Udayavni Special

ಬೆಳೆ ಸಮೀಕ್ಷೆಯಲ್ಲಿ ಶೇ.100 ಪ್ರಗತಿ

ದೇಶಾದ್ಯಂತ ವಿಸ್ತರಣೆಗೆ ಚಿಂತನೆ,ಹೆಚ್ಚಿನ ಬೆಲೆಗೆ ಯೂರಿಯಾ ಮಾರಾಟ; 148 ಅಂಗಡಿ ಲೈಸೆನ್ಸ್‌ ರದ್ದು

Team Udayavani, Nov 3, 2020, 2:46 PM IST

hv-tdy-1

ಹಾವೇರಿ: ರಾಜ್ಯದಲ್ಲಿ ಬೆಳೆ ಸಮೀಕ್ಷೆ ಒಂದೂವರೆ ತಿಂಗಳಲ್ಲಿ ಶೇ.100ರಷ್ಟು ಪ್ರಗತಿ ಸಾ ಧಿಸಲಾಗಿದೆ. ರೈತರಿಂದಲೇ ಬೆಳೆ ಸಮೀಕ್ಷೆ ಮಾದರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೃಷಿ ಸಚಿವಾಲಯ ಶ್ಲಾಘಿಸಿದ್ದು, ದೇಶಾದ್ಯಂತ ಇದರ ವಿಸ್ತರಣೆಗೆ ಚಿಂತನೆ ನಡೆಸಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಶೇ.46ರಷ್ಟು ರೈತರು ತಮ್ಮ ಬೆಳೆಯನ್ನು ತಾವೇ ಸಮೀಕ್ಷೆ ಮಾಡಿದ್ದಾರೆ. ಇನ್ನುಳಿದ ಸಮೀಕ್ಷೆಯನ್ನು ಪಿಆರ್‌ಗಳ ಮೂಲಕ ನಡೆಸಲಾಗಿದೆ. ಈ ಸಮೀಕ್ಷೆಯಿಂದ ರಾಜ್ಯದಲ್ಲಿ ರೈತರು ಯಾವ ಬೆಳೆಯನ್ನು ಎಷ್ಟು ಪ್ರಮಾಣದಲ್ಲಿ ಬೆಳೆದಿದ್ದಾರೆ ಎಂಬನಿಖರ ಮಾಹಿತಿ ಸಿಗಲಿದೆ. ಈ ವರ್ಷ ರಾಜ್ಯದಲ್ಲಿ 15 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದಾರೆ. ಈ ಸಮೀಕ್ಷೆಯಿಂದ ಅತಿವೃಷ್ಟಿ, ಅನಾವೃಷ್ಟಿಯಿಂದ ಆಗುವ ಬೆಳೆಹಾನಿ ಹಾಗೂ ಬೆಳೆವಿಮೆ ನೀಡಲು ಅನುಕೂಲವಾಗಲಿದೆ ಎಂದರು.

ಭೂಮಿ ತಂತ್ರಾಂಶದ ಪ್ರಕಾರ ರಾಜ್ಯದಲ್ಲಿಒಟ್ಟು 2,10,26,991 ರೈತರ ತಾಕುಗಳನ್ನುಸಮೀಕ್ಷೆ ಮಾಡಬೇಕಾಗಿತ್ತು. ಅ.25ಕ್ಕೆ ಎಲ್ಲವನ್ನುಪೂರ್ಣಗೊಳಿಸಲಾಗಿದೆ ಎಂದರು.

