Udayavni Special

ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟಕ ಬಳಕೆಗೆ ಅನುಮತಿ ಕಡ್ಡಾಯ


Team Udayavani, Mar 8, 2021, 3:50 PM IST

ಕಲ್ಲು ಗಣಿಗಾರಿಕೆಯಲ್ಲಿ ಸ್ಫೋಟಕ ಬಳಕೆಗೆ ಅನುಮತಿ ಕಡ್ಡಾಯ

ಹಾಸನ: ಜಿಲ್ಲೆಯಲ್ಲಿರುವ ಎಲ್ಲಾ ಕಲ್ಲು ಗಣಿ ಗುತ್ತಿಗೆದಾರರು ಸ್ಫೋಟಕ ಬಳಸಲು ಗಣಿ ಸುರಕ್ಷತೆ ಮಹಾನಿರ್ದೇಶಕರಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕೆಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಸೂಚಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ನಡೆದ ಮರಳು, ಕಲ್ಲು ಗಣಿಗಾರಿಕೆ ಟಾಸ್ಕ್ ಫೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿರುವ ಎಲ್ಲಾ 160 ಕಲ್ಲುಗಣಿಗಾರಿಕೆಯಲ್ಲಿ ಸುರಕ್ಷತಾ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿ ಖಾತ್ರಿ ಪಡಿಸಿಕೊಂಡು ವರದಿನೀಡಬೇಕು ಎಂದು ಗಣಿ ಮತ್ತೂ ಭೂ ವಿಜ್ಞಾನಿ ಇಲಾಖೆ ಅಧಿಕಾರಿ ಗಳಿಗೆ ಸೂಚನೆ ನೀಡಿದರು.

ಯಾವುದೇ ಗಣಿಯಲ್ಲಿಯೂ ಅನುಮತಿ ಇಲ್ಲದೆ ಅಪಾಯಕಾರಿ ಸ್ಫೋಟಗಳನ್ನು ಬಳಸುವಂತಿಲ್ಲ. ಕಾರ್ಮಿಕರ ಜೀವ ಮತ್ತು ಆರೋಗ್ಯ ಸುಧಾರಣೆಗೆ ಗರಿಷ್ಠ ಕ್ರಮಗಳನ್ನು ಅನುಸರಿಸಬೇಕು. ಹೊಸದಾಗಿ ಗಣಿಗಾರಿಕೆ ಪರವಾನಗಿ ನೀಡುವಾಗ ಹೆಚ್ಚಿನ ಮುತುವರ್ಜಿ ವಹಿಸಬೇಕು. ಮುಖ್ಯರಸ್ತೆಗೆ ಯಾವುದೇ ಕ್ವಾರಿಗಳು ಹತ್ತಿರದಲ್ಲಿ ಇರಬಾರದು. ಗಣಿ ಅನುಮತಿಯಿಂದ ಯಾವುದೇ ಮನೆ, ದೇವಾಲಯ, ಸಾರ್ವಜನಿಕ ಆಸ್ತಿಗಳಿಗೆ ಹಾನಿಯಾ ಗಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.

ಖಾತ್ರಿ ಪಡಿಸಿಕೊಳ್ಳಿ: ಈಗಾಗಲೇ ಕಲ್ಲು ಗಣಿಗಳಲ್ಲಿ ನಡೆದ ಅಹಿತಕರ ಘಟನೆಗಳು ಎಲ್ಲರನ್ನು ಎಚ್ಚರಗೊಳಿಸಿವೆ. ಹಾಗಾಗಿ ಅಧಿಕಾರಿಗಳು ಹಾಗೂ ಕಲ್ಲುಗಣಿಗಾರಿಕೆ ಮಾಲಿಕರು ಜಾಗೃತರಾಗಿ ಸುರಕ್ಷಾ ಕ್ರಮಗಳನ್ನು ಖಾತರಿಪಡಿಸಿಕೊಳ್ಳಬೇಕು ಎಂದರು.

