ರಸ್ತೆ ಒತ್ತುವರಿ ತೆರವಿಗಾಗಿ ಗ್ರಾಮಸ್ಥರ ಪ್ರತಿಭಟನೆ


Team Udayavani, Jul 4, 2022, 3:37 PM IST

ರಸ್ತೆ ಒತ್ತುವರಿ ತೆರವಿಗಾಗಿ ಗ್ರಾಮಸ್ಥರ ಪ್ರತಿಭಟನೆ

ಬೇಲೂರು: ಸಾರ್ವಜನಿಕ ರಸ್ತೆ ಒತ್ತುವರಿ ಮಾಡಿರು ವುದನ್ನು ತೆರವುಗೊಳಿಸಬೇಕೆಂದು ಬಿರಣಗೋಡು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ತಾಲೂಕಿನ ಕಳ್ಳೇರಿ ಗ್ರಾಪಂ ವ್ಯಾಪ್ತಿಯ ಬಿರಣಗೋಡು ಗ್ರಾಮದ ಸರ್ವೆ ನಂಬರ್‌ 47 ರಲ್ಲಿ ಮೊಗಪ್ಪಗೌಡ ಎಂಬುವವರು ಸುಮಾರು 20 ನಿವೇಶನಗಳ ನ್ನು ಮಾರಾಟ ಮಾಡಿದ್ದು, ಅದರಲ್ಲಿ ಹುಚ್ಚೇಗೌಡ ಎಂಬುವವರಿಗೆ ನಿವೇಶನ ಮಾರಾಟ ಮಾಡುವಾಗ ರಸ್ತೆಯನ್ನು ಸೇರಿಸಿ ಮಾರಾಟ ಮಾಡಿದ್ದಾರೆ ಎಂದು ಆರೋಪಿಸಿ ಸ್ಥಳೀಯ ನಿವಾಸಿಗಳು ಪ್ರತಿಭಟನೆ ನಡೆಸಿದರು.

ರಸ್ತೆ ತೆರವುಗೊಳಿಸಿ: ಈ ವೇಳೆ ಮಾತನಾಡಿದ ಕುಮಾರ್‌, ಸುಮಾರು 70 ವರ್ಷದಿಂದ 30ಕ್ಕೂ ಹೆಚ್ಚು ಕುಟುಂಬಗಳು ವಾಸ ಮಾಡುತ್ತಿದ್ದು ಹಿಂದೆ ನಿವೇಶನ ಹಂಚಿಕೆ ಮಾಡುವ ಸಂದರ್ಭದಲ್ಲಿ 20 ಅಡಿ ರಸ್ತೆಯನ್ನು ಸಾರ್ವಜನಿಕರಿಗೆ ತಿರುಗಾಟಕ್ಕೆ ಬಿಟ್ಟಿದ್ದರು. ಆದ ರೆ, ಏಕಾಏಕಿ ಹುಚ್ಚೇಗೌಡ ಎಂಬುವವರಿಗೆ ಈ ರಸ್ತೆಯ 10 ಅಡಿ ಜಾಗವನ್ನು ಸೇರಿ ಈ ಖಾತೆ ಗ್ರಾಪಂನಿಂದ ಮಾಡಿಕೊಟ್ಟಿದ್ದು ಇದರಲ್ಲಿ ಗ್ರಾಪಂ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು.  ಕೂಡಲೇ ರಸ್ತೆ ತೆರವುಗೊಳಿಸದಿದ್ದಲ್ಲಿ ಗ್ರಾ ಪಂ ಮುಂಭಾಗದಲ್ಲಿ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ರಾತ್ರಿ ವೇಳೆ ರಸ್ತೆಗೆ ಬೇಲಿ: ನಿವೇಶನದಾರರಾದ ಸುಮಾ, ನಾಜಿಯಾ ಮಾತನಾಡಿ, ಗ್ರಾಪಂನಿಂದ ಇಲ್ಲಿವರೆಗೆ ರಸ್ತೆ ವಿದ್ಯುತ್‌ ದೀಪ, ಹಾಗೂ ಒಳ ಚರಂಡಿ ವ್ಯವಸ್ಥೆ ಮಾಡಿಕೊಟ್ಟಿಲ್ಲ. ಕೇವಲ ಒಬ್ಬರ ಸ್ವಾರ್ಥಕ್ಕಾಗಿ ಸಾರ್ವಜನಿಕರು ತಿರುಗಾಡುವ ರಸ್ತೆಯನ್ನೇ ಅತಿಕ್ರಮಣ ಮಾಡಿಕೊಂಡಿದ್ದು, ರಾತ್ರಿ ಸಮಯದಲ್ಲಿ ರಸ್ತೆಗೆ ಬೇಲಿ ಹಾಕಿದ್ದಾರೆ. ಇದರಿಂದ ವೃದ್ಧರು ಹಾಗೂ ಯಾವುದೇ ವಾಹನಗಳು ಒಳ ಬರದಂತ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ ಎಂದು ದೂರಿದರು.

ಬೇಲಿ ತೆರವು ಮಾಡುತ್ತೇವೆ: ನಿವೇಶನ ನೀಡುವಾಗ 20 ಅಡಿ ರಸ್ತೆಯಿದೆ ಎಂದು ನಮಗೆ ಖಾತೆ ಮಾಡಿಕೊಟ್ಟಿದ್ದಾರೆ. ಆದರೆ ಈಗ ರಸ್ತೆಯನ್ನೇ ಸಂ ಪೂರ್ಣ ಬಂದ್‌ ಮಾಡಿದ್ದಾರೆ. ಈ ಬಗ್ಗೆ ಹಲವಾರು ಬಾರಿ ಗ್ರಾಪಂಗೆ ಮನವಿ ಮಾ ಡಿದ್ದರೂ ಸಹ ಗಮನ ಹರಿಸಿಲ್ಲ. ನಾವೇ ಅಡ್ಡಹಾಕಿರುವ ಬೇಲಿ ತೆರವುಗೊಳಿಸುತ್ತೇವೆ. ನಮಗೆ ಮುಂದೆ ಯಾವುದೇ ತೊಂದರೆಯಾದರೂ ಈ ನಿವೇಶನದ ಮಾಲಿ ಕರೇ ಹೊಣೆಯಾಗುತ್ತಾರೆ. ಇದರ ಬಗ್ಗೆ ಗಮ ನಹರಿಸಿ ನಮಗೆ ಶಾಶ್ವತ ಪರಿಹಾರ ನೀಡಬೇಕು.ಇಲ್ಲದಿದ್ದರೆ, ಸೋಮ ವಾರ ಗ್ರಾಪಂ ಮುಂಭಾಗ ಪ್ರತಿಭಟಿಸುವುದಾಗಿ ಎಚ್ಚರಿಸಿದರು.

ಮೇಲಾಧಿಕಾರಿಗಳ ಗಮನಕ್ಕೆ: ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಡಿಒ ರಮೇಶ್‌ ಮಾತನಾಡಿ, ತಿರುಗಾಡಲು ರಸ್ತೆಯನ್ನು ಗುರುತು ಮಾಡಲಾ ಗಿದೆ. ನೆರೆಹೊರೆಯವರು ರಸ್ತೆ ಒತ್ತುವರಿ ಮಾಡಿಕೊಂಡಿದ್ದು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದು ತೆರವುಗೊಳಿ ಸಲಾಗುವುದು ಎಂದರು. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯ ರುದ್ರೇಶ್‌, ಮಹೇಶ್‌, ಸ್ಥಳೀಯ ನಿವಾಸಿಗಳಾದ ಮಂಜುನಾಥ್‌,ಶಾರದಮ್ಮ ಸಮೀನಾ, ಸುಮಾ, ನಸ್ರೀನ್‌, ಶಾಂತಮ್ಮ, ತನ್ವೀರ್‌, ಪರ್ವೀನ್‌, ಅಸ್ಲಾಮ್‌, ಮೊಗಣ್ಣಗೌಡ, ಅಲೀ, ಅಬ್ಬು, ಶಬ್ಬೀರ್‌ ಇತರರು ಇದ್ದರು.

ಟಾಪ್ ನ್ಯೂಸ್

ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಿಹಾರ ಸಿಎಂ ನಿತೀಶ್; ಆರ್ ಜೆಡಿ, ಜೆಡಿಯು ಸರ್ಕಾರ ರಚನೆ

ರಾಜ್ಯಪಾಲರಿಗೆ ರಾಜೀನಾಮೆ ಸಲ್ಲಿಸಿದ ಬಿಹಾರ ಸಿಎಂ ನಿತೀಶ್; ಆರ್ ಜೆಡಿ, ಜೆಡಿಯು ಸರ್ಕಾರ ರಚನೆ

ಚಾಮರಾಜನಗರ: ಜನ್ಮದಿನದಂದೇ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ಕಾಲೇಜು ಉಪನ್ಯಾಸಕಿ

ಚಾಮರಾಜನಗರ: ಜನ್ಮದಿನದಂದೇ ಹಾಸ್ಟೆಲ್ ನಲ್ಲಿ ನೇಣಿಗೆ ಶರಣಾದ ಕಾಲೇಜು ಉಪನ್ಯಾಸಕಿ

india ajadi ka amruth singh

ಸ್ವಾತಂತ್ರ್ಯ ಸಮರ @75: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್

ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು? ಇಲ್ಲಿದೆ ಮಾಹಿತಿ

ಕನ್ನಡದ ʼಉಗ್ರಂʼ ಮರಾಠಿಗೆ ರಿಮೇಕ್: ನಾಯಕ – ನಾಯಕಿ ಯಾರು?

independence 75 k

ಸ್ವಾತಂತ್ರ್ಯ ವೀರರು@75: ಸಮಾಜದ ಕಟ್ಟುಕಟ್ಟಳೆಗಳ ವಿರುದ್ಧ ಹೋರಾಡಿದ್ದ ಧೀರ ಅಮಚಡಿ ತೇವನ್

thumb 4 politics

ಬಿಹಾರದಲ್ಲಿ ಜೆಡಿಯು, ಬಿಜೆಪಿ ಮೈತ್ರಿ ಸರ್ಕಾರ ಪತನ; 4 ಗಂಟೆಗೆ ರಾಜ್ಯಪಾಲರ ಭೇಟಿ: ನಿತೀಶ್

ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ: ಕಾಂಗ್ರೆಸ್ ಟೀಕೆ

ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ: ಕಾಂಗ್ರೆಸ್ ಟೀಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

TDY-15

13 ರಿಂದ ಹರ್‌ ಘರ್‌ ಮೇ ತಿರಂಗಾ ಅಭಿಯಾನ

ಪ್ರವಾಸಿಗರನ್ನು ಸೆಳೆದ ದ್ವಾರಸಮುದ್ರ ಕೆರೆ

ಪ್ರವಾಸಿಗರನ್ನು ಸೆಳೆದ ದ್ವಾರಸಮುದ್ರ ಕೆರೆ

1

ಸಕಲೇಶಪುರ: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

ಹಾಸನ: ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಮರ: ನರಳಾಡಿ ಪ್ರಾಣ ಬಿಟ್ಟ ಸವಾರ

ಹಾಸನ: ಚಲಿಸುತ್ತಿದ್ದ ಬೈಕ್‌ ಮೇಲೆ ಬಿದ್ದ ಮರ: ನರಳಾಡಿ ಪ್ರಾಣ ಬಿಟ್ಟ ಸವಾರ

ನೆರೆಗೆ ಜಿಲೆಯಲ್ಲಿ 450 ಕೋಟಿ ರೂ. ನಷ್ಟ

ನೆರೆಗೆ ಜಿಲೆಯಲ್ಲಿ 450 ಕೋಟಿ ರೂ. ನಷ್ಟ

MUST WATCH

udayavani youtube

ಬಿಹಾರದಲ್ಲಿ ಜೆಡಿಯು – ಬಿಜೆಪಿ ಮೈತ್ರಿ ಸರ್ಕಾರ ಪತನ

udayavani youtube

ಮರೆಯಾಗುತ್ತಿದೆ ಹಿಂದೂ ಮುಸ್ಲಿಂ ಭಾವೈಕ್ಯತೆಯ ಮೊಹರಂ ಹೆಜ್ಜೆ ಕುಣಿತ

udayavani youtube

ಪ್ರವಾಹದ ನೀರಿನಲ್ಲಿ ಕಾರು ಚಲಾಯಿಸಿ ಸಿಲುಕಿಕೊಂಡ ಯುವಕರು… ಕೊನೆಗೂ ಪಾರಾದರು

udayavani youtube

ಸೌಹಾರ್ದತೆಗೆ ಸಾಕ್ಷಿಯಾದ ನಾಲತವಾಡ : ಹಿಂದೂ ಮುಸ್ಲಿಂ ಸೇರಿ ಮೊಹರಂ ಆಚರಣೆ

udayavani youtube

ಆಟಿಯ ಹುಣ್ಣಿಮೆ ದಿನದಂದು ಹೊಸ್ತಿಲು ಬರೆಯುವ ಹಿನ್ನೆಲೆ ನಿಮಗೆ ಗೊತ್ತೇ ?

ಹೊಸ ಸೇರ್ಪಡೆ

7-PU

12ರಿಂದ ದ್ವೀತೀಯ ಪಿಯು ಪೂರಕ ಪರೀಕ್ಷೆ

ಅಯೋಧ್ಯೆಯಲ್ಲೂ ಕರ್ನಾಟಕ ಛತ್ರ ನಿರ್ಮಾಣ: ಸಚಿವೆ ಶಶಿಕಲಾ ಜೊಲ್ಲೆ

ಅಯೋಧ್ಯೆಯಲ್ಲೂ ಕರ್ನಾಟಕ ಛತ್ರ ನಿರ್ಮಾಣ: ಸಚಿವೆ ಶಶಿಕಲಾ ಜೊಲ್ಲೆ

18

ಕುರುಗೋಡು: ಕೇಂದ್ರ ಸರ್ಕಾರ ಮಂಡಿಸಲಿರುವ ವಿದ್ಯುತ್ ಕಾಯ್ದೆ ಪ್ರತಿಗಳು ಸುಟ್ಟು ಆಕ್ರೋಶ

17

ಸಾಗರ: 15ರಂದು ಬಾವುಟ ಬೇಡ, ಭೂಮಿ ಹಕ್ಕು ಕೊಡಿ ಪ್ರತಿಭಟನೆ

6-plastic

ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ-ಜೀವಸಂಕುಲ ಉಳಿಸಿ ಜಾಗೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.