ಎತ್ತಿನಹೊಳೆ ಯೋಜನೆ ಕಾಮಗಾರಿ ಕಾರ್ಮಿಕರಿಗಿಲ್ಲ ಶುದ್ಧ ನೀರು


Team Udayavani, Mar 6, 2021, 4:40 PM IST

ಎತ್ತಿನಹೊಳೆ ಯೋಜನೆ ಕಾಮಗಾರಿ ಕಾರ್ಮಿಕರಿಗಿಲ್ಲ ಶುದ್ಧ ನೀರು

ಆಲೂರು: ಬಯಲುಸೀಮೆ ಜಿಲ್ಲೆಗಳಿಗೆ ಶಾಶ್ವತ ನೀರಾವರಿ ಸೌಲಭ್ಯ ಒದಗಿಸುವ ಎತ್ತಿನಹೊಳೆ ಯೋಜನೆಯ ಕಾಲುವೆ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿಕೊಂಡಿರುವ ವಲಸೆ ಕಾರ್ಮಿಕರಿಗೆ, ಗುತ್ತಿದಾರರು ಶುದ್ಧ ಕುಡಿಯುವ ನೀರು ಸೇರಿ ಹಲವು ಸೌಲಭ್ಯ ಕಲ್ಪಿಸದೇ, ಹೀನಾಯವಾಗಿ ದುಡಿಸಿಕೊಳ್ಳುತ್ತಿದ್ದಾರೆ.

ತಾಲೂಕಿನ ಕಾಮತಿಕೂಡಿಗೆ ಬಳಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯಕಾಲುವೆ ನಿರ್ಮಾಣ ಕಾಮಗಾರಿ ಯಲ್ಲಿ 25 ರಿಂದ 30 ವಲಸೆ ಕಾರ್ಮಿಕರು ತೊಡಗಿಕೊಂಡಿದ್ದಾರೆ.ಇವರು ಮೂಲತಃ ಪಶ್ಚಿಮ ಬಂಗಾಳದಿಂದ ಬಂದವರು. ಗುತ್ತಿಗೆದಾರರು ಶುದ್ಧ ಕುಡಿಯುವ ನೀರು ಒದಗಿಸಿದ ಕಾರಣ, ಕಾಲುವೆ ಯಲ್ಲಿ ಜಿನುಗುತ್ತಿರುವ ನೀರನ್ನು ಲೋಟ, ಪ್ಲಾಸ್ಟಿಕ್‌ ಬಾಟಲ್‌ನಲ್ಲಿ ತುಂಬಿಕೊಂಡು ಸೇವಿಸುತ್ತಿದ್ದಾರೆ.

ಅಡುಗೆಗೂ ಕಲುಷಿತ ನೀರು: ಮೊದಲು ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡುತ್ತಿದ್ದಗುತ್ತಿಗೆದಾರರು, ನಂತರ ಟ್ಯಾಂಕರ್‌ ತುಕ್ಕು ಹಿಡಿದು ತೂತು ಬಿದ್ದಿದೆ ಎಂದು ಹೇಳಿ ನೀರು ಪೂರೈಕೆ ನಿಲ್ಲಿಸಿದ್ದಾರೆ. ಇತ್ತ ಇದ್ದ ಟ್ಯಾಂಕರ್‌ ಅನ್ನು ದುರಸ್ತಿ ಪಡಿಸದೇ, ಅತ್ತ ಬೇರೆ ಟ್ಯಾಂಕರ್‌ನಿಂದ ನೀರು ಪೂರೈಕೆ ಮಾಡದೇ, ಕಾಲುವೆ ಯಲ್ಲಿ ಜಿನುಗುವಕೆಂಪು, ಗೋಡು ಮಣ್ಣು ಮಿಶ್ರಿತ ನೀರನ್ನೇ ಕುಡಿಯುಲು, ಅಡುಗೆಗೆ ಬಳಸುವಂತಹ ಪರಿಸ್ಥಿತಿ ಇದೆ. ಸುಮಾರು 150 ಅಡಿ ಆಳದ ಕಾಲುವೆಯಲ್ಲಿಹಿಟಾಚಿ ಯಂತ್ರಗಳಿಂದ ಮಣ್ಣು ತೆಗೆದು ಅದನ್ನು

ಟಿಪ್ಪರ್‌ಗಳಲ್ಲಿ ಹೊರಗಡೆ ಸಾಗಿಸುವ ಕೆಲಸ ಮಾಡುತ್ತಿರುವ ಈ ಕಾರ್ಮಿಕರು, ಕೆಲಸದ ಸ್ಥಳದಲ್ಲಿ ಗುಡಾರಗಳನ್ನು ಹಾಕಿಕೊಂಡು, ಅಲ್ಲಿಯೇ ಸಿಗುವ ಕಲ್ಲುಗಳನ್ನು ಇಟ್ಟು ಆಹಾರ ಬೇಯಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಕನಿಷ್ಠ ಅವರಿಗೆ ಆಹಾರ ತಯಾರಿಕೆಗೆ ಸೂಕ್ತ ಸಲಕರಣೆಗಳನ್ನು ಒದಗಿಸದಿರುವುದು ವಿಪರ್ಯಾಸವೇ ಸರಿ.