2019ನೇ ಸಾಲಿನ ಮುಂಗಾರು ಬೆಳೆವಿಮೆ 2,71,670 ಫಲಾನುಭವಿಗಳಿಗೆ 263.24 ಕೋಟಿ ವಿಮೆಯನ್ನು ಬೆಳೆ ಸಮೀಕ್ಷೆ ಮಾಹಿತಿಯೊಂದಿಗೆ ತಾಳೆಯಾದರೈತ ಫಲಾನುಭವಿಗಳಿಗೆ ಇತ್ಯರ್ಥಪಡಿಸಲಾಗಿದೆ. ಉಳಿದ ಫಲಾನುಭವಿಗಳಿಗೆ ಶೀಘ್ರದಲ್ಲೇ ಇತ್ಯರ್ಥಪಡಿಸಲಾಗುವುದು. 2017-18, 2018-19ನೇ ಸಾಲಿನಲ್ಲಿ ಬ್ಯಾಂಕ್‌ನಿಂದ ಹಾಗೂ ರೈತರ ಕೆಲವು ತಾಂತ್ರಿಕ ತೊಡಕಿನಿಂದ ಇತ್ಯರ್ಥವಾಗದ 11,251 ಫಲಾನುಭವಿಗಳಿಗೆ ವಿಮಾ ಪರಿಹಾರವಾಗಿ 14.95 ಕೋಟಿ ರೂ. ಇತ್ಯರ್ಥಪಡಿಸಲಾಗಿದೆ. 2015ರ ಮುಂಗಾರು ಹಂಗಾಮಿನ ಜಿಲ್ಲೆಯ ಮೊಟೆಬೆನ್ನೂರು ಗ್ರಾಮದ ಬೆಳೆವಿಮೆ ಕಟ್ಟಿದ ರೈತರಿಗೆ ತಾಂತ್ರಿಕ ತೊಂದರೆಯಿಂದ ಬೆಳೆವಿಮೆ ಇತ್ಯರ್ಥಪಡಿಸಲಾಗಿರಲಿಲ್ಲ. ಇದನ್ನುಇತ್ಯರ್ಥಪಡಿಸಿ 992 ರೈತರಿಗೆ 1.22 ಕೋಟಿ ಮೊತ್ತ ಇತ್ಯರ್ಥಪಡಿಸಲಾಗಿದೆ. 2017ಕ್ಕಿಂತ ಹಿಂದಿನ ಸಾಲಿನ ಹಲವಾರು ತಾಂತ್ರಿಕ ಕಾರಣದಿಂದ (ಆಧಾರ್‌ತಿದ್ದುಪಡಿ, ಬ್ಯಾಂಕ್‌ ಅಕೌಂಟ್‌ ತಪ್ಪು ಮಾಹಿತಿ) ಇತ್ಯರ್ಥಪಡಿಸದ 1.26 ಲಕ್ಷ ರೈತರಿಗೆ ಒಟ್ಟು 86.39 ಕೋಟಿ ಎಸ್ಟ್ರೋ ಅಕೌಂಟ್‌ನಲ್ಲಿ ಇಡಲಾಗಿದ್ದ ಮೊತ್ತವನ್ನು ಹಲವಾರು ಸಭೆಗಳ ನಂತರ 85,570 ರೈತರಿಗೆ 56.15 ಕೋಟಿ ಮೊತ್ತ ಇತ್ಯರ್ಥಪಡಿಸಲಾಗಿದೆ ಎಂದರು.

ಹೆಚ್ಚಿನ ಬೆಲೆಗೆ ಯೂರಿಯಾ ರಸಗೊಬ್ಬರ ಮಾರುತ್ತಿದ್ದ ಅಂಗಡಿ ಪತ್ತೆ ಹಚ್ಚಿದ್ದೇವೆ. 148 ರಸಗೊಬ್ಬರ ಅಂಗಡಿಗಳ ಪರವಾನಗಿ ರದ್ದುಗೊಳಿಸಿದ್ದೇವೆ. ಕಳಪೆ ಬೀಜದ ವಿರುದ್ಧ ಸಮರ ಸಾರಿ ಈಗಾಗಲೇ ದಾಳಿನಡೆಸಿ ತನಿಖೆ ಸಾಗಿದೆ. ಆಂಧ್ರಪ್ರದೇಶಕ್ಕೂ ತನಿಖಾಧಿಕಾರಿಗಳು ಹೋಗಲಿದ್ದಾರೆ. ರೈತರು ಕಳಪೆ ಬೀಜ ಖರೀದಿಸಬಾರದು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ನೆಹರು ಓಲೇಕಾರ, ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ, ಪ್ರಭು ಹಿಟ್ನಳ್ಳಿ, ಗಿರೀಶ ತುಪ್ಪದ ಇತರರು ಇದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

WhatsApp-launches-disappearing-messages-feature

ವಾಟ್ಸಾಪ್ ತಂದಿದೆ ಹೊಸ ಫೀಚರ್: ಇನ್ನು ಮುಂದೆ ಚಾಟಿಂಗ್ ಮತ್ತಷ್ಟು ಸುಲಭ !

google-photos

ಉಚಿತ ಪೋಟೋ ಅಪ್ಲೋಡ್ ಸೇವೆ ಅಂತ್ಯಗೊಳಿಸಿದ “Google Photos’ : ಹೊಸ ನಿಯಮವೇನು ?

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

ಡಿಜಿಟಲ್ ಸಹಿ ಮಾಡುವುದು ಹೇಗೆ?

ಡಿಜಿಟಲ್ ಸಹಿ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ !

bidder

ಬೀದರ್: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಕಳ್ಳತನ ಪ್ರಕರಣದ ಆರೋಪಿಗಳು

farm-bill

ಸರ್ಕಾರದ ಮಾತುಕತೆ ಪ್ರಸ್ತಾಪವನ್ನು ತಿರಸ್ಕರಿಸಿದ ರೈತ ಸಂಘಟನೆಗಳು: ತೀವ್ರ ಹೋರಾಟದ ಎಚ್ಚರಿಕೆ

kohli

ಸರಣಿ ಸೋತರೂ, ಹೊಸ ದಾಖಲೆ ಬರೆದ ನಾಯಕ ವಿರಾಟ್ ಕೊಹ್ಲಿ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

temple-development-Grants

ದೇವಸ್ಥಾನ ಅಭಿವೃದ್ಧಿಗೆ 52 ಲಕ್ಷ ರೂ. ಅನುದಾನ

ಕ್ಷಯರೋಗ ಪತ್ತೆ-ಚಿಕಿತ್ಸಾ ಆಂದೋಲನ

ಕ್ಷಯರೋಗ ಪತ್ತೆ-ಚಿಕಿತ್ಸಾ ಆಂದೋಲನ

Leave-the-superstition-and-live-the-life

ಮೂಢನಂಬಿಕೆ ತೊರೆದು ಜೀವನ ಸಾಗಿಸಿ

Advance-loan-lure-for-sugarcane-growers

ಕಬ್ಬು ಬೆಳೆಗಾರರಿಗೆ ಮುಂಗಡ ಸಾಲದ ಆಮಿಷ

ಹಾಸ್ಟೆಲ್‌ ಪ್ರವೇಶಕ್ಕೆ ವಿದ್ಯಾರ್ಥಿಗಳ ಹಿಂದೇಟು

ಹಾಸ್ಟೆಲ್‌ ಪ್ರವೇಶಕ್ಕೆ ವಿದ್ಯಾರ್ಥಿಗಳ ಹಿಂದೇಟು

MUST WATCH

udayavani youtube

ಮೂರೂವರೆ ಸಾವಿರದಷ್ಟು ವಿವಿಧ ಪತ್ರಿಕೆಗಳನ್ನು ಸಂಗ್ರಹಿಸಿರುವ ಎಕ್ಕಾರು ಉಮೇಶ ರಾಯರು

udayavani youtube

Mangalore: Woman rescues a cat from 30 feet deep well | Ranjini Shetty

udayavani youtube

ಸಚಿವ ಸಂಪುಟ ವಿಸ್ತರಣೆ ಬಗ್ಗೆ CM and ಹೈಕಮಾಂಡ್ ನಿರ್ಧಾರ ತಗೆದುಕೊಳ್ಳುತ್ತದೆ: ಅಶ್ವಥ್ ನಾರಾಯಣ

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

ಹೊಸ ಸೇರ್ಪಡೆ

WhatsApp-launches-disappearing-messages-feature

ವಾಟ್ಸಾಪ್ ತಂದಿದೆ ಹೊಸ ಫೀಚರ್: ಇನ್ನು ಮುಂದೆ ಚಾಟಿಂಗ್ ಮತ್ತಷ್ಟು ಸುಲಭ !

google-photos

ಉಚಿತ ಪೋಟೋ ಅಪ್ಲೋಡ್ ಸೇವೆ ಅಂತ್ಯಗೊಳಿಸಿದ “Google Photos’ : ಹೊಸ ನಿಯಮವೇನು ?

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

ಫ್ಯಾಂಟಮ್ ಸ್ಪೆಷೆಲ್ ಸಾಂಗ್ : ಸುದೀಪ್‌ ಜೊತೆ ಬಾಲಿವುಡ್‌ ಬೆಡಗಿ ಕತ್ರಿನಾ ಸ್ಟೆಪ್‌?

ಡಿಜಿಟಲ್ ಸಹಿ ಮಾಡುವುದು ಹೇಗೆ?

ಡಿಜಿಟಲ್ ಸಹಿ ಮಾಡುವುದು ಹೇಗೆ? ಇಲ್ಲಿದೆ ಸಂಪೂರ್ಣ ಮಾಹಿತಿ !

bidder

ಬೀದರ್: ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಗೆ ಯತ್ನಿಸಿದ ಕಳ್ಳತನ ಪ್ರಕರಣದ ಆರೋಪಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.