ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಅಭಿವೃದಿ

Team Udayavani, Sep 4, 2019, 11:37 AM IST

ಹಾಸನ ಡೀಸಿ ಕಚೇರಿ ಸಭಾಂಗಣದಲ್ಲಿ ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರು ಅಧಿಕಾರಿಗಳ ಸಭೆ ಹಾಸನ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿಯನ್ನು ಪರಿಶೀಲಿಸಿದರು.

ಹಾಸನ: ರಾಜ್ಯದಲ್ಲಿ ವಿಶ್ವದರ್ಜೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಬಂಡವಾಳ ಕ್ರೋಢೀಕರಿಸಲು ಖಾಸಗಿ ಹೂಡಿಕೆದಾರರ ಸಮಾವೇಶ ನಡೆಸಲು ಚಿಂತಿಸಲಾಗಿದೆ ಎಂದು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ‌ ಸಿ.ಟಿ.ರವಿ ಅವರು ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳ ವಾರ ನಡೆದ ಪ್ರವಾಸೋದ್ಯಮ ಇಲಾಖೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವರು, ಅತಿಥಿ ದೇವೋಭವ ಎಂಬುದು ಪ್ರಧಾನಿ ಮೋದಿಯವರ ಆಶಯವಾಗಿದೆ. ಇದೇ ಆಶಯಯೊಂದಿಗೆ ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯ ಗುರಿಯಿದೆ. ಸಂಚಾರ ಸೌಲಭ್ಯ, ಸ್ವಚ್ಛತೆ ಆತಿಥ್ಯ ಸತ್ಕಾರ ಮತ್ತು ಸಹಭಾಗಿತ್ವಕ್ಕೆ ವಸತಿ ವ್ಯವಸ್ಥೆಗಳ ಅಭಿವೃದ್ಧಿ ಮೂಲಕ ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಬೇಕಿದೆ ಎದರು.

ಸಮಿತಿ ರಚನೆ: ರಾಜ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ ತಯಾರಿಗೆ ಸುಧಾಮೂರ್ತಿ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ. ಈಗಾ ಗಲೇ 41 ಪ್ರವಾಸಿ ವರ್ತುಲ, 319 ಪ್ರವಾಸಿ ಕೇಂದ್ರ ಗಳನ್ನು ಪ್ರವಾಸೋದ್ಯಮ ಇಲಾಖೆ ವತಿಯಿಂದ ಗುರುತಿ ಸಲಾಗಿದೆ. ಅಲ್ಲದೇ 844 ಪ್ರವಾಸಿ ತಾಣಗಳನ್ನು ಪುರಾ ತತ್ವ ಇಲಾಖೆ ವತಿಯಿಂದ ಗುರುತಿಸಲಾಗಿದೆ ಎಂದರು.

ಹಾಸನ ಜಿಲ್ಲೆಯಲ್ಲಿ 70 ಪ್ರವಾಸಿ ತಾಣ: ದೇಶದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಯಲ್ಲಿ ಹಾಸನ ಜಿಲ್ಲೆ ಮಹತ್ವಪೂರ್ಣ ಸ್ಥಾನಪಡೆದಿದೆ. ಬೇಲೂರು, ಹಳೇ ಬೀಡು, ಶ್ರವಣಬೆಳಗೊಳದಂತಹ ಜಗತøಸಿದ್ಧ ಪ್ರವಾಸಿ ತಾಣಗಳಿವೆ. ಇಲ್ಲಿನ ಮೂಲಭೂತ ಸೌಕರ್ಯದ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡಲಾಗುವುದು. ಜಿಲ್ಲೆ ಯಲ್ಲಿ ಈಗಾಗಲೇ 70 ಸ್ಥಳಗಳನ್ನು ಗುರುತಿಸಲಾಗಿದೆ ಇನ್ನೂ ಹತ್ತಾರು ಪ್ರವಾಸಿ ಪ್ರಾಮುಖ್ಯತೆಯನ್ನು ಪಡೆದಂತಹ ಸ್ಥಳಗಳನ್ನು ಗುತರ್ಯಿಸಿ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸಮಗ್ರ ವರದಿ ಸಿದ್ಧಪಡಿಸಿ ಪ್ರಸ್ತಾವನೆ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ಜಿಲ್ಲೆಗೆ 54 ಕೋಟಿ ರೂ. ಬಿಡುಗಡೆ: ಜಿಲ್ಲೆಯಲ್ಲಿ ಈ ಹಿಂದೆ ವಿವಿಧ ಇಲಾಖೆ, ಏಜೆನ್ಸಿಗಳ ಮೂಲಕ 53 ಪ್ರವಾಸಿ ತಾಣಗಳ ಅಭಿವೃದ್ಧಿಗೆ 56.4 ಕೋಟಿ ರೂ. ಬಿಡುಗಡೆಯಾಗಿದೆ. ಕೇಂದ್ರ ಪುರಾತತ್ವ ಇಲಾಖೆ ವತಿಯಿಂದ ಶ್ರವಣಬೆಳಗೊಳ ಹಾಗೂ ಬೇಲೂರಿನಲ್ಲಿ 9 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಬೇಲೂರಿನ ಯಗಚಿ ಡ್ಯಾಂ ಬಳಿ 20 ಕೋಟಿ ರೂ. ವೆಚ್ಚದಲ್ಲಿ ತ್ರಿಸ್ಟಾರ್‌ ಹೋಟೆಲ್ಗಳ ನಿರ್ಮಾಣಕ್ಕೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಹೇಳಿದರು.

