ಮೀ.ಗೆ 25 ರೂ.ಗೂ ಹೆಚ್ಚು ಹಣ ಸಂಗ್ರಹ ಆಗುವ ಕಡೆಯಲ್ಲಿ ಮಾತ್ರ ಬಸ್‌ ಓಡಿಸಲಾಗುತ್ತಿದೆ. ನಿಗಮದ ಪ್ರಕಾರ ಒಂದು ಕಿ.ಮೀ. ಗೆ 35 ರಿಂದ 36 ರೂ. ಆದಾಯ ಬರಬೇಕಿದೆ ಎನ್ನುತ್ತಾರೆ ಅಧಿಕಾರಿಗಳು.

ಎಲ್ಲೆಲ್ಲಿ ಸಂಚಾರ?: ಸದ್ಯ ಧರ್ಮಸ್ಥಳ, ಬೆಂಗಳೂರು, ಮೈಸೂರು, ಮಂಡ್ಯ, ಮಡಿಕೇರಿ, ಹಾಸನ, ಶೃಂಗೇರಿ, ತಿಪಟೂರು, ಪಾಂಡವಪುರ, ಕೆ. ಆರ್‌.ಪೇಟೆ, ಶ್ರೀರಂಗಪಟ್ಟಣ, ಎನ್‌.ಆರ್‌.ಪುರ, ಹೊಳೆನರಸೀಪುರ, ಅರಸೀಕೆರೆ, ಅರಕಲಗೂರು, ಮೇಲುಕೋಟೆ ಸೇರಿ 65 ಮಾರ್ಗಕ್ಕೆ ಚನ್ನರಾಯಪ‌ಟ್ಟಣಘಟಕದಿಂದ ‌ ಬಸ್‌ಗಳು ಸಂಚಾಋ ಮಾಡುತ್ತಿದ್ದು, ಇಲ್ಲಿ ಒಂದು ಕಿ.ಮೀ.ಗೆ 20 ರಿಂದ 25 ರೂ. ವರೆಗೆ ಆದಾಯ ಬರುತ್ತಿದೆ.

18 ಕಡೆ ಗ್ರಾಮೀಣ ಮಾರ್ಗ: ಸದ್ಯ ಬಸ್‌ ಸಂಚರಿಸುತ್ತಿರುವ 65 ಮಾರ್ಗದಲ್ಲಿ 18 ಗ್ರಾಮೀಣ ಭಾಗಕ್ಕೆ ಸೇರಿದ್ದು, ಗಂಡಸಿ, ಅರಸೀಕೆರೆ, ನುಗ್ಗೇಹಳ್ಳಿ, ಹಿರೀಸಾವೆ, ಶ್ರವಣಬೆಳಗೊಳ, ಹೊಳೆನರಸೀಪುರ ಭಾಗದ ಗ್ರಾಮೀಣ ಪ್ರದೇಶಗಳಿಗೆ ಬಸ್‌ ಓಡಾಡುತ್ತಿವೆ. ಇನ್ನು ತಾಲೂಕಿನ ಕೆಂಬಾಳು, ಬಾಗೂರು, ಕುಂದೂರು ಮಠ, ದಿಡಗ, ಕಬ್ಬಳಿ, ಅಕ್ಕನಹಳ್ಳಿ, ಚಲ್ಯ, ಹೀಗೆ ಪ್ರಮುಖ ಗ್ರಾಮೀಣ ಭಾಗದಲ್ಲಿ ಸಾರಿಗೆ ಬಸ್‌ ಸಂಚಾರ ಮಾಡುತ್ತಿಲ್ಲ. ಈ ಭಾಗದ ಜನ ಸ್ವಂತ ಬೈಕ್‌, ಆಟೋ ಅವಲಂಬಿಸಬೇಕಿದೆ.

