ಹಾಸನದಲ್ಲಿ ಜನತಾ ಕರ್ಫ್ಯೂಗೆ ಅಭೂತಪೂರ್ವ ಬೆಂಬಲ

Team Udayavani, Mar 23, 2020, 3:00 AM IST

hassanadalli

ಹಾಸನ: ಕೊರೊನಾ ವೈರಸ್‌ ಹರಡುವುದನ್ನು ತಡೆಯಲು ಪ್ರಧಾನಿ ನರೇಂದ್ರಮೋದಿ ಅವರ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ಭಾನುವಾರ ಹಾಸನ ಜಿಲ್ಲೆಯಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಯಿತು. ಸಂಜೆ 5 ಗಂಟೆಗೆ ಮನೆಯಿಂದ ಹೊರ ಬಂದ ಜನರು ಚಪ್ಪಾಳೆ, ಗಂಟೆ ಬಾರಿಸಿ, ಶಂಖ ಊದಿ ಕೊರೊನಾ ಶಂಕಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸಿದರು.

ಬೆಳಗ್ಗೆ ಹಾಲಿನ ಮಳಿಗೆಗಳು ಮತ್ತು ಔಷಧಿ ಅಂಗಡಿಗಳು ತೆರೆದಿದ್ದು ಬಿಟ್ಟರೆ ಇಡೀ ದಿನ ವ್ಯಾಪಾರ ವಹಿವಾಟು ಸ್ತಬ್ಧವಾಗಿತ್ತು, ಮಧ್ಯಾಹ್ನದ ವೇಳೆಗೆ ಔಷಧಿ ಅಂಗಡಿಗಳೂ ಮುಚ್ಚಿದ್ದವು. ರೈಲು ಸಂಚಾರ, ಬಸ್‌ ಸಂಚಾರ ಸ್ಥಗಿತವಾಗಿದ್ದರಿಂದ ರೈಲ್ವೆ ನಿಲ್ದಾಣ, ಸಾರಿಗೆ ಬಸ್‌ ನಿಲ್ದಾಣ, ಖಾಸಗಿ ವಾಹನ ನಿಲ್ದಾಣಗಳು ಜನರಿಲ್ಲದೆ ಬಿಕೋ ಎನ್ನುತ್ತಿದ್ದವು.

ರಸ್ತೆಗಳು ಖಾಲಿ: ವಾಹನಗಳು, ಜನರಿಂದ ಗಿಜಿಗಿಡುತ್ತಿದ್ದ ಹಾಸನದ ಬಿ.ಎಂ.ರಸ್ತೆ, ಎನ್‌.ಆರ್‌.ವೃತ್ತ, ನಗರ ಸಾರಿಗೆ ಬಸ್‌ ನಿಲ್ದಾಣ ರಸ್ತೆ, ಹಿಮ್ಸ್‌ ಆಸ್ಪತ್ರೆ ಆವರಣ ಸೇರಿದಂತೆ ಪ್ರಮುಖ ರಸ್ತೆಗಳು, ಕಟ್ಟಿನಕೆರೆ ತರಕಾರಿ ಮಾರುಕಟ್ಟೆ ಸೇರಿದಂತೆ ಪ್ರಮುಖ ಸ್ಥಳಗಳು ಜನರಿಲ್ಲದೇ ಖಾಲಿಯಾಗಿದ್ದವು. ಪೂರ್ವಭಾವಿ ನಿರ್ಧಾರದಂತೆ ಕೆಎಸ್‌ಆರ್‌ಟಿಸಿ ಬಸ್‌ ಸಂಚಾರ, ರೈಲುಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಟ್ಯಾಕ್ಸಿಗಳ ಸಂಚಾರವೂ ಇರಲಿಲ್ಲ. ಆಟೋಗಳ ಸಂಚಾರ ವಿರಳವಾಗಿತ್ತು.

ಮಾರುಕಟ್ಟೆ ಬಂದ್‌: ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಮಾತ್ರ ಅವಕಾಶವಿತ್ತು. ಹಾಸನದ ಚರ್ಚ್‌ಗಳಲ್ಲಿ ಜನರು ಪ್ರಾರ್ಥನೆಗೆ ಸೇರಲಿಲ್ಲ. ಜಿಲ್ಲಾ ಕ್ರೀಡಾಂಗಣದ ಗೇಟಿಗೆ ಬೀಗ ಹಾಕಲಾಗಿತ್ತು. ನಗರದ ಹೃದಯ ಭಾಗದಲ್ಲಿರುವ ಕಟ್ಟಿನ ಮಾರುಕಟ್ಟೆ ಸಂಪೂರ್ಣ ಬಂದ್‌ ಮಾಡಿದ್ದರು.

