
ಹೇಮೆ ಎಡದಂಡೆಯಲ್ಲಿ ತ್ಯಾಜ್ಯ ವಿಲೇವಾರಿ ಅವ್ಯಾಹತ
ಕಸಕ್ಕೆ ಬೆಂಕಿ ಹಾಕಿದ್ರೆ 5 ಲಕ್ಷ ರೂ. ದಂಡ ಇಲ್ಲವೇ 5 ವರ್ಷ ಸಜೆ:ಕಾನೂನು ಪಾಲನೆಯಲ್ಲಿ ಪುರಸಭೆ ಮೌನ
Team Udayavani, Aug 25, 2021, 5:40 PM IST

ಚನ್ನರಾಯಪಟ್ಟಣ: ಪಟ್ಟಣದಲ್ಲಿ ಹಾದು ಹೋಗಿರುವ ಹೇಮಾವತಿ ಎಡದಂಡೆ ನಾಲೆ ಮೇಲೆ ಪದೇ ಪದೆ ಭುಗಿಲೇಳುವ ತ್ಯಾಜ್ಯ ಸಮಸ್ಯೆಯನ್ನು ಬೆಂಕಿಯ ಮೂಲಕ ಶಮನಗೊಳಿಸುವ ಪ್ರಯತ್ನ ಎಗ್ಗಿಲ್ಲದೆ ನಡೆಯುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಾಗಿರುವ ನೀರಾವರಿ ಇಲಾಖೆ ಹಾಗೂ ಪುರಸಭೆ ಅಧಿಕಾರಿಗಳು ಕಣ್ಣು ಮುಚ್ಚಿ ಕುಳಿತಿರುವುದರಿಂದ ಪರಿಸರ ಮಾಲಿನ್ನು ಅಧಿಕವಾಗುತ್ತಿದೆ.
ವಾಯುಮಾಲಿನ್ಯ ನಿವಾರಣೆ ಮತ್ತು ನಿಯಂತ್ರಣ ಕಾಯಿದೆ 1981ರ ಸೆಕ್ಷನ್ 19(5)ರ ಅಡಿಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸಲ್ಲಿಸಿದ್ದ ಪ್ರಸ್ತಾವನೆಯನ್ನು ಆಧರಿಸಿ, ರಾಜ್ಯ ಸರ್ಕಾರ ಕಸಕ್ಕೆ ಬೆಂಕಿ ಹಚ್ಚುವುದನ್ನು ನಿರ್ಬಂಧಿಸಿ ಅಧಿಸೂಚನೆ ಹೊರಡಿಸಿದೆ. ಅದರಂತೆ ಜನವಸತಿ ಪ್ರದೇಶ ಅಥವಾ ಬಯಲು ಜಾಗಗಳಲ್ಲಿ ಕಸಕ್ಕೆ ಬೆಂಕಿ ಇಡುವಂತ್ತಿಲ್ಲ, ಸರ್ಕಾರದ ಅದೇಶ ಉಲ್ಲಂ ಸಿ ಕಸಕ್ಕೆ ಬೆಂಕಿ ಹಚ್ಚಿದರೆ 5 ಲಕ್ಷ ರೂ. ವರೆಗೆ ದಂಡ ತೆರಬೇಕು ಇಲ್ಲವೆ 5 ವರ್ಷ ಜೈಲು ಮತ್ತು ದಂಡ ಪಾವತಿ ಶಿಕ್ಷೆ ವಿಧಿಸಬದಹುದಾಗಿ ಈ ಬಗ್ಗೆ ಪುರಸಭೆ ಅಧಿಕಾರಿಗಳಿಗೆ ಅರಿವಿಲ್ಲದೆ ಇರುವುದರಿಂದ ನಿಯಮಗಳನ್ನು ಜಾರಿಗೆ ತರುವ ಗೋಜಿಗೆ ಹೊಗಿಲ್ಲ.
ನಿತ್ಯವೂ ಪಟ್ಟಣದಲ್ಲಿ ವಾಯು ಮಾಲಿನ್ಯ: ಕಠಿಣ ಕಾನೂನು ಇದ್ದರೂ ಇದುವರೆಗೂ ಯಾರ ಮೇಲೂ ಪ್ರಯೋಗ ಮಾಡಿಲ್ಲ. ಈಗಾಗಲೇ ಕೆಲವರು ಕಸದ ರಾಶಿ ಕರಗಿಸಲು ಬೆಂಕಿಯನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿದ್ದಾರೆ. ಇದು ಜನರ ಆರೋಗ್ಯದ ಮೇಲೂ ದುಷ್ಟಪರಿಣಾಮ ಬೀರುತ್ತಿದೆ. ಕಸಕ್ಕೆ ಬೆಂಕಿ ಹಾಕುವವರ ವಿರುದ್ಧ ಕಠಿಣ ಕ್ರಮ ಜರುಗಿಸದೆ ಇರುವುದರಿಂದ ನಿತ್ಯವೂ ಪಟ್ಟಣದಲ್ಲಿ ವಾಯು ಮಾಲಿನ್ಯದಂಥ ಘಟನೆಗಳು ಹೆಚ್ಚುತ್ತಿವೆ.
ಇದನ್ನೂ ಓದಿ:ಬೌದ್ಧಿಕವಾಗಿ ಕಾಂಗ್ರೆಸ್ ಸಂಪೂರ್ಣ ದಿವಾಳಿಯಾಗಿದೆ : ನಳೀನ್ ಕುಮಾರ್ ಕಟೀಲ್
ಆರೋಗ್ಯಕ್ಕೆ ಮಾರಕ ಬೆಂಕಿ: ಅಸಮರ್ಪಕ ತ್ಯಾಜ್ಯ ವಿಲೇವಾರಿಯಿಂದ ವಾರ್ಡ್ನ ಜನತೆ ದುರ್ವಾಸನೆ ತಾಳಲಾರದೆ ಬೆಂಕಿ ಇಟ್ಟು ಸುಟ್ಟು ಹಾಕುವುದು ಸರ್ವೇ ಸಾಮಾನ್ಯವಾಗಿದೆ. ಇದಕ್ಕೆ ಕಡಿವಾಣ ಹಾಕಬೇಕಾದ ಪುರಸಭೆ ಅಧಿಕಾರಿಗಳು ಎಲ್ಲೆಂದರಲ್ಲಿ ಕಸ ಬಿಸಾಡುವ ವ್ಯಕ್ತಿಗಳನ್ನು ಪತ್ತೆ ಹಚ್ಚುತ್ತಿಲ್ಲ. ಹೀಗಾಗಿ ಕಸಕ್ಕೆ ಬೆಂಕಿ ಹಾಕುವ ಪ್ರವೃತ್ತಿ ಪಟ್ಟಣದಲ್ಲಿ ನಿರಂತರವಾಗಿದೆ. ಕಸಕ್ಕೆ ಬೆಂಕಿ ಹಾಕುವುದರಿಂದ ವಿಷಕಾರಿ ಅನಿಲ
ಹೊರಬರುತ್ತವೆ ಇವು ಆರೋಗ್ಯಕ್ಕೆ ಮಾರಕವಾಗುತ್ತಿವೆ ಎಂಬ ಅರಿವೇ ಇಲ್ಲದಂತಾಗಿದೆ.
ಮುಂಜಾನೆಯೇ ಬೆಂಕಿ ಜ್ವಾಲೆ: ಪಟ್ಟಣದಲ್ಲಿ ಅನೇಕ ಬಾರ್ ಅಂಡ್ ರೆಸ್ಟೋರೆಂಟ್, ವೈನ್ ಶಾಪ್ನಲ್ಲಿ ಬೀಳುವ ಟೆಟ್ರಾಪ್ಯಾಕ್, ಪ್ಲಾಸ್ಟಿಕ್ ಲೋಟ ಸೇರಿದಂತೆ ಮಣ್ಣಿನಲ್ಲಿ ಕರಗದ ಕಸವನ್ನು ಆಯಾ ಅಂಗಡಿ ಮಾಲೀಕರೇ ಮುಂದೆ ನಿಂತು ತಮ್ಮಕೂಲಿ ಕಾರ್ಮಿಕರ ಮೂಲಕ ರಸ್ತೆಗೆ ಬದಿಗೆ ಸುರಿಸಿ ಬೆಂಕಿ ಹಾಕಿಸುತ್ತಾರೆ. ಇನ್ನು ಗ್ಯಾರೇಜ್ ಮಾಲೀಕರು, ಪ್ಲಾಸ್ಟಿಕ್ ವಸ್ತುಗಳಿಗೆ ಬೆಂಕಿ ಹಾಕುವುದು ಮಾಮೂಲಾಗಿದೆ, ಅಂಗಡಿ
ಮುಂಗಟ್ಟುಗಳು, ಹೋಟೆಲ್ನಲ್ಲಿ ತಮ್ಮಲ್ಲಿ ಉತ್ಪತ್ತಿ ಯಾಗುವ ಕಸವನ್ನು ಪುರಸಭೆ ವಾಹನಕ್ಕೆ ನೀಡಲು ಮುಂದಾಗುತ್ತಾರೆ. ಆದರೆ ಪುರಸಭೆ ಆಟೋ ಟಿಪ್ಪರ್ಗಳು ನಿತ್ಯವೂಕಸ ಸಂಗ್ರಹಣೆಗೆ ತೆರಳದೆ ಇರುವುದರಿಂದ ಅನ್ಯ ಮಾರ್ಗವಿಲ್ಲದೆ ರಾತ್ರಿ ವೇಳೆ ಅಂಗಡಿ ಬಾಗಿಲು ಹಾಕುವ ಸಮಯದಲ್ಲಿ ಕಸವನ್ನು ತಮ್ಮ ಅಂಗಡಿ ಮುಂದೆ ಸುರಿದು ಬೆಂಕಿ ಹಚ್ಚುತ್ತಾರೆ.
ಹೇಮಾವತಿ ನಾಲೆ ಏರಿ ಮೇಲೆ ಹೆಚ್ಚು ಬೆಂಕಿ
ಹೇಮಾವತಿ ನಾಲೆ ಏರಿ ಮೇಲೆ ಆಟೋಗಳಲ್ಲಿ ಆಗಮಿಸುವವರುಕಸವನ್ನು ತಂದು ಸುರಿಯುತ್ತಾರೆ, ನಿರುಪಯುಕ್ತ ವಸ್ತುಗಳಿಗೆ ಬೆಂಕಿ ಹಾಕಲಾಗುತ್ತಿದೆ, ಇದರಿಂದ ಹೇಮಾವತಿ ಉದ್ಯಾನವನದಲ್ಲಿ ವಾಯು ವಿಹಾರ ನಡೆಸುವವರಿಗೆ ತುಂಬಾಕಿರಿಕಿರಿ ಉಂಟಾಗುತ್ತಿದೆ. ಇನ್ನು ಪಟ್ಟಣಕ್ಕೆ ಆಗಮಿಸುವ ನಾಗಸಮುದ್ರ ಹಾಗೂ ಬೆಲಸಿಂದ ಗ್ರಾಮಸ್ಥರು ಮೂಗು ಮುಚ್ಚಿಕೊಂಡು ಸಂಚರಿಸುವಂತಾಗಿದೆ. ನೀರಾವರಿ ಇಲಾಖೆ ಯಲ್ಲಿ ಉದ್ಯಾನವನ ನೋಡಿಕೊಳ್ಳಲುಕಾವಲುಗಾರರನ್ನು ನೇಮಿಸಿ ಕೈ ತೊಳೆದುಕೊಂಡಿದ್ದಾರೆ. ಅವರು ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೋ ಇಲ್ಲವೋ ಎಂಬುದರ ವಿಚಾರಣೆ ಮಡುತ್ತಿಲ್ಲ. ನಾಲೆ ಏರಿ ಸುತ್ತಮುತ್ತ ಜಾಗೃತೆ ಮತ್ತು ಭದ್ರತೆ ನೋಡಿಕೊಳ್ಳಲು ಅಧಿಕಾರಿಗಳಿಗೆ ಸರ್ಕಾರ ವೇತನದ ಜತೆ ಭತ್ಯೆ ಹಾಗೂ ವಾಹನ ವ್ಯವಸ್ಥೆಯನ್ನೂಕಲ್ಪಿಸಿದೆ. ಆದರೂ, ಹೇಮಾವತಿ ನಾಲೆ ಮೇಲೆ ಆಗುತ್ತಿರುವ ವಾಯು ಮಾಲಿನ್ಯ ತಪ್ಪಿಸಲು ಅಧಿಕಾರಿಗಳ ಅಲಸ್ಯದ ಮನಸ್ಥಿತಿಯೇಕಾರಣವಾಗಿದೆ.
ಗುತ್ತಿಗೆ ಆದಾರ ಮೇಲೆಕೆಲಸ ಮಾಡುವುದಕ್ಕೆಕಳೆದ ಎಂಟು ತಿಂಗಳಿನಿಂದ ಮೂರು ಬಾರಿ ಟೆಂಡರ್ ಆಗಿದೆ. ಇದು ಸಮರ್ಪಕವಾಗಿ ಇಲ್ಲದ ಕಾರಣ ಕೆಲಸಗಾರರ ಸಮಸ್ಯೆಯಿಂದಾಗಿ ವಾಣಿಜ್ಯ ಮಳಿಗೆ ಕಸ ಸಂಗ್ರಹಣೆ ಮಾಡಲಾಗುತ್ತಿಲ್ಲ. ಸೆಪ್ಟಂಬರ್ ತಿಂಗಳ ಕೊನೆಯೊಳಗೆ ಸಮಸ್ಯೆ ಬಗೆ ಹರಿಸುತ್ತೇವೆ.
– ಎಚ್.ಎನ್.ನವೀನ್, ಪುರಸಭೆ ಅಧ್ಯಕ್ಷರು
ಪುರಸಭೆ 23 ವಾರ್ಡ್ಗಳಲ್ಲಿ ಕಸ ಸಂಗ್ರಹಣೆ ವಾಹನ ಸಂಚಾರ ಮಾಡಿ ಪ್ರತಿ ಮನೆಯಿಂದ ಕಸ ಸಂಗ್ರಹಣೆ ಮಾಡುತ್ತಿದೆ. ವಾಣಿಜ್ಯ ಮಳಿಗೆಯವರು ಮಾತ್ರ ಆಟೋಗೆ ಕಸ ನೀಡುತ್ತಿಲ್ಲ, ಅವರನ್ನು ತೆರಿಗೆ ವ್ಯಾಪ್ತಿಗೆ ತಂದು ನಂತರ ಕಸ ಸಂಗ್ರಹಣೆಗೆ ಮುಂದಾಗುತ್ತೇವೆ. ನೀರಾವರಿ ಇಲಾಖೆ ಸಿಬ್ಬಂದಿ ಬೇಜವಾಬ್ದಾರಿಯಿಂದ ನಾಲೆ ಏರಿ ಮೇಲೆ ಪದೇ ಪದೇಕಸ ಸುರಿದು ಬೆಂಕಿ ಹಚ್ಚಲಾಗುತ್ತಿದೆ. ಆದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ.
-ಕೃಷ್ಣಮೂರ್ತಿ, ಪುರಸಭೆ ಅಧಿಕಾರಿ
– ಶಾಮಸುಂದರ್ ಕೆ ಅಣ್ಣೇನಹಳ್ಳಿ
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