ಘಟಕಕ್ಕೆ ದೂರವಾಣಿ ಕರೆಗಳ ಸುರಿಮಳೆ: ನಿತ್ಯವೂ ಗ್ರಾಮೀಣ ಭಾಗದ ಜನ ಘಟಕಕ್ಕೆ ದೂರವಾಣಿ ಕರೆ ಮಾಡಿ ಬಸ್‌ ಸೌಲಭ್ಯಕಲ್ಪಿಸುವಂತೆ ಮನವಿ ಮಾಡುತ್ತಿದ್ದಾರೆ. ಈ ವೇಳೆ ಘಟಕದ ಸಿಬ್ಬಂದಿ ನಿಗಮದ ನಿಯಮ ಹಾಗೂ ಆದಾಯವಾಗದ ಬಗ್ಗೆ ತಿಳಿಸುವ ಮೂಲಕ ಪ್ರಯಾಣಿಕರನ್ನು ಸಂತೈಸುವಂತಾಗಿದೆ.

ಪಾಸ್‌ ಪಡೆಯುವವರ ಸಂಖ್ಯೆಯೂ ಕ್ಷೀಣ : ಕೋವಿಡ್ ಗೆ ಮೊದಲು ಮಾಸಿಕ ಪಾಸ್‌ ವಿತರಣೆಯಿಂದ ನಿತ್ಯವೂ50 ಸಾವಿರ ರೂ. ಹಣ ಸಂಗ್ರಹ ಆಗುತ್ತಿತ್ತು. ಲಾಕ್‌ಡೌನ್‌ ತೆರವಾದ ಮೇಲೆ ಮಾಸಿಕ ಪಾಸ್‌ ನಿಂದ 20 ರಿಂದ 25 ಸಾವಿರ ರೂ. ಹಣ ನಿತ್ಯ ಸಂಗ್ರಹವಾಗುತ್ತಿದೆ. ಇನ್ನು ಕಳೆದ ಸಾಲಿನಲ್ಲಿ90 ಸಾವಿರ ವಿದ್ಯಾರ್ಥಿಗಳು ವಾರ್ಷಿಕ ಪಾಸ್‌ ಪಡೆದಿದ್ದರಿಂದ ಲಕ್ಷಾಂತರ ರೂ. ಹಣನಿಗಮಕ್ಕೆ ಬಂದಿತ್ತು. ಪ್ರಸಕ್ತ ವರ್ಷ ಶಾಲಾಕಾಲೇಜು ಬಾಗಿಲು ತೆರೆಯದೆ ಇರುವುದರಿಂದ ವಿದ್ಯಾರ್ಥಿ ಪಾಸ್‌ ವಿತರಣೆ ಆಗಿಲ್ಲ, ಆದಾಯವೂ ಶೂನ್ಯ.

ತರಬೇತಿ, ರಜೆ : ಘಟಕದಲ್ಲಿ430 ಚಾಲಕ, ನಿರ್ವಾಹಕರು,59 ಮಂದಿ ತಾಂತ್ರಿಕ ಸಿಬ್ಬಂದಿ ಇದ್ದಾರೆ. ಇವರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಸಂಚಾರ ಮಾಡುವ ಬಸ್‌ನ ಚಾಲಕ ಹಾಗೂ ನಿರ್ವಾಹಕರು ತರಬೇತಿಯಲ್ಲಿದ್ದಾರೆ. ಇನ್ನು ಕೆಲವರು ರಜೆ ಮೇಲೆ ಊರಿಗೆ ತೆರಳಿದ್ದಾರೆ, ಇವರಿಗೆಲ್ಲ ಸರ್ಕಾರ ಆಗಸ್ಟ್‌ ಅಂತ್ಯದವರೆಗೆ ವೇತನ ನೀಡಿಲ್ಲ,59 ಮಂದಿ ತಾಂತ್ರಿಕ ಸಿಬ್ಬಂದಿ ಸೆ.1ರಿಂದಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಶಾಲಾಕಾಲೇಜು ಪ್ರಾರಂಭ ಆಗುವವರೆಗೆ ಗ್ರಾಮೀಣ ಭಾಗದಲ್ಲಿ ಬಸ್‌ ಸಂಚಾರ ಮಾಡುವುದು ಬೇಡ ಎಂದು ಮೇಲಧಿಕಾರಿಗಳು ಆದೇಶಿಸಿದ್ದಾರೆ,ಕ್ಷೇತ್ರದ ಶಾಸಕ ಬಾಲಕೃಷ್ಣ ಈಗಾಗಲೆ ಸಭೆ ಮಾಡಿ ಅಗತ್ಯ ಇರುವ ಗ್ರಾಮಕ್ಕೆ ಹಂತವಾಗಿ ಬಸ್‌ ಓಡಿಸಲು ಸೂಚಿಸಿದ್ದಾರೆ. ಆದಾಯ ನೋಡಿ ಸಂಚಾರ ಆರಂಭಿಸಲಾಗುವುದು. ಎಸ್‌.ಬಿ.ಶ್ರೀಧರ್‌, ಸಹಾಯಕ ಕಾರ್ಯಧೀಶಕರು.

ಗ್ರಾಮೀಣ ಭಾಗಕ್ಕೆ ಬಸ್‌ ಸಂಚಾರ ಮಾಡದೇ ಇರುವುದರಿಂದ ಅನೇಕ ಮಂದಿಗೆ ತೊಂದರೆ ಆಗುತ್ತಿದೆ. ಆದಷ್ಟು, ಬೇಗ ಬಸ್‌ಗಳು ಹಳ್ಳಿಕಡೆಗೆ ಸಂಚರಿಸುವಂ ತಾಗಲಿ, ಸ್ವಂತ ವಾಹನ ಹೊಂದಿಲ್ಲದವರ ಪಾಡು ಹೇಳತೀರದಂತಾಗಿದೆ. ಶೇಖರ್‌, ಅಂಗವಿಕಲ, ಬಾಗೂರು.

 

ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

ಉದಯವಾಣಿ ಸುದ್ದಿ ಈಗ ಟೆಲಿಗ್ರಾಂನಲ್ಲೂ ಲಭ್ಯ; ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ವಶಕ್ಕೆ

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ಪೊಲೀಸರ ವಶಕ್ಕೆ

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲುಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲಿಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

00

ಎರಡು ವರ್ಷದ ಬಳಿಕ ‘ವಕೀಲ್ ಸಾಬ್ ‘ನಾಗಿ ಪವನ್ ಕಲ್ಯಾಣ್ : ದಸಾರಕ್ಕೆ ಟೀಸರ್ ಕೊಡುಗೆ

ಪರಿಸರ ಸ್ನೇಹಿ ದೀಪಾವಳಿಗೆ ಒತ್ತು: ಗೋಮಯ ಹಣತೆ ಬಳಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ

ಪರಿಸರ ಸ್ನೇಹಿ ದೀಪಾವಳಿಗೆ ಒತ್ತು: ಗೋಮಯ ಹಣತೆ ಬಳಸಲು ಕೃಷಿ ಸಚಿವ ಬಿ.ಸಿ.ಪಾಟೀಲ್ ಕರೆ

“ನಾವು ಬಿಜೆಪಿ ವಿರೋಧಿಗಳೇ ಹೊರತು ದೇಶ ವಿರೋಧಿಗಳಲ್ಲ : ಫಾರೂಕ್ ಅಬ್ದುಲ್ಲಾ

“ನಾವು ಬಿಜೆಪಿ ವಿರೋಧಿಗಳೇ ಹೊರತು ದೇಶ ವಿರೋಧಿಗಳಲ್ಲ : ಫಾರೂಕ್ ಅಬ್ದುಲ್ಲಾ

ತನ್ನನ್ನು ಬೆಳೆಸಿದ ಪಕ್ಷಕ್ಕೆ ಯಾರು ದ್ರೋಹ ಬಗೆದಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ:ಡಿಕೆಶಿ

ತನ್ನನ್ನು ಬೆಳೆಸಿದ ಪಕ್ಷಕ್ಕೆ ಯಾರು ದ್ರೋಹ ಬಗೆದಿದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ:ಡಿಕೆಶಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

dhanvir

ಬಂಡೀಪುರದಲ್ಲಿ ರಾತ್ರಿ ಸಫಾರಿ: ಚಿತ್ರನಟ ಧನ್ವೀರ್ ವಿರುದ್ದ ಪ್ರಕರಣ ದಾಖಲು

ಕೆರೆ ಬತ್ತದಂತೆ ನೋಡಿಕೊಳ್ಳಿ

ಕೆರೆ ಬತ್ತದಂತೆ ನೋಡಿಕೊಳ್ಳಿ

Hasan-tdy-1

ಚೆನ್ನಮ್ಮನ ಆದರ್ಶ ಯುವ ಪೀಳಿಗೆ ಪಾಲಿಸಲಿ

HASAN-TDY-2

ವೀರಗಲ್ಲು ಧ್ವಂಸ: ಕಿಡಿಗೇಡಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

hasan-tdy-1

ಏತನೀರಾವರಿ ಯೋಜನೆಯಿಂದ ರೈತರ ಬದುಕು ಹಸನು

MUST WATCH

udayavani youtube

ರಸ್ತೆಯಲ್ಲಿ ಉಂಟಾದ ಕೃತಕ ನೆರೆಯಲ್ಲೇ ಈಜಾಡಿದ ಯುವಕ

udayavani youtube

ಕೊರೋನಾ: ಶೋಚನೀಯವಾದ ತಿರುಗುವ ತೊಟ್ಟಿಲು ತಿರುಗಿಸುವ ಕೈಗಳ ಕಥೆ!

udayavani youtube

Story behind Vijayadashami celebration | ವಿಜಯದಶಮಿ ಆಚರಣೆಯ ಹಿಂದಿನ ಕಥೆ | Udayavani

udayavani youtube

450 ಕ್ಕೂ ಅಧಿಕ ಬೀದಿ ಬದಿ ಶ್ವಾನಗಳಿಗೆ ನಿತ್ಯ ಆಹಾರ ನೀಡುತ್ತಾರೆ ರಜನಿ ಶೆಟ್ಟಿ!

udayavani youtube

The Sharada statue embodied in the artist’s finesse | Navaratri Specialಹೊಸ ಸೇರ್ಪಡೆ

ಹನಿಟ್ರ್ಯಾಪ್‌: 5.45 ಲಕ್ಷ ರೂ. ದರೋಡೆ; ಬಂಧನ

ಹನಿಟ್ರ್ಯಾಪ್‌: 5.45 ಲಕ್ಷ ರೂ. ದರೋಡೆ; ಬಂಧನ

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ಹೈದರಾಬಾದ್ ವಿರುದ್ಧ ಪಂಜಾಬ್ ಗೆ ರೋಚಕ ಗೆಲುವು

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ವಶಕ್ಕೆ

ದೇರಳಕಟ್ಟೆ ಬಸ್ಸಿಗೆ ಕಲ್ಲು ತೂರಿದ ಪ್ರಕರಣ : ಓರ್ವ ಆರೋಪಿ ಸೇರಿ ಮೂವರು ಪೊಲೀಸರ ವಶಕ್ಕೆ

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲುಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

ಮೂರು ದಶಕದಲ್ಲಿ 40 ಲಕ್ಷ ಕಾರು ಉತ್ಪಾದಿಸಿ ಮೈಲಿಗಲ್ಲು ಸ್ಥಾಪಿಸಿದ ಟಾಟಾ ಮೋಟಾರ್ಸ್‌

00

ಎರಡು ವರ್ಷದ ಬಳಿಕ ‘ವಕೀಲ್ ಸಾಬ್ ‘ನಾಗಿ ಪವನ್ ಕಲ್ಯಾಣ್ : ದಸಾರಕ್ಕೆ ಟೀಸರ್ ಕೊಡುಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.