ಬಾಳೆಹಣ್ಣು ವರ್ತಕರು ಕೂಡ ಬೆಂಬಲ ಸೂಚಿಸಿ ವ್ಯಾಪಾರ ಮಾಡಲಿಲ್ಲ. ಮಹಾರಾಜ ಉದ್ಯಾನದ ಬಳಿ ಇರುವ ಹೇಮಾವತಿ ಪ್ರತಿಮೆ ಮುಂಭಾಗದ ಪ್ರದೇಶವೂ ಬಿಕೋ ಎನ್ನುತ್ತಿತ್ತು. ಕೊರೊನಾ ಮಹಾ ಮಾರಿಯನ್ನು ತಡೆಗಟ್ಟಲು ಹಾಗೂ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಗೆ ಜನರು ಜನರು ಸ್ವಯಂ ಪ್ರೇರಿತವಾಗಿ ಸ್ಪಂದಿಸಿ ಜನತಾ ಕರ್ಫ್ಯೂ ಯಸ್ವಿಗೊಳಿಸಿದರು.

ಟಾಪ್ ನ್ಯೂಸ್

ಕಂಬಳಕ್ಕೆ ಕೋವಿಡ್‌ ಅಡ್ಡಿ; ತಾತ್ಕಾಲಿಕ ಮುಂದೂಡಿಕೆ

ಕಂಬಳಕ್ಕೆ ಕೋವಿಡ್‌ ಅಡ್ಡಿ; ತಾತ್ಕಾಲಿಕ ಮುಂದೂಡಿಕೆ

aಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

ಬಿಸಿಸಿಐಗೆ ಸಡ್ಡು ಹೊಡೆದರೇ ವಿರಾಟ್‌  ಕೊಹ್ಲಿ?

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐ

 ಚುನಾವಣೆಗೆ “ಉಗ್ರ’ ಕಾಟ? ಉಗ್ರ ಸಂಘಟನೆಗಳನ್ನು ಸಕ್ರಿಯಗೊಳಿಸುತ್ತಿದೆ ಪಾಕ್‌ ಐಎಸ್‌ಐಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳೇಬೀಡು ಪ್ರಥಮ ದರ್ಜೆ ಕಾಲೇಜು ಸೀಲ್‌ಡೌನ್‌

ಹಳೇಬೀಡು ಪ್ರಥಮ ದರ್ಜೆ ಕಾಲೇಜು ಸೀಲ್‌ಡೌನ್‌

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

1-ade

ಶಾಸಕ ಶಿವಲಿಂಗೇಗೌಡರಿಗೆ ಕೊರೊನಾ: ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

1-hasan-3

ರಸ್ತೆ ನಿರ್ಮಾಣದಲ್ಲೂ ರಾಜಕೀಯ: ಶಾಸಕ ಪ್ರೀತಂಗೌಡ

1-hasan-4

ಮೈತ್ರಿ ಕನಸು ಕಾಣುವವರಿಗೆ ಮೇಕೆದಾಟು ಶಾಪವಾಗಲಿದೆ: ಮಾಜಿ ಶಾಸಕ ಪುಟ್ಟೇಗೌಡ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

ಕಂಬಳಕ್ಕೆ ಕೋವಿಡ್‌ ಅಡ್ಡಿ; ತಾತ್ಕಾಲಿಕ ಮುಂದೂಡಿಕೆ

ಕಂಬಳಕ್ಕೆ ಕೋವಿಡ್‌ ಅಡ್ಡಿ; ತಾತ್ಕಾಲಿಕ ಮುಂದೂಡಿಕೆ

aಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

ಕೋವಿಡ್‌: ತಗ್ಗಿತೇ 3ನೇ ಅಲೆಯ ತೀವ್ರತೆ?

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

ಮನೆಯಲ್ಲೇ ಮದ್ದು; ಆಸ್ಪತ್ರೆ ದಾಖಲಾತಿ ಇಳಿಕೆ; ಕೋವಿಡ್‌ದಿಂದ ಚೇತರಿಕೆ  ಅಧಿಕ 

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

ಲಸಿಕೆಯ ಹರ್ಷಕ್ಕೆ ವರುಷ; 157 ಕೋಟಿ ಮಂದಿಗೆ ಲಸಿಕೆ  ದಾಖಲೆ ನಿರ್ಮಿಸಿದ ಭಾರತ

ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

ಎನ್‌ಇಪಿ ಪದವಿ ವಿದ್ಯಾರ್ಥಿಗಳಿಗೆ ಹೊಸ ಮಾದರಿಯಲ್ಲಿ ಪರೀಕ್ಷೆ !

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.