ಸಮಗ್ರ ಅಭಿವೃದ್ಧಿಯನ್ನು ದೃಷ್ಟಿಯಲ್ಲಿರಿಸಿಕೊಂಡು ಪ್ರವಾಸೋದ್ಯಮ ಅಭಿವೃದ್ಧಿ ಯೋಜನೆ ರೂಪಿಸ ಬೇಕು. ಭೂದೃಶ್ಯ ವೀಕ್ಷಣೆಗೆ, ಯಾವುದೇ ರೀತಿಯ ಅಡ್ಡಿಯಾಗದಂತೆ ಕಟ್ಟಡಗಳ ನಿರ್ಮಾಣವಾಗಬೇಕು ಎಂದ ಸಚಿವರು, ಬೇಲೂರು ದೇವಾಲಯದಲ್ಲಿ ಇತಿಹಾಸ ಪರಂಪರೆಗಳನ್ನು ಸಾರುವ ಧ್ವನಿಬೆಳಕು ಕಾರ್ಯಕ್ರಮದ ವ್ಯವಸ್ಥೆಗೆ ಯೋಜನೆ ತಯಾರಿಸಿ ವರದಿ ಸಲ್ಲಿಸಬೇಕು ಎಂದು ನಿರ್ದೇಶನ ನೀಡಿದರು.

ಕಲಾಭವನದ ದುರಸ್ತಿಗೆ ಕ್ರಮ: ಹಾಸನ ನಗರದ ಕಲಾಭವನದ ಅಭಿವೃದ್ಧಿಗೆ ವಿಸ್ತೃತ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವನೆ ಸಲ್ಲಿಸಬೇಕು. ತುರ್ತಾಗಿ ಆಗ ಬೇಕಾಗಿರುವ ದುರಸ್ತಿ ಕಾರ್ಯಗಳನ್ನು ನಿರ್ಮಿತಿ ಕೇಂದ್ರದಿಂದ ಕೈಗೊಳ್ಳುವಂತೆ ಸಚಿವ ಸಿ.ಟಿ.ರವಿ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಹಾಲಿ ನಿರ್ಮಿಸಿ ಬಳಸದೇ ಇರುವ ಯಾತ್ರಿನಿವಾಸಗಳನ್ನು ಹಾಸನದ ಸೆಂಟ್ರಲ್ ಬಸ್‌ ನಿಲ್ದಾಣದ ಚನ್ನಪಟ್ಟಣ ಕೆರೆಯಲ್ಲಿ ನಿರ್ಮಿಸಿರುವ ಪ್ರವಾಸಿ ಹೋಟೆಲ್ಗಳನ್ನು ಕೆಎಸ್‌ಟಿಡಿಸಿಗೆ ವಹಿಸಿ ನಿರ್ವಹಣೆ ಮಾಡುವಂತೆ ಸಚಿವ ಸಿ.ಟಿ.ರವಿ ಸೂಚನೆ ನೀಡಿದರು.

ಶಾಸಕರಾದ ಕೆ.ಎಸ್‌.ಲಿಂಗೇಶ್‌ ಅವರು ಯಗಚಿ, ಬೇಲೂರು, ಹಳೇಬೀಡು, ಪುಷ್ಪಗಿರಿ, ವಿಷ್ಣುಸಮುದ್ರ ಕೆರೆಗಳ ಅಭಿವೃದ್ಧಿ ಬೇಲೂರು ಸಾಂಸ್ಕೃತಿಕ ಸಮುದಾಯ ನಿರ್ಮಾಣ ಕುರಿತು ಗಮನ ಸೆಳೆದರು.

ಜಿಪಂ ಅಧ್ಯಕ್ಷೆ ಬಿ.ಎಸ್‌.ಶ್ವೇತಾ, ಜಿಲ್ಲಾಧಿಕಾರಿ ಆರ್‌. ಗಿರೀಶ್‌ ಅವರು ಜಿಲ್ಲೆಯ ಪ್ರವಾಸಿ ಯೋಜನಾ ವರದಿ ತಯಾರಿ, ಪ್ರವಾಸಿ ತಾಣಗಳ ಅಭಿವೃದ್ಧಿ ಕುರಿತು ಮಾಹಿತಿ ನೀಡಿದರು.

ಪ್ರಭಾರ ಅಪರ ಜಿಲ್ಲಾಧಿಕಾರಿ ಹಾಗೂ ಉತ್ತರ ವಿಭಾಗಾಧಿಕಾರಿ ನಾಗರಾಜ್‌, ಸಕಲೇಶ ಪುರ ಉಪವಿಭಾಗಾಧಿಕಾರಿ ಕವಿತಾ ರಾಜಾರಾಂ, ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಭಾರಿ ಅಧಿಕಾರಿ ಶಿವಲಿಂಗಪ್ಪ ಎಸ್‌.ಕುಂಬಾರ ಸಭೆಯಲ್ಲಿ ಹಾಜರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