ಕೆರೆ ಅಭಿವೃದ್ಧಿಗೆ ನೆರವು ನೀಡಿ


Team Udayavani, Sep 23, 2019, 2:25 PM IST

hasan-tdy-1

ಹಾಸನ: ನಗರದ ಹುಣಸಿನಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡಬೇಕು. ಕೆರೆ ಪರಿಸರವನ್ನು ಪ್ರವಾಸಿ ತಾಣವನ್ನಾಗಿ ಅಭಿವೃದ್ಧಿಪಡಿಸಲು ಶಾಸಕ ಪ್ರಿಂತಂ ಜೆ.ಗೌಡ ಅವರು ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಮಂಜೂರು ಮಾಡಿಸಬೇಕು ಎಂದು ಹಸಿರುಭೂಮಿ ಪ್ರತಿಷ್ಠಾನ ಒತ್ತಾಯಿಸಿದೆ.

ಹುಣಸಿನಕೆರೆ ಏರಿ ಮೇಲೆ ಹಸಿರುಭೂಮಿ ಪ್ರತಿಷ್ಠಾನದಿಂದ ಕೆರೆ ಪುನಶ್ಚೇತನ ಸಂಬಂಧ ಭಾನುವಾರ ಏರ್ಪಡಿಸಿದ್ದ ಚಿಂತನಾ ಸಭೆಯಲ್ಲಿ ಅಹವಾಲು ಮಂಡಿಸಿದ ಪ್ರತಿಷ್ಠಾನದ ಸ್ಥಾಪಕ ಅಧ್ಯಕ್ಷ ಆರ್‌.ಪಿ. ವೆಂಕಟೇಶ್‌ಮೂರ್ತಿ, ಪ್ರತಿಷ್ಠಾನವು ಜನರಿಂದ ಆರ್ಥಿಕ ನೆರವು ಸಂಗ್ರಹಿಸಿ ಕೆಲವು ಕೆರೆಗಳನ್ನು ಅಭಿವೃದ್ಧಿಪಡಿಸುವ ಕೆಲಸ ಮಾಡುತ್ತಾ ಬಂದಿದೆ ಎಂದರು.

ಸುಮಾರು 200 ಎಕರೆ ವಿಸ್ತೀರ್ಣದ ಹುಣಸಿನಕೆರೆ ಅಭಿವೃದ್ಧಿಗೆ ಕೋಟ್ಯಂತರ ರೂ. ಅಗತ್ಯವಿದ್ದು, ಸರ್ಕಾರ ಅನುದಾನದಿಂದ ಮಾತ್ರ ಕೆರೆಯನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸಾಧ್ಯ. ಶಾಸಕರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ತ್ವರಿತ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಮಾದರಿ ನಗರವನ್ನಾಗಿ ಮಾಡಿ: ಹಸಿರುಭೂಮಿ ಪ್ರತಿಷ್ಠಾನದ ಎಸ್‌.ಎಸ್‌.ಪಾಷಾ ಮಾತನಾಡಿ, ಹುಣಸಿನ ಕೆರೆಯಂತಹ ದೊಡ್ಡ ಆಸ್ತಿ ಹಾಸನ ನಗರದ ಜನರಿಗೆ ಸಿಕ್ಕಿದೆ. ಹಾಸನವನ್ನು ಮಾದರಿ ನಗರವನ್ನಾಗಿ ಅಭಿವೃದ್ಧಿಪಡಿಸಲು ಜನಪ್ರತಿನಿಧಿಗಳೂ ಸೇರಿದಂತೆಎಲ್ಲರೂ ಕೈ ಜೋಡಿಸುವಂತೆ ಮನವಿಮಾಡಿದರು. ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಎಚ್‌.ಪಿ. ಸ್ವರೂಪ್‌ ಮಾತನಾಡಿ, ಹುಣಸಿನಕೆರೆ ಅಭಿವೃದ್ಧಿಗೆ 20 ಕೋಟಿಗಿಂತ ಹೆಚ್ಚಿನ ಅನುದಾನದ ಅವಶ್ಯಕತೆ ಇದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಬರುವುದರಿಂದ ಶಾಸಕರು ಸರ್ಕಾರದಿಂದ ಅನುದಾನ ಕೊಡಿಸಬೇಕು ಎಂದು ಆಗ್ರಹಪಡಿಸಿದರು.

ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಜಿಲ್ಲಾ ಅಧ್ಯಕ್ಷ ಎಚ್‌.ಪಿ.ಮೋಹನ್‌ ಮಾತನಾಡಿ, ಪಕ್ಷ ಭೇದ ಮರೆತು ಶಾಸಕರ ಮತ್ತು ಮುಖಂಡರ ಜೊತೆ ಚರ್ಚಿಸಿ ಸರ್ಕಾರದಿಂದ ಅನುದಾನ ತರುವ ಪ್ರಯತ್ನ ಮಾಡಬೇಕು. ಇದುವರೆಗೂ ಕೆರೆ ಅಭಿವೃದ್ಧಿಗೆ ನಡೆದ ಪ್ರಯತ್ನವನ್ನು ಪ್ರಶಂಸಿದರು.

ಹಸಿರುಭೂಮಿ ಪ್ರತಿಷ್ಠಾನದ ಅಹವಾಲು ಆಲಿಸಿದ ಶಾಸಕ ಪ್ರೀತಂ ಜೆ.ಗೌಡ ಅವರು, ಚನ್ನಪಟ್ಟಣ ಕೆರೆ ಅಭಿವೃದ್ಧಿ ಮಾದರಿಯಲ್ಲಿಯೇ ಹುಣಸಿನಕೆರೆಯ ಅಭಿವೃದ್ಧಿಯೂ ಆಗಬೇಕಾಗಿದೆ. ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ 144 ಕೋಟಿ ರೂ. ಮಂಜೂರಾಗಿದೆ. ಅಷ್ಟು ಮೊತ್ತ ಆ ಕೆರೆ ಅಭಿವೃದ್ಧಿಗೆ ಅಗತ್ಯವಿಲ್ಲ ಎಂದೂ ಅಭಿಪ್ರಾಯಪಟ್ಟರು.

ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್‌. ಮುದ್ದೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ವೈದ್ಯರ ಸಂಘದ ಅಧ್ಯಕ್ಷ ಡಾ.ಶಿವಪ್ರಸಾದ್‌, ಲಯನ್ಸ್‌ ಸೇವಾ ಸಂಸ್ಥೆ ಅಧ್ಯಕ್ಷ ಎಚ್‌.ಆರ್‌. ಚಂದ್ರೇಗೌಡ, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಕೃಷ್ಣೇಗೌಡ, ವಕೀಲರ ಸಂಘದ ಅಧ್ಯಕ್ಷ ಜೆ.ಪಿ.ಶೇಖರ್‌, ಸಂಜೀವಿನಿ ಸಹಕಾರಿ ಅಸ್ಪತ್ರೆ ಅಧ್ಯಕ್ಷ ಗಿರೀಗೌಡ, ಡಾ.ಸಾವಿತ್ರಿ, ಡಾ. ಸೌಭಾಗ್ಯ, ಸಾಹಿತಿ ಗಳಾದ ಬಾನು ಮುಷ್ತಾಕ್‌, ರೂಪಾ ಹಾಸನ ಮತ್ತಿತರರು ಉಪಸ್ಥಿತರಿದ್ದರು

ಟಾಪ್ ನ್ಯೂಸ್

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಸಿಎಂ ತೀರ್ಥಕ್ಷೇತ್ರಗಳ ಪಟ್ಟಿಗೆ “ಅಯೋಧ್ಯೆ’ ಸೇರ್ಪಡೆ

ಸಿಎಂ ತೀರ್ಥಕ್ಷೇತ್ರಗಳ ಪಟ್ಟಿಗೆ “ಅಯೋಧ್ಯೆ’ ಸೇರ್ಪಡೆ

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ: ಶಾಸಕ ಕೆ.ರಘುಪತಿ ಭಟ್‌ ಸಲಹೆ

ಮಹಿಳೆಯರು, ಸಾಮಾನ್ಯ ಜನರಿಗೆ ಸಣ್ಣ ಸಾಲ : ಶಾಸಕ ಕೆ.ರಘುಪತಿ ಭಟ್‌ ಸಲಹೆ

ಎರಡಲ್ಲ, ನಾಲ್ಕು ನಿಮಿಷಗಳ ಬ್ರಷಿಂಗ್‌ ಬೇಕು!