ಭಾಷೆ ಸಮಸ್ಯೆ: ಪಶ್ಚಿಮ ಬಂಗಾಳದಿಂದ ಬಂದಿರುವ ಈ ಕಾರ್ಮಿಕರಿಗೆ ಕನ್ನಡ ಬರುವುದಿಲ್ಲ, ಹೀಗಾಗಿ ಸ್ಥಳೀಯರನ್ನು ಮಾತನಾಡಿಸಿ ಸಹಕಾರಪಡೆಯಲು ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ. ಅಲ್ಲದೆ, ಆಳದ ಕಾಲುವೆಯಲ್ಲಿ ಕೆಲಸಮಾಡುವ ಕಾರಣ, ಕಾರ್ಮಿಕರು ನೀರು, ಇತರೆ ತಿಂಡಿ ತಿನಿಸು ಖರೀದಿಗೆ ಪದೇ ಪದೆ ಅಂಗಡಿ ಬಳಿಬರುವುದು ಕಷ್ಟದ ಕೆಲಸ. ಹೀಗಾಗಿ ಕಾರ್ಮಿಕರಿಗೆಅವರು ಕೆಲಸ ಮಾಡುವ ಜಾಗಕ್ಕೆ ಸೂಕ್ತ ಸೌಲಭ್ಯ ಒದಗಿಸುವ ವ್ಯವಸ್ಥೆ ಗುತ್ತಿಗೆದಾರರು ಮಾಡಬೇಕಿದೆ. ಬಯಲು ಸೀಮೆಯ ಜನರಿಗೆ ಕೋಟ್ಯಂತರ ರೂ.ವೆಚ್ಚದಲ್ಲಿ ನೀರು ಪೂರೈಸಲು ನಡೆಸುತ್ತಿರುವ ಈ ಕಾಮಗಾರಿ ಮಹತ್ವದ್ದು. ಆದರೆ, ಆ ಕಾರ್ಯದಲ್ಲಿ ತೊಡಗಿರುವ ಕಾರ್ಮಿಕರಿಗೆ ಶುದ್ಧ ನೀರು ಸಿಗದೆಕಲುಷಿತ ನೀರು ಬಳಸುವ ಸ್ಥಿತಿ ಬಂದಿರುವುದು ದುರಂತವೇ ಸರಿ. ಕೂಡಲೇ ಸಂಬಂಧಪಟ್ಟಅಧಿಕಾರಿಗಳು, ಗುತ್ತಿಗೆದಾರರು ಕಾರ್ಮಿಕರಿಗೆಸೌಲಭ್ಯ ಒದಗಿಸುವ ವ್ಯವಸ್ಥೆ ಮಾಡಬೇಕಿದೆ.

 

ಕುಮಾರಸ್ವಾಮಿ

ಟಾಪ್ ನ್ಯೂಸ್

siddaramaiah

ನಾರಾಯಣ ಗುರುಗಳನ್ನು ಅವಮಾನಿಸಿದ್ದಕ್ಕೆ ಬಿಜೆಪಿ ಕ್ಷಮೆ ಯಾಚಿಸಲಿ : ಸಿದ್ದರಾಮಯ್ಯ ಕಿಡಿ

jagaluru

ಕರ್ಫ್ಯೂ ನಡುವೆಯೂ ಜಗಳೂರು ಶಾಸಕನ ಜನ್ಮದಿನಾಚರಣೆ : ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿ

aravind-kejriwal

ಗೋವಾದಲ್ಲಿ ಬಿಜೆಪಿಯೇತರ ಪಕ್ಷಗಳೊಂದಿಗೆ ಚುನಾವಣೋತ್ತರ ಮೈತ್ರಿ ಸಾಧ್ಯ: ಕೇಜ್ರಿವಾಲ್

ra Ga

ಬಿಜೆಪಿಯ ‘ದ್ವೇಷ’ದ ರಾಜಕಾರಣ ದೇಶಕ್ಕೆ ಅತ್ಯಂತ ಹಾನಿಕಾರಕ:ರಾಹುಲ್ ಗಾಂಧಿ

1-assadsa

ಯುಪಿ: ಮಾಜಿ ಐಪಿಎಸ್ ಅಧಿಕಾರಿ ಅಸೀಮ್ ಅರುಣ್ ಬಿಜೆಪಿಗೆ ಸೇರ್ಪಡೆ

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

ಚಿಕ್ಕಮಗಳೂರು: ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಳ್ಳಿಗಳನ್ನೇ ಕೆಮ್ಮಿಸುತ್ತಿದ್ದಾರೆ.!

