Udayavni Special

ಅಕ್ರಮ ಲೇಔಟ್‌ ತಡೆಗಟ್ಟಿ

Team Udayavani, Mar 30, 2021, 5:08 PM IST

ಅಕ್ರಮ ಲೇಔಟ್‌ ತಡೆಗಟ್ಟಿ

ಹಾಸನ: ನಗರದ ಸುತ್ತಮುತ್ತ ಅಕ್ರಮ ಲೇಔಟ್‌ಗಳು ನಿರ್ಮಾಣವಾಗುತ್ತಿದ್ದು, ಜಿಲ್ಲಾಧಿಕಾರಿಯವರು ಪರಿಶೀಲಿಸಿ ಕ್ರಮ ಕೈಗೊಳ್ಳ  ಬೇಕು ಎಂದು ಜೆಡಿಎಸ್‌ ಮುಖಂಡ, ಮಾಜಿ ಸಚಿವ ಎಚ್‌.ಡಿ.ರೇವಣ್ಣ ಒತ್ತಾಯಿಸಿದರು.

ಸಿಎಂ, ಸಚಿವರ ಗಮನಕ್ಕೆ ತರುವೆ: ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಭೂಮಾಲಿಕರಿಗೆ ಹೆದರಿಸಿ ಜಮೀನು ಖರೀದಿಸಿ ಖಾಸಗಿ ವಸತಿ ಬಡಾವಣೆಗಳು ನಿರ್ಮಾಣವಾಗುತ್ತಿವೆ. ನಗರದ ಹೊರವಲಯ ಬಿ.ಎಂ. ರಸ್ತೆಯ ಬದಿ ಬುಸ್ತೇನಹಳ್ಳಿ ಬಳಿ ಖಾಸಗಿಬಡಾವಣೆ ನಿರ್ಮಾಣದಲ್ಲಿ ಕಾನೂನು ಉಲ್ಲಂಘಿಸಲಾಗಿದೆ. ರಾಜಕಾಲುವೆ ಮುಚ್ಚಿ , ಹೈ ಟೆನ್ಷನ್‌ ವಿದ್ಯುತ್‌ ಮಾರ್ಗ ಇರುವಪ್ರದೇಶದಲ್ಲಿ ನಿವೇಶಗಳನ್ನು ನಿರ್ಮಿಸಲಾಗುತ್ತಿದೆ ಎಂದು ಹಲವು ಸಂಘ-ಸಂಸ್ಥೆಗಳು ನನಗೆ ಮಾಹಿತಿ ನೀಡಿವೆ. ಈ ಬಗ್ಗೆ ಪರಿಶೀಲಿಸಿ,ದಾಖಲೆ ಸಂಗ್ರಹಿಸಿ ನಾನು ಮುಖ್ಯಮಂತ್ರಿ ಯವರು, ನಗರಾಭಿವೃದ್ಧಿ , ವಸತಿ ಸಚಿವರಗಮನಕ್ಕೆ ತಂದು ತನಿಖೆ ನಡೆಸಲು ಕ್ರಮ ಕೈಗೊಳ್ಳುವೆ. ಅವರು ಸ್ಪಂದಿಸದಿದ್ದರೆ ಕಾನೂನುಹೋರಾಟದ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು.

ಬುಸ್ತೇನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಬಡಾವಣೆಯಲ್ಲಿ ನಿಯಮ ಉಲ್ಲಂ ಸಿರುವುದು ಗೊತ್ತಿದ್ದರೂ ಕೆಲ ಅಧಿಕಾರಿಗಳುಪರೋಕ್ಷ ಸಹಕಾರ ನೀಡುತ್ತಿದ್ದಾರೆ. ನಗರ ಯೋಜನಾ ಪ್ರಾಧಿಕಾರ, ಕಂದಾಯ ಇಲಾಖೆ,ಹಾಸನ ನಗರಾಭಿವೃದ್ಧಿ ಇಲಾಖೆ,ತೋಟಗಾರಿಕೆ, ಅರಣ್ಯ ಇಲಾಖೆ, ಕೆಪಿಟಿಸಿಎಲ್‌ಅಧಿಕಾರಿಗಳೂ ಶಾಮೀಲಾಗಿದ್ದಾರೆ ಎಂದು ರೇವಣ್ಣ ದೂರಿದರು.

ನಿವೇಶನ ನೀಡಿ ಅನುಮತಿ: ಖಾಸಗಿಬಡಾವಣೆಗಳ ನಿರ್ಮಾಣದಲ್ಲಿ ನಿರ್ದಿಷ್ಟಅಳತೆಯ ರಸ್ತೆ, ಒಳ ಚರಂಡಿ ವ್ಯವಸ್ಥೆಮಾಡಬೇಕು. ಉದ್ಯಾನವನ, ಶಾಲೆ, ಕಾಲೇಜುಸೇರಿ ಸಾರ್ವಜನಿಕರ ಬಳಕೆಗೆ ಸ್ಥಳ ಬಿಡಬೇಕು.ಅಂದರೆ ಬಡಾವಣೆಯಲ್ಲಿ ಶೇ. 60 ಭಾಗದಲ್ಲಿನಿವೇಶನ ನಿರ್ಮಿಸಿದರೆ, ಶೇ.40 ಭಾಗವನ್ನುಸಾರ್ವಜನಿಕ ಬಳಕೆಗೆ ಮೀಸಲಿಡಬೇಕು.ಆದರೆ, ಇದ್ಯಾವುದೇ ನಿಯಮಗಳನ್ನು ಪಾಲಿಸದೆ ಪ್ರಭಾವಿಗಳಿಗೆ ಶೇ.20 ನಿವೇಶನಗಳನ್ನುಉಚಿತವಾಗಿ ನೀಡಿ ಬಡಾವಣೆಗೆ ಅನುಮತಿಪಡೆಯುವ ಪ್ರಯತ್ನ ನಡೆದಿದೆ ಎಂದೂ ಆರೋಪಿಸಿದರು.

ಲೂಟಿ ಮಾಡುತ್ತಿದ್ದಾರೆ: ನಗರಾಭಿವೃದ್ಧಿ ಪ್ರಾಧಿಕಾರಗಳು, ಕರ್ನಾಟಕ ಗೃಹ ಮಂಡಳಿಹೆಚ್ಚು ಬಡಾವಣೆ ನಿರ್ಮಿಸಿ ವಸತಿ ರಹಿತರಿಗೆನಿವೇಶನ ಹಂಚಿಕೆ ಮಾಡಬೇಕು. ಆದರೆ,ನಗರಾಭಿವೃದ್ಧಿ ಪ್ರಾಧಿಕಾರಗಳು ಮತ್ತು ಕರ್ನಾಟಕ ಗೃಹ ಮಂಡಳಿ ವಸತಿ ಬಡಾವಣೆಗಳನ್ನು ನಿರ್ಮಿಸುವುದನ್ನೇ ಮರೆತಿವೆ.ಖಾಸಗಿಯವರು ನಿಯಮ ಬದಿಗೊತ್ತಿ ವಸತಿಬಡಾವಣೆ ನಿರ್ಮಿಸಿ ಲೂಟಿ ಮಾಡುತ್ತಿದ್ದಾರೆ.ಖಾಸಗಿಯವರೇ ನಿವೇಶನ ನಿರ್ಮಿಸಿಹಂಚುವುದಾದರೆ ಗೃಹಮಂಡಳಿ, ನಗರಾಭಿ ವೃದ್ಧಿ ಪ್ರಾಧಿಕಾರಗಳನ್ನು ಸರ್ಕಾರ ಮುಚ್ಚಿ ಬಿಡಲಿ ಎಂದು ವ್ಯಂಗ್ಯವಾಡಿದರು.