ಎರಡಲ್ಲ, ನಾಲ್ಕು ನಿಮಿಷಗಳ ಬ್ರಷಿಂಗ್‌ ಬೇಕು!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅರಕಲಗೂಡು : ಶೌಚಾಲಯದ ಗುಂಡಿಗೆ ಬಿದ್ದ ವೃದ್ದೆ : ಪ್ರಾಣಾಪಾಯದಿಂದ ಪಾರು

ಅರಕಲಗೂಡು : ತಾಲೂಕು ಕಚೇರಿಯ ಶೌಚಾಲಯದ ಗುಂಡಿಗೆ ಬಿದ್ದ ವೃದ್ದೆ : ಪ್ರಾಣಾಪಾಯದಿಂದ ಪಾರು

mayamma

ಹಳ್ಳಿಗೂ ಪಾದಾರ್ಪಣೆ ಮಾಡಿದ ಮತಾಂತರ

ಅರಣ್ಯ ಇಲಾಖೆ ವಸತಿಗೃಹ

ಅರಣ್ಯ ಇಲಾಖೆ ವಸತಿಗೃಹ ಉದಾಟನೆ ಯಾವಾಗ?

ಕೋವಿಡ್ ಲಸಿಕೆ ಪಡೆದವರಿಗಷ್ಟೇ ಹಾಸನಾಂಬೆ ದರ್ಶನ ಭಾಗ್ಯ

ಕೋವಿಡ್ ಲಸಿಕೆ ಪಡೆದವರಿಗಷ್ಟೇ ಹಾಸನಾಂಬೆ ದರ್ಶನ ಭಾಗ್ಯ

ರಸಗೊಬ್ಬರದ ಕೊರತೆ ನೀಗಿಸಿ 

ರಸಗೊಬ್ಬರದ ಕೊರತೆ ನೀಗಿಸಿ 

MUST WATCH

udayavani youtube

ಹಿಂದೂಗಳ ನಡುವೆ ನಮಾಜ್ : ಹೇಳಿಕೆಗಾಗಿ ಕ್ಷಮೆಯಾಚಿಸಿದ ವಕಾರ್ ಯೂನಿಸ್

udayavani youtube

ಅಂಗಾಂಗ ದಾನ ಎಂದರೇನು ಏನಿದರ ಮಹತ್ವ ?

udayavani youtube

ಸಾವಯವ ಕೃಷಿಯಲ್ಲಿ ಅನುಸರಿಸಬೇಕಿರುವ ಪ್ರಮುಖ ಅಂಶಗಳ ಬಗ್ಗೆ ನಿಮಗೆ ಗೊತ್ತೇ?

udayavani youtube

ಶಾಲೆಗೆ ಬಂತು ಬಿಸಿಯೂಟ : ದೋಟಿಹಾಳ ಶಾಲಾ ಮಕ್ಕಳ ಒಂದು ಕಿಲೋಮೀಟರ್ ಪಾದಯಾತ್ರೆಗೆ ಬ್ರೇಕ್

udayavani youtube

ಸಾವಿರಾರು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಯನ್ನು ಉಳಿಸಬೇಕಾಗಿದೆ : ಆರ್. ಅಶೋಕ್

ಹೊಸ ಸೇರ್ಪಡೆ

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

ಪಶ್ಚಿಮ ಬಂಗಾಳದಲ್ಲಿ ಪಟಾಕಿ ಬ್ಯಾನ್‌

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

5000 ಕಿಮೀ ದೂರ ಕ್ರಮಿಸಬಲ್ಲ ಅಗ್ನಿ 5 ಬ್ಯಾಲಿಸ್ಟಿಕ್‌ ಕ್ಷಿಪಣಿ ಪರೀಕ್ಷೆ ಯಶಸ್ವಿ

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಫ‌ಲಿತಾಂಶ ಬರಲಿ, ಯಾರ ಠೇವಣಿ ಜಪ್ತಿ ಎಂಬುದು ತಿಳಿಯುತ್ತೆ: ಎಂ ಬಿ ಪಾಟೀಲ್

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಅಸ್ಸಾಂ ಸಿಎಂಗೆ ಚುನಾವಣಾ ಆಯೋಗ ಎಚ್ಚರಿಕೆ

ಸಿಎಂ ತೀರ್ಥಕ್ಷೇತ್ರಗಳ ಪಟ್ಟಿಗೆ “ಅಯೋಧ್ಯೆ’ ಸೇರ್ಪಡೆ

ಸಿಎಂ ತೀರ್ಥಕ್ಷೇತ್ರಗಳ ಪಟ್ಟಿಗೆ “ಅಯೋಧ್ಯೆ’ ಸೇರ್ಪಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.