Untitled-1

ಸಂಕೇಶ್ವರ: ಮಹಿಳೆಯೋರ್ವಳ ಗುಂಡಿಕ್ಕಿ ಹತ್ಯೆ; ಬೆಚ್ಚಿ ಬಿದ್ದ ಗ್ರಾಮಸ್ಥರುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳೇಬೀಡು ಪ್ರಥಮ ದರ್ಜೆ ಕಾಲೇಜು ಸೀಲ್‌ಡೌನ್‌

ಹಳೇಬೀಡು ಪ್ರಥಮ ದರ್ಜೆ ಕಾಲೇಜು ಸೀಲ್‌ಡೌನ್‌

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಿ

1-ade

ಶಾಸಕ ಶಿವಲಿಂಗೇಗೌಡರಿಗೆ ಕೊರೊನಾ: ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು

1-hasan-3

ರಸ್ತೆ ನಿರ್ಮಾಣದಲ್ಲೂ ರಾಜಕೀಯ: ಶಾಸಕ ಪ್ರೀತಂಗೌಡ

1-hasan-4

ಮೈತ್ರಿ ಕನಸು ಕಾಣುವವರಿಗೆ ಮೇಕೆದಾಟು ಶಾಪವಾಗಲಿದೆ: ಮಾಜಿ ಶಾಸಕ ಪುಟ್ಟೇಗೌಡ

MUST WATCH

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

udayavani youtube

ಕಲಬುರಗಿ: ಮಾನಸಿಕ ಅಸ್ವಸ್ಥನ ಅವಾಂತರ; ಸಿಕ್ಕ ಸಿಕ್ಕ ವಾಹನಗಳಿಗೆ ಕಲ್ಲೇಟು

udayavani youtube

ನಾವು ಬದಲಾಗೋಣ ಪ್ರಕೃತಿಯನ್ನು ಘೋಷಿಸೋಣಭೂಮಿ ಸುಪೋಷನ ಆಂದೋಲನ

udayavani youtube

ಒಂದು ಕೆ.ಜಿ. ಬಾಳೆ ಹಣ್ಣಿಗೆ 2 ರೂ. : ಸಂಕಷ್ಟದಲ್ಲಿ ಬಾಳೆ ಬೆಳೆದ ರೈತ

ಹೊಸ ಸೇರ್ಪಡೆ

ಕುಷ್ಟಗಿ: ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ದಾಳಿ; 9 ಜನರು ವಶಕ್ಕೆ

ಕುಷ್ಟಗಿ: ಇಸ್ಪೀಟ್ ಜೂಜಾಟ ಅಡ್ಡೆ ಮೇಲೆ ದಾಳಿ; 9 ಜನರು ವಶಕ್ಕೆ

siddaramaiah

ನಾರಾಯಣ ಗುರುಗಳನ್ನು ಅವಮಾನಿಸಿದ್ದಕ್ಕೆ ಬಿಜೆಪಿ ಕ್ಷಮೆ ಯಾಚಿಸಲಿ : ಸಿದ್ದರಾಮಯ್ಯ ಕಿಡಿ

jagaluru

ಕರ್ಫ್ಯೂ ನಡುವೆಯೂ ಜಗಳೂರು ಶಾಸಕನ ಜನ್ಮದಿನಾಚರಣೆ : ಆರೋಗ್ಯ ಇಲಾಖೆ ಅಧಿಕಾರಿಗಳು ಭಾಗಿ

aravind-kejriwal

ಗೋವಾದಲ್ಲಿ ಬಿಜೆಪಿಯೇತರ ಪಕ್ಷಗಳೊಂದಿಗೆ ಚುನಾವಣೋತ್ತರ ಮೈತ್ರಿ ಸಾಧ್ಯ: ಕೇಜ್ರಿವಾಲ್

ra Ga

ಬಿಜೆಪಿಯ ‘ದ್ವೇಷ’ದ ರಾಜಕಾರಣ ದೇಶಕ್ಕೆ ಅತ್ಯಂತ ಹಾನಿಕಾರಕ:ರಾಹುಲ್ ಗಾಂಧಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.