ಬಹು ವಾರ್ಷಿಕ ದ್ವಿದಳ ಮೇವು ಬೆಳೆಯಿರಿ: ಡಾ| ಅಶೋಕ

Team Udayavani, Nov 14, 2020, 4:05 PM IST

ಬಹು ವಾರ್ಷಿಕ ದ್ವಿದಳ ಮೇವು ಬೆಳೆಯಿರಿ: ಡಾ| ಅಶೋಕ

ರಾಣೆಬೆನ್ನೂರು: ಬಹು ವಾರ್ಷಿಕ ಏಕದಳ ಮತ್ತು ಬಹು ವಾರ್ಷಿಕ ದ್ವಿದಳ ಮೇವು ಬೆಳೆಯುವುದರಿಂದ ಹೈನುಗಾರಿಕೆ ರೈತರಿಗೆ ಪದೇ ಪದೆ ಭೂಮಿ ಸಿದ್ಧತೆ ಮತ್ತು ಬೇಸಾಯದ ಕ್ರಮಗಳನ್ನು ಮಾಡುವುದು ತಪ್ಪುತ್ತದೆ. ಈ ಸುಧಾರಿತ ತಳಿಯ ಮೇವನ್ನು ಜಾನುವಾರುಗಳಿಗೆ ನೀಡುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ ಎಂದು ಹನುಮನಮಟ್ಟಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ| ಅಶೋಕ ಪಿ. ಹೇಳಿದರು.

ತಾಲೂಕಿನ ಹನುಮನಮಟ್ಟಿ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಚೌಡಯ್ಯದಾನಪುರ ಗ್ರಾಮದ ಪ್ರಗತಿಪರ ರೈತ ಬಸಯ್ಯ ಪೂಜಾರ ಅವರ ಕ್ಷೇತ್ರಗಳಲ್ಲಿ ಗುರುವಾರ ಜರುಗಿದ ಸುಧಾರಿತ ಮೇವಿನ ತಳಿಗಳ ಪ್ರಾತ್ಯಕ್ಷಿಕೆಯ ಕ್ಷೇತ್ರೋತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಧಾನ ಮಂತ್ರಿಗಳ ಆಶಯದಂತೆ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಹೈನುಗಾರಿಕೆ ಮಹತ್ವದ ಪಾತ್ರವಿದೆ. ವಿವಿಧ ರೀತಿಯ ಉತ್ತಮ ಗುಣಮಟ್ಟದ ಮೇವಿನ ಬೆಳೆಗಳನ್ನು ಬೆಳೆಯುವುದರ ಜೊತೆಗೆ ಖರ್ಚು ಕಡಿಮೆ ಮಾಡಿ ಆದಾಯ ಹೆಚ್ಚಿಸಿಕೊಳ್ಳಬಹುದೆಂದು ರೈತರಿಗೆ ಸಲಹೆ ನೀಡಿದರು.

ಕೇಂದ್ರದ ಪಶು ವಿಜ್ಞಾನಿಯಾದ ಡಾ. ಮಹೇಶ ಕಡಗಿ ಮಾತನಾಡಿ, ಏಕದಳ ಮತ್ತು ದ್ವಿದಳ ಮೇವುಗಳನ್ನು ಜಾನುವಾರುಗಳಿಗೆ ಶೇ.75 ಮತ್ತು ಶೇ.25 ರಷ್ಟು ನೀಡುವುದರಿಂದ ಅವುಗಳ ಆರೋಗ್ಯ ಸುಧಾರಿಸುವುದರೊಂದಿಗೆ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟ ಹೆಚ್ಚಾಗುತ್ತದೆ. ಬಹು ಕಟಾವಿನ ಮೇವಿನ ಜೋಳ(ಸಿ.ಒಎಫ್‌.ಎಸ್‌-31) ಇದು ಒಂದು ಮಳೆಯಾಶ್ರಿತ ಮೇವಿನ ಬೆಳೆಯಾಗಿದ್ದು, ಸುಮಾರು 4 ರಿಂದ 6 ವರ್ಷದ ವರೆಗೆ ಹಸಿರು ಮೇವಿನ ಇಳುವರಿ ಸುಮಾರು 110 ರಿಂದ 120 ಟನ್‌ ಪ್ರತಿ ಎಕರೆಗೆ ಪ್ರತಿ ವರ್ಷಕ್ಕೆ ನೀಡಬಲ್ಲದು. ಬೇಲಿ ಮೆಂತೆ ಇದು ದ್ವಿದಳ ಬಹುವಾರ್ಷಿಕ ಬೆಳೆಯಾಗಿದ್ದು, ವರ್ಷಕ್ಕೆ 60 ರಿಂದ 70 ಟನ್‌ ವರೆಗೆ ಇಳುವರಿ ನೀಡಬಲ್ಲದು ಎಂದು ಹೇಳಿದರು.