ಜಿಲ್ಲೆಯಲ್ಲಿ ಮರಳು ಅಕ್ರಮ ಸಾಗಾಣಿಕೆಗೆ ಸಂಪೂರ್ಣ ನಿಯಂತ್ರಣರಬೇಕು ಎಲ್ಲಾ ಚೆಕ್‌ ಪೋಸ್ಟ್‌ಗಳಲ್ಲಿ ಹಾಗೂ ಸಂಚಾರ ತಪಾಸಣೆಗಳ ಮೂಲಕ ಅನಧಿಕೃತ ಗಣಿಗಾರಿಕೆ ನಡೆಯದಂತೆ ಕ್ರಮ ಕೈಗೊಳ್ಳಬೇಕು, ಚೆಕ್‌ ಪೋಸ್ಟ್‌ಗಳಲ್ಲಿ ಪೊಲೀಸ್‌ ಹಾಗೂ ಗೃಹ ರಕ್ಷಕದಳದ ಸಿಬ್ಬಂದಿಗಳನ್ನು ನಿಯೋಜಿಸಿ ತಾಲೂಕು ಮಟ್ಟದ ಅಧಿಕಾರಿಗಳ ತಂಡಗಳನ್ನು ರಚಿಸಿ ಅಕ್ರಮ ಮರಳು ಸಾಗಾಟದ ಮೇಲೆ ನಿಗಾ ವಹಿಸಬೇಕು ಎಂದು ಹೇಳಿದರು. ಜಿಪಿಎಸ್‌ ಅಳವಡಿಸಿರುವ ವಾಹನಗಳನ್ನು ದುರ್ಬಳಕೆ ಮಾಡಿಕೊಂಡಲ್ಲಿ ದಂಡ ವಿಧಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆರ್‌.ಗಿರೀಶ್‌ ಸೂಚನೆ ನೀಡಿದರು.

ಸಭೆಯಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ, ಅಪರ ಜಿಲ್ಲಾಧಿಕಾರಿ ಕವಿತಾ ರಾಜರಾಂ, ಜಿಪಂ ಉಪ ಕಾರ್ಯದರ್ಶಿ ಚಂದ್ರಶೇಖರ್‌, ಸಕಲೇಶಪುರ ಎಸಿ ಗಿರೀಶ್‌ ನಂದನ್‌, ಆಲೂರುತಹಶೀಲ್ದಾರ್‌ ಶಿರೀನ್‌ ತಾಜ್‌, ಹಿರಿಯ ಭೂ ವಿಜ್ಞಾನಿ ನಾಗರಾಜ್‌, ಸಹಾಯಕ ಅರಣ್ಯಸಂರಕ್ಷಣಾಧಿಕಾರಿ ಹರೀಶ್‌ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

ಟಾಪ್ ನ್ಯೂಸ್

jhgfdew

ಬೆಂಗಳೂರಿಗೆ ಲಾಕ್ ಡೌನ್ ಅನಿವಾರ್ಯವಿದೆ : ಸರ್ವ ಪಕ್ಷ ಸಭೆಯಲ್ಲಿ ಕುಮಾರಸ್ವಾಮಿ

,ಮನಬಗವ್ದ್

ಕೋವಿಡ್ ಪರಿಣಾಮ : ಮೇ 2 ರಿಂದ ನಡೆಯಬೇಕಿದ್ದ NET ಪರೀಕ್ಷೆ ಮುಂದೂಡಿಕೆ!

20-14

ದೇಶದ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ ಒಪ್ಪೊ ಎ 74 5ಜಿ ಸ್ಮಾರ್ಟ್ ಫೋನ್..! ವಿಶೇಷತೆಗಳೆನು..?

ಕೋವಿಡ್ ಎಫೆಕ್ಟ್:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಎರಡನೇ ದಿನವೂ ಕುಸಿತ, ಹೂಡಿಕೆದಾರರಿಗೆ ನಷ್ಟ

ಕೋವಿಡ್ ಎಫೆಕ್ಟ್:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ ಎರಡನೇ ದಿನವೂ ಕುಸಿತ, ಹೂಡಿಕೆದಾರರಿಗೆ ನಷ್ಟ

ಉಡುಪಿಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ

ಉಡುಪಿಯ ವಿವಿಧೆಡೆ ಗುಡುಗು ಸಿಡಿಲು ಸಹಿತ ಉತ್ತಮ ಮಳೆ

ದೆಹಲಿ ಬಳಿಕ ಜಾರ್ಖಂಡ್ ನಲ್ಲೂ ಏಪ್ರಿಲ್ 22ರಿಂದ 29ರವರೆಗೆ ಲಾಕ್ ಡೌನ್ ಘೋಷಣೆ

ದೆಹಲಿ ಬಳಿಕ ಜಾರ್ಖಂಡ್ ನಲ್ಲೂ ಏಪ್ರಿಲ್ 22ರಿಂದ 29ರವರೆಗೆ ಲಾಕ್ ಡೌನ್ ಘೋಷಣೆ

gbfgrd

ತಪ್ಪದೆ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ವಿರಾಟ್ ಕೊಹ್ಲಿ ಮನವಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

incident held at hasana

ಎಲ್ಲೆಂದರಲ್ಲಿ ಗಂಡು ಕರು ಬಿಟ್ಟು ಹೋಗುತ್ತಿರುವ ಜನ

Hospitalized Infected

ಆಸ್ಪತ್ರೆಗೆ ದಾಖಲಾದ ಸೋಂಕಿತರು ಊರೆಲ್ಲಾ ಓಡಾಟ!

Awarding of awards to 10 journalists

10 ಮಂದಿ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ

Fire if gas is refilling

ಗ್ಯಾಸ್‌ ರೀಪೀಲ್ಲಿಂಗ್‌ ವೇಳೆ ಬೆಂಕಿ: ಆಟೋ ಭಸ್ಮ

programme held at holenarasipura

ಕಡವಿನಕೋಟೆ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ

MUST WATCH

udayavani youtube

ಕರ್ನಾಟಕದಲ್ಲಿ 1 ರಿಂದ 9 ನೇ ತರಗತಿ ವಿದ್ಯಾರ್ಥಿಗಳು ಪರೀಕ್ಷೆಯಿಲ್ಲದೇ ಪಾಸ್

udayavani youtube

ಅರ್ಧ ದಾರಿಯಲ್ಲಿ ಹೀಗೆ ಮಾಡಿದ್ರೆ ನಮಗ್ಯಾರು ಗತಿ?

udayavani youtube

ಬಿಯರಿಗಾಗಿ ಮುಗಿಬಿದ್ದು ಜನರ ಕಿತ್ತಾಟ

udayavani youtube

ಚಿಕ್ಕಮಗಳೂರು: 9 ವರ್ಷದ ಹಳೇ ಗ್ಲೂಕೋಸ್ ನೀಡಿದ ಮೆಡಿಕಲ್ ಸ್ಟೋರ್; ಕಂಗಾಲಾದ ಗ್ರಾಹಕ !

udayavani youtube

ಕನಸು ನನಸಾಗುವ ಮುನ್ನವೇ ಮರೆಯದ ಬಾಡಿ ಬಿಲ್ಡರ್..!

ಹೊಸ ಸೇರ್ಪಡೆ

20-19

13ನೇ ದಿನಕ್ಕೆ ಕಾಲಿಟ್ಟ ಸಾರಿಗೆ ನೌಕರರ ಮುಷ್ಕರ

20-18

ಔಷಧ ದರ ಹೆಚ್ಚಿಸಿದರೆ ಕ್ರಮ ಕೈಗೊಳ್ಳಿ

20-17

ಹಂಪಿ ಸ್ಮಾರಕಗಳ ವೀಕ್ಷಣೆಗೆ ನಿರ್ಬಂಧ

jhgfdew

ಬೆಂಗಳೂರಿಗೆ ಲಾಕ್ ಡೌನ್ ಅನಿವಾರ್ಯವಿದೆ : ಸರ್ವ ಪಕ್ಷ ಸಭೆಯಲ್ಲಿ ಕುಮಾರಸ್ವಾಮಿ

20-16

ಜೀವನದಲ್ಲಿ ನೋವಿದ್ದರೂ ನಗಿಸುತ್ತಿದ್ದ ಚಾರ್ಲಿ ಚಾಪ್ಲಿನ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.