ಹಾಸನ ತಾಲೂಕು ಕಟ್ಟಾಯ ಹೋಬಳಿಯಲ್ಲಿ ತಾಪಂ ಕ್ಷೇತ್ರಗಳ ಪುನರ್‌ ವಿಂಗಡಣೆಯಲ್ಲಿ ಲೋಪಗಳಾಗಿವೆ. ಈ ಬಗ್ಗೆ ಜೆಡಿಎಸ್‌ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.ಶಾಸಕ ಎಚ್‌.ಕೆ.ಕುಮಾರಸ್ವಾಮಿ ಸಂಬಂಧಪಟ್ಟ ಸಚಿವರು, ರಾಜ್ಯ ಚುನಾವಣಾ ಆಯೋಗದ ಗಮನಕ್ಕೂ ತಂದಿದ್ದಾರೆ. ಜಿಲ್ಲಾಧಿಕಾರಿ ಅವರು ಪರಿಶೀಲಿಸಿ ಆಗಿರುವ ಲೋಪ ಸರಿಪಡಿಸಬಹುದು ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಸರ್ಕಾರ ನಿಯಮಗಳನ್ನೇ ರದ್ದುಪಡಿಸಿದೆ :

ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಕರ್ನಾಟಕ ಗೃಹ ಮಂಡಳಿ ನಿವೇಶನ ಹಂಚಿಕೆ ಮಾಡುವಾಗ ವಸತಿ ರಹಿತರಿಗೆ ನಿವೇಶನ ನೀಡಬೇಕು. ನಿವೇಶನ ಪಡೆದವರು 15 ವರ್ಷ ಪರಭಾರೆ ಮಾಡಬಾರದು. ಈಗಾಗಲೇ ಮನೆ, ನಿವೇಶನಗಳನ್ನು ಹೊಂದಿದ್ದವರು ನಿವೇಶನಗಳನ್ನು ನಗರಾಭಿವೃದ್ಧಿ ಪ್ರಾಧಿಕಾರಗಳು ಹಾಗೂ ಕರ್ನಾಟಕ ಗೃಹ ಮಂಡಳಿಯಿಂದ ಪಡೆದರೆ ಅಂತಹ ಹಂಚಿಕೆ ರದ್ದುಪಡಿಸಬೇಕು ಎಂಬ ನಿಯಮವಿತ್ತು. ಆದರೆ, ಬಿಜೆಪಿಸರ್ಕಾರ ಬಂದಾಗ ಈ ನಿಯಮಗಳನ್ನು ರದ್ದುಪಡಿಸಿರುವುದರಿಂದ ಉಳ್ಳವರೇ ನಿವೇಶನ ಪಡೆದು ಮಾರಾಟ ಮಾಡಿಕೊಂಡು ಲಾಭ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ಎಚ್‌.ಡಿ.ರೇವಣ್ಣ ಬೇಸರಿಸಿದರು.

ಟಾಪ್ ನ್ಯೂಸ್

ಮೊಳಹಳ್ಳಿ: ಹುಂತನ ಕೆರೆಗೆ ಹಾಯಿಸಬೇಕಿದೆ ವಾರಾಹಿ ನೀರು

ಮೊಳಹಳ್ಳಿ: ಹುಂತನ ಕೆರೆಗೆ ಹಾಯಿಸಬೇಕಿದೆ ವಾರಾಹಿ ನೀರು

ಹಡಿಲು ಭೂಮಿ ಸರಕಾರದ ಸುಪರ್ದಿಗೆ: ಕಾಯ್ದೆಯಲ್ಲಿ ಅವಕಾಶ

ಹಡಿಲು ಭೂಮಿ ಸರಕಾರದ ಸುಪರ್ದಿಗೆ: ಕಾಯ್ದೆಯಲ್ಲಿ ಅವಕಾಶ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಬಾಲಕಿ ಮೇಲಿನ ಅತ್ಯಾಚಾರಿಗೆ 42 ದಿನಗಳಲ್ಲೇ ಸಜೆ ತೀರ್ಪು

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

ಕೋವಿಡ್ ನಡುವೆಯೂ ಜಿಗಿದ ಐಟಿ ಉದ್ಯೋಗ! ದೈತ್ಯ ಐಟಿ ಕಂಪೆನಿಗಳಿಂದ 72 ಸಾವಿರ ಮಂದಿ ಆಯ್ಕೆ

ಧೋನಿ ಪಡೆ ಎದುರು ಮುಗ್ಗರಿಸಿದ ರಾಜಸ್ಥಾನ್: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ಚೆನ್ನೈ

ಧೋನಿ ಪಡೆ ಎದುರು ಮುಗ್ಗರಿಸಿದ ರಾಜಸ್ಥಾನ್: ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿದ ಚೆನ್ನೈಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

incident held at hasana

ಎಲ್ಲೆಂದರಲ್ಲಿ ಗಂಡು ಕರು ಬಿಟ್ಟು ಹೋಗುತ್ತಿರುವ ಜನ

Hospitalized Infected

ಆಸ್ಪತ್ರೆಗೆ ದಾಖಲಾದ ಸೋಂಕಿತರು ಊರೆಲ್ಲಾ ಓಡಾಟ!

Awarding of awards to 10 journalists

10 ಮಂದಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

Fire if gas is refilling

ಗ್ಯಾಸ್‌ ರೀಪೀಲ್ಲಿಂಗ್‌ ವೇಳೆ ಬೆಂಕಿ: ಆಟೋ ಭಸ್ಮ

programme held at holenarasipura

ಕಡವಿನಕೋಟೆ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ

MUST WATCH

udayavani youtube

ಕೋವಿಡ್ ಆತಂಕ; ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಭಾರತ ಭೇಟಿ ರದ್ದು

udayavani youtube

ಕಂಬಳದ ಪಯಣ ಕೊನೆಗೊಳಿಸಿ ಕಾಲನ ಕರೆಗೆ ಓಗೊಟ್ಟ ‘ಬೋಳಂತೂರು ಕಾಟಿ’

udayavani youtube

ಕೋಣಗಳು ಏನನ್ನು ತಿಂದು ದಷ್ಟಪುಷ್ಟವಾಗಿ ಬೆಳೆಯುತ್ತವೆ ?

udayavani youtube

ಆಕಸ್ಮಾತ್ ನಾನು ಕೊರೊನಾದಿಂದ ಸತ್ತೋದ್ರೆ ನೀವೇ ಕಾರಣ : Guru Prasad

udayavani youtube

ದೆಹಲಿಯಲ್ಲಿ ಬೆಡ್, ಆಕ್ಸಿಜನ್ ಅಭಾವ ಮುಂದುವರಿಕೆ

ಹೊಸ ಸೇರ್ಪಡೆ

ಮೊಳಹಳ್ಳಿ: ಹುಂತನ ಕೆರೆಗೆ ಹಾಯಿಸಬೇಕಿದೆ ವಾರಾಹಿ ನೀರು

ಮೊಳಹಳ್ಳಿ: ಹುಂತನ ಕೆರೆಗೆ ಹಾಯಿಸಬೇಕಿದೆ ವಾರಾಹಿ ನೀರು

ಹಡಿಲು ಭೂಮಿ ಸರಕಾರದ ಸುಪರ್ದಿಗೆ: ಕಾಯ್ದೆಯಲ್ಲಿ ಅವಕಾಶ

ಹಡಿಲು ಭೂಮಿ ಸರಕಾರದ ಸುಪರ್ದಿಗೆ: ಕಾಯ್ದೆಯಲ್ಲಿ ಅವಕಾಶ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ಪಟ್ಟಣದ ಕಿರು ಸಂತೆ ಶನಿವಾರ ಸಂತೆಯಾಗಲಿ : ಸಾಲಿಗ್ರಾಮ ಪಟ್ಟಣ ಪಂಚಾಯತ್‌ ಮನಸ್ಸು ಮಾಡಲಿ

ನಿಶ್ಶಬ್ದಕ್ಕೆ ಜಾರಿದ ಜಿ.ವಿ.

ನಿಶ್ಶಬ್ದಕ್ಕೆ ಜಾರಿದ ಜಿ.ವಿ.

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

ನಡೆದಾಡುವ ನಿಘಂಟಿನ “ಜೀವಿ’ತದ ಗುಟ್ಟು ಬಲ್ಲಿರೇನು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.