ರೈತರು ಮೇವಿನ ಬೆಳೆಗಳಿಂದ ಉತ್ತಮವಾದ ಬೀಜದ ಉತ್ಪಾದನೆಯನ್ನು ಮಾಡಿ ಇತರ ರೈತರಿಗೆ ನೀಡಬಹುದು. ಈ ಮೇವಿನ ಬೆಳೆಗಳ ಜೊತೆಗೆ ಮೇವಿನ ಚೊಗಚೆ ಮತ್ತು ನುಗ್ಗೆ ಮರಗಳನ್ನು ತಮ್ಮ ಹೊಲಗಳ ಬದುವಿನಲ್ಲಿ ಹಚ್ಚುವುದರಿಂದ ಉತ್ತಮವಾದ ಸಸಾರಜನಕಯುಕ್ತ ಮೇವನ್ನು ಪಡೆಯಬಹುದಾಗಿದೆ ಎಂದು ವಿವರಿಸಿದರು.

ಕೇಂದ್ರದ ಕೀಟ ವಿಜ್ಞಾನಿ ಡಾ.ಕೆ.ಪಿ.ಗುಂಡಣ್ಣವರ ಮಾತನಾಡಿ, ಮೇವಿನ ಬೆಳೆಗಳಲ್ಲಿ ವಿವಿಧ ಸಸ್ಯ ಸಂರಕ್ಷಣಾ ವಿಧಾನಗಳನ್ನು ವಿವರಿಸುತ್ತಾ, ಸಿ.ಒಎಫ್‌.ಎಸ್‌ -31 ಮೇವಿನ ಬೆಳೆಯಲ್ಲಿ ಸಾಮಾನ್ಯವಾಗಿ ಈ ಸಮಯದಲ್ಲಿ ಕಂಡು ಬರುವ ಎಲೆ ಚುಕ್ಕೆ ರೋಗವನ್ನು ಹೆಕ್ಸಾಕ್ವಿನಾಜೋಲ್‌ಔಷಧವನ್ನು 1 ಮಿ. ಲೀ ಪ್ರತಿ ಲೀಟರ್‌ ನೀರಿಗೆ ಬೆರೆಸಿ ಮೇವು ಕಟಾವು ಆದ ನಂತರ ಸಿಂಪಡಿಸಬೇಕು. ಸಿಂಪರಣೆ ನಂತರ ಸುಮಾರು 20 ದಿನಗಳ ವರೆಗೆ ಮೇವನ್ನು ಜಾನುವಾರುಗಳಿಗೆ ತಿನ್ನಿಸಬಾರದು ಎಂದು ಸಲಹೆ ನೀಡಿದರು.

ಪ್ರಗತಿ ಪರ ರೈತ ಬಸಯ್ಯ ಪೂಜಾರ ಮಾತನಾಡಿ, ಈ ಸುಧಾರಿತ ಮೇವಿನ ತಳಿಗಳನ್ನು ಬಳಸುವುದರಿಂದ ವರ್ಷವಿಡಿ ಹಸಿರು ಮೇವನ್ನು ಪಡೆಯುವುದಲ್ಲದೇ ಹಸಿರು ಮೇವಿನ ಇಳುವರಿ ತುಂಬಾ ಹೆಚ್ಚಾಗಿ ಬರುತ್ತಿದೆ. ಮತ್ತು ಹಾಲಿನ ಇಳುವರಿ ಮತ್ತು ಗುಣಮಟ್ಟ ಹೆಚ್ಚಾಗಿರುವುದಲ್ಲದೆ ಜಾನುವಾರುಗಳ ಆರೋಗ್ಯದಲ್ಲಿ ತುಂಬಾ ಸುಧಾರಣೆಯಾಗಿದೆ ಎಂದರು.

ಟಾಪ್ ನ್ಯೂಸ್

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

yatnal

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

1-dqwqe

ಅಂತಹ ಸಭೆಗೆ ಹೋಗಲ್ಲ: ಬೆಳಗಾವಿ ಬಿಜೆಪಿ ಸಭೆಗೆ ರಮೇಶ್ ಜಾರಕಿಹೊಳಿ‌ ಅಸಮಾಧಾನ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

ವಾಟ್ಸ್‌ಆ್ಯಪ್‌ ಚಾಟಿಂಗ್‌ ಹಿಸ್ಟರಿ ರವಾನೆ ಇನ್ನು ಸುಲಭ

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಬ್ರೈನ್‌ ಫಾಗ್‌ ಮಹಿಳೆಯರನ್ನು ಕಾಡುವ ಮಾನಸಿಕ ಸಮಸ್ಯೆ; ಕಾಳಜಿ ಹೇಗೆ?

ಪಾತಾಳಕ್ಕೆ ಕುಸಿದ ಷೇರುಪೇಟೆ ಸೆನ್ಸೆಕ್ಸ್, ಹೂಡಿಕೆದಾರರಿಗೆ ಭಾರೀ ನಷ್ಟ; 1950 ಅಂಕ ಇಳಿಕೆ

ಪಾತಾಳಕ್ಕೆ ಕುಸಿದ ಷೇರುಪೇಟೆ ಸೆನ್ಸೆಕ್ಸ್, ಹೂಡಿಕೆದಾರರಿಗೆ ಭಾರೀ ನಷ್ಟ; 1950 ಅಂಕ ಇಳಿಕೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೆರತಯರಜಹಗ್ದಸಅ

ಸಾರ್ಥಕ ಜೀವನಕ್ಕೆ ಅಧ್ಯಾತ್ಮದ ಚಿಂತನೆ ಸಹಕಾರಿ

ಸೆರತೆತಯರಕಜಹಗ್ದ

ಮಹಾತ್ಮರ ಆದರ್ಶ ಪಾಲಿಸಿ

ರತಯುಇಇಕುಜಹಗ್ದಸ

ಸ್ಪರ್ಧಾತ್ಮಕ ಪೈಪೋಟಿಗೆ ವಿದ್ಯಾರ್ಥಿಗಳಿಗೆ ಅವಕಾಶ

ದ್ಗತರಯಿಕಜಹಗ್ದಸಅ

ಕನ್ನ ಡ ಭಾಷೆ ಶ್ರೀಮಂತಗೊಳಿಸಲು ಲಿಂಗಯ್ಯ ಸಲಹೆ

ದೆತಯುತಕಜಹಗ್ದಸಅ

ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಹೆಚ್ಚಿಸುವ ಪ್ರಯತ್ನ

MUST WATCH

udayavani youtube

ಒಂದೇ ವಾಹನಕ್ಕೆ ಒಂದು ತಿಂಗಳ ಅಂತರದಲ್ಲಿ ಪೊಲೀಸರಿಂದ 16 ನೋಟಿಸ್

udayavani youtube

ರಾಷ್ಟ್ರೀಯ ಬಾಲ ಪುರಸ್ಕಾರ : ಪ್ರಧಾನಿ ಜೊತೆ ಮಂಗಳೂರಿನ ರೆಮೋನಾ ಪರೇರಾ ಮಾತುಕತೆ

udayavani youtube

ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ! ಕೆಲಸಕ್ಕೆ ಹೋಗುವವರ ಪರದಾಟ ಹೇಳತೀರದು…

udayavani youtube

ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಕೊನೆಗೂ ಸೆರೆ, ಅರಣ್ಯ ಇಲಾಖೆಯ ಯಶಸ್ವಿ ಕಾರ್ಯಾಚರಣೆ

udayavani youtube

ಕೋಲ್ಕತಾದಲ್ಲಿ ಬಿಜೆಪಿ ಮತ್ತು ಟಿಎಂಸಿ ಘರ್ಷಣೆ; ಸಂಸದರ ಮೇಲೆ ಕಲ್ಲು ತೂರಾಟ

ಹೊಸ ಸೇರ್ಪಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

ವಿಕ್ರಮ್ ಅಭಿನಯದ ‘ಮಹಾ ಪುರುಷ’ ಚಿತ್ರ ಫೆ. 10ಕ್ಕೆ ಅಮೆಜಾನ್ ಪ್ರೈಮ್ ನಲ್ಲಿ ಬಿಡುಗಡೆ

yatnal

ನಾನು ಯಡಿಯೂರಪ್ಪ, ವಿಜಯೇಂದ್ರರ ವಿರೋಧಿ : ರೇಣು ಭೇಟಿಗೆ ಯತ್ನಾಳ್ ಸಮಜಾಯಿಷಿ

23BSSk

ಆರ್ಥಿಕ ಸಂಕಷ್ಟದಲ್ಲಿ ಬಿಎಸ್‌ಎಸ್‌ಕೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

“ಕೇಜ್ರಿವಾಲ್ ಗೆ ಒಂದು ಅವಕಾಶ ಕೊಡಿ”; ಪಂಚರಾಜ್ಯಗಳಲ್ಲಿ ಆಪ್ ಚುನಾವಣಾ ಪ್ರಚಾರಕ್ಕೆ ಚಾಲನೆ

1-dqwqe

ಅಂತಹ ಸಭೆಗೆ ಹೋಗಲ್ಲ: ಬೆಳಗಾವಿ ಬಿಜೆಪಿ ಸಭೆಗೆ ರಮೇಶ್ ಜಾರಕಿಹೊಳಿ‌ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.