ತ್ಯಾಜ್ಯ ವಿಲೇವಾರಿ ಘಟಕ ಧ್ವಂಸಗೊಳಿಸಿದ ಕಿಡಿಗೇಡಿಗಳು

ದುಷ್ಕರ್ಮಿಗಳ ಕೃತ್ಯದಿಂದ ಪುರಸಭೆಗೆ ಕೋಟಿ ರೂ. ನಷ್ಟ , ದೂರು ನೀಡಿದರೂ ತಪ್ಪಿತಸ್ಥರ ಬಂಧನವಿಲ್ಲ

Team Udayavani, Jul 9, 2019, 12:46 PM IST

ಸಕಲೇಶಪುರ ಪಟ್ಟಣದ ಮಳಲಿ ಗ್ರಾಮದಲ್ಲಿರುವ ಘನತ್ಯಾಜ್ಯ ವಿಲೇವಾರಿ ಘಟಕದ ಕಿಡಿಗೇಡಿಗಳ ಕೃತ್ಯಕ್ಕೆ ಕಾವಲುಗಾರರ ಕೊಠಡಿ, ವಿಶ್ರಾಂತಿ ಗೃಹ, ಸಂಪೂರ್ಣ ನಾಶವಾಗಿದೆ.

ಸಕಲೇಶಪುರ: ತಾಲೂಕಿನ ಮಳಲಿ ಗ್ರಾಮದಲ್ಲಿ ಪಟ್ಟಣದ ಘನತ್ಯಾಜ್ಯ ಘಟಕ ಕಿಡಿಗೇಡಿಗಳ ಕೃತ್ಯಕ್ಕೆ ಸಂಪೂರ್ಣ ಧ್ವಂಸಗೊಂಡಿದೆ. ರಾಜ್ಯ ಹೈಕೋರ್ಟ್‌ ಆದೇಶದಂತೆ ಪುರಸಭೆ 2003 ಹಾಗೂ 2009 ರಲ್ಲಿ ಮಳಲಿ ಗ್ರಾಮದ ಸರ್ವೇ ನಂ 14 ರಲ್ಲಿ ಒಟ್ಟು 11 ಎಕರೆ ಜಾಗ ಘನ ತ್ಯಾಜ್ಯ ಘಟಕಕ್ಕೆ ಮಂಜೂರಾಗಿದೆ.

8 ಎಕರೆ ಜಾಗದಲ್ಲಿ ನಿರ್ಮಾಣ: ಮೂರು ಎಕರೆ ಜಾಗದಲ್ಲಿ ಗ್ರಾಮಸ್ಥರು ವಾಸವಾಗಿದ್ದು, ಇರುವ 8 ಎಕರೆ ಜಾಗದಲ್ಲಿ ಘನತ್ಯಾಜ್ಯ ಘಟಕ ನಿರ್ಮಾಣ ಕ್ಕಾಗಿ ಸರ್ಕಾರ 2006 ರಿಂದ 2012 ರವರಗೆ ಸುಮಾರು 1.77 ಕೋಟಿ ರೂ. ವೆಚ್ಚ ಮಾಡಿ ಕಲ್ವರ್ಟ್‌, ತಡೆಗೋಡೆ, ಕಾಂಪೌಂಡ್‌, ಕೊಳಚೆ ನೀರು ಶುದ್ಧೀಕರಣ ಘಟಕ, ಏರಿ ನಿರ್ಮಾಣ, ಆಂತರಿಕ ರಸ್ತೆಗಳ ಕಾಂಕ್ರೀಟೀಕರಣ, ವರ್ಮಿ ಕಾಂಪೋಸ್ಟ್‌ ಘಟಕ ಹಾಗೂ ಶೆಡ್‌ ನಿರ್ಮಾಣ, ಕಾವಲುಗಾರರ ಕೊಠಡಿ, ಎರೆಹುಳು ಗೊಬ್ಬರ ಘಟಕ, ಕೊಳವೆ ಬಾವಿ ನಿರ್ಮಾಣ,ನೆಲಭರ್ತಿ ಗುಂಡಿಗಳ ನಿರ್ಮಾಣ ಕಾಮಗಾರಿ ನಡೆಸಲಾಗಿದೆ. ಆದರೆ, ಈ ಎಲ್ಲಾ ಕಾಮಗಾರಿ 2013 ರಲ್ಲಿ ಮುಗಿ ದಿದ್ದು ಪುರಸಭೆ ಪಟ್ಟಣದ ತ್ಯಾಜ್ಯವನ್ನು ಘನ ತ್ಯಾಜ್ಯಘಟಕದಲ್ಲಿ ಹಾಕಲು ಆರಂಭಿಸಿತ್ತು.

ನ್ಯಾಯಾಲಯದಿಂದ ತಡೆಯಾಜ್ಞೆ: ಮಳಲಿ ಗ್ರಾಮದ ಕೆಲವರು ಘನತ್ಯಾಜ್ಯ ಘಟಕದ ಸಮೀಪ ವಾಸದ ಮನೆಗಳಿರುವುದರಿಂದ ಇಲ್ಲಿ ಘಟಕ ನಿರ್ಮಾಣ ಬೇಡ ಎಂದು ಜೆಎಂಎಫ್ಸಿ ನ್ಯಾಯಾಲಯದ ಮೆಟ್ಟಿಲು ಹತ್ತಿದ ಪರಿಣಾಮ ಕೆಲಕಾಲ ತ್ಯಾಜ್ಯ ವಿಲೇವಾರಿ ಘಟಕಕ್ಕೆ ತಡೆಬಿದ್ದಿತ್ತು. ಆದರೆ, ಸ್ಥಳೀಯ ನ್ಯಾಯಾಲಯದಲ್ಲಿ ಪುರಸಭೆ ಪರವಾಗಿ ತೀರ್ಪು ಬಂದಿದ್ದರಿಂದ ಗ್ರಾಮಸ್ಥರು 2015ರಲ್ಲಿ ರಾಜ್ಯ ಉಚ್ಚನ್ಯಾಯಲಯದ ಮೊರೆ ಹೋಗಿದ್ದರು. ಆದರೆ, ಉಚ್ಚನ್ಯಾಯಾಲಯ ವಾದ ಪ್ರತಿವಾದ ಆಲಿಸಿದ ನಂತರ 2016 ರಲ್ಲಿ ವೈಜ್ಞಾನಿಕವಾಗಿ ಘನತ್ಯಾಜ್ಯ ಘಟಕದಲ್ಲೆ ತ್ಯಾಜ್ಯ ವಿಲೇವಾರಿ ಮಾಡುವಂತೆ ಸೂಚಿಸಿದೆ.

ಶಾಸಕರ ಮಧ್ಯ ಪ್ರವೇಶ: ಪುರಸಭೆ ನ್ಯಾಯಾಲ ಯದ ಆದೇಶ ಪಾಲನೆಗಾಗಿ 2017ರಲ್ಲಿ ಪೋಲಿಸ್‌ ಬಿಗಿ ಭದ್ರತೆಯೊಂದಿಗೆ ಕಸವಿಲೇವರಿಗೆ ಮುಂದಾದ ವೇಳೆ ಶಾಸಕರು ಮಧ್ಯ ಪ್ರವೇಶಿಸಿ ಕಸ ವಿಲೇವಾರಿ ಸದ್ಯ ಇಲ್ಲಿ ಬೇಡ ಎಂದು ಹೇಳಿ ದ್ದರು. ಇದರಿಂದಾಗಿ ಪಟ್ಟಣದ ಕಸವನ್ನು ಹೇಮ ವಾತಿ ನದಿ ದಡದಲ್ಲಿ ತಂದು ಹಾಕಲಾಗುತ್ತಿದೆ.

ಕಿಟಕಿ ಬಾಗಿಲು ದೋಚಿದ ದುಷ್ಕರ್ಮಿಗಳು: ಕಳೆದ ಮೂರು ತಿಂಗಳಿನಿಂದಿಚೆಗೆ ಘನ ತ್ಯಾಜ್ಯ ಘಟಕದ ಕಾವಲುಗಾರರ ಕೊಠಡಿ ಸಂಪೂರ್ಣ ಧ್ವಂಸಗೊಳಿಸಲಾಗಿದ್ದರೆ, ಕಾಂಪೌಂಡ್‌ಗೆ ಬಳಸಿದ್ದ ಇಟ್ಟಿಗೆಗಳನ್ನು ಕಿತ್ತು ಒಯ್ಯಲಾಗಿದೆ. ಸಿಬ್ಬಂದಿಗಳ ವಿಶ್ರಾಂತಿಗಾಗಿ ನಿರ್ಮಿಸಿದ್ದ ಕಟ್ಟಡದ ಕಿಟಿಕಿ ಬಾಗಿಲುಗಳು,ಶೌಚಗೃಹದ ಕಬೊರ್ಡ್‌ ಸಹ ಬಿಡದಂತೆ ದೋಚಲಾಗಿದೆ. ಇದಲ್ಲದೆ ಸುಮಾರು 30 ಲಕ್ಷಕ್ಕ ಅಧಿಕ ವೆಚ್ಚ ಮಾಡಿ ನಿರ್ಮಿಸಿದ್ದ ವರ್ಮಿಕಾಂಪೋಸ್ಟ್‌ ಕಿಟ್ ಹಾಗೂ ಶೆಡ್‌ನ‌ ಶೀಟ್‌ಗಳು ಕಬ್ಬಿಣದ ಸಲಕೆಗಳನ್ನು ಬಿಡದಂತೆ ಅಪಹರಿ ಸಲಾಗಿದೆ ಒಟ್ಟಾರೆ ಸುಮಾರು ಒಂದು ಕೋಟಿಗೂ ಅಧಿಕ ಮೊತ್ತ ಕಾಮಗಾರಿಯ ಧ್ವಂಸಗೊಳಿಸ ಲಾಗಿದೆ. ಈ ಬಗ್ಗೆ ಪುರಸಬೆ ದೂರು ಸಹ ದಾಖಲಿಸಿದೆಯಾದರೂ ಪೋಲಿಸರು ಇದುವರಗೆ ಯಾರನ್ನೂ ಬಂಧಿಸಿಲ್ಲ.

ನ್ಯಾಯಾಲಯದ ಆದೇಶಕ್ಕೆ ಅಪಚಾರ: ಘನತ್ಯಾಜ್ಯ ಘಟಕದಲ್ಲೇ ವೈಜ್ಞಾನಿಕವಾಗಿ ಕಸವಿಲೇವಾರಿ ಮಾಡಿ ಎಂದು ನ್ಯಾಯಾಲಯ ನಿರ್ದೇಶನ ನೀಡಿ ಮೂರು ವರ್ಷ ಕಳೆಯುತ್ತಿದ್ದು ವೈಜ್ಞಾನಿಕ ವಾಗಿ ಕಸವಿಲೇವಾ‌ರಿಗಾಗಿ ಯಂತ್ರಗಳ ಖರೀದಿಗೂ ಸುಮಾರು 3 ಕೋಟಿಯಷ್ಟು ಅನುದಾನವಿದೆ. ಆದರೆ, ಘಟಕದ ಸ್ವಚ್ಛತೆಗೂ ಅವಕಾಶ ನೀಡದ ಗ್ರಾಮಸ್ಥರ ನಡೆ ಹಾಗೂ ಇವರಿಗೆ ಸಹಕರಿಸುತ್ತಿರುವ ಶಾಸಕ ಎಚ್.ಕೆ ಕುಮಾರಸ್ವಾಮಿ ವಿರುದ್ದ ಪಟ್ಟಣದಲ್ಲಿ ಬಾರಿ ಆಕ್ರೋಶ ಕೇಳಿ ಬರುತ್ತಿದೆ.

 

● ಸುಧೀರ್‌ ಎಸ್‌.ಎಲ